- Home
- Entertainment
- TV Talk
- ಮದುವೆಯಾಗಿ 6 ತಿಂಗಳಿಗೆ ಗುಡ್ ನ್ಯೂಸ್ ಕೊಟ್ಟ ರುದ್ರ ಮಾಸ್ಟರ್…. ಪತ್ನಿ ನಿರೀಕ್ಷಾ ಅದ್ಧೂರಿ ಸೀಮಂತ
ಮದುವೆಯಾಗಿ 6 ತಿಂಗಳಿಗೆ ಗುಡ್ ನ್ಯೂಸ್ ಕೊಟ್ಟ ರುದ್ರ ಮಾಸ್ಟರ್…. ಪತ್ನಿ ನಿರೀಕ್ಷಾ ಅದ್ಧೂರಿ ಸೀಮಂತ
Rudra Master: ಕನ್ನಡ ಕಿರುತೆರೆಯ ಜನಪ್ರಿಯ ಡ್ಯಾನ್ಸ್ ಕೊರಿಯೋಗ್ರಾಫರ್ ರುದ್ರ ಮಾಸ್ಟರ್ ಇದೀಗ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ, ಇದೀಗ ಪೋಷಕರಾಗಿ ಭಡ್ತಿ ಪಡೆಯುತ್ತಿದ್ದಾರೆ. ಸೀಮಂತದ ಫೋಟೊಗಳು ಇಲ್ಲಿವೆ.

ಕೊರಿಯೋಗ್ರಾಫರ್ ರುದ್ರ ಮಾಸ್ಟರ್
ಕನ್ನಡ ಕಿರುತೆರೆಯ ಜನಪ್ರಿಯ ಕೊರಿಯೋಗ್ರಾಫರ್ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದಿರುವ ನೃತ್ಯ ಸಂಯೋಜಕ ರುದ್ರ ಮಾಸ್ಟರ್. ಇದೀಗ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುವ ಸಂಭ್ರಮದಲ್ಲಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಂಡು ಸಂಭ್ರಮವನ್ನು ತಿಳಿಸಿದ್ದಾರೆ.
ಪತ್ನಿ ನಿರೀಕ್ಷ ಅದ್ಧೂರಿ ಸೀಮಂತ
ಹೌದು ರುದ್ರ ಮಾಸ್ಟರ್ ತಂದೆಯಾಗಿ ಭಡ್ತಿ ಪಡೆಯುತ್ತಿದ್ದು, ಈ ಸಂಭ್ರಮವನ್ನು ಸೆಲೆಬ್ರೇಟ್ ಮಾಡಲು ಐದನೇ ತಿಂಗಳಿಗೆ ಕಾಲಿಟ್ಟಿರುವ ಪತ್ನಿಗೆ ಅದ್ದೂರಿಯಾಗಿ ಸೀಮಂತ ಮಾಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದು, ಹೊಸ ಅಧ್ಯಾಯ, ಹೊಸ ಸಂತೋಷ… ನಮ್ಮ ಪುಟ್ಟ ಪ್ರಪಂಚಕ್ಕೆ ಪುಟ್ಟ ಹೆಜ್ಜೆ… ಎಂದು ಪತ್ನಿ ನಿರೀಕ್ಷಾ ಭೂಷಣ್ ಕ್ಯಾಪ್ಶನ್ ಕೊಟ್ಟಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ದಾಂಪತ್ಯ ಜೀವನ ಶುರು
ರುದ್ರ ಮಾಸ್ಟರ್ ಮತ್ತು ನಿರೀಕ್ಷಾ ಇದೇ ವರ್ಷ ಅಂದರೆ ಫೆಬ್ರವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ರುದ್ರ ಮಾಸ್ಟರ್ ಮತ್ತು ನಿರೀಕ್ಷಾ ಕುಟುಂಬಸ್ಥರ ಸಮ್ಮತಿ ಪಡೆದು ಸರಳ ಸಮಾರಂಭದಲ್ಲಿ, ತಮ್ಮ ಬಂಧು ಬಳಗ ಹಾಗೂ ಸ್ನೇಹಿತರ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಜೋಡಿ ನಂ 1ರಲ್ಲಿ ಭಾಗಿ
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮೂಲಕ ತಮ್ಮ ಅದ್ಭುತ ಡ್ಯಾನ್ಸ್ ಹಾಗೂ ಸೈಲೆಂಟ್ ನೇಚರ್ ಮೂಲಕವೇ ಮನೆಮಾತಾಗಿದ್ದ ರುದ್ರ ಮಾಸ್ಟರ್ ಮದುವೆಯಾದ ಕೆಲವೇ ಸಮಯದಲ್ಲಿ ಪತ್ನಿ ನಿರೀಕ್ಷಾ ಜೊತೆ ‘ಜೋಡಿ ನಂ 1’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದರು. ಅಲ್ಲೂ ಬೆಸ್ಟ್ ಜೋಡಿ ಎಂದು ಗುರುತಿಸಿಕೊಂಡಿದ್ದರು.
ನಿರೀಕ್ಷಾ ಈಗ ಐದು ತಿಂಗಳ ಗರ್ಭಿಣಿ
ರುದ್ರ ಮಾಸ್ಟರ್ ಪತ್ನಿ ನಿರೀಕ್ಷಾ ಈಗ 5 ತಿಂಗಳ ಗರ್ಭಿಣಿಯಾಗಿದ್ದು. ನವದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪತ್ನಿ ನಿರೀಕ್ಷಾರ ಸೀಮಂತ ಕಾರ್ಯಕ್ರಮವನ್ನ ರುದ್ರ ಮಾಸ್ಟರ್ ಅದ್ಧೂರಿಯಾಗಿ ನೆರವೇರಿಸಿದ್ದು, ಸೋಶಿಯಲ್ ಮೀಡೀಯಾದಲ್ಲಿ ವಿಡೀಯೋ ಮತ್ತು ಫೋಟೊಗಳು ವೈರಲ್ ಆಗುತ್ತಿವೆ. ಅಭಿಮಾನಿಗಳು ರುದ್ರ ಮಾಸ್ಟರ್ ದಂಪತಿಗಳಿಗೆ ಶುಭಾಶಯ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

