- Home
- Entertainment
- TV Talk
- Karna Serial ರೋಚಕ ಟ್ವಿಸ್ಟ್: ಅಮ್ಮಾ ಎಂದ ಕರ್ಣ, ನಿಂತಲ್ಲೇ ಕುಸಿದ ಭುವನೇಶ್ವರಿ; ತಾಯಿ-ಮಗನ ಸಮ್ಮಿಲನ
Karna Serial ರೋಚಕ ಟ್ವಿಸ್ಟ್: ಅಮ್ಮಾ ಎಂದ ಕರ್ಣ, ನಿಂತಲ್ಲೇ ಕುಸಿದ ಭುವನೇಶ್ವರಿ; ತಾಯಿ-ಮಗನ ಸಮ್ಮಿಲನ
ರಮೇಶನನ್ನು ಹುಡುಕಿಕೊಂಡು ಕರ್ಣನ ಮನೆಗೆ ಬಂದ ಭುವನೇಶ್ವರಿಗೆ ರಮೇಶನ ಫೋಟೋ ನೋಡಿ ಕೋಪ ಬಂದಿದೆ. ಆದರೆ ಕರ್ಣ ಆಕೆಯನ್ನು ಅಮ್ಮಾ ಎಂದು ಕರೆದಾಗ ಅವಳು ತಲ್ಲಣಿಸಿದ್ದಾಳೆ. ಕರ್ಣನಿಗೆ ಅಸಲಿ ಸತ್ಯ ಗೊತ್ತಾಯ್ತಾ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

ಕರ್ಣ ಸೀರಿಯಲ್ನಲ್ಲಿ ರೋಚಕ ಟ್ವಿಸ್ಟ್
ಕರ್ಣ ಸೀರಿಯಲ್ನಲ್ಲಿ (Karna Serial)ನಲ್ಲಿ ರೋಚಕ ಟ್ವಿಸ್ಟ್ ಸಿಕ್ಕಿದೆ. ರಮೇಶನನ್ನು ಹುಡುಕಿಕೊಂಡು ಭುವನೇಶ್ವರಿ ಉರ್ಫ್ ಸೀತಾ ನೇರವಾಗಿ ಕರ್ಣನ ಮನೆಗೆ ಬಂದಿದ್ದಾಳೆ.
ರಮೇಶ್ನ ಫೋಟೋ ನೋಡಿದ ಸೀತಾ
ಅಲ್ಲಿ ಕರ್ಣ ತನ್ನ ಮನೆಯ ಎಲ್ಲಾ ಕೋಣೆಗಳನ್ನು ಪರಿಚಯಿಸುತ್ತಿರುವಾಗ ರಮೇಶನ ಫೋಟೋ ನೋಡಿ ಆಕೆಗೆ ಕೋಪ ನೆತ್ತಿಗೇರಿದೆ. ಆದರೆ ಅದನ್ನು ಕರ್ಣನ ಎದುರು ತೋರಿಸಿಕೊಳ್ಳುತ್ತಿಲ್ಲ.
ಕೋಪದ ಬಗ್ಗೆ ಪ್ರಶ್ನೆ
ಬಳಿಕ ಕರ್ಣ, ಭುವನೇಶ್ವರಿಗೆ ನಿಮಗೆ ನಮ್ಮ ಫ್ಯಾಮಿಲಿ ಕಂಡರೆ ಯಾಕಷ್ಟು ಕೋಪ ಎಂದು ಪ್ರಶ್ನಿಸಿದಾಗ, ಸೀತಾ, ಮುಂದೊಂದು ದಿನ ಕಾಲ ಕೂಡಿ ಬಂದಾಗ ವಿಷಯ ಹೇಳುವೆ ಎಂದಿದ್ದಾಳೆ.
ಮಗ ಎನ್ನುವ ವಿಷ್ಯ ಗೊತ್ತಿಲ್ಲ
ಆದರೆ, ಆಕೆಗಿನ್ನೂ ಕರ್ಣನೇ ತನ್ನ ಮಗ ಎನ್ನುವ ವಿಷಯ ಗೊತ್ತಿಲ್ಲ. ಆತ ರಮೇಶನ ಮಗ ಎನ್ನುವ ಸತ್ಯ ಗೊತ್ತಿದ್ದರೂ, ಮಾಲತಿಯ ಮಗ ಎಂದುಕೊಂಡಿದ್ದಾಳೆ.
ಅಮ್ಮಾ ಎಂದ ಕರ್ಣ
ಆದರೆ ಮಾತು ಮಾತಿನಲ್ಲಿ ಕರ್ಣ, ಇಷ್ಟೆಲ್ಲಾ ಕೋಪ ಸಲ್ಲದು. ಸಿಗುವ ಒಂದು ಪ್ರೀತಿಯ ಎಳೆಯನ್ನು ಹಿಡಿದು ಅದರಲ್ಲಿಯೇ ಪ್ರೀತಿ ಕಾಣಬೇಕಲ್ಲವೇ ಅಮ್ಮಾ ಎಂದು ಹೇಳಿದಾಗ, ಭುವನೇಶ್ವರಿ ತಲ್ಲಣಿಸಿ ಹೋಗಿದ್ದಾಳೆ.
ಕರ್ಣನಿಗೆ ಅಸಲಿ ವಿಷ್ಯ ಗೊತ್ತಾಯ್ತಾ?
ಹಾಗಿದ್ದರೆ ಕರ್ಣನಿಗೆ ಅಸಲಿ ವಿಷ್ಯ ಗೊತ್ತಾಗಿ ಹೋಯ್ತಾ? ಹಾಗೆಂದು ಪ್ರೊಮೋದಲ್ಲಿ ಶೀರ್ಷಿಕೆ ನೀಡಲಾಗಿದೆ. ಆದರೆ ಸದ್ಯ ಅಂತೂ ಅದು ಸಾಧ್ಯವಿಲ್ಲ. ಒಂದು ವೇಳೆ ಗೊತ್ತಾದರೆ, ಸೀತಾ ಬದುಕಿರುವ ವಿಷ್ಯ ಮಾಲತಿಗೆ ತಿಳಿದರೆ, ಆಕೆಯ ಗತಿಯೇನು ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

