ಪ್ರಸಾದ ಅಂತ ತೆಂಗಿನಕಾಯಿ ಬ್ಯಾಗಿಗೆ ತುಂಬ್ಬೇಡಿ, ಫ್ಲೈಟ್ ನಿಂದ ಕೆಳಗಿಳಿಸ್ತಾರೆ ಹುಷಾರ್
ವಿಮಾನದಲ್ಲಿ ಪ್ರಯಾಣಿಸುವ ಮೊದಲು ಕೆಲವೊಂದು ವಿಷ್ಯಗಳನ್ನು ನಾವು ತಿಳಿದಿರಬೇಕು. ವಿಮಾನದಲ್ಲಿ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅನುಮತಿ ಇಲ್ಲ. ಒಬ್ಬ ವ್ಯಕ್ತಿಗೆ ಲಗೇಜ್ ಲಿಮಿಟ್ ಇದೆ. ಅಲ್ದೆ ದ್ರವ ಪದಾರ್ಥ, ಚೂಪಾದ ವಸ್ತು ಸೇರಿದಂತೆ ಕೆಲ ವಸ್ತುಗಳ ಮೇಲೆ ಕಟ್ಟುನಿಟ್ಟಾದ ನಿಯಮ ಜಾರಿಯಲ್ಲಿದೆ.

ತೆಂಗಿನಕಾಯಿ ನಿಷಿದ್ಧ
ಸಾಮಾನ್ಯವಾಗಿ ದೇವಸ್ಥಾನಗಳಿಗೆ ಹೋದಾಗ ತೆಂಗಿನಕಾಯಿ ಒಡೆಸುವ ಪದ್ಧತಿ ಇದೆ. ಅದನ್ನು ಪ್ರಸಾದ ರೂಪದಲ್ಲಿ ಮನೆಗೆ ತರ್ತೇವೆ. ನೀವು ವಿಮಾನದಲ್ಲಿ ಬರ್ತಿದ್ದರೆ ತೆಂಗಿನಕಾಯಿ ತರುವಂತಿಲ್ಲ. ಇದು ಅಪಾಯಕಾರಿ ಅಲ್ಲ ಅಂತ ನಾವು ಭಾವಿಸ್ತೇವೆ. ಆದ್ರೆ ವಿಮಾನಯಾನ ಕಂಪನಿಗಳು ಇದನ್ನು ಅತ್ಯಂತ ಅಪಾಯಕಾರಿ ವಸ್ತುಗಳ ಪಟ್ಟಿಯಲ್ಲಿಟ್ಟಿವೆ.
ಒಣಗಿದ ತೆಂಗಿನ ಕಾಯಿ
ವಿಮಾನಯಾನ ಕಂಪನಿಗಳ ಪ್ರಕಾರ, ಒಣಗಿದ ತೆಂಗಿನಕಾಯಿ ಹೆಚ್ಚು ಅಪಾಯಕಾರಿ. ಒಣಗಿದ ತೆಂಗಿನಕಾಯಿ ಬೇಗ ಬೆಂಕಿಯನ್ನು ಎಳೆಯುತ್ತದೆ. ಅದ್ರಲ್ಲಿ ಎಣ್ಣೆ ಅಂಶ ಹೆಚ್ಚಿರುತ್ತದೆ. ಅದನ್ನು ಎಣ್ಣೆ ತಯಾರಿಸಲು ಬಳಸ್ತಾರೆ. ಈ ಕಾರಣಕ್ಕೆ ಬೇಗ ಬೆಂಕಿ ಹೊತ್ತಿಕೊಳ್ಳುವ ಅಪಾಯ ಇದೆ. ವಿಮಾನದ ಬಿಸಿ ಸಂಪರ್ಕಕ್ಕೆ ಬಂದ್ರೆ ಬೆಂಕಿ ಹೊತ್ತಿಕೊಳ್ಳಬಹುದು.
ಹ್ಯಾಂಡ್ ಬ್ಯಾಗೇಜ್ ನಲ್ಲಿ ಅನುಮತಿ?
ಚೆಕ್-ಇನ್ ಬ್ಯಾಗೇಜ್ನಲ್ಲಿ ಈ ಒಣ ತೆಂಗಿನಕಾಯಿಗೆ ಅನುಮತಿ ಇಲ್ಲ. ಹ್ಯಾಂಡ್ ಬ್ಯಾಗೇಜ್ ಅಥವಾ ಚೆಕ್-ಇನ್ ಬ್ಯಾಗೇಜ್ನಲ್ಲಿ ಒಣಗಿದ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗುವಂತಿಲ್ಲ. ಹಸಿ ತೆಂಗಿನಕಾಯಿ ಇರಲಿ ಇಲ್ಲ ಒಣಗಿದ ತೆಂಗಿನಕಾಯಿ ಇರಲಿ ನೀವು ಅದನ್ನು ತೆಗೆದುಕೊಂಡು ಹೋಗುವಂತಿಲ್ಲ.
ಯಾವ ತೆಂಗಿನಕಾಯಿಗೆ ಒಪ್ಪಿಗೆ?
