ಕೆಡಿ ಜೈದೇವ್ ಹೆಣ ಮುಚ್ಚಿಯೇ ಬಿಟ್ರು; ಭೂಮಿಕಾಳನ್ನ ಅರೆಸ್ಟ್ ಮಾಡ್ತಾಳಾ IPS ಮಲ್ಲಿ?
'ಅಮೃತಧಾರೆ' ಧಾರಾವಾಹಿಯಲ್ಲಿ ಮುಖ್ಯ ಖಳನಾಯಕ ಜೈದೇವ್, ಭೂಮಿಕಾಳ ಹೊಡೆತಕ್ಕೆ ಬಲಿಯಾಗಿದ್ದಾನೆ. ಈ ಸಾವಿನ ವಿಷಯವನ್ನು ಜೀವಾ, ಭೂಮಿಕಾ ಮತ್ತು ಮಲ್ಲಿ ಮುಚ್ಚಿಟ್ಟಿದ್ದು, ಕಾನೂನು ಮುರಿದಿದ್ದಾರೆ. ಮುಂದೆ ಭೂಮಿಕಾ ಜೈಲು ಸೇರುತ್ತಾಳಾ ಅಥವಾ ಕಥೆಗೆ ಬೇರೆ ತಿರುವು ಸಿಗುವುದಾ ಎಂಬ ಕುತೂಹಲ ಮೂಡಿದೆ.

ಮೇನ್ ವಿಲನ್ ಆಗಿರೋ ಜೈದೇವ್ ಪಾತ್ರವೇ ಮುಕ್ತಾಯ?
ಅಮೃತಧಾರೆ ಧಾರಾವಾಹಿಯ ಮೇನ್ ವಿಲನ್ ಆಗಿರೋ ಜೈದೇವ್ ಪಾತ್ರವೇ ಮುಕ್ತಾಯವಾಗಿದೆ. ಜೀವ ಮತ್ತು ಜೈದೇವ್ ನಡುವೆ ಡಿಶುಂ ಡಿಶುಂ ನಡೀತಾ ಇತ್ತು. ಈ ವೇಳೆ ಹಿಂದಿನಿಂದ ಭೂಮಿಕಾ ಹೊಡೆದ ಏಟಿಗೆ ಜೈದೇವ್ ಪ್ರಾಣಪಕ್ಷಿ ಹಾರಿ ಹೋಗಿದೆ. ಮುಂದೇನು ಎಂಬುದಕ್ಕೆ ಸಣ್ಣ ಸುಳಿವು ಸಿಕ್ಕಿದೆ.
ಅಮೃತಧಾರೆ ಸೀರಿಯಲ್
ಅಮೃತಧಾರೆ ಸೀರಿಯಲ್ ನಡೆಯುತ್ತಿರೋದು ಜೈದೇವ್ ಪಾತ್ರದಿಂದ, ಹಾಗಾಗಿ ಮುಂದೆ ಕಥೆ ಹೇಗೆ ಸಾಗಲಿದೆ ಎಂಬುದರ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಜೈದೇವ್ ಸತ್ತಿರೋದನ್ನು ಮಧುರಾ ಖಚಿತಪಡಿಸಿದ್ದಳು. ಈ ವೇಳೆ ಅಲ್ಲಿದ್ದ ಜೀವಾ, ಮುಂದೇನು ಮಾಡೋದು ಅಂತ ಕೇಳಿದಾಗ ಪೊಲೀಸರಿಗೆ ಮಾಹಿತಿ ನೀಡುವಂತೆ ಹೇಳುತ್ತಾಳೆ. ಇದಕ್ಕೆ ಜೀವಾ, ಪೊಲೀಸರಿಗೆ ತಿಳಿಸೋದು ಬೇಡ ಎಂದು ಹೇಳುತ್ತಾಳೆ.
ಮಲ್ಲಿ-ಭೂಮಿಕಾ-ಜೀವಾ
ಜೈದೇವ್‌ನಿಂದ ಪ್ರಾಣ ಕಳೆದುಕೊಂಡ ಇಬ್ಬರು ಯುವತಿಯರಿಗೆ ನ್ಯಾಯ ಕೊಡಿಸಲು ತ್ರಿಮೂರ್ತಿಗಳಂತೆ ಮಲ್ಲಿ-ಭೂಮಿಕಾ-ಜೀವಾ ಒಂದಾಗಿದ್ದರು. ಇದಕ್ಕಾಗಿ ಹನಿಟ್ರ್ಯಾಪ್ ಜಾಲ ಹೆಣೆದು ಮಧುರಾಳನ್ನು ಮುಂದೆ ಬಿಟ್ಟಿದ್ದರು. ಆದರೆ ಮಧುರಾಳ ಬೇಜಾವಾಬ್ದಾರಿತನ ಮತ್ತು ಮಲ್ಲಿ-ಭೂಮಿಕಾಳ ಅವಸರದಿಂದ ಎಲ್ಲಾ ಪ್ಲಾನ್ ಫೇಲ್ ಆಗಿತ್ತು.
ಜೈದೇವ್ ಸಾವಿನ ವಿಷಯ
ಈಗ ಜೈದೇವ್ ಸಾವಿನ ವಿಷಯವನ್ನು ಯಾರಿಗೂ ಹೇಳದೇ ಹೆಣವನ್ನು ಮುಚ್ಚಿದ್ದಾರೆ. ಜೊತೆಯಲ್ಲಿಯೇ ಪೊಲೀಸ್ ಅಧಿಕಾರಿ ಮಧುರಾ ಇದ್ರೂ ಕಾನೂನು ಉಲ್ಲಂಘಿಸಿದ್ದಾರೆ. ಇತ್ತ ಜೈದೇವ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಶಕುಂತಲಾ ಚಡಪಡಿಸುತ್ತಿದ್ದಾಳೆ. ಮಗಳು ಮಹಿಗೆ ಕಾಲ್ ಮಾಡಿದ್ರೂ ಶಕುಂತಲಾಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಮಲ್ಲಿಯಿಂದಲೇ ಭೂಮಿಕಾ ಅರೆಸ್ಟ್ ಆಗ್ತಾಳಾ?
ಮನೆಯಲ್ಲಿ ಮಲ್ಲಿ ಮತ್ತು ಭೂಮಿಕಾ ಸಹ ಇಲ್ಲ. ಇವರಿಬ್ಬರಿಂದ ಮಗನಿಗೆ ಏನಾದ್ರೂ ಆಯ್ತಾ ಎಂದು ಶಕುಂತಲಾ ಚಿಂತೆಗೊಳಗಾಗಿದ್ದಾಳೆ. ಭೂಮಿಕಾ ಜೈಲುಪಾಲಾಗ್ತಾಳಾ ಅಥವಾ ಅಕ್ಕನಿಗಾಗಿ ತಮ್ಮ ಜೀವ ಹೋಗ್ತಾನಾ ಅಥವಾ ಮಲ್ಲಿಯಿಂದಲೇ ಭೂಮಿಕಾ ಅರೆಸ್ಟ್ ಆಗ್ತಾಳಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಮಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

