ಮೈಸೂರಿನಿಂದ ಕೇವಲ 180 ನಿಮಿಷಗಳ ದೂರ.. ಇದೇ ನೋಡಿ ನಮ್ಮ ಕರ್ನಾಟಕದ ಸ್ಕಾಟ್ಲೆಂಡ್
Weekend getaway from Mysore: ಪ್ರಕೃತಿಯ ಮಡಿಲಲ್ಲಿ ಮೈಮರೆಯಲು ಬಯಸುವಿರಾ? ಮತ್ಯಾಕೆ ತಡ, ನಮ್ಮದೇ ನಾಡಿನಲ್ಲಿರುವ 'ದೇಸಿ ಸ್ಕಾಟ್ಲೆಂಡ್'ಗೆ ಹೋಗಲು ಸಿದ್ಧರಾಗಿ. ಇಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯಗಳು ಜಗತ್ಪ್ರಸಿದ್ಧ. ಅಷ್ಟೇ ಅಲ್ಲ, ಇಲ್ಲಿನ ಪ್ರತಿ ಋತುವೂ ತನ್ನದೇ ಆದ ವಿಶಿಷ್ಟ ಸೌಂದರ್ಯ ಹೊಂದಿದೆ.

ಒಮ್ಮೆಯಾದರೂ ಭೇಟಿ ನೀಡಲೇಬೇಕು
ನಿಮಗೆ ಪ್ರಕೃತಿಯನ್ನು ಕಂಡರೆ ಪ್ರೀತಿಯೇ? ಹಾಗಿದ್ದರೆ ಕರ್ನಾಟಕ ರಾಜ್ಯದಲ್ಲಿರುವ ಈ ಸುಂದರ ತಾಣಕ್ಕೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು.
ಯಾರಾದರೂ ಕವಿಯಾಗುತ್ತೀರಿ
ಹಚ್ಚಹಸಿರಿನ ಹಾಸಿಗೆಯ ಮೇಲೆ ಹಕ್ಕಿಗಳ ಕಲರವದ ಹಿನ್ನೆಲೆ ಸಂಗೀತ, ಅದರ ಜೊತೆಗೆ ಮೈ ಸವರಿ ಹೋಗುವ ಮಂಜಿನ ಸಿಂಚನ; ಇದು ನಿಸರ್ಗ ನೀಡಿದ ಅದ್ಭುತ ಶೃಂಗಾರ. ಇಲ್ಲಿನ ಪ್ರತಿ ನೋಟವೂ ಎಷ್ಟೊಂದು ಸುಂದರವೆಂದರೆ, ಅದನ್ನು ವರ್ಣಿಸಲು ಹೊರಟರೆ ಯಾರೂ ಬೇಕಾದರೂ ಶಾಯರಿ ಬರೆಯುವ ಕವಿಯಾಗಬಹುದು.
ಇದೇ ನೋಡಿ ಆ ಸ್ಥಳ
ಇಷ್ಟು ವರ್ಣಿಸಿದ ಮೇಲೆ ಆ ಸ್ಥಳದ ಬಗ್ಗೆ ನಾವು ಹೆಚ್ಚೇನು ಪರಿಚಯ ಮಾಡಿಕೊಡಬೇಕಿಲ್ಲ. ಯೆಸ್ ಅದೇ ಕೊಡಗು. ಇದು ಒಂದು ಅದ್ಭುತ ಗಿರಿಧಾಮ.
ಸಂಸ್ಕೃತಿ ಮತ್ತು ಸಂಪ್ರದಾಯ
ಇಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯಗಳು ಜಗತ್ಪ್ರಸಿದ್ಧ. ಹುತ್ತರಿ, ಕೈಲ್ ಮುಹೂರ್ತ, ಕಾವೇರಿ ಸಂಕ್ರಮಣ ಮತ್ತು ಮಡಿಕೇರಿ ದಸರಾ ಇಲ್ಲಿನ ಪ್ರಮುಖ ಹಬ್ಬಗಳು. ಆಹಾರದ ವಿಷಯಕ್ಕೆ ಬಂದರೆ, ಇಲ್ಲಿನ ಮಾಂಸಾಹಾರಿ ಖಾದ್ಯಗಳು ಬಹಳ ರುಚಿಕರವಾಗಿರುತ್ತವೆ.
ಯಾವಾಗ ಬೇಕಾದರೂ ಭೇಟಿ ನೀಡಿ
ಕೊಡಗಿಗೆ ಭೇಟಿ ನೀಡಲು ಅತ್ಯಂತ ಸೂಕ್ತ ಸಮಯ ಯಾವುದು ಎಂಬ ಗೊಂದಲ ಬೇಡ. ಇಲ್ಲಿನ ಪ್ರತಿ ಋತುವೂ ತನ್ನದೇ ಆದ ವಿಶಿಷ್ಟ ಸೌಂದರ್ಯವನ್ನು ಹೊಂದಿದೆ. ಕಾಫಿ ಮತ್ತು ಚಹಾದ ತೋಟಗಳು, ಹಸಿರು ಬೆಟ್ಟಗಳು ನಿಮ್ಮನ್ನು ಯಾವಾಗಲೂ ಸ್ವಾಗತಿಸುತ್ತವೆ. ಭಾರತದಲ್ಲೇ ಅತಿ ಹೆಚ್ಚು ಕಾಫಿ ಬೆಳೆಯುವ ಪ್ರದೇಶ ಇದಾಗಿರುವುದರಿಂದ, ವರ್ಷದ ಯಾವುದೇ ಸಮಯದಲ್ಲಿ ಇಲ್ಲಿಗೆ ಪ್ರವಾಸ ಕೈಗೊಳ್ಳಬಹುದು.
ಎಲ್ಲಿದೆ ಕೊಡಗು?
ಪಕೃತಿಯ ಮಡಿಲಲ್ಲಿರುವ ಕೊಡಗು ಮೈಸೂರಿನಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿದೆ. ಇದನ್ನು 'ಕೊಡಗು' ಅಥವಾ 'ಕುರ್ಗ್' ಎಂದೂ ಕರೆಯುತ್ತಾರೆ. ಶಾಂತಿ ಬಯಸುವವರಿಗೆ ಮತ್ತು ಸಾಹಸ ಪ್ರಿಯರಿಗೆ ಇದು ಬೆಸ್ಟ್ ಡೆಸ್ಟಿನೇಶನ್.
ತಲುಪುವುದು ಹೇಗೆ?
ರೈಲು: ಮೈಸೂರು ರೈಲ್ವೇ ನಿಲ್ದಾಣವು ಕೊಡಗಿನಿಂದ ಸುಮಾರು 95 ಕಿ.ಮೀ ದೂರದಲ್ಲಿದೆ.
ರಸ್ತೆ: ಮೈಸೂರು ಅಥವಾ ಮಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು.
ಇಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳು
ಕಾಫಿ ತೋಟಗಳು: ಇಲ್ಲಿ ಕಾಫಿ ತಯಾರಾಗುವ ಸಂಪೂರ್ಣ ಪ್ರಕ್ರಿಯೆಯನ್ನು ನೀವು ನೋಡಬಹುದು.
ನಮ್ಡ್ರೋಲಿಂಗ್ ಮೊನಾಸ್ಟರಿ (ಬೈಲಕುಪ್ಪೆ): ಸುಮಾರು 5 ಸಾವಿರ ಬೌದ್ಧ ಭಿಕ್ಷುಗಳಿರುವ ಈ ಮಠವು ಶಾಂತಿಗೆ ಹೆಸರಾಗಿದೆ.
ರಾಜಾ ಸೀಟ್: ಸೂರ್ಯಾಸ್ತದ ಸುಂದರ ನೋಟಕ್ಕೆ ಇದು ಪ್ರಸಿದ್ಧ. ಫೋಟೋಗ್ರಫಿ ಇಷ್ಟಪಡುವವರಿಗೆ ಇದು ಹೇಳಿ ಮಾಡಿಸಿದ ಜಾಗ.
ಅಬ್ಬೆ ಫಾಲ್ಸ್ ಮತ್ತು ಇರುಪ್ಪು ಫಾಲ್ಸ್: ಕಾಫಿ ತೋಟಗಳ ನಡುವೆ ಧುಮ್ಮಿಕ್ಕುವ ಈ ಜಲಪಾತಗಳ ಸೌಂದರ್ಯ ವರ್ಣನಾತೀತ.
ಮಡಿಕೇರಿ ಕೋಟೆ: 17ನೇ ಶತಮಾನದ ಈ ಐತಿಹಾಸಿಕ ಕೋಟೆ ಮೊದಲು ಮಣ್ಣಿನಿಂದ ಮಾಡಲ್ಪಟ್ಟಿತ್ತು, ನಂತರ ಇದನ್ನು ಭದ್ರಪಡಿಸಲಾಯಿತು.
ಇತರ ತಾಣಗಳು: ನಿಸರ್ಗಧಾಮ, ದುಬಾರೆ ಆನೆ ಶಿಬಿರ, ಭಾಗಮಂಡಲ, ತಲಕಾವೇರಿ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ.
ಸಾಹಸ ಪ್ರಿಯರ ತಾಣ
ಕೊಡಗನ್ನು ಕರ್ನಾಟಕದ 'ಅಡ್ವೆಂಚರ್ ಕ್ಯಾಪಿಟಲ್' ಎಂದು ಕರೆಯಲಾಗುತ್ತದೆ. ಇಲ್ಲಿ ನೀವು ಮೌಂಟೇನ್ ಕ್ಲೈಂಬಿಂಗ್, ಜಂಗಲ್ ಟ್ರೆಕ್ಕಿಂಗ್, ರಾಫ್ಟಿಂಗ್, ಫ್ಲೈಯಿಂಗ್, ಆನೆ ಸವಾರಿ ಮತ್ತು ಫಿಶಿಂಗ್‌ನಂತಹ ರೋಚಕ ಅನುಭವಗಳನ್ನು ಪಡೆಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
