BBK 13 Update: ಬಿಗ್‌ಬಾಸ್ ಮನೆಗೆ ಮತ್ತೆ ಬರ್ತಿದ್ದಾರೆ ಡ್ಯಾನ್ಸರ್ ಕಿಶನ್ ಬಿಳಗಲಿ
ಬಿಗ್‌ಬಾಸ್ ಕನ್ನಡ ಸೀಸನ್ 13ಕ್ಕೆ ಮೂವರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಲಿದ್ದಾರೆ ಎಂಬ ಮಾತುಗಳ ನಡುವೆ, ಸೀಸನ್ 7ರ ಸ್ಪರ್ಧಿ ಕಿಶನ್ ಬಿಳಗಲಿ ಮತ್ತೆ ದೊಡ್ಮನೆಗೆ ಬರುತ್ತಿರುವ ಸುಳಿವು ನೀಡಿದ್ದಾರೆ. ಈ ಹಿಂದೆ ಅರುಣ್ ಸಾಗರ್ ಮತ್ತು ಓಂ ಪ್ರಕಾಶ್ ರಾವ್ ಕೂಡ ಎರಡು ಬಾರಿ ಬಿಗ್‌ಬಾಸ್ ಪ್ರವೇಶಿಸಿದ್ದರು.

ಡ್ಯಾನ್ಸರ್, ನಟ ಕಿಶನ್ ಬಿಳಗಲಿ
ಸಪ್ಪೆಯಾಗಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ಸೀಸನ್ 13ರ ದೊಡ್ಮನೆಯಲ್ಲಿ ವೀಕ್ಷಕರು ಎಕ್ಸ್ ಫ್ಯಾಕ್ಟರ್ ಹುಡುಕುತ್ತಿದ್ದಾರೆ. ಈ ವಾರ ಮನೆಯಿಂದ ಮೂವರು ಸ್ಪರ್ಧಿಗಳು ಎಲಿಮಿನೇಟ್ ಆಗಿ, ಮೂವರು ವೈಲ್ಡ್ ಕಾರ್ಡ್‌ನಲ್ಲಿ ಬರಲಿದ್ದಾರೆ ಎಂಬ ಮಾತುಗಳ ಬೆನ್ನಲ್ಲೇ ಡ್ಯಾನ್ಸರ್, ನಟ ಕಿಶನ್ ಬಿಳಗಲಿ ಇನ್‌ಸ್ಟಾಗ್ರಾಂ ಪೋಸ್ಟ್ ಸಂಚಲನ ಮೂಡಿಸಿದೆ.
ಸೀಸನ್ 7ರ ಸ್ಪರ್ಧಿಯಾಗಿದ್ದ ಕಿಶನ್
ಬಿಗ್‌ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿಯಾಗಿದ್ದ ಕಿಶನ್, ಮತ್ತೊಮ್ಮೆ ದೊಡ್ಮನೆ ರಿಯಾಲಿಟಿ ಶೋಗೆ ಬರುತ್ತಿದ್ದಾರೆ. ಈ ಬಗ್ಗೆ ಇನ್‌ಸ್ಟಗ್ರಾಂನಲ್ಲಿ ಸೀಸನ್ 7ರ ವಿಡಿಯೋ ಝಲಕ್ ಹಂಚಿಕೊಂಡಿರುವ ಕಿಶನ್, ಮುಂದಿನ ಮೂರು ದಿನಗಳಲ್ಲಿ ಬಿಗ್‌ಬಾಸ್ ಜೀವನಕ್ಕೆ ಬರುತ್ತಿರೋದಾಗಿ ಹೇಳಿದ್ದಾರೆ.
ಅರುಣ್ ಸಾಗರ್, ಓಂ ಪ್ರಕಾಶ್ ರಾವ್ ಬಳಿಕ ಎರಡನೇ ಅವಕಾಶ
ಈ ಹಿಂದೆ ನಟ ಅರುಣ್ ಸಾಗರ್ ಎರಡು ಬಾರಿ ಬಿಗ್‌ಬಾಸ್ ಮನೆ ಸ್ಪರ್ಧಿಯಾಗಿದ್ದರು. ಅರುಣ್ ಸಾಗರ್ ಅವರು ಬಿಗ್‌ಬಾಸ್ ಸೀಸನ್ ಮೊದಲ ಮತ್ತು ಒಂಬತ್ತರ ಸ್ಪರ್ಧಿಯಾಗಿದ್ದರು. ಇನ್ನು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಸೀಸನ್ 4 ಮತ್ತು 13ರಲ್ಲಿಯೂ ಇದ್ದರು. ಎರಡು ಬಾರಿಯೂ ಅನಾರೋಗ್ಯದಿಂದ ಹೊರಗೆ ಬಂದಿದ್ದಾರೆ.
ಬಿಗ್‌ಬಾಸ್ ಸೀಸನ್ 13
ಮೊದಲ ವಾರ ನಟಿ ಪ್ರಥಮಾ ಪ್ರಸಾದ್ ಎಲಿಮಿನೇಟ್ ಆಗಿದ್ದರು. ಎರಡನೇ ವಾರದಲ್ಲಿ ಅನಾರೋಗ್ಯದಿಂದ ನಿರ್ದೇಶಕ ಓಂ ಪ್ರಕಾಶ್ ರಾವ್ ಆಟದಿಂದ ಹೊರಗೆ ಬರಬೇಕಾಯ್ತು. ಹಾಗಾಗಿ ಎರಡನೇ ವಾರದಲ್ಲಿ ಯಾವುದೇ ನಾಮಿನೇಷನ್ ನಡೆದಿರಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

