Kannada

ಯಾರೀ ಸೌಂದರ್ಯ ಶೆಟ್ಟಿ?

‘ಬಿಗ್ ಬಾಸ್’ ಪ್ರೋಮೋ ಬಿಡುಗಡೆಯಾದ ಬೆನ್ನಲ್ಲೇ ಒಬ್ಬ ಸ್ಪರ್ಧಿಯ ಮುಖ ಸಖತ್ ಸದ್ದು ಮಾಡುತ್ತಿದೆ. ಮೊದಲ ಮತ್ತು ಕೊನೆಯ ಫ್ರೇಮ್‌ನಲ್ಲಿ ಕಾಣಿಸಿಕೊಂಡು ಕುತೂಹಲ ಹೆಚ್ಚಿಸಿರುವ ಆ ಬ್ಯೂಟಿಯೇ ಸೌಂದರ್ಯ ಶೆಟ್ಟಿ!

Kannada

ಕರಾವಳಿ ಮೂಲದ ಚೆಲುವೆ

ಸೌಂದರ್ಯ ಶೆಟ್ಟಿ ಮೂಲತಃ ಮಂಗಳೂರಿನವರು (ಪೂರ್ಣ ಹೆಸರು ಸೌಂದರ್ಯ ಯುವರಾಜ್ ಶೆಟ್ಟಿ). 25 ವರ್ಷದ ಈ ಮುದ್ದಾದ ಬೆಡಗಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರಿಗೂ ಚಿರಪರಿಚಿತ ‘ಸ್ಯಾಂಡಿ’ ಎಂದೇ ಫೇಮಸ್!

Image credits: @ColorsKannada @soundharya shetty
Kannada

ಮಾಡೆಲಿಂಗ್ ಲೋಕದ ಕಿರೀಟ

ಕೇವಲ ಗ್ಲಾಮರ್ ಮಾತ್ರವಲ್ಲ, ಮಾಡೆಲಿಂಗ್‌ನಲ್ಲಿ ಭರ್ಜರಿ ಸಾಧನೆ ಮಾಡಿರುವ ಸೌಂದರ್ಯ, 2019 ರಲ್ಲಿ 'ಮಿಸ್ ವರ್ಲ್ಡ್ ಟೀನ್ ಸೂಪರ್ ಮಾಡೆಲ್' ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ.

Image credits: @ColorsKannada @soundharya shetty
Kannada

‘ಸ್ಪ್ಲಿಟ್ಸ್‌ವಿಲ್ಲಾ 16’ ಫೈನಲಿಸ್ಟ್!

ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ‘ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ 16’ (ಪ್ಯಾರ್ ಯಾ ಪೈಸಾ) ಮೂಲಕ ದೇಶಾದ್ಯಂತ ಫೇಮಸ್. ಪ್ರೀತಿಯ ಬಲೆಗೆ ಬೀಳದೆ 'ಪೈಸಾ' ಆಯ್ಕೆ ಮಾಡಿಕೊಂಡು ಫಿನಾಲೆ ತಲುಪಿದ ಪಕ್ಕಾ ಪ್ರಾಕ್ಟಿಕಲ್ ಗೇಮರ್!

Image credits: @ColorsKannada @soundharya shetty
Kannada

ತಂಟೆಗೆ ಬಂದರೆ ತರಾಟೆ ಪಕ್ಕಾ!

ಸೌಂದರ್ಯ ಶೆಟ್ಟಿ ಸಖತ್ ಬೋಲ್ಡ್ ಮತ್ತು ಫಿಟ್‌ನೆಸ್ ಫ್ರೀಕ್. ತಂಟೆಗೆ ಬಂದವರನ್ನು ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳುತ್ತಾರೆ. ಜೊತೆಗೆ ಇವರ ಅದ್ಭುತ ಡ್ಯಾನ್ಸ್‌ಗೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಫಿದಾ ಆಗಿದ್ದರು.

Image credits: @ColorsKannada @soundharya shetty
Kannada

ಕನ್ನಡಿಗರ ಮನ ಗೆಲ್ಲಲಿದ್ದಾರಾ?

ರೋಡೀಸ್‌ನಲ್ಲಿ ರಿಜೆಕ್ಟ್ ಆದರೂ ಸ್ಪ್ಲಿಟ್ಸ್‌ವಿಲ್ಲಾದಲ್ಲಿ ಮಿಂಚಿದ ಸೌಂದರ್ಯ, ಕನ್ನಡ ಬಿಗ್ ಬಾಸ್ ಅಖಾಡಕ್ಕೆ ಧುಮುಕಿದ್ದಾರೆ. ತಮ್ಮ ನೇರ ಮಾತು ಮತ್ತು ಖಡಕ್ ಆಟದಿಂದ ಕನ್ನಡಿಗರ ಹೃದಯ ಗೆಲ್ಲುತ್ತಾರಾ? ಕಾದುನೋಡಬೇಕಿದೆ!

Image credits: @ColorsKannada @soundharya shetty

ತನ್ನವರ ಜೊತೆ ಹಬ್ಬ ಆಚರಿಸಿದ ಅನುಪಮಾ ಗೌಡ… ಗೆಳತಿ ಕೃಷಿ ಮಿಸ್ಸಿಂಗ್ ಬಗ್ಗೆ ನೆಟ್ಟಿಗರ ಪ್ರಶ್ನೆ

ಚೊಚ್ಚಲ ತಾಯ್ತನದ ಸಂಭ್ರಮದಲ್ಲಿ ‘ಕಮಲಿ’ ಸೀರಿಯಲ್ ನಟಿ Photos Viral

ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಸಂಭ್ರಮದಿಂದ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಗೊಂಬೆ

Instagram ಸಬ್‌ಸ್ಕ್ರಿಪ್ಶನ್‌ ಮೂಲಕವೇ ಲಕ್ಷ ಲಕ್ಷ ಸಂಪಾದಿಸ್ತಿರೋ 10 ವ್ಯಕ್ತಿಗಳು