ಹಿಂಗೆಲ್ಲಾ ಕಾಫಿ ಮಾಡಿದ್ರೆ ಕುಡಿಯೋದಾದ್ರು ಹೆಂಗೆ... ನೀವೇ ಹೇಳಿ
ಕಲೆಯೊಂದಿಗೆ ಅರಳಿದ ಸುಂದರವಾದ ಕಾಫಿಯನ್ನು ಉದ್ಯಮಿ ಹರ್ಷ ಗೋಯೆಂಕಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ
ಕಾಫಿ ಬಹುತೇಕರ ನೆಚ್ಚಿನ ಪಾನೀಯ, ಅದರಲ್ಲೂ ನಮ್ಮ ಕೊಡಗು ಹಾಗೂ ಚಿಕ್ಕಮಗಳೂರಿನ ಕಾಫಿಗೆ ತನ್ನದೇ ಆದ ಸೊಗಸಾದ ಪರಿಮಳವಿದೆ. ಈಗಂತೂ ಐಸ್‌ಕ್ರೀಂ ಕಾಫಿ ಚಾಕೋಲೇಟ್ ಕಾಫಿ, ಕೋಲ್ಡ್ ಕಾಫಿ ಅಂತ ಒಂದು ಕಾಫಿಯಲ್ಲೇ ಸಾವಿರಾರು ಬಗೆಯ ವೆರೈಟಿಗಳಿವೆ. ಕಾಫಿಗೊಂದು ಹೊಸ ಸ್ಥಾನಮಾನ ನೀಡಿದ್ದು ನಮ್ಮ ಸಿದ್ಧಾರ್ಥ್ ಅವರ ಕಾಫಿ ಡೇ, ಅಡುಗೆ ಮನೆಯಲ್ಲಿ ಸಣ್ಣಪುಟ್ಟ ಹೊಟೇಲ್‌ಗಳಲ್ಲಿ ಸಿಗುತ್ತಿದ್ದ ಮಲೆನಾಡಿನ ಕಾಫಿಗೆ ಅವರು ವಿಶ್ವಮಾನ್ಯತೆ ತಂದು ಕೊಟ್ಟಿದ್ದರು. ಇದರೊಂದಿಗೆ ಇತ್ತೀಚೆಗೆ ಕಾಫಿಯಲ್ಲೂ ಕಲೆಯರಳಿಸುವ ಯತ್ನ ಹೊಸ ಟ್ರೆಂಡ್. ಕಾಫಿಯ ಮೇಲೆ ಸುಂದರವಾದ ನಿಮಗೆ ಬೇಕಾದ ಚಿತ್ರದೊಂದಿಗೆ ಗ್ರಾಹಕರಿಗೆ ಸರ್ವ್ ಮಾಡಲಾಗುತ್ತದೆ.
ಇದು ಪ್ರೇಮಿಗಳಿಗೆ, ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡುವವರಿಗೆ ಖುಷಿ ನೀಡುತ್ತಿದೆ. ಹಾಗೆಯೇ ಇಂತಹ ಕಲೆಯೊಂದಿಗೆ ಅರಳಿದ ಸುಂದರವಾದ ಕಾಫಿಯನ್ನು ಉದ್ಯಮಿ ಹರ್ಷ ಗೋಯೆಂಕಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ. ಹರ್ಷ ಗೋಯೆಂಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿದ್ದು, ಆಗಾಗ ಇಂತಹ ಕೆಲವು ಅಪರೂಪದ ದೃಶ್ಯಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಾರೆ. ಅದೇ ರೀತಿ ಈಗ ಅವರು ಕಲೆಯ ಜೊತೆ ಅರಳಿದ ಕಾಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬರಿಸ್ಟಾ ಸೃಷ್ಟಿ ಮಾಡಿದ ಕಾಫಿ ಇದಾಗಿದ್ದು, ಕಾಫಿಯ ಮೇಲೆ ಇರುವ ಸುಂದರವಾದ ಡಿಸೈನ್ ಕಾಫಿಯನ್ನು ಕುಡಿಬೇಕಾ ಬೇಡ್ವಾ ಎಂದು ಕೆಲ ಕಾಲ ಯೋಚನೆ ಮಾಡುವಂತೆ ಮಾಡುತ್ತದೆ. ಕಾಫಿಯನ್ನು ಕುಡಿಯಲು ಹೋದರೆ ಮೇಲಿದ್ದ ಸುಂದರವಾದ ಚಿತ್ರ ಹೊಟ್ಟೆ ಸೇರುತ್ತದೆ. ಹೀಗಾಗಿ ಈ ಕಾಫಿ ಎದುರು ಕೂತವರಿಗೆ ಗೊಂದಲ ಮೂಡಿಸುತ್ತಿದೆ. ಗೊಯೆಂಕಾ ಅವರಿಗೂ ಕುಡಿಯಲೋ ಬಿಡಲೋ ಎಂದು ಗೊಂದಲವಾಗಿದ್ದು, ಈ ವಿಡಿಯೋವನ್ನು ಹಂಚಿಕೊಂಡಿರುವ ಗೊಯೆಂಕಾ, ಈ ನನ್ನ ಕಾಫಿಯನ್ನು ಹೇಗೆ ಕುಡಿಯಲಿ ಎಂದು ಕೇಳಿದ್ದಾರೆ.
ಕಾಫಿ ಕುಡಿಯದಿದ್ರೆ ತಲೆನೋವಾಗುತ್ತಾ ? ಇದೇ ಕಾರಣಕ್ಕೆ ಆಗಿರಬಹುದು !
ಕಪ್ ಕಾಫಿಗೆ ನೊರೆ ತುಂಬಿದ ಹಾಲನ್ನು ಸುರಿಯುತ್ತಾರೆ. ಅದನ್ನು ನಂತರ ಕಲಕಿ ಮಿಶ್ರಣ ಮಾಡಲಾಗುತ್ತದೆ. ನಂತರ ಮೇಲೆ ಚಾಕೋಲೇಟ್ ಪೌಡರ್ ಅನ್ನು ಹರಡಲಾಗುತ್ತದೆ. ಬಳಿಕ ಮೇಲ್ಭಾಗದಲ್ಲಿ ಸುಂದರವಾದ ನಿಮಗೆ ಬೇಕಾದ ಚಿತ್ರಗಳನ್ನು ಬಿಡಿಸಲಾಗುತ್ತದೆ. ಅದೇ ರೀತಿ ಈ ಕಾಫಿಯಲ್ಲಿ ಸುಂದರವಾದ ಮರವೊಂದನ್ನು ಬಿಡಿಸಲಾಗಿದ್ದು, ಮರದ ಕೆಳಗೆ ಇಬ್ಬರು ಪ್ರೇಮಿಗಳು ಪರಸ್ಪರ ಬೆನ್ನು ಹಾಕಿ ಕುಳಿತಿರುವ ಚಿತ್ರವನ್ನು ಬಿಡಿಸಲಾಗಿದೆ. ಕೆಲವೇ ನಿಮಿಷಗಳಲ್ಲಿ ಕಾಫಿಯಲ್ಲಿ ಈ ಸುಂದರ ಕಲಾಕೃತಿ ನಿರ್ಮಾಣವಾಗುತ್ತದೆ.
ನೆಟ್ಟಿಗರು ಕೂಡ ಈ ಕಾಫಿಯ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನಗೇನಾದರೂ ಇಂತಹ ಕಾಫಿ ಸಿಕ್ಕರೆ ನಾನು ಅದನ್ನು ಹಾಗೆಯೇ ಸಂಗ್ರಹಿಸಿ ಇಡುತ್ತೇನೆ. ಕಲೆಯ ಒಂದು ತುಂಡನ್ನು ಕುಡಿಯಲು ಹೇಗೆ ಸಾಧ್ಯ ಎಂದು ಒಬ್ಬರು ವೀಕ್ಷಕರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ನಾನು ಈ ಕಾಫಿಯನ್ನು ಕುಡಿದು ಈ ವಿನ್ಯಾಸವನ್ನು ಹಾಳು ಮಾಡಲು ಬಯಸುವುದಿಲ್ಲ, ಬಹುಶಃ ನಾನು ಕೇವಲ ಅದರ ಸುವಾಸನೆಯನ್ನು ಅಸ್ವಾದಿಸುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಕಾಫಿ ಪ್ರಿಯರಾ, ಬೆಂಗಳೂರಿನಲ್ಲಿ ಅತ್ಯುತ್ತಮ ಫಿಲ್ಟರ್ ಕಾಫಿ ಇಲ್ಲಿ ಸಿಗುತ್ತೆ ನೋಡಿ
ಈ ಕಾಫಿಯನ್ನು ತಯಾರಿಸಿದ ಬರಿಸ್ತಾ ಕಾಫಿ ತಯಾರಕ ಸಂಸ್ಥೆ ಭಾರತೀಯ ಉಪಖಂಡದಲ್ಲಿ ಕಾರ್ಯನಿರ್ವಹಿಸುವ ಎಸ್ಪ್ರೆಸೊ ಬಾರ್‌ಗಳು ಮತ್ತು ಕೆಫೆಗಳ ಸಹ ಸಂಸ್ಥೆಯಾಗಿದೆ. ಇದು ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಭಾರತದಾದ್ಯಂತ ಮತ್ತು ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನಂತಹ ಇತರ ಪ್ರಾದೇಶಿಕ ದೇಶಗಳಲ್ಲಿ ತನ್ನ ಶಾಪ್‌ಗಳನ್ನು ಹೊಂದಿದೆ.