MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ವರುಣ್ ಆರಾಧ್ಯ ಮೇಲೆ ಹಣದ ಸುರಿಮಳೆ.. ಸನಾತನ ಸಂಸ್ಕೃತಿ ನೆನಪಿಸಿ, ಲಕ್ಷ್ಮಿಗೆ ಮಾಡಿದ ಅಪಮಾನವೆಂದ ನೆಟ್ಟಿಗರು

ವರುಣ್ ಆರಾಧ್ಯ ಮೇಲೆ ಹಣದ ಸುರಿಮಳೆ.. ಸನಾತನ ಸಂಸ್ಕೃತಿ ನೆನಪಿಸಿ, ಲಕ್ಷ್ಮಿಗೆ ಮಾಡಿದ ಅಪಮಾನವೆಂದ ನೆಟ್ಟಿಗರು

Varun Aradhya engagement: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವರುಣ್ ಆರಾಧ್ಯ ಅವರ ನಿಶ್ಚಿತಾರ್ಥದ ಸಮಾರಂಭದ ವಿಡಿಯೋವೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ.

2 Min read
Author : Ashwini HR
Published : Sep 24 2026, 02:37 PM IST
Share this Photo Gallery
  • FB
  • TW
  • Linkdin
  • Whatsapp
15
ಎಂಗೇಜ್‌ಮೆಂಟ್‌ನಲ್ಲಿ ಮಾಡಿದ್ದೇನು?
Image Credit : Varun Aradya/YT

ಎಂಗೇಜ್‌ಮೆಂಟ್‌ನಲ್ಲಿ ಮಾಡಿದ್ದೇನು?

ಎಂಗೇಜ್‌ಮೆಂಟ್‌ನಲ್ಲಿ ಮಾಡಿದ್ದೇನು?
ಸೋಶಿಯಲ್ ಮೀಡಿಯಾ ಫೇಮಸ್ ಇನ್‌ಫ್ಲುಯೆನ್ಸರ್ ಹಾಗೂ ಕಿರುತೆರೆ ನಟ ವರುಣ್ ಆರಾಧ್ಯ ಅವರ ನಿಶ್ಚಿತಾರ್ಥದ ಸಮಾರಂಭದ ವಿಡಿಯೋವೊಂದು ಇತ್ತೀಚೆಗೆ ಭಾರಿ ಚರ್ಚೆ ಹಾಗೂ ಟೀಕೆಗೆ ಗ್ರಾಸವಾಗಿದೆ. ನಿಶ್ಚಿತಾರ್ಥದ ಸಂಭ್ರಮದಲ್ಲಿ ಜೋಡಿಗಳ ಮೇಲೆ ಹಣವನ್ನು ಮೇಲಕ್ಕೆ ತೂರಿ, ಚೆಲ್ಲಾಡಿದ ದೃಶ್ಯಕ್ಕೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತೀಯ ಸಂಸ್ಕೃತಿಯಲ್ಲಿ ಹಣವನ್ನು ಲಕ್ಷ್ಮೀದೇವಿಗೆ ಹೋಲಿಸಲಾಗುತ್ತದೆ, ಹೀಗೆ ಹಣವನ್ನು ಕಾಲಡಿ ಚೆಲ್ಲುವುದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಹಣ ಕಾಲಿಗೆ ತಾಗಿದರೂ ನಮಸ್ಕರಿಸುವ ಸಂಸ್ಕೃತಿ ನಮ್ಮದು
Image Credit : Varun Aradya/YT

