ಗರ್ಭಾವಸ್ಥೆಯಲ್ಲಿ ಎದೆಯುರಿ: ನಿವಾರಿಸೋದು ಹೇಗೆ?
ಗರ್ಭಾವಸ್ಥೆಯಲ್ಲಿ ಎದೆಯುರಿ ಒಂದು ಸಾಮಾನ್ಯ ಸಮಸ್ಯೆ. ಹೆಚ್ಚಾಗಿ ನೀರು ಕುಡಿದ ನಂತರ ಇದು ಸಂಭವಿಸುತ್ತೆ. ಇದಲ್ಲದೆ, ಹಾರ್ಮೋನುಗಳ ಬದಲಾವಣೆಗಳಿಂದಾಗಿ, ಎದೆಯಲ್ಲಿ ಉರಿ ಸಮಸ್ಯೆ ಕಂಡು ಬರಬಹುದು. ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ, ಹೊಟ್ಟೆಯಲ್ಲಿರುವ ಆ್ಯಸಿಡ್ ಕೆಲವೊಮ್ಮೆ ಫುಡ್ ಪೈಪಿಗೆ ಬರುತ್ತೆ. ಇದು ಎದೆಯಿಂದ ಗಂಟಲಿನವರೆಗೆ ಕಿರಿಕಿರಿ ಉಂಟುಮಾಡುತ್ತೆ. ಎದೆಯುರಿ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ ಮತ್ತು ಅದನ್ನು ತೊಡೆದು ಹಾಕಲು ಬಯಸಿದರೆ, ಖಂಡಿತವಾಗಿಯೂ ಈ ಸುಲಭ ಟಿಪ್ಸ್ ಫಾಲೋ ಮಾಡಿ ನೋಡಿ -
ಧೂಮಪಾನ(Smoking) ಮಾಡುತ್ತಿದ್ದರೆ, ಅದನ್ನು ನಿಲ್ಲಿಸಿಬಿಡಿ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳೂ ಸ್ಮೋಕಿಂಗ್‌ಗೆ ದಾಸರಾಗುತ್ತಿದ್ದಾರೆ. ಆದರೆ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ. ವಿಶೇಷವಾಗಿ, ಗರ್ಭಾವಸ್ಥೆಯಲ್ಲಿ ಸ್ಮೋಕ್ ಮಾಡಲೇಬೇಡಿ. ಇದು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಮತ್ತು ಗಂಭೀರ ಪರಿಣಾಮ ಬೀರಬಹುದು.
Alcohol
ಧೂಮಪಾನದಂತೆ ಆಲ್ಕೋಹಾಲ್(Alcohol) ಕೂಡ ಸೇವಿಸಬೇಡಿ. ಆಲ್ಕೋಹಾಲ್ ಮತ್ತು ಸಿಗರೇಟು ಎರಡೂ ದೇಹಕ್ಕೆ ಪಾಯಿಸನ್ ರೀತಿ ಕೆಲಸ ಮಾಡುತ್ತೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು. ಇದಲ್ಲದೆ, ಮಗುವಿನ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೂ ಇದು ಪರಿಣಾಮ ಬೀರಬಹುದು.
ಗರ್ಭಾವಸ್ಥೆಯಲ್ಲಿ ನೀವು ಅತಿ ಚಹಾ ಅಥವಾ ಕಾಫಿ (Coffee) ಸೇವಿಸುತ್ತಿದ್ದರೆ, ಈ ತಪ್ಪನ್ನು ಇನ್ನು ಮುಂದೆ ಮಾಡಬೇಡಿ. ಕಡಿಮೆ ಪ್ರಮಾಣದಲ್ಲಿ ಚಹಾ, ಕಾಫಿ ಸೇವಿಸಿ. ಕೆಫೀನ್ ಯುಕ್ತ ಆಹಾರಗಳ ಸೇವನೆಯು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತೆ. ಚಹಾ ಅಥವಾ ಕಾಫಿಗೆ ಬದಲಾಗಿ ನೀವು ಗ್ರೀನ್ ಟೀ ಸೇವಿಸಬಹುದು.
ಮಗುವಿನ ಹೆಚ್ಚುತ್ತಿರುವ ತೂಕದಿಂದಾಗಿ, ಗರ್ಭಿಣಿಯರಿಗೆ (Pregnant) ನೇರವಾಗಿ ಕುಳಿತುಕೊಳ್ಳಲು ಸಾಧ್ಯವಾಗೋದಿಲ್ಲ. ಹಾಗಾಗಿ, ಕಿಬ್ಬೊಟ್ಟೆಯ ಒತ್ತಡವನ್ನು ಕಡಿಮೆ ಮಾಡಲು ಯಾವಾಗಲೂ ನೇರವಾಗಿ ಕುಳಿತುಕೊಳ್ಳಲು ಪ್ರಯತ್ನಿಸಿ. ಹೆಚ್ಚು ಬಾಗಬೇಡಿ. ಇದರಿಂದ ತಾಯಿ ಮತ್ತು ಮಗು ಇಬ್ಬರ ಆರೋಗ್ಯವು ಉತ್ತಮವಾಗಿರಲು ಸಾಧ್ಯವಾಗುತ್ತೆ.
ಕರಿದ (Fried), ಹುರಿದ ಮತ್ತು ಎಣ್ಣೆಯುಕ್ತ ವಸ್ತುಗಳ ಸೇವನೆಯನ್ನು ಕಡಿಮೆ ಮಾಡಿ. ಇದು ಕಿರಿಕಿರಿಯ ಸಮಸ್ಯೆಯನ್ನು ಹೆಚ್ಚಿಸುತ್ತೆ. ಈ ವಿಷಯಗಳನ್ನು ಸಾಧ್ಯವಾದಷ್ಟು ತಪ್ಪಿಸಿ. ಇದರಿಂದ ಕೊಲೆಸ್ಟ್ರಾಲ್ ಸಹ ಹೆಚ್ಚುತ್ತೆ. ಆದುದರಿಂದ ಇಂತಹ ಆಹಾರಗಳಿಗೆ ಕಡಿವಾಣ ಹಾಕಿ. ಉತ್ತಮ ಆರೋಗ್ಯವನ್ನು ಕಾಪಾಡಿ.
ರಾತ್ರಿ ಆಹಾರ (Food) ತಿನ್ನುವ ಬಗ್ಗೆ ನೀವು ಸರಿಯಾಗಿ ತಿಳಿದುಕೊಂಡಿರಬೇಕು. ಯಾವ ರೀತಿಯ ಆಹಾರ ಸೇವಿಸಬೇಕು, ಯಾವ ಸಮಯಕ್ಕೆ ಸೇವಿಸಬೇಕು ಅನ್ನೋದನ್ನು ತಿಳಿದಿರಬೇಕು. ರಾತ್ರಿ ಸಾಧ್ಯವಾದಷ್ಟು ಬೇಗ ತಿನ್ನಿ. ಮಲಗುವ ಎರಡು ಗಂಟೆಗಳ ಮೊದಲು ರಾತ್ರಿಯ ಊಟ ಮಾಡಿ. ಪ್ರತಿದಿನ ಕನಿಷ್ಠ 8 ಗಂಟೆಗಳ ಕಾಲ ನಿದ್ರೆ ಮಾಡೋದನ್ನು ತಪ್ಪಿಸಬೇಡಿ.
ಬೆಳಿಗ್ಗೆ ಮತ್ತು ರಾತ್ರಿ ಊಟ ಮಾಡಿದ ನಂತರ ಪ್ರತಿದಿನ ವಾಕಿಂಗ್ (Walking) ಮಾಡಿ. ಇದು ಕಿರಿಕಿರಿಯ ಅಥವಾ ಹಾರ್ಟ್ ಬರ್ನಿಂಗ್ ಸಮಸ್ಯೆ ನಿವಾರಿಸುತ್ತೆ. ವಾಕಿಂಗ್ ಮಾಡುವುದರಿಂದ ದೇಹಕ್ಕೆ ಸರಿಯಾಗಿ ಫಿಟ್ ನೆಸ್ ದೊರೆಯುತ್ತದೆ, ಅಲ್ಲದೇ ಸಂಜೆ ತಿಂದ ಆಹಾರ ಚೆನ್ನಾಗಿ ಜೀರ್ಣವಾಗಲು ಸಹ ಇದು ಸಹಕಾರಿಯಾಗಿದೆ.
ಇದಲ್ಲದೆ, ಸಿಟ್ರಸ್ ಹಣ್ಣು(Citrus fruit) ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೀಮಿತ ಪ್ರಮಾಣದಲ್ಲಿ ಸೇರಿಸಿ ಗರ್ಭಿಣಿಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಸಿಟ್ರಸ್ ಹಣ್ಣುಗಳು ಇಮ್ಯುನಿಟಿ ಬೂಸ್ಟ್ ಮಾಡಲು ಸಹಾಯ ಮಾಡುತ್ತೆ, ಆದುದರಿಂದ ಆಹಾರದಲ್ಲಿ ಕಿತ್ತಳೆ, ಮೂಸಂಬಿ, ಸ್ಟ್ರಾಬೆರ್ರಿ ಮೊದಲಾದ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ.