ಮಿನಿ ಸ್ವಿಟ್ಜರ್ಲೆಂಡ್ ಪಹಲ್ಗಾಮ್‌ನ ಬೈಸರನ್ ಅನ್ನೇ ಉಗ್ರರು ಟಾರ್ಗೆಟ್ ಮಾಡಿದ್ಯಾಕೆ?
ಕಾಶ್ಮೀರದ ಪಹಲ್ಗಾಮ್ ಬಳಿಯಿರುವ ಬೈಸರನ್ ಕಣಿವೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ತನ್ನ ಸುಂದರವಾದ ಭೂದೃಶ್ಯಗಳು, ಹಚ್ಚ ಹಸಿರಿನ ಹುಲ್ಲುಗಾವಲುಗಳು ಮತ್ತು ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಹಿಮಾಲಯದ ತಪ್ಪಲಿನಲ್ಲಿರುವ ಈ ಕಣಿವೆಯು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ಸ್ವರ್ಗವಾಗಿದೆ. ಬೈಸರನ್ ಕಣಿವೆಗೆ ಹೇಗೆ ಹೋಗುವುದು, ಯಾವಾಗ ಭೇಟಿ ನೀಡುವುದು ಎಂಬುದನ್ನು ತಿಳಿದುಕೊಳ್ಳಿ.

ಉತ್ತರ ಭಾರತದ ಕಾಶ್ಮೀರ ಪ್ರದೇಶದ ಪಹಲ್ಗಾಮ್ ಗ್ರಾಮದಲ್ಲಿರುವ ಬೈಸರನ್ ಪ್ರದೇಶಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ದೇಶವನ್ನೇ ಬೆಚ್ಚಿಬೀಳಿಸಿದೆ. 26 ಪ್ರವಾಸಿಗರನ್ನು ಉಗ್ರರು ಬಲಿ ತೆಗೆದುಕೊಂಡಿದ್ದು, ಬೈಸರನ್ ಪ್ರದೇಶ ಎಷ್ಟು ಕಠಿಣವಾದ ಮತ್ತು ಕಡಿದಾದ ಕಣಿವೆ ಪ್ರದೇಶ. ಕುದುರೆ ಅಥವಾ ವ್ಯಕ್ತಿ ಮಾತ್ರ ನಡೆದುಕೊಂಡು ಹೋಗಲು ಸಾಧ್ಯವಿರುವ ಕಾರಣಕ್ಕೆ ಕಾರ್ಯಾಚರಣೆ ನಡೆಸಲು ತಡವಾಗುತ್ತಿದೆ. ಈಗ ಶಾಲೆಗಳಿಗೆ ರಜೆ ಇರುವುದರಿಂದ ಬಹುತೇಕರು ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದರು.
ಪಹಲ್ಗಾಮ್ ಉಗ್ರರ ದಾಳಿ: ಕನ್ನಡಿಗ ಸೇರಿ 24ಕ್ಕೂ ಹೆಚ್ಚು ಬಲಿ, ರಕ್ತಸಿಕ್ತ ಚಿತ್ರಣ!
ಪಹ್ಲಾಗಮ್‌ನಿಂದ ಕೇವಲ 5 ಕಿಮೀ ದೂರದಲ್ಲಿರುವ ಅತ್ಯಂತ ಸುಂದರವಾದ ಮತ್ತು ಪ್ರಶಾಂತವಾದ ಸ್ಥಳಗಳಲ್ಲಿ ಒಂದು ಬೈಸರನ್ ಕಣಿವೆ. ಭಾರತದ ಸ್ವಿಟ್ಜರ್ಲೆಂಡ್ ಅಥವಾ ಮಿನಿ-ಸ್ವಿಟ್ಜರ್ಲೆಂಡ್ ಎಂದೂ ಕರೆಯಲ್ಪಡುವ ಬೈಸರನ್ ಕಣಿವೆಯು ಅದರ ತೆರೆದ ಕಣಿವೆ, ಎತ್ತರದ ಫರ್ ಮರಗಳು ಮತ್ತು ಮಂಜಿನಿಂದ ಸುತ್ತುವರೆಯುವ ಪ್ರಸಿದ್ಧಿ ಪಡೆದಿದೆ. ಸುಂದರವಾದ ಆಲ್ಪೈನ್ ಸರೋವರಗಳನ್ನು ಹೊಂದಿದೆ. ಗಾಢವಾದ ಮತ್ತು ಉದ್ದವಾದ ಹುಲ್ಲುಗಾವಲುಗಳನ್ನು ಹೊಂದಿರುವ ಈ ಪ್ರದೇಶವು ಸುತ್ತುವರೆದಿರುವುದರಿಂದ ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯುತ್ತಾರೆ.
ಪಹಲ್ಗಾಮ್‌ನಲ್ಲಿ 25 ಪ್ರವಾಸಿಗರ ನರಮೇಧ, ದಾಳಿಯ ಹೊಣೆ ಹೊತ್ತುಕೊಂಡ The Resistance Front
ಹಚ್ಚ ಹಸಿರಿನ ಹುಲ್ಲುಗಾವಲುಗಳು, ವಿಹಂಗಮ ನೋಟಗಳು ಮತ್ತು ಕುದುರೆ ಸವಾರಿಯಂತಹ ಸಾಹಸ ಚಟುವಟಿಕೆಗಳನ್ನು ಹೊಂದಿರುವ ಅದ್ಭುತ ತಾಣವಾಗಿರುವುದರಿಂದ ಪ್ರಕೃತಿ ಪ್ರಿಯರು ಪ್ರವಾಸಿಗರು ಹೆಚ್ಚು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇದು ಎತ್ತರದ ಪೈನ್ ಮರಗಳು ಮತ್ತು ಹಿಮದಿಂದ ಆವೃತವಾದ ಶಿಖರಗಳಿಂದ ಆವೃತವಾಗಿದೆ. ಇದು ಪಾದಯಾತ್ರಿಕರಿಗೆ ಜನಪ್ರಿಯ ತಾಣ. ಟುಲಿಯನ್ ಸರೋವರದವರೆಗೆ ಮತ್ತಷ್ಟು ಪ್ರಯಾಣಿಸಲು ಬಯಸುವ ಟ್ರೆಕ್ಕಿಂಗ್ ಉತ್ಸಾಹಿಗಳಿಗೆ ಬೈಸರನ್ ಒಂದು ಸೂಕ್ತವಾದ ಕ್ಯಾಂಪಿಂಗ್ ತಾಣವಾಗಿದೆ.
ಹಿಂದೂಗಳಿಗೆ ಪ್ರಮುಖ ಸ್ಥಳ: ಹಿಂದೂಗಳಿಗೆ ಇದೊಂದು ಪ್ರಮುಖ ಸ್ಥಳ ಎನ್ನಬಹುದು. ಪವಿತ್ರ ಅಮರನಾಥ ಯಾತ್ರೆಗೆ ಹೋಗುವ ಮಾರ್ಗವು ಇದರ ಸುತ್ತಮುತ್ತಲಿನ ಪರಿಸರಕ್ಕೆ ಬರುತ್ತದೆ. ಈ ಧಾರ್ಮಿಕ ಯಾತ್ರೆಯಲ್ಲಿ ಭಾಗವಹಿಸಲು ಪ್ರತಿ ವರ್ಷ ಸಾವಿರಾರು ಜನರು ಬರುತ್ತಾರೆ. ಇದೇ ಸ್ಥಳದಲ್ಲಿ ಕ್ಯಾಂಪಿಂಗ್ ಹಾಕಲಾಗುತ್ತದೆ. ಪಹಲ್ಗಾಮ್, ಅರು ಕಣಿವೆ ಮತ್ತು ಬೇತಾಬ್ ಕಣಿವೆ ಮತ್ತು ಶೇಷನಾಗ ಸರೋವರ ಸಾಕಷ್ಟು ಹತ್ತಿರದಲ್ಲಿದೆ.
ಪ್ರಯಾಣಿಸುವುದು ಹೇಗೆ?
ಬೈಸರನ್ ಕಣಿವೆ ಸಮುದ್ರ ಮಟ್ಟದಿಂದ ಸುಮಾರು 2,400 ಮೀಟರ್ (7,874 ಅಡಿ) ಎತ್ತರದಲ್ಲಿದೆ. ಪಹಲ್ಗಾಮ್ ಶ್ರೀನಗರದ ಆಗ್ನೇಯಕ್ಕೆ ಸುಮಾರು 90 ಕಿಲೋಮೀಟರ್ (56 ಮೈಲುಗಳು) ದೂರದಲ್ಲಿದೆ . ಈ ಪ್ರದೇಶದ ಅತಿ ಎತ್ತರದ ಶಿಖರಕ್ಕೆ ಕೊಲಹೋಯ್ ಪರ್ವತ ಎನ್ನುತ್ತಾರೆ. ಇಲ್ಲಿಂದ ಎತ್ತರದ ಹಿಮಾಲಯ ಪರ್ವತಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.
ಬೈಸರನ್ ಕಣಿವೆಗೆ ಹೋಗಲು ಹತ್ತಿರದ ಪಟ್ಟಣ ಪಹಲ್ಗಾಮ್ ಇಲ್ಲಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ. ರಸ್ತೆಯ ಮೂಲಕ ಹೋಗುವುದಾದರೆ 1 ರಿಂದ 2 ಗಂಟೆಗಳವರೆಗೆ ತೆಗೆದುಕೊಳ್ಳಬಹುದು. ಕಣಿವೆ ಮೇಲಕ್ಕೆ ಹೋಗುವುದು ಕಷ್ಟವಾಗುವುದರಿಂದ ಕುದುರೆ ಸವಾರಿ ಅಥವಾ ಸಣ್ಣ ಚಾರಣ ಮೂಲಕ ಕಷ್ಟಪಟ್ಟುಕೊಂಡು ಹೋಗಬೇಕು. ಚಾರಣ -2ರಿಂದ 3 ಗಂಟೆ ತೆಗೆದುಕೊಳ್ಳುತ್ತದೆ. ಬೈಸರನ್ ಕಣಿವೆಯ ಸೌಂದರ್ಯವನ್ನು ನೋಡಲು ಕುದುರೆ ಸವಾರಿ ಅತ್ಯುತ್ತಮ ಮಾರ್ಗವಾಗಿದೆ.
ವಿಮಾನದ ಮೂಲಕ ಹೋಗುವುದಾದರೆ ಬೈಸರನ್ ಕಣಿವೆಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಶೇಖ್ ಉಲ್-ಆಲಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದು ಶ್ರೀನಗರದಲ್ಲಿದೆ, ಇದು ಪಹಲ್ಗಮ್ ನಿಂದ ಸುಮಾರು 95 ಕಿಲೋಮೀಟರ್ ದೂರದಲ್ಲಿದೆ. ರೈಲಿನ ಮೂಲಕ ಹೋಗುವುದಾದರೆ ಅನಂತನಾಗ್ ಹತ್ತಿರದ ರೈಲು ನಿಲ್ದಾಣ. ಇದು ಪಹಲ್ಗಾಮ್ ನಿಂದ 45 ಕಿ.ಮೀ ದೂರದಲ್ಲಿದೆ. ನೀವು ಜಮ್ಮು ಅಥವಾ ದೆಹಲಿಯ ಪ್ರಮುಖ ನಗರಗಳಿಂದ ರೈಲಿನ ಮೂಲಕ ಅನಂತನಾಗ್ ಗೆ ಬಂದು ನಂತರ ಟ್ಯಾಕ್ಸಿ ಅಥವಾ ಬಸ್ ಮೂಲಕ ಪಹಲ್ಗಾಮ್ ಗೆ ಹೋಗಿ ಅಲ್ಲಿಂದ ನಿಮ್ಮ ಪಯಾಣ ಮುಂದುವರೆಸಬಹುದು.
baisaran valley
ಬೈಸರನ್ ಕಣಿವೆಯು ಪ್ರತಿಯೊಂದು ಋತುವಿನಲ್ಲಿಯೂ ವಿಭಿನ್ನ ಅನುಭವಗಳನ್ನು ನೀಡುತ್ತದೆ.
