ಯಾವುದೇ ತೊಂದರೆ ಇಲ್ಲದೆ ಸುರಕ್ಷಿತ ಗರ್ಭಧಾರಣೆಗೆ ಇಲ್ಲಿದೆ ಟಿಪ್ಸ್
ಪ್ರಸ್ತುತ ಸಮಯದಲ್ಲಿ, ಗರ್ಭಾವಸ್ಥೆ (Pregnancy)ಯಲ್ಲಿ ತೊಡಕುಗಳನ್ನು ಹೊಂದಿರುವುದು ಸಾಮಾನ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸುರಕ್ಷಿತ ಗರ್ಭಧಾರಣೆಯು ಒಂದು ಸವಾಲಿಗಿಂತ ಕಡಿಮೆಯಿಲ್ಲ. ಗರ್ಭಿಣಿ (Pregnant)ಯಾಗಿದ್ದಾಗ ಕಾಣಿಸಿಕೊಳ್ಳುವ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಲು ನೀವು ಆರೋಗ್ಯ (Health)ದ ಬಗ್ಗೆ ಒಂದಷ್ಟು ಕಾಳಜಿ ವಹಿಸಬೇಕು.

ಗರ್ಭಧಾರಣೆಯ(Pregnancy) ಸಂದರ್ಭದಲ್ಲಿ ತೊಡಕುಗಳನ್ನು ತಪ್ಪಿಸಲು, ಗರ್ಭಿಣಿಯರು ಹಂತ ಹಂತವಾಗಿ ತಮ್ಮನ್ನು ತಾವು ನೋಡಿಕೊಳ್ಳಬೇಕು. ಅಂತಹ ಪರಿಸ್ಥಿತಿಯಲ್ಲಿ, ನೀವು ಸುರಕ್ಷಿತ ಗರ್ಭಧಾರಣೆಯನ್ನು ಬಯಸಿದರೆ, ಈ 6 ವಿಷಯಗಳ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಬೇಕಾಗುತ್ತದೆ. ಇದರಿಂದ ಆರೋಗ್ಯಯುತ ಡೆಲಿವರಿ ಸಾಧ್ಯವಾಗುತ್ತದೆ.

ವೈದ್ಯರೊಂದಿಗೆ(Doctors) ನಿರಂತರ ಸಂಪರ್ಕ
ಗರ್ಭಿಣಿಯರು ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ನೀವು ಕಾಲಕಾಲಕ್ಕೆ ನಿಮ್ಮನ್ನು ಪರೀಕ್ಷಿಸಬೇಕು. ಇದರಿಂದ ತಾಯಿ ಮತ್ತು ಮಗು ಆರೋಗ್ಯವಾಗಿರುವ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಉತ್ತಮ ಆರೋಗ್ಯವು ನಿಮ್ಮದಾಗುತ್ತದೆ.
ಧೂಮಪಾನ ಮತ್ತು ಮದ್ಯಪಾನ ಬೇಡ
ಗರ್ಭಾವಸ್ಥೆಯಲ್ಲಿ ಧೂಮಪಾನ ಅಥವಾ ಮದ್ಯಪಾನ ಮಾಡುವುದರಿಂದ, ಗರ್ಭಪಾತ(Miscarriage), ಅಕಾಲಿಕ ಜನನ, ಎದೆಯ ಸೋಂಕು ಇತ್ಯಾದಿಗಳಿಗೆ ಒಳಗಾಗುತ್ತೀರಿ. ಆದ್ದರಿಂದ ಧೂಮಪಾನ ಮತ್ತು ಮದ್ಯಪಾನವನ್ನು ಬೇಡ. ಕಡಿಮೆ ಮಾಡಿ ಅನ್ನೋದಕ್ಕಿಂತ ಸಂಪೂರ್ಣವಾಗಿ ದೂರ ಮಾಡೋದು ಒಳ್ಳೆಯದು.
आयरन
ಆರೋಗ್ಯಕರ ಆಹಾರವೂ(Healthy food) ಅತ್ಯಗತ್ಯ.
ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಆಹಾರವೂ ಬಹಳ ಮುಖ್ಯ. ಏಕೆಂದರೆ ಇದು ತಾಯಿ ಮತ್ತು ಮಗು ಇಬ್ಬರನ್ನೂ ಪೋಷಿಸುತ್ತದೆ. ಆದುದರಿಂದ ಸಮಯಕ್ಕೆ ಸರಿಯಾಗಿ ಆರೋಗ್ಯಯುತ, ಪೌಷ್ಟಿಕಾಂಶ ಭರಿತ ಆಹಾರಗಳನ್ನು ಸೇವಿಸಿ. ಇದರಿಂದ ಉತ್ತಮ ಆರೋಗ್ಯ ನಿಮ್ಮದಾಗಲೂ ಸಾಧ್ಯವಾಗುತ್ತದೆ.
ಯೋಗಾಸನಗಳನ್ನು ದಿನಚರಿಯಲ್ಲಿ ಸೇರಿಸಿ
ನಿಮ್ಮ ಗರ್ಭಾವಸ್ಥೆಯಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲದಿದ್ದರೆ, ತಜ್ಞರ ಸಲಹೆಯ ಮೇರೆಗೆ ನಿಮ್ಮ ದಿನಚರಿಯಲ್ಲಿ ಯೋಗವನ್ನು ಸೇರಿಸಿ. ಯೋಗ(Yoga), ವ್ಯಾಯಾಮ ತಾಯಿ ಮತ್ತು ಮಗುವಿನ ಅರೋಗ್ಯ ಉತ್ತಮವಾಗಿರಲು ಸಹಾಯ ಮಾಡುತ್ತದೆ. ಆದುದರಿಂದ ನಿಯಮಿತವಾಗಿ ಯೋಗ ಮಾಡಿ.
ಹೆಚ್ಚು ಜಂಕ್ ಫುಡ್(Junk Food) ತಿನ್ನುವುದನ್ನು ತಪ್ಪಿಸಿ
ಗರ್ಭಾವಸ್ಥೆಯಲ್ಲಿ ಹೆಚ್ಚು ಜಂಕ್ ಫುಡ್ ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಜಂಕ್ ಫುಡ್ ನಲ್ಲಿರುವ ಕೊಬ್ಬು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಂತೆ ಆರೋಗ್ಯದಲ್ಲಿ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ಇದರಿಂದ ತಾಯಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಹೈಡ್ರೇಟೆಡ್ (Hydrate)ಆಗಿರಿ
ಗರ್ಭಾವಸ್ಥೆಯಲ್ಲಿ ನಿಮ್ಮನ್ನು ನೀವು ಹೈಡ್ರೇಟ್ ಆಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ, ಗರ್ಭಿಣಿಯರು ಸಾಕಷ್ಟು ನೀರು ಕುಡಿಯಬೇಕು. ಇಲ್ಲವಾದರೆ ಹಣ್ಣು, ತರಕಾರಿ ಜ್ಯೂಸ್ ಸೇವನೆ ಮಾಡುವುದು ಸಹ ಮುಖ್ಯವಾಗಿದೆ. ಇದರಿಂದ ತಾಯಿ ಆರೋಗ್ಯವಾಗಿದ್ದು, ಸುಲಭ ಡೆಲಿವರಿಗೆ ಸಹಕಾರಿಯಾಗುತ್ತದೆ.