Nudity as Therapy: ಬೆತ್ತಲೆಯಾಗಿರುವುದು ಆರೋಗ್ಯಕ್ಕೆ ಹೇಗೆ ಒಳ್ಳೆಯದು?

ರಣವೀರ್‌ ಸಿಂಗ್‌ ಬೆತ್ತಲೆ ಫೋಟೋಶೂಟ್‌ ದೇಶದಲ್ಲಿ ಚರ್ಚೆಗೆ ಕಾರಣವಾಗಿದೆ. ನಮ್ಮಲ್ಲಿ ಬೆತ್ತಲೆಯ ಕುರಿತು ಮುಜುಗರ, ಅಶ್ಲೀಲದ ಭಾವನೆ ಇರುವುದೇ ಇದಕ್ಕೆ ಕಾರಣ. ಬೆತ್ತಲೆಯಾಗಿರುವುದರಿಂದ ಹಲವಾರು ಪ್ರಯೋಜನಗಳಿವೆ, ಆರೋಗ್ಯಕ್ಕೂ ಅದು ಕೆಲವು ಆಯಾಮಗಳಲ್ಲಿ ಉತ್ತಮ.
 

Nudity is therapy in western world how it is helpful for having good health

ರಣವೀರ ಸಿಂಗ್… ಇತ್ತೀಚೆಗೆ ಇವರ ಹೆಸರು ಕೇಳಿದಾಕ್ಷಣ ಕಣ್ಮುಂದೆ ಬೆತ್ತಲೆಯಾಗಿ ಪೋಸ್‌ ಕೊಟ್ಟಿರುವ ಚಿತ್ರಣವೇ ನೆನಪಿಗೆ ಬರುತ್ತದೆ. ಮೊದಲಿನಿಂದಲೂ ತಮ್ಮ ವಿಚಿತ್ರ ಡೆಸ್‌ ಸೆನ್ಸ್ ಅಥವಾ ತಮಗೆ ಖುಷಿ ಎನಿಸಿದ ದಿರಿಸುಗಳನ್ನು ಧರಿಸುವ ಖಯಾಲಿ ಹೊಂದಿರುವ ರಣವೀರ್‌ ಕಾಂಡೋಮ್‌, ಚಾಕೊಲೇಟ್‌ ರಾಪರ್‌ ನಂತಹ ಡ್ರೆಸ್‌ ಗಳನ್ನೂ ಧರಿಸಿ ಅಚ್ಚರಿ ಮೂಡಿಸಿದ್ದರು. ಈಗ ಸಂಪೂರ್ಣ ಬೆತ್ತಲೆಯಾಗಿ ಫೋಟೋಶೂಟ್‌ ಮಾಡಿಸಿಕೊಂಡು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಚರ್ಚೆಗೆ ಕಾರಣರಾಗಿದ್ದಾರೆ. ಇದು ನಮ್ಮಲ್ಲಷ್ಟೇ ಭಾರೀ ಹವಾ ಎಬ್ಬಿಸುವ ಸುದ್ದಿಯಷ್ಟೆ. ವಿಶ್ವದ ಹಲವು ಪ್ರಾಂತ್ಯಗಳಲ್ಲಿ ವಿಶೇಷವಾಗಿ ಪಾಶ್ಚಾತ್ಯ ದೇಶಗಳಲ್ಲಿ ಬೆತ್ತಲೆ ಆಗಿರುವುದು ವಿಶೇಷ ಸುದ್ದಿಯೇ ಅಲ್ಲ. ಅವರಿಗೆ ಅದೂ ಒಂದು ರೀತಿಯ ಭಂಗಿ ಅಷ್ಟೆ. ವಿಶ್ವದಲ್ಲಿ ಬಟ್ಟೆ ಧರಿಸಿ ಓಡಾಡುವುದನ್ನು ನಿಷೇಧಿಸಿರುವ ಹಲವು ಸ್ಥಳಗಳಿವೆ ಎಂದರೆ ಅಚ್ಚರಿಯಾಗಬಹುದು. ಕೆಲವು ಐಷಾರಾಮಿ ರೆಸಾರ್ಟ್‌ ಗಳು, ಬೀಚ್‌ ಗಳಲ್ಲಿ ನ್ಯೂಡಿಟಿ ಅಂದರೆ ಬೆತ್ತಲೆಯಾಗಿರುವುದು ಕಡ್ಡಾಯ. ಅಶ್ಲೀಲ ಭಾವನೆ ಮನಸ್ಸಿಗೆ ಬರುವ ಮುನ್ನವೇ ಇಲ್ಲೊಂದು ವಿಷಯವನ್ನು ಅರಿತುಕೊಳ್ಳಬೇಕು. ಈ ಸ್ಥಳಗಳಲ್ಲಿ ಮೋಜು ಮಸ್ತಿಗೆಂದು ಬೆತ್ತಲೆಯಾಗಿರುವುದಿಲ್ಲ. ಮನುಷ್ಯ ತನ್ನೊಳಗಿನ ಕೆಟ್ಟ ಪ್ರವೃತ್ತಿಗಳನ್ನು ಕಳೆದುಕೊಂಡು ದೇಹಕ್ಕೆ ಸಂಬಂಧಿಸಿದ ಕಿರಿಕಿರಿ, ಸಮಸ್ಯೆಗಳಿಂದ ಮುಕ್ತನಾಗಲೆಂದು ಇಂತಹ ಗುಂಪುಗಳು ಹುಟ್ಟಿಕೊಂಡಿವೆ. 

ಕೆಲ ಸಮಯವಾದರೂ ಬೆತ್ತಲೆಯಾಗಿ (Nude) ಇರುವ ಮೂಲಕ ದೈಹಿಕ (Body Issues) ಮುಜುಗರವನ್ನು ಮೀರಲು ಸಾಧ್ಯ ಎನ್ನುವುದು ಈ ಗುಂಪುಗಳ ವಾದ. ಉದಾಹರಣೆಗೆ, ಕ್ಯಾನ್ಸರ್‌ ನಿಂದ ಸ್ತನಗಳನ್ನು ಕಳೆದುಕೊಂಡಿರುವ ಮಹಿಳೆ ಇಲ್ಲಿ ಬೆತ್ತಲಾಗುವ ಮೂಲಕ ತನ್ನಲ್ಲಿನ ಹಿಂಜರಿಕೆಯನ್ನು ಮೀರುತ್ತಾಳೆ. ಮನೋರೋಗ ತಜ್ಞರ (Psychiatric) ಪ್ರಕಾರ ಬೆತ್ತಲೆಯಾಗಿರುವುದರಿಂದ ಹಲವಾರು ಲಾಭಗಳಿವೆ. ನಮ್ಮ ದೇಹವನ್ನು ನಾವು ಪ್ರೀತಿಸಲು (Love) ಆರಂಭಿಸುತ್ತೇವೆ ಎನ್ನುತ್ತಾರೆ ಅಮೆರಿಕದ ಮನೋರೋಗ ಶಾಸ್ತ್ರಜ್ಞೆ ಕ್ಯಾಥರಿನ್‌ ಕಾರ್ಡಿನಲ್. ಬಾಹ್ಯ ಪ್ರಪಂಚದಲ್ಲಿ ಬಿಡಿ, ನಮ್ಮದೇ ಕೋಣೆಯೊಳಗೆ (Room) ಬೆತ್ತಲಾಗುವ ಮೂಲಕವೂ ಬಹಳಷ್ಟು ಉತ್ತಮ ಪರಿಣಾಮಗಳನ್ನು ಪಡೆದುಕೊಳ್ಳಬಹುದು.

ಭಾರತದಲ್ಲಿರುವ ಈ ಜನರಿಗೆ ಬಟ್ಟೆ ಅಂದ್ರೆ ಆಗಿ ಬರೋಲ್ಲ

•    ಉತ್ತಮ ನಿದ್ರೆ (Sound Sleep)
ತಜ್ಞರ ಪ್ರಕಾರ ಬಟ್ಟೆಯನ್ನು ಕಳಚಿಟ್ಟು ಮಲಗುವ ಅಭ್ಯಾಸ ಒಳ್ಳೆಯದು. ಇದರಿಂದ ದೇಹ ತಂಪಾಗಿ ಚೆನ್ನಾಗಿ ನಿದ್ರೆ ಬರುತ್ತದೆ. ಬಟ್ಟೆ (Clothes) ತೆಗೆದಿಟ್ಟಾದ ದೇಹದ ತಾಪಮಾನ (Temparature) ಕಡಿಮೆಯಾಗುತ್ತದೆ. 

•    ರೋಗ ನಿರೋಧಕ ಶಕ್ತಿ (Immunity Power) ಹೆಚ್ಚುತ್ತದೆ
ವಿದೇಶಿಯರು ಸೂರ್ಯರಶ್ಮಿಗೆ (Sun Rays) ಕನಿಷ್ಠ ಬಟ್ಟೆಗಳಲ್ಲಿ ಮೈ ಚೆಲ್ಲುವುದನ್ನು ಕಾಣಬಹುದು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದ ವಿಟಮಿನ್‌ ಡಿ (Vitamin D) ಮಟ್ಟ ಹೆಚ್ಚುತ್ತದೆ. ವಿಟಮಿನ್‌ ಡಿ ಮಟ್ಟ ಚೆನ್ನಾಗಿದ್ದರೆ ರೋಗ ನಿರೋಧಕ ಶಕ್ತಿಯೂ ಚೆನ್ನಾಗಿರುತ್ತದೆ. ಚರ್ಮಕ್ಕೆ (Skin) ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚು ಹೊಂದಿರುವವರಿಗೆ ಸೂರ್ಯಸ್ನಾನ ಉತ್ತಮ.

•    ಹೃದಯಾಘಾತದ (Heart Attack) ಅಪಾಯ ಕಡಿಮೆ
ವಿಟಮಿನ್‌ ಡಿ ಮಟ್ಟ ಚೆನ್ನಾಗಿರುವುದು ಹಾಗೂ ಉತ್ತಮ ನಿದ್ರೆ ಎರಡೂ ಅಂಶಗಳು ಹೃದಯದ ಆರೋಗ್ಯಕ್ಕೆ ಪೂರಕವಾಗಿವೆ. ವಿಟಮಿನ್‌ ಡಿ ಕೊರತೆ ಹೊಂದಿರುವವರಲ್ಲಿ ಹೃದ್ರೋಗ ಹೆಚ್ಚು. ವಿಟಮಿನ್‌ ಡಿ ಹೆಚ್ಚಳ ಆಗುವುದರಿಂದ ಈ ಅಪಾಯವೂ ಕಡಿಮೆಯಾಗುತ್ತದೆ. 

ಬೆತ್ತಲಾದರೆ ಇಮ್ಯೂನಿಟಿ ಹೆಚ್ಚುತ್ತಾ?

•    ಆತ್ಮವಿಶ್ವಾಸ (Self Esteem) ಹೆಚ್ಚಳ
ಬೆತ್ತಲೆಯಾಗುವ ಮೂಲಕ ದೈಹಿಕ ಕಿರಿಕಿರಿಗಳನ್ನು ಮೀರಿ ಯೋಚಿಸಲು ಸಾಧ್ಯ ಎನ್ನುವುದು ಅನುಭವಸ್ಥರ ಮಾತು. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ನಮ್ಮ ದೇಹವನ್ನು ಅದು ಇದ್ದಂತೆ ಒಪ್ಪಿಕೊಳ್ಳಲು ಹಾಗೂ ಮೆಚ್ಚಿಕೊಳ್ಳಲು ಸಾಧ್ಯವಾಗುತ್ತದೆ. ಚರ್ಮದ ಬಣ್ಣದ ಬಗ್ಗೆ ಇರುವ ಕೀಳರಿಮೆ ತೊಲಗುತ್ತದೆ.

•    ಜನನಾಂಗದ ಆರೋಗ್ಯಕ್ಕೂ (Vaginal Health) ಉತ್ತಮ
ಎಷ್ಟೋ ಜನ ರಾತ್ರಿ ಮಲಗುವಾಗ ಒಳ ಉಡುಪುಗಳನ್ನು ಧರಿಸುವುದಿಲ್ಲ. ಒಳ ಉಡುಪುಗಳಿಂದಾಗಿಯೇ ಕೆಲವೊಮ್ಮೆ ಜನನಾಂಗಕ್ಕೆ ಸಂಬಂಧಿಸಿದ ಸೋಂಕು ಹೆಚ್ಚು. ಅವುಗಳನ್ನು ದಿನದ ಕೆಲ ಸಮಯವಾದರೂ ಧರಿಸದೆ ಇರುವುದರಿಂದ ಸೋಂಕು ಮತ್ತು ಅಲರ್ಜಿ ಸಮಸ್ಯೆ ಇಲ್ಲವಾಗುತ್ತದೆ. ಮುಖ್ಯವಾಗಿ ಬೇಸಿಗೆ ಸಮಯದಲ್ಲಿ ದೇಹಕ್ಕೆ ಹಿತವಾಗುತ್ತದೆ. 

Latest Videos
Follow Us:
Download App:
  • android
  • ios