ಸ್ಪೈಸ್ಜೆಟ್ನಂತಹ ವಿಮಾನಯಾನ ಸಂಸ್ಥೆಗಳು ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅನುಮತಿ ನೀಡುತ್ವೆ. ಆದ್ರೆ ಒಣಗಿದ ತೆಂಗಿನ ಕಾಯಿ ತೆಗೆದುಕೊಂಡು ಹೋಗುವಂತಿಲ್ಲ. ನೀವು ತೆಂಗಿನ ಕಾಯಿಯನ್ನು ಕತ್ತರಿಸಿ, ಸಣ್ಣ ಹೋಳುಗಳಾಗಿ ಅದನ್ನು ಕಂಡೊಯ್ಯಬಹುದು. ಇಲ್ಲಿ ಸರಿಯಾಗಿ ಪ್ಯಾಕ್ ಮಾಡುವುದು ಮುಖ್ಯವಾಗುತ್ತದೆ. ಈ ಕತ್ತರಿಸಿದ ತೆಂಗಿನಕಾಯಿಯನ್ನು ಚೆಕ್-ಇನ್ ಮಾಡಿದ ಸಾಮಾನುಗಳಲ್ಲಿ ಸಾಗಿಸಬಹುದು.
ಆಮ್ಲಜನಕದ ಕೊರತೆ ಮತ್ತು ಬೆಂಕಿಯ ಅಪಾಯ
ವಿಮಾನದ ಲಗೇಜ್ ಇಡುವ ಜಾಗದಲ್ಲಿ ವೆಂಟಿಲೇಟರ್ ಉತ್ತಮವಾಗಿರೋದಿಲ್ಲ. ಒಣಗಿದ ತೆಂಗಿನಕಾಯಿಗಳಿಂದ ಹೊರಸೂಸುವ ಶಾಖ ಬೆಂಕಿಗೆ ಕಾರಣವಾಗಬಹುದು. ಒಮ್ಮೆ ಬೆಂಕಿ ಪ್ರಾರಂಭವಾದರೆ, ವಿಮಾನದ ಎತ್ತರ ಮತ್ತು ಸೀಮಿತ ಸಂಪನ್ಮೂಲಗಳಿಂದಾಗಿ ಅದನ್ನು ನಿಯಂತ್ರಿಸುವುದು ತುಂಬಾ ಕಷ್ಟ.
ಎಳೆ ನೀರು ನಿಷೇಧ
ನೀವು ಎಳೆ ನೀರನ್ನು ಕೂಡ ಕ್ಯಾಬಿನ್ ನಲ್ಲಿ ತೆಗೆದುಕೊಂಡು ಹೋಗುವ ಹಾಗಿಲ್ಲ. ಇದಕ್ಕೆ ವಿಮಾನಯಾನ ಸಂಸ್ಥೆಗಳು ಅನುಮತಿ ನೀಡೋದಿಲ್ಲ. ಸುರಕ್ಷತಾ ನಿಯಮಗಳು ನಿರ್ದಿಷ್ಟ ಮಿತಿಯನ್ನು ಮೀರಿ ದ್ರವಗಳನ್ನು ಸಾಗಿಸುವುದನ್ನು ನಿಷೇಧಿಸುತ್ತವೆ.
ತೆಂಗಿನಕಾಯಿ ಕೊಂಡೊಯ್ದರೆ ಏನಾಗುತ್ತದೆ?
ತೆಂಗಿನಕಾಯಿಯನ್ನು ವಿಮಾನದಲ್ಲಿ ತೆಗೆದುಕೊಂಡು ಹೋದ್ರೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಲಗೇಜ್ ತಪಾಸಣೆಯ ಸಮಯದಲ್ಲಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಕಸ್ಟಮ್ಸ್ ನಿಯಮಗಳ ಪ್ರಕಾರ ಎಚ್ಚರಿಕೆ ಅಥವಾ ದಂಡ ವಿಧಿಸಬಹುದು.
ಕ್ಯಾಬಿನ್ ಬ್ಯಾಗೇಜ್ ನಲ್ಲಿ ಇವು ನಿಷೇಧ
ನಿಗದಿತ ಮಿತಿಯೊಳಗೆ ನೀವು ನೀರಿನ ಬಾಟಲಿ ಅಥವಾ ಕೋಲ್ಡ್ ಡ್ರಿಂಕ್ಸ್ ಸಾಗಿಸಬಹುದು. ಬಿರಿಯಾನಿಯಂತಹ ಬೇಯಿಸಿದ ಆಹಾರ ಪದಾರ್ಥಕ್ಕೆ ಒಪ್ಪಿಗೆ ಇಲ್ಲ. ಸ್ಪಾಂಜ್ ಕೇಕ್, ಸಿಹಿತಿಂಡಿ, ಬೇಕರಿ ವಸ್ತುಗಳನ್ನು ಒಯ್ಯುವಂತಿಲ್ಲ. ಹಸಿ ಮೀನು ಅಥವಾ ಮಾಂಸವನ್ನು ತೆಗೆದುಕೊಂಡು ಹೋಗುವಂತಿಲ್ಲ. ಉಪ್ಪಿನಕಾಯಿಗಳನ್ನು ವಿಮಾನಯಾನ ಸಂಸ್ಥೆ ಅನುಮತಿಸುವುದಿಲ್ಲ. ಪುಡಿಮಾಡಿದ ಅಥವಾ ಸಂಪೂರ್ಣವಾದ ಯಾವುದೇ ರೀತಿಯ ಮಸಾಲೆಗಳನ್ನು ನಿಷೇಧಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.