MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • Deepavali 2022: ಭಾರತದಲ್ಲಿ ಮಾತ್ರವಲ್ಲ, ಈ ದೇಶಗಳಲ್ಲೂ ದೀಪಾವಳಿ ಸಂಭ್ರಮದಿಂದ ಆಚರಿಸಲಾಗುತ್ತೆ!

Deepavali 2022: ಭಾರತದಲ್ಲಿ ಮಾತ್ರವಲ್ಲ, ಈ ದೇಶಗಳಲ್ಲೂ ದೀಪಾವಳಿ ಸಂಭ್ರಮದಿಂದ ಆಚರಿಸಲಾಗುತ್ತೆ!

ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತಿದೆ. ದೀಪಾವಳಿ ಐದು ದಿನಗಳ ಸುದೀರ್ಘ ಹಬ್ಬವಾಗಿದ್ದು, ಇದರಲ್ಲಿ ಪ್ರತಿ ದಿನವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ದೀಪಾವಳಿಯ ಸಂದರ್ಭದಲ್ಲಿ, ಜನರು ಲಕ್ಷ್ಮಿ ದೇವಿ ಮತ್ತು ಗಣೇಶನನ್ನು ಪೂಜಿಸುತ್ತಾರೆ. ಮನೆಗಳನ್ನು ಹೂವು, ದೀಪ ಮತ್ತು ರಂಗೋಲಿಗಳಿಂದ ಅಲಂಕರಿಸಲಾಗುತ್ತೆ. ಅಷ್ಟೇ ಅಲ್ಲ ಮನೆಗಳಲ್ಲಿ ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗುತ್ತೆ, ಆದರೆ ದೀಪಾವಳಿಯನ್ನು ಭಾರತದಲ್ಲಿ ಮಾತ್ರವಲ್ಲದೆ ಇತರ ಅನೇಕ ದೇಶಗಳಲ್ಲಿಯೂ ಸಹ ಆಚರಿಸುತ್ತಾರೆ ಎಂದು ನಿಮಗೆ ತಿಳಿದಿದ್ಯಾ? ಭಾರತ ಅಲ್ಲದೇ ಯಾವೆಲ್ಲಾ ದೇಶಗಳಲ್ಲಿ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತೆ ಅನ್ನೋದನ್ನು ನೋಡೋಣ. 

3 Min read
Author : Suvarna News
Published : Oct 22 2022, 06:28 PM IST
Share this Photo Gallery
  • FB
  • TW
  • Linkdin
  • Whatsapp
113

ನೇಪಾಳ(Nepal): ಭಾರತದ ನೆರೆಯ ರಾಷ್ಟ್ರನೇಪಾಳದಲ್ಲಿ, ದೀಪಾವಳಿಯನ್ನು 'ತಿಹಾರ್' ಎಂದು ಕರೆಯಲಾಗುತ್ತೆ  ಮತ್ತು 5 ದಿನ ಆಚರಿಸಲಾಗುತ್ತೆ. ಈ ಹಬ್ಬದಲ್ಲಿ, ಜನರು ದೇವರನ್ನು ಮಾತ್ರವಲ್ಲದೆ ಪ್ರಾಣಿಗಳನ್ನು ಸಹ ಪೂಜಿಸುತ್ತಾರೆ. ಈ ಐದು ದಿನಗಳ ಉತ್ಸವದಲ್ಲಿ, ಮೊದಲ ದಿನ ಹಸುವನ್ನು ಪೂಜಿಸಲಾಗುತ್ತೆ. ಎರಡನೇ ದಿನದಂದು, ದೇಶವು ಮನುಷ್ಯನ ಸ್ನೇಹಿತ ನಾಯಿಯನ್ನು ಪೂಜಿಸುವ ಮೂಲಕ ಕುಕುರ್ ತಿಹಾರ್ ಅಥವಾ "ನಾಯಿಗಳ ದಿನ" ಆಚರಿಸುತ್ತೆ . ಈ ದಿನ, ನಾಯಿಗಳನ್ನು ಮುಂಜಾನೆಯೇ ಪೂಜಿಸಲಾಗುತ್ತೆ, ಹಾಗೆ ಹೂವು ಮತ್ತು ಕುಂಕುಮ ತಿಲಕದಿಂದ  ಅಲಂಕರಿಸಲಾಗುತ್ತೆ .

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
213

ಮೂರನೇ ದಿನ ಸಿಹಿತಿಂಡಿಗಳನ್ನು(Sweets) ತಯಾರಿಸಲಾಗುತ್ತೆ  ದೇವರು ಮತ್ತು ದೇವತೆಗಳನ್ನು ಪೂಜಿಸಲಾಗುತ್ತೆ ಮತ್ತು ಮನೆಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತೆ. ಇದರ ನಂತರ, ಜನರು ನಾಲ್ಕನೇ ದಿನ ಯಮರಾಜನನ್ನು ಪೂಜಿಸಿದರೆ, ಐದನೇ ದಿನ ಭಾಯ್ ದೂಜ್ ಅನ್ನು ಆಚರಿಸಲಾಗುತ್ತೆ. ಭಾರತದ ಆಚರಣೆಯಂತೆಯೇ ಇಲ್ಲಿಯೂ ನಡೆಯುತ್ತೆ.

313

ಮಲೇಷ್ಯಾ: ಮಲೇಷ್ಯಾದಲ್ಲಿ ದೀಪಾವಳಿಯನ್ನು ಹರಿ ದೀಪಾವಳಿ ಎಂದು ಆಚರಿಸಲಾಗುತ್ತೆ . ಈ ದಿನದಂದು, ಜನರು ಬೇಗನೆ ಎದ್ದು, ನಂತರ ನೀರು ಮತ್ತು ಎಣ್ಣೆಯಿಂದ ಸ್ನಾನ(Oil bath) ಮಾಡುತ್ತಾರೆ, ನಂತರ ದೇವರು ಮತ್ತು ದೇವತೆಗಳನ್ನು ಪೂಜಿಸುವ ಸಂಪ್ರದಾಯವಿದೆ. ಹಾಗೆಯೇ, ದೀಪಾವಳಿ ಜಾತ್ರೆಗಳು ಸಹ ಈ ದಿನದಂದು ಇಲ್ಲಿನ ಅನೇಕ ಸ್ಥಳಗಳಲ್ಲಿ ನಡೆಯುತ್ತವೆ.

413

ಆದರೆ ದೇಶದಲ್ಲಿ ಪಟಾಕಿಗಳ(Crackers) ಮೇಲಿನ ನಿಷೇಧದಿಂದಾಗಿ 'ಹಸಿರು ದೀಪಾವಳಿ' ಆಚರಿಸಲಾಗುತ್ತಿದೆ. ಪಟಾಕಿಗಳು ಹಬ್ಬದ ಅವಿಭಾಜ್ಯ ಅಂಗವಾಗಿದ್ದರೂ, ಪ್ರಕಾಶಮಾನವಾಗಿ ಬೆಳಗುವ ದೀಪಗಳು ಅದನ್ನು ಸರಿದೂಗಿಸುತ್ತವೆ.ಮಲೇಷ್ಯಾದಲ್ಲಿ ದೀಪಾವಳಿ ಸಾರ್ವಜನಿಕ ರಜಾದಿನವಾಗಿದೆ ಮತ್ತು ಅದರ ಜನಸಂಖ್ಯೆಯ ಸುಮಾರು 8% ರಷ್ಟಿರುವ ಹಿಂದೂಗಳ ಅತ್ಯಂತ ಪ್ರಮುಖ ಹಬ್ಬವಾಗಿದೆ. ಆದರೂ ಇಸ್ಲಾಂ ಇಲ್ಲಿ ಅಧಿಕೃತ ಧರ್ಮವಾಗಿದೆ.

513

ಥೈಲ್ಯಾಂಡ್(Thailand): ದೀಪಾವಳಿಯನ್ನು ಥೈಲ್ಯಾಂಡ್ ನಲ್ಲಿಯೂ ಆಚರಿಸಲಾಗುತ್ತೆ, ಆದರೆ ಅದರ ಹೆಸರು ಕ್ರೆಯೋಂಧ್. ಈ ದಿನ, ಇಲ್ಲಿ ಬಾಳೆ ಎಲೆಗಳಿಂದ ದೀಪಗಳನ್ನು ತಯಾರಿಸಲಾಗುತ್ತೆ ಮತ್ತು ನಂತರ ಈ ದೀಪಗಳನ್ನು ರಾತ್ರಿಯಲ್ಲಿ ಬೆಳಗಿಸಲಾಗುತ್ತೆ. ಇದರ ನಂತರ, ದೀಪ ಮತ್ತು ದೂಪಗಳನ್ನು ಸ್ವಲ್ಪ ಹಣದೊಂದಿಗೆ ನದಿಯಲ್ಲಿ ಬಿಡಲಾಗುತ್ತೆ.

613

ಶ್ರೀಲಂಕಾ: ದೀಪಾವಳಿಯು ಶ್ರೀಲಂಕಾದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಭಾರತದಲ್ಲಿರುವಂತೆ ಅಲ್ಲಿಯೂ ಐದು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತೆ. ದೀಪಗಳ ಹಬ್ಬವನ್ನು ದೇಶದಲ್ಲಿ ಉದಯಿಸುತ್ತಿರುವ ಹಿಂದೂ ತಮಿಳಿನ ಸಮುದಾಯಗಳು ತುಂಬಾನೆ ಸಡಗರ ಸಂಭ್ರಮದಿಂದ(Celebration) ಆಚರಿಸುತ್ತವೆ. ಈ ಆಚರಣೆಯು ಪಟಾಕಿ, ದೀಪಗಳನ್ನು ಬೆಳಗಿಸೋದು ಮತ್ತು ಸಿಹಿತಿಂಡಿಗಳ ವಿತರಣೆಯನ್ನು ಒಳಗೊಂಡಿದೆ. 

713

ಶ್ರೀಲಂಕಾದಲ್ಲಿ ದೀಪಾವಳಿ ಹಬ್ಬವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಯಾಕಂದ್ರೆ  ಇದು ಮಹಾಕಾವ್ಯ ರಾಮಾಯಣದೊಂದಿಗೆ(Ramayana) ಸಹ ಸಂಬಂಧ ಹೊಂದಿದೆ. ಈ ದಿನದಂದು, ಇಲ್ಲಿನ ಜನರು ತಮ್ಮ ಮನೆಗಳಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸುತ್ತಾರೆ ಮತ್ತು ಪರಸ್ಪರರ ಮನೆಗಳಿಗೆ ಭೇಟಿ ನೀಡುತ್ತಾರೆ. ಒಟ್ಟಲ್ಲಿ ಸಡಗರ ಸಂಭ್ರಮದಿಂದ ಹಬ್ಬ ಆಚರಣೆ ಮಾಡಲಾಗುತ್ತೆ.

813

ಜಪಾನ್: ದೀಪಾವಳಿಯ ದಿನದಂದು, ಜಪಾನಿನ ಜನರು ತಮ್ಮ ತೋಟಗಳಲ್ಲಿನ ಮರಗಳ ಮೇಲೆ ಕಾಗದದಿಂದ ಮಾಡಿದ ಗೂಡುದೀಪಗಳನ್ನು(Lantern) ನೇತುಹಾಕುತ್ತಾರೆ. ನಂತರ ಅದನ್ನು ಆಕಾಶದಲ್ಲಿ ಬಿಡುತ್ತಾರೆ. ಈ ದಿನದಂದು ಜನರು ನೃತ್ಯ ಮಾಡಿ, ಹಾಡಿ, ಸಂತೋಷ ಪಡುತ್ತಾರೆ. ಇದಲ್ಲದೆ, ಅವರು ದೋಣಿ ವಿಹಾರವನ್ನು ಸಹ ಆನಂದಿಸುತ್ತಾರೆ.

913

ಇಂಡೋನೇಷ್ಯಾ(Indonasia): ಇಂಡೋನೇಷಿಯಾದಲ್ಲಿ ಭಾರತೀಯರ ಜನಸಂಖ್ಯೆ ತುಂಬಾ ಕಡಿಮೆಯಿದೆ, ಆದರೆ ಬಾಲಿ ದ್ವೀಪವು ದೀಪಾವಳಿ ಹಬ್ಬವನ್ನು ಆಚರಿಸಲು ಹೆಸರುವಾಸಿಯಾಗಿದೆ. ಇಲ್ಲಿನ ಜನಸಂಖ್ಯೆಯ ಬಹುಪಾಲು ಜನರು ಭಾರತೀಯ ಮೂಲದವರಾಗಿದ್ದು, ಭಾರತದಂತೆಯೇ ಆಚರಣೆಗಳನ್ನು ಅನುಸರಿಸುತ್ತಾರೆ - ಅಲ್ಲಿ ಜನರು ಪಟಾಕಿಗಳನ್ನು ಸುಡುತ್ತಾರೆ, ಲಾಟೀನುಗಳನ್ನು ಬಿಡುತ್ತಾರೆ ಮತ್ತು ಇತರ ಆಚರಣೆಗಳನ್ನು ಮಾಡುತ್ತಾರೆ.

1013

ಫಿಜಿ(Fiji): ದೀಪಾವಳಿಯನ್ನು ಫಿಜಿಯಲ್ಲಿ ಸಾರ್ವಜನಿಕ ರಜಾದಿನವಾಗಿ ಆಚರಿಸಲಾಗುತ್ತೆ. ನ್ಯೂಝಿಲ್ಯಾಂಡ್ನಿಂದ ಈಶಾನ್ಯಕ್ಕೆ 1,100 ನಾಟಿಕಲ್ ಮೈಲಿ ದೂರದಲ್ಲಿರುವ ದ್ವೀಪರಾಷ್ಟ್ರವು ಭಾರತದಲ್ಲಿ ಆಚರಿಸಲಾಗುವ ಅದೇ ಉತ್ಸಾಹ ಮತ್ತು ಉಲ್ಲಾಸದಿಂದ ಬೆಳಕಿನ ಹಬ್ಬವನ್ನು ಆಚರಿಸುತ್ತೆ. ದೇಶದಾದ್ಯಂತ ಆಚರಿಸಲ್ಪಡುವ ಈ ಹಬ್ಬವನ್ನು ಜನರು ಸಾಂಪ್ರದಾಯಿಕ ಸದ್ಭಾವನೆ ಮತ್ತು ಆಚರಣೆಗಳೊಂದಿಗೆ ಆನಂದಿಸುತ್ತಾರೆ.

1113

ಸಿಂಗಾಪುರ(SIngapore): ದೀಪಾವಳಿಯ ಸಮಯದಲ್ಲಿ ನೀವು ಸಿಂಗಾಪುರದಲ್ಲಿದ್ದರೆ, ಈ ಸಮಯದಲ್ಲಿ ಭಾರತದಂತೆಯೇ ಈ ತಾಣ ಕೂಡ ಜಗಮಗಿಸುವ ದೀಪಗಳಿಂದ ಹೇಗೆ ಬೆಳಗುತ್ತೆ ಎಂಬುದಕ್ಕೆ ನೀವು ಸಾಕ್ಷಿಯಾಗುತ್ತೀರಿ. ಈ ದೇಶವೂ ಸಹ ಈ ಹಬ್ಬವನ್ನು ಹೆಚ್ಚು ಉತ್ಸಾಹದಿಂದ ಆಚರಿಸುತ್ತೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
 

