ವರ್ಷದ ಬಳಿಕ ಕೊನೆಗೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು Vaishnavi Gowda
Vaishnavi Gowda: ಸೀತಾ ರಾಮ ಮತ್ತು ಅಗ್ನಿ ಸಾಕ್ಷಿ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿದ ಚೆಲುವೆ ವೈಷ್ಣವಿ ಗೌಡ ಕೊನೆಗೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೆ ಶೀಘ್ರದಲ್ಲೇ ಕಿರುತೆರೆಗೆ ಎಂಟ್ರಿ ಕೊಡೋದಕ್ಕೆ ನಟಿ ರೆಡಿಯಾಗಿದ್ದಾರೆ.

ವೈಷ್ಣವಿ ಗೌಡ
ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರು ವೈಷ್ಣವಿ ಗೌಡ. ಅಗ್ನಿ ಸಾಕ್ಷಿಯ ಮೂಲಕ ಕನ್ನಡಿಗರ ಮನೆ ಮನಗಳಲ್ಲಿ ನೆಲೆಸಿದ ಈ ಬೆಡಗಿ ನಂತರ ಸೀತಾ ರಾಮ ಧಾರಾವಾಹಿ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದರು.
ಸೀತಾ ರಾಮ ಧಾರಾವಾಹಿ
ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ-ರಾಮ ಮತ್ತು ಸಿಹಿಯ ಮುದ್ದಾದ ಕಥೆಯನ್ನು ಜನ ಇಷ್ಟಪಟ್ಟಿದ್ದರು. ಆದರೆ ಕಳೆದ ವರ್ಷ ಮೇ ಅಂತ್ಯದಲ್ಲಿ ಸೀರಿಯಲ್ ಮುಗಿದಿದ್ದು, ಜೂನ್ ನಲ್ಲಿ ವೈಷ್ಣವಿ ಅನುಕೂಲ್ ಮಿಶ್ರಾ ಜೊತೆ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದರು.
ಮತ್ತೆ ನಟಿಸೋದೆ ಇಲ್ಲ
ಸೀತಾ ರಾಮ ಮುಗಿಯುತ್ತಿದ್ದಂತೆ ಮದುವೆಯಾದ ವೈಷ್ಣವಿಯನ್ನು ನೋಡಿ, ಇನ್ನು ಮುಂದೆ ನಟಿ ಕಿರುತೆರೆಯಲ್ಲಿ ನಟಿಸೋದೆ ಇಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ವೈಷ್ಣವಿ ಬಳಿಕ ವೆಬ್ ಸೀರೀಸ್ ಒಂದರಲ್ಲಿ ನಟಿಸಿದ್ದರು. ಇದೀಗ ಮತ್ತೊಂದು ಗುಡ್ ನ್ಯೂಸ್ ಜೊತೆ ಬಂದಿದ್ದಾರೆ.
ಹೊಸ ಧಾರಾವಾಹಿಯಲ್ಲಿ ವೈಷ್ಣವಿ
ಇದೀಗ ವೈಷ್ಣವಿ ಗೌಡ ಹೊಸ ಧಾರಾವಾಹಿಯಲ್ಲಿ, ಹೊಸ ರೀತಿಯ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ ಖಂಡಿತಾ ಅಲ್ಲ, ಯಾಕಂದ್ರೆ, ವೈಷ್ಣವಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಹಿಂಟ್ ನೀಡಿದ್ದಾರೆ.
ಏನು ಹೇಳಿದ್ದಾರೆ ವೈಷ್ಣವಿ
ವೈಷ್ಣವಿ ಗೌಡ ತಮ್ಮ ಇನ್’ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದು, ಮತ್ತೊಂದು ಪಾತ್ರ, ಮತ್ತೊಂದು ಜರ್ನಿ, ಹೇಳಲು ಮತ್ತೊಂದು ಕಥೆ. Signed and sealed ಎಂದು ಬರೆದುಕೊಂಡಿದ್ದಾರೆ. ಆದರೆ ಅವರು ಯಾವ ವಾಹಿನಿಯಲ್ಲಿ ಯಾವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಮಾತ್ರ ತಿಳಿದು ಬಂದಿಲ್ಲ.
ಹೊಸ ವಾಹಿನಿಯಲ್ಲಿ ನಟನೆ
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವಂತೆ ಹೊಸ ವಾಹಿನಿಯಲ್ಲಿ ಹೊಸ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ನಟಿಸುತ್ತಾರೆ ಎನ್ನಲಾಗುತ್ತಿದೆ. ಆದರೆ ಹೊಸ ವಾಹಿನಿ ಅಂದ್ರೆ ಯಾವುದು? ಈಗಾಗಲೇ ಕಲರ್ಸ್ ಮತ್ತು ಜೀ ಕನ್ನಡದಲ್ಲಿ ನಟಿಸಿರೋದರಿಂದ, ಸ್ಟಾರ್ ಸುವರ್ಣ ಅಥವಾ ಉದಯಟಿವಿಯಲ್ಲೂ ಸಹ ನಟಿಸುವ ಸಾಧ್ಯತೆ ಇದೆ. ಯಾವುದಕ್ಕೂ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