ವಸಂತಕಾಲ (ಮಾರ್ಚ್ ನಿಂದ ಮೇ): ಎಲ್ಲೆಡೆ ಹಸಿರು ತುಂಬಿ ಮಧ್ಯಮ ಮತ್ತು ಬೆಚ್ಚನೆಯ ತಾಪಮಾನವಿರುತ್ತದೆ. ಕಣಿವೆಯಲ್ಲಿ ಸುಂದರವಾದ ಹೂವುಳು ಅರಳಿರುತ್ತವೆ. ಹಿಮ ಕರಗಲು ಪ್ರಾರಂಭವಾಗುತ್ತದೆ.
ಬೇಸಿಗೆ ( ಜೂನ್ ನಿಂದ ಆಗಸ್ಟ್): ಬೇಸಿಗೆಯು ಬೈಸರನ್ ಕಣಿವೆಗೆ ಭೇಟಿ ನೀಡಲು ಉತ್ತಮ ಸಮಯ ಸೌಮ್ಯವಾದ ತಾಪಮಾನ ಮತ್ತು ಹೆಚ್ಚಿನ ಭೂಭಾಗ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಕಣಿವೆಯು ಹುಲ್ಲು ಮತ್ತು ಕಾಡು ಹೂವುಗಳಿಂದ ಆವೃತವಾಗಿರುತ್ತದೆ. ತಂಪಾದ ಗಾಳಿಯು ಬಯಲು ಪ್ರದೇಶದ ಸುಡುವ ಬೇಸಿಗೆಯ ಶಾಖವನ್ನು ಕಡಿಮೆ ಮಾಡುತ್ತದೆ.
ಶರತ್ಕಾಲ (ಸೆಪ್ಟೆಂಬರ್ ನಿಂದ ನವೆಂಬರ್): ಶರತ್ಕಾಲದಲ್ಲಿ ಬೈಸರನ್ ಕಣಿವೆಯ ತಾಪಮಾನವು ಹೆಚ್ಚು ತಂಪಾಗಿರುತ್ತದೆ ಮತ್ತು ಅದರ ಸಮೃದ್ಧ ಎಲೆಗಳ ಬಣ್ಣ ಬದಲಾಗಿರುತ್ತದೆ. ಕಣಿವೆಯ ಮರಗಳು ಕಿತ್ತಳೆ, ಕೆಂಪು ಮತ್ತು ಹಳದಿ ಬಣ್ಣಗಳಲ್ಲಿ ಬದಲಾಗುತ್ತವೆ.
ಚಳಿಗಾಲ (ಡಿಸೆಂಬರ್ ನಿಂದ ಫೆಬ್ರವರಿ): ಇಡೀ ಕಣಿವೆಯು ತನ್ನ ದಪ್ಪನೆಯ ಪದರಗಳಲ್ಲಿ ಹಿಮದಿಂದ ಆವೃತವಾಗಿರುತ್ತದೆ. ಆಗ ಅದ್ಭುತ ನೋಟಗಳು ಕಾಣ ಸಿಗುತ್ತವೆ. ಸ್ಕೀಯಿಂಗ್, ಸ್ನೋಬೋರ್ಡಿಂಗ್ ಮತ್ತು ಸ್ಲೆಡ್ಜಿಂಗ್ ಮಾಡುವವರು ಹೆಚ್ಚು ಕಾಣ ಸಿಗುತ್ತಾರೆ.
ಬೈಸರನ್ ಕಣಿವೆಯಲ್ಲಿಯೇ ಯಾವುದೇ ಹೋಟೆಲ್‌ಗಳಿಲ್ಲ. ಪಹಲ್ಗಾಮ್‌ನಲ್ಲಿ ತಂಗುವುದು ಉತ್ತಮ ಆಯ್ಕೆಯಾಗಿದೆ. ನಿಮಗೆ ಬೇಕಾದ ಆಯ್ಕೆಯ ಹೋಂ ಸ್ಟೇ, ಅತಿಥಿ ಗೃಹ, ಲಾಡ್ಜ್‌ಗಳು ಲಭ್ಯವಿದೆ.