MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Life
  • Travel
  • ವಂದೇ ಭಾರತ್ ರೈಲಿನ 'ಅತ್ಯಾಧುನಿಕ ಸೌಲಭ್ಯ' ಕಟ್; ಆದಾಯಕ್ಕಾಗಿ ಪ್ರಯಾಣಿಕರಿಗೆ ಶಾಕ್ ಕೊಟ್ಟ ರೈಲ್ವೆ ಇಲಾಖೆ!

ವಂದೇ ಭಾರತ್ ರೈಲಿನ 'ಅತ್ಯಾಧುನಿಕ ಸೌಲಭ್ಯ' ಕಟ್; ಆದಾಯಕ್ಕಾಗಿ ಪ್ರಯಾಣಿಕರಿಗೆ ಶಾಕ್ ಕೊಟ್ಟ ರೈಲ್ವೆ ಇಲಾಖೆ!

ಭಾರತೀಯ ರೈಲ್ವೆಯು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿರುವ ಸೌಲಭ್ಯವನ್ನು ತೆಗೆದುಹಾಕಲು ಚಿಂತಿಸುತ್ತಿದೆ. ಹೆಚ್ಚಿನ ಆದಾಯ ಗಳಿಸಲು ಈ ಸೌಲಭ್ಯವೊಂದನ್ನು ಕಡಿತಗೊಳಿಸಲು ಮುಂದಾಗಿದೆ. ಆದರೆ, ಈ ಬದಲಾವಣೆಯು ಪ್ರಯಾಣಿಕರ ಪ್ರೀಮಿಯಂ ಅನುಭವದ ಮೇಲೆ ಪರಿಣಾಮ ಬೀರಬಹುದು.

2 Min read
Author : Sathish Kumar KH
Published : Sep 05 2026, 12:48 PM IST
Share this Photo Gallery
  • FB
  • TW
  • Linkdin
  • Whatsapp
15
ವಂದೇ ಭಾರತ್ ಅತ್ಯಾಧುನಿಕ ಸೌಲಭ್ಯ ಕಟ್
Image Credit : X

ವಂದೇ ಭಾರತ್ ಅತ್ಯಾಧುನಿಕ ಸೌಲಭ್ಯ ಕಟ್

ಭಾರತೀಯ ರೈಲ್ವೆಯ ಇತಿಹಾಸದಲ್ಲೇ 'ಗೇಮ್ ಚೇಂಜರ್' ಎನಿಸಿಕೊಂಡಿರುವ ರೈಲು ಎಂದರೆ ಅದು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express). ಅತ್ಯಾಧುನಿಕ ಸೌಲಭ್ಯಗಳು ಮತ್ತು ವೇಗದ ಪ್ರಯಾಣದಿಂದಾಗಿ ಈ ರೈಲು ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದೆ. ಆಟೋಮ್ಯಾಟಿಕ್ ಸ್ಲೈಡಿಂಗ್ ಡೋರ್‌ಗಳು, ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಬಯೋ-ವ್ಯಾಕ್ಯೂಮ್ ಶೌಚಾಲಯ ಸೇರಿದಂತೆ ವಿಮಾನ ಮಾದರಿಯ ಹಲವು ಸೌಲಭ್ಯಗಳು ಈ ರೈಲಿನಲ್ಲಿವೆ.

ಆದರೆ, ಇವೆಲ್ಲಕ್ಕಿಂತ ಹೆಚ್ಚಾಗಿ ಪ್ರಯಾಣಿಕರನ್ನು ಸೆಳೆದಿದ್ದ ಪ್ರಮುಖ ಆಕರ್ಷಣೆಯೆಂದರೆ ಅದು ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿರುವ '360 ಡಿಗ್ರಿ ತಿರುಗುವ ಸೀಟುಗಳು' (Rotating Seats). ಇದೀಗ ಈ ನೆಚ್ಚಿನ ಸೌಲಭ್ಯಕ್ಕೆ ಕತ್ತರಿ ಹಾಕಲು ರೈಲ್ವೆ ಇಲಾಖೆ ಚಿಂತನೆ ನಡೆಸುತ್ತಿದ್ದು, ಇದು ಪ್ರಯಾಣಿಕರಿಗೆ ತೀವ್ರ ನಿರಾಶೆ ತಂದೊಡ್ಡಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಏನಿದು ಹೊಸ ಪ್ರಸ್ತಾಪ? ಸೀಟುಗಳನ್ನು ತೆಗೆಯಲು ಕಾರಣವೇನು?
Image Credit : Getty

ಏನಿದು ಹೊಸ ಪ್ರಸ್ತಾಪ? ಸೀಟುಗಳನ್ನು ತೆಗೆಯಲು ಕಾರಣವೇನು?

ಇತ್ತೀಚೆಗೆ ನಡೆದ ರೈಲ್ವೆ ಪ್ರಿನ್ಸಿಪಲ್ ಚೀಫ್ ಮೆಕ್ಯಾನಿಕಲ್ ಇಂಜಿನಿಯರ್‌ಗಳು (PCME) ಮತ್ತು ಕೋಚ್ ನಿರ್ಮಾಣ ಘಟಕಗಳ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆದಿದೆ. ಎಕ್ಸಿಕ್ಯುಟಿವ್ ಚೇರ್ ಕಾರ್ ಬೋಗಿಗಳಿಂದ ಈ ತಿರುಗುವ ಸೀಟುಗಳನ್ನು ಕೈಬಿಡಬೇಕು ಎಂದು ರೈಲ್ವೆ ಇಂಜಿನಿಯರ್‌ಗಳು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಅವರು ನೀಡಿರುವ ಪ್ರಮುಖ ಕಾರಣಗಳು ಇಲ್ಲಿವೆ.

ಬೇಗನೆ ಹಾಳಾಗುವ ಅಪಾಯ: ಪ್ರಯಾಣಿಕರು ಪದೇ ಪದೇ ಸೀಟುಗಳನ್ನು ತಿರುಗಿಸುವುದರಿಂದ ಅವುಗಳ ಮೆಕ್ಯಾನಿಕಲ್ ಜಾಯಿಂಟ್‌ಗಳು ಸಡಿಲಗೊಂಡು, ಬಿಡಿಭಾಗಗಳು ಬೇಗನೆ ಸವೆದು ಹಾಳಾಗುವ ಸಾಧ್ಯತೆ ಹೆಚ್ಚು.

ನಿರ್ವಹಣಾ ಸಮಸ್ಯೆ: ಸಾಮಾನ್ಯ ಸೀಟುಗಳಿಗೆ ಹೋಲಿಸಿದರೆ ತಿರುಗುವ ಸೀಟುಗಳ ನಿರ್ವಹಣೆ ಕಷ್ಟ ಹಾಗೂ ವೆಚ್ಚದಾಯಕ.

ಹೆಚ್ಚು ಸ್ಥಳಾವಕಾಶದ ಬಳಕೆ: ಸೀಟುಗಳು 360 ಡಿಗ್ರಿ ಸರಾಗವಾಗಿ ಸುತ್ತಲು ಬೋಗಿಯಲ್ಲಿ ಹೆಚ್ಚಿನ ಸ್ಥಳಾವಕಾಶ (Legroom space) ಬೇಕಾಗುತ್ತದೆ.

Related Articles

Related image1
226 ಸೇತುವೆ, 57 ಸುರಂಗ, 108 ತಿರುವು, ಪ್ರಕೃತಿ ನಡುವೆ ಬೆಂಗಳೂರು ಮಂಗಳೂರು ವಂದೇ ಭಾರತ್ ಬ್ಯೂಟಿ
Related image2
ಓಣಂ ಹಬ್ಬಕ್ಕೆ ಕೇರಳಕ್ಕೆ ಹೊರಟ ಪ್ರಯಾಣಿಕರಿಗೆ ಆಘಾತ: ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ 6 ಗಂಟೆ ವಿಳಂಬ!
35
ಸಾಮಾನ್ಯ ಸೀಟುಗಳಿಂದ ರೈಲ್ವೆಗೆ ಏನು ಲಾಭ?
Image Credit : @bhukkhad_musafir/Instagram

ಸಾಮಾನ್ಯ ಸೀಟುಗಳಿಂದ ರೈಲ್ವೆಗೆ ಏನು ಲಾಭ?

ತಿರುಗುವ ಸೀಟುಗಳ ಬದಲಾಗಿ ಗಟ್ಟಿಯಾದ, ಒಂದೇ ಕಡೆ ಸ್ಥಿರವಾಗಿರುವ (Fixed) ಸೀಟುಗಳನ್ನು ಅಳವಡಿಸುವುದರಿಂದ ಅವು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಜೊತೆಗೆ, ಸೀಟುಗಳ ನಡುವಿನ ಅನಗತ್ಯ ಅಂತರವನ್ನು ಕಡಿಮೆ ಮಾಡಿ, ಎಕ್ಸಿಕ್ಯುಟಿವ್ ಬೋಗಿಯಲ್ಲಿ ಮತ್ತೊಂದು ಹೆಚ್ಚುವರಿ ಸಾಲಿನ ಸೀಟುಗಳನ್ನು (Extra row) ಸೇರಿಸಬಹುದು. ಇದರಿಂದ ಪ್ರತಿ ಟ್ರಿಪ್‌ನಲ್ಲಿ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ಸಿಗುವುದರ ಜೊತೆಗೆ ರೈಲ್ವೆ ಇಲಾಖೆಯ ಆದಾಯವೂ ಹೆಚ್ಚಲಿದೆ ಎಂಬುದು ಅಧಿಕಾರಿಗಳ ವಾದ.