1213

ಕೆನಡಾ(Canada): ದೀಪಾವಳಿ ಕೆನಡಾದಲ್ಲಿ ರಾಷ್ಟ್ರವ್ಯಾಪಿ ರಜಾದಿನದೊಂದಿಗೆ ಬರುವುದಿಲ್ಲವಾದರೂ, ಇಲ್ಲಿದ್ದಾಗ ನೀವು ಅದರ ಅನುಭವವನ್ನು ಪಡೆಯೋದಿಲ್ಲ ಎಂದು ಇದರ ಅರ್ಥವಲ್ಲ. ದೀಪಾವಳಿ ಹಬ್ಬವನ್ನು ಕೆನಡಾದ ಅನೇಕ ಪಟ್ಟಣ ಮತ್ತು ನಗರಗಳಲ್ಲಿ ಆಚರಿಸಲಾಗುತ್ತೆ  ಮತ್ತು ಈ ಬೆಳಕಿನ ಹಬ್ಬದಲ್ಲಿ ಭಾಗವಹಿಸಲು ಜನರು ಉತ್ಸಾಹದಿಂದ ಮುಂದೆ ಬರುತ್ತಾರೆ. ಅಲ್ಲದೇ ಎಲ್ಲರೂ ಸಂಭ್ರಮಿಸುತ್ತಾರೆ.

1313

ಯುನೈಟೆಡ್ ಕಿಂಗ್ಡಮ್(United kingdom): ಯುನೈಟೆಡ್ ಕಿಂಗ್ ಡಮ್ ನಲ್ಲಿ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸುವ ಅನೇಕ ನಗರಗಳಿವೆ, ವಿಶೇಷವಾಗಿ ಲೀಚೆಸ್ಟರ್ ಮತ್ತು ಬರ್ಮಿಂಗ್ಹಾಲ್. ಏಕೆಂದರೆ ಈ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಸಮುದಾಯಗಳು ನೆಲೆಸಿವೆ. ನೀವು ಅಲ್ಲಿದ್ದರೆ, ಇಲ್ಲಿರುವ ಉತ್ಸವಗಳು ಭಾರತದಷ್ಟೇ ಎಂಜಾಯ್ ಮಾಡಬಹುದು.  

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ದೀಪಾವಳಿ
 
33rd T20 • WBBLT20
MR-WMR-W
Wed, 25 Nov, 2026
BH-WBH-W
01:40 pm
Match yet to begin.
Schedule ›
34th T20 • WBBLT20
ST-WST-W
Thu, 26 Nov, 2026
AS-WAS-W
10:10 am
Match yet to begin.
Schedule ›
35th T20 • WBBLT20
SS-WSS-W
Thu, 26 Nov, 2026
MS-WMS-W
01:40 pm
Match yet to begin.
Schedule ›
2nd TEST • NZ vs IND 2026
NZNZ
Fri, 27 Nov, 2026
INDIND
03:30 am
Match yet to begin.
Schedule ›
32nd T20 • WBBLT20
abandoned
MS-WMS-W
159/7
MR-WMR-W
28/0
Match abandoned
Schedule ›
31st T20 • WBBLT20
Result
BH-WBH-W
142/9
AS-WAS-W
179/4
Adelaide Strikers Women beat Brisbane Heat Women by 37 runs
Schedule ›
30th T20 • WBBLT20
Result
SS-WSS-W
123/6
PS-WPS-W
142/7
Sydney Sixers Women beat Perth Scorchers Women by 4 wickets (D/L) method
Schedule ›
29th T20 • WBBLT20
Result
HH-WHH-W
151/2
ST-WST-W
150/5
Hobart Hurricanes Women beat Sydney Thunder Women by 8 wickets
Schedule ›
28th T20 • WBBLT20
Result
AS-WAS-W
168/5
MR-WMR-W
165/4
Adelaide