ಹಣ ಕಾಲಿಗೆ ತಾಗಿದರೂ ನಮಸ್ಕರಿಸುವ ಸಂಸ್ಕೃತಿ ನಮ್ಮದು

ಹಣ ಕಾಲಿಗೆ ತಾಗಿದರೂ ನಮಸ್ಕರಿಸುವ ಸಂಸ್ಕೃತಿ ನಮ್ಮದು
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಇನ್ನೋರ್ವ ಇನ್‌ಫ್ಲುಯೆನ್ಸರ್ "ನಮ್ಮ ಸಂಸ್ಕೃತಿಯಲ್ಲಿ ಹಣ ಅಥವಾ ಪುಸ್ತಕ ಕಾಲಿಗೆ ತಾಗಿದರೆ ತಕ್ಷಣ ಎತ್ತಿ ಕಣ್ಣಿಗೆ ಮುಟ್ಟಿಸಿಕೊಂಡು ನಮಸ್ಕರಿಸುತ್ತೇವೆ. ಏಕೆಂದರೆ ಹಣವನ್ನು ಕೇವಲ ಕಾಗದವೆಂದು ನೋಡದೆ 'ಮಹಾಲಕ್ಷ್ಮಿ' ಎಂದು ಪೂಜಿಸುತ್ತೇವೆ. ಆದರೆ, ಇಂತಹ ಮಂಗಳಕರ ನಿಶ್ಚಿತಾರ್ಥದ ವೇದಿಕೆಯಲ್ಲಿ ಹಣವನ್ನು ಗಾಳಿಯಲ್ಲಿ ತೂರಿ ಚೆಲ್ಲಾಡಿರುವುದು ದುಡ್ಡಿನ ಮದ ಮತ್ತು ಲಕ್ಷ್ಮೀದೇವಿಗೆ ಮಾಡಿದ ಅಪಮಾನ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related Articles

Related image1
ಮಧು ಗೌಡನ ಅನ್‌ಫಾಲೋ ಮಾಡ್ತಿರೋ ಫ್ಯಾನ್ಸ್: '9 ವರ್ಷದ ಪರಿಶ್ರಮ ಹಾಳು ಮಾಡ್ಕೋಬೇಡಿ' ಎಂದಿದ್ದೇಕೆ?
Related image2
"Bigg Boss ರಿಜೆಕ್ಟ್ ಮಾಡ್ದೆ, ಜಗಳವಾಡಿ ಮನೆ ಬಿಟ್ಟಿದ್ದೆ.." ಯುಟ್ಯೂಬರ್ ಭೂಮಿಕಾ ಬಸವರಾಜ್ ಹೇಳಿದ್ದಿಷ್ಟು!
35
ಇದು ಯಾವ ಸಂಪ್ರದಾಯ?
Image Credit : Varun Aradya/YT

ಇದು ಯಾವ ಸಂಪ್ರದಾಯ?

ಇದು ಯಾವ ಸಂಪ್ರದಾಯ?
ಹಿಂದೆ ಶವವನ್ನು ಶ್ಮಶಾನಕ್ಕೆ ಒಯ್ಯುವ ಹಾದಿಯಲ್ಲಿ ಕೊನೆಯ ಗೌರವವಾಗಿ ನಾಣ್ಯಗಳನ್ನು ಚೆಲ್ಲುವ ಪದ್ಧತಿ ಇತ್ತು. ಆದರೆ ಸಂಭ್ರಮದ ಸಭಾಂಗಣದಲ್ಲಿ ಈ ರೀತಿ ಹಣವನ್ನು ಚೆಲ್ಲುವುದು ಯಾವ ಸಂಪ್ರದಾಯ ಎಂದು ಹಲವರು ಪ್ರಶ್ನಿಸಿದ್ದಾರೆ.

45
ಗಂಗಾವತಿ ಪ್ರಾಣೇಶ್ ಮಾತು ಉಲ್ಲೇಖಿಸಿ ಎಚ್ಚರಿಕೆ
Image Credit : Varun Aradya/YT

ಗಂಗಾವತಿ ಪ್ರಾಣೇಶ್ ಮಾತು ಉಲ್ಲೇಖಿಸಿ ಎಚ್ಚರಿಕೆ

ಗಂಗಾವತಿ ಪ್ರಾಣೇಶ್ ಮಾತು ಉಲ್ಲೇಖಿಸಿ ಎಚ್ಚರಿಕೆ
ಇದೇ ಸಂದರ್ಭದಲ್ಲಿ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ಪ್ರಸಿದ್ಧ ಮಾತುಗಳನ್ನು ನೆನಪಿಸಿರುವ ಅವರು, "ಎತ್ತರದಲ್ಲಿದ್ದೇನೆ ಎಂದು ಬೀಗಬೇಡ, ಆಳವಾದ ಪಾಂಡಿತ್ಯವಿದೆ ಎಂದು ಗರ್ವಿಸಬೇಡ. ಸಂಪತ್ತು ಅಥವಾ ಹಣವಿದೆ ಎಂದು ಅಹಂಕಾರ ಮತ್ತು ಆಡಂಬರ ಪ್ರದರ್ಶನ ಮಾಡಬಾರದು. ಹಣ ಎನ್ನುವುದು ಶಾಶ್ವತವಲ್ಲ, ವಿನಮ್ರತೆ ಮುಖ್ಯ" ಎಂದು ಎಚ್ಚರಿಸಿದ್ದಾರೆ.

55
ವರುಣ್ ಆರಾಧ್ಯಗೆ ಸಾರ್ವಜನಿಕರ ಕಿವಿಮಾತು
Image Credit : Asianet News

ವರುಣ್ ಆರಾಧ್ಯಗೆ ಸಾರ್ವಜನಿಕರ ಕಿವಿಮಾತು

ವರುಣ್ ಆರಾಧ್ಯಗೆ ಸಾರ್ವಜನಿಕರ ಕಿವಿಮಾತು
ವರುಣ್ ಆರಾಧ್ಯ ಮತ್ತು ಅವರ ಕುಟುಂಬದವರು ಈ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೋವು, ದ್ವೇಷ ಹಾಗೂ ಟ್ರೋಲಿಂಗ್‌ಗಳನ್ನು ಅನುಭವಿಸಿದ್ದಾರೆ. ಹೀಗಿರುವಾಗ, ಮತ್ತೆ ಸಾರ್ವಜನಿಕವಾಗಿ ಇಂತಹ ಅನಗತ್ಯ ಆಡಂಬರ ಪ್ರದರ್ಶನ ಮಾಡಿ ಟ್ರೋಲರ್ಸ್‌ಗಳಿಗೆ ಆಹಾರವಾಗಬಾರದು. ಇನ್ನಾದರೂ ಜಾಗರೂಕರಾಗಿದ್ದು, ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಹಿತೈಷಿಗಳು ಸಲಹೆ ನೀಡಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಹುಟ್ಟುಹಾಕಿದ್ದು, "ಸಂಭ್ರಮದಲ್ಲಿ ಹಣ ತೂರಿ ಖುಷಿಪಡುವುದು ತಪ್ಪಲ್ಲ" ಎಂದು ಕೆಲವರು ಸಮರ್ಥಿಸಿಕೊಂಡರೆ, ಬಹುತೇಕರು "ಇದು ದುಡ್ಡಿನ ಅಹಂಕಾರ ಮತ್ತು ತಪ್ಪು ನಡೆ" ಎಂದು ಕಮೆಂಟ್ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಟಿವಿ ಶೋ
ಮನರಂಜನಾ ಸುದ್ದಿ
 

Latest Videos
Recommended Stories
Recommended image1
Rural star Anjan: ಹುಲಿಬೀರ್‌ ಕ್ಲೈ ಮಾಕ್ಸ್‌; ನಂದೇನು ಇಲ್ಲ ಎಲ್ಲ ಎಲ್ಲವನ ಪವಾಡ ಎಂದ ಅಂಜನ್!
Recommended image2
ಶೀಘ್ರದಲ್ಲಿ ಪ್ರೇಕ್ಷಕರಿಗೆ ವಿದಾಯ ಹೇಳಲಿದೆ ಜನಮೆಚ್ಚಿದ ಜೋಡಿಯ ಬ್ಲಾಕ್ ಬಸ್ಟರ್ ಸೀರಿಯಲ್
Recommended image3
Bigg Boss 13 ಹೊಸ ಸಾಹಸ: ಷೋ ನೋಡಿ, ತಕ್ಷಣ ಬಹುಮಾನ ಗೆಲ್ಲಿ- ಸುದೀಪ್​ ಏನ್​ ಹೇಳಿದ್ರು ನೋಡಿ
Related Stories
Recommended image1
ಮಧು ಗೌಡನ ಅನ್‌ಫಾಲೋ ಮಾಡ್ತಿರೋ ಫ್ಯಾನ್ಸ್: '9 ವರ್ಷದ ಪರಿಶ್ರಮ ಹಾಳು ಮಾಡ್ಕೋಬೇಡಿ' ಎಂದಿದ್ದೇಕೆ?
Recommended image2
"Bigg Boss ರಿಜೆಕ್ಟ್ ಮಾಡ್ದೆ, ಜಗಳವಾಡಿ ಮನೆ ಬಿಟ್ಟಿದ್ದೆ.." ಯುಟ್ಯೂಬರ್ ಭೂಮಿಕಾ ಬಸವರಾಜ್ ಹೇಳಿದ್ದಿಷ್ಟು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved