ಸೀತಾ ರಾಮ ಮುಗಿಯುತ್ತಿದ್ದಂತೆ ವೈಷ್ಣವಿ ಗೌಡ ಮದುವೆ ಸುದ್ದಿಯೂ ಕೇಳಿಬಂತು. ಉತ್ತರ ಭಾರತದ ಅನುಕೂಲ್ ಮೀಶ್ರಾ ಜೊತೆಗೆ ಕಳೆದ ವರ್ಷ ಸಪ್ತಪದಿ ತುಳಿದಿದ್ರು ವೈಷ್ಣವಿ. ಈಗ ಮತ್ತೆ ಹೊಸ ಸುದ್ದಿಯ ಮೂಲಕ ಫ್ಯಾನ್ಸ್ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಕಿರುತೆರೆ ಕ್ವೀನ್ ಕಂಬ್ಯಾಕ್..ಹೆಣ್ಣುಮಕ್ಕಳು ಸಖತ್ ಖುಷ್..!
ಕನ್ನಡ ಕಿರುತೆರೆಯಲ್ಲೇ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರೋ ನಟಿಯರಲ್ಲಿ ‘ಅಗ್ನಿಸಾಕ್ಷಿ’ ಖ್ಯಾತಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ (Vaishnavi Gowda) ಮುಂಚೂಣಿಯಲ್ಲಿ ಇದಾರೆ. ಕಳೆದ ವರ್ಷ ವೈಷ್ಣವಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಒಂದೇ ವರ್ಷಕ್ಕೆ ವೈಷ್ಣವಿ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ. ಹೌದು... ಮದುವೆ ಬೆನ್ನಲ್ಲೇ ವೈಷ್ಣವಿ ಮತ್ತೆ ಕಿರುತೆರೆಗೆ ಕಮ್‌ಬ್ಯಾಕ್ ಮಾಡ್ತಿದ್ದಾರೆ.
ಮದುವೆ ಬಳಿಕ ಮತ್ತೆ ಬಣ್ಣ ಹಚ್ಚಿದ ವೈಷ್ಣವಿ..! ಮತ್ತೆ ಕಿರುತೆರೆಗೆ ವೈಷ್ಣವಿ ಗೌಡ ಗ್ರ್ಯಾಂಡ್ ಎಂಟ್ರಿ
ಕನ್ನಡ ಕಿರುತೆರೆ ವೀಕ್ಷಕರ ಪಾಲಿಗೆ ಮನೆಮಗಳು ಅನ್ನಿಸಿಕೊಂಡವರು ವೈಷ್ಣವಿ ಗೌಡ. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಆಗಿ ಇಡೀ ಕರ್ನಾಟಕದ ಅಚ್ಚುಮೆಚ್ಚಿನ ಸೊಸೆಯಾಗಿದ್ರು ವೈಷ್ಣವಿ.
ಅಗ್ನಿಸಾಕ್ಷಿಯ ಯಶಸ್ಸಿನ ಬೆನ್ನಲ್ಲೇ ವೈಷ್ಣವಿ ಬೆಳ್ಳಿತೆರೆಗೂ ಎಂಟ್ರಿ ಕೊಟ್ಟಿದ್ರು, ಆದ್ರೆ ಕಿರುತೆರೆಯಲ್ಲಿ ವೈಷುಗೆ ಸಿಕ್ಕ ಸಕ್ಸಸ್ ಬಿಗ್ ಸ್ಕ್ರೀನ್ನಲ್ಲಿ ಅಷ್ಟಾಗಿ ಸಿಕ್ಕಲಿಲ್ಲ. ವೈಷ್ಣವಿ ನಟಿಸಿದ ಚಿತ್ರಗಳ್ಯಾವವೂ ಯಶಸ್ಸು ಕಾಣಲಿಲ್ಲ.
ಸೀತಾರಾಮ ಸೀರಿಯಲ್ ಮೂಲಕ ವೈಷ್ಣವಿ ಮತ್ತೆ ಕಿರುತೆರೆಯಲ್ಲಿ ಜರ್ನಿ ಮುಂದುವರೆಸಿದ್ರು. ಸೀತಾರಾಮ ಸೀರಿಯಲ್ ಕೂಡ ಸೂಪರ್ ಹಿಟ್ ಆಗಿ ಎಲ್ಲರ ಮನೆಮಗಳ ಪಟ್ಟ ಪಡೆದುಕೊಂಡಿದ್ರು ವೈಷ್ಣವಿ.
ಸೀತಾ ರಾಮ ಮುಗಿಯುತ್ತಿದ್ದಂತೆ ವೈಷ್ಣವಿ ಗೌಡ ಮದುವೆ ಸುದ್ದಿಯೂ ಕೇಳಿಬಂತು. ಉತ್ತರ ಭಾರತದ ಅನುಕೂಲ್ ಮೀಶ್ರಾ ಜೊತೆಗೆ ಕಳೆದ ವರ್ಷ ಸಪ್ತಪದಿ ತುಳಿದಿದ್ರು ವೈಷ್ಣವಿ.
ಮದುವೆಯಾದ ಮೇಲೆ ವೈಷ್ಣವಿ ಆಕ್ಟಿಂಗ್‌ಗೆ ಬ್ರೇಕ್ ಹಾಕ್ತಾರಾ ಅನ್ನೋ ಆತಂಕ ಅಭಿಮಾನಿಗಳಲ್ಲಿ ಇತ್ತು. ಆದರೆ, ಆ ಎಲ್ಲಾ ಕೌತುಕಗಳಿಗೆ ಈಗ ತೆರೆ ಬಿದ್ದಿದ್ದು, ವೈಷ್ಣವಿ ಮತ್ತೆ ಕಿರುತೆರೆ ಪ್ರೇಕ್ಷಕರನ್ನ ರಂಜಿಸಲು ಹೊಸ ಧಾರಾವಾಹಿಯೊಂದಿಗೆ ಅಖಾಡಕ್ಕಿಳಿತಾ ಇದ್ದಾರೆ.
ಹೌದು, ಹೊಸ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ನಟಿಸ್ತಾ ಇದ್ದಾರೆ. ‘ಗೆಳತಿ ಗಾಯತ್ರಿ’ ಅನ್ನೋ ಮಹಿಳಾ ಪ್ರಧಾನ ಕಥೆ ಹೊಂದಿರುವ ಧಾರಾವಾಹಿ ಮೂಲಕ ವೈಷ್ಣವಿ ಗೌಡ ಕಿರುತೆರೆಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ಇಷ್ಟು ದಿನ ವೈಷುನ ಮಿಸ್ ಮಾಡಿಕೊಂಡಿದ್ದ ಫ್ಯಾನ್ಸ್ ಮತ್ತೆ ಮನೆಮಗಳನ್ನ ಮನೆಗೆ ಬರಮಾಡಿಕೊಳ್ಳೋದಕ್ಕೆ ಸಜ್ಜಾಗಿದ್ದಾರೆ..!
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ...