45
ಐಸಿಎಫ್‌ಗೆ ರೈಲ್ವೆ ಮಂಡಳಿ ಸೂಚನೆ
Image Credit : Asianet News

ಐಸಿಎಫ್‌ಗೆ ರೈಲ್ವೆ ಮಂಡಳಿ ಸೂಚನೆ

ಈ ಪ್ರಸ್ತಾಪವನ್ನು ವಿವರವಾಗಿ ಪರಿಶೀಲಿಸಿ ವರದಿ ನೀಡುವಂತೆ ರೈಲ್ವೆ ಮಂಡಳಿಯು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ (ICF) ಸೂಚಿಸಿದೆ. ಆದಾಗ್ಯೂ, ಈ ಪ್ರಸ್ತಾಪಕ್ಕೆ ಇನ್ನೂ ಅಂತಿಮ ಮುದ್ರೆ ಬಿದ್ದಿಲ್ಲ. ಒಂದು ವೇಳೆ ಈ ನಿರ್ಧಾರ ಜಾರಿಗೆ ಬಂದರೆ, ಈಗ ಓಡುತ್ತಿರುವ ರೈಲುಗಳಲ್ಲೂ ಸೀಟು ಬದಲಾವಣೆ ಮಾಡಲಾಗುತ್ತದೆಯೇ ಅಥವಾ ಇನ್ನು ಮುಂದೆ ತಯಾರಾಗುವ ಹೊಸ ವಂದೇ ಭಾರತ್ ರೈಲುಗಳಿಗೆ ಮಾತ್ರ ಇದು ಅನ್ವಯವಾಗಲಿದೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

55
ಪ್ರಯಾಣಿಕರಿಗೆ ಏಕೆ ಬೇಸರ?
Image Credit : Asianet News

ಪ್ರಯಾಣಿಕರಿಗೆ ಏಕೆ ಬೇಸರ?

ವಂದೇ ಭಾರತ್ ರೈಲಿನ ಬೃಹತ್ ಗಾಜಿನ ಕಿಟಕಿಗಳ ಮೂಲಕ ಹೊರಗಿನ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಈ ತಿರುಗುವ ಸೀಟುಗಳು ಹೇಳಿಮಾಡಿಸಿದಂತಿದ್ದವು. ಅಲ್ಲದೆ, ಕುಟುಂಬ ಅಥವಾ ಸ್ನೇಹಿತರೊಂದಿಗೆ ಒಟ್ಟಿಗೆ ಪ್ರಯಾಣಿಸುವಾಗ ಸೀಟುಗಳನ್ನು ಮುಖಾಮುಖಿ ತಿರುಗಿಸಿಕೊಂಡು ಹರಟೆ ಹೊಡೆಯುತ್ತಾ ಹೋಗುವ ಮಜವೇ ಬೇರೆಯಾಗಿತ್ತು. ಒಂದು ವೇಳೆ ಈ ಸೌಲಭ್ಯ ರದ್ದಾದರೆ ಪ್ರೀಮಿಯಂ ಪ್ರಯಾಣದ ಅನುಭವಕ್ಕೆ ಖಂಡಿತಾ ಧಕ್ಕೆಯಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಭಾರತೀಯ ರೈಲ್ವೆ
ರೈಲು
ವಂದೇ ಭಾರತ್ ಎಕ್ಸ್‌ಪ್ರೆಸ್

Latest Videos
Recommended Stories
Recommended image1
ಹಜ್ ಯಾತ್ರಿಕರು ಸೆ. 15ರೊಳಗೆ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ; ಇಲ್ಲಿದೆ ಸಂಪೂರ್ಣ ವಿವರ
Recommended image2
12ರ ನಂತರ 14ನೇ ಫ್ಲೋರ್! ಹೋಟೆಲ್‌ ಮಾಲೀಕರು ಮುಚ್ಚಿಡುತ್ತಿರುವ ಆ 'ರಹಸ್ಯವೇನು' ಗೊತ್ತಾ?
Recommended image3
ಲಾವಾ ಇಲ್ಲದೆ ಜ್ವಾಲಾಮುಖಿ ಹೇಗೆ?: ಬರಟಾಂಗ್ ದ್ವೀಪದ ಈ ನೈಸರ್ಗಿಕ ವಿಸ್ಮಯದ ಬಗ್ಗೆ ಗೊತ್ತಾ?
Related Stories
Recommended image1
226 ಸೇತುವೆ, 57 ಸುರಂಗ, 108 ತಿರುವು, ಪ್ರಕೃತಿ ನಡುವೆ ಬೆಂಗಳೂರು ಮಂಗಳೂರು ವಂದೇ ಭಾರತ್ ಬ್ಯೂಟಿ
Recommended image2
ಓಣಂ ಹಬ್ಬಕ್ಕೆ ಕೇರಳಕ್ಕೆ ಹೊರಟ ಪ್ರಯಾಣಿಕರಿಗೆ ಆಘಾತ: ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ 6 ಗಂಟೆ ವಿಳಂಬ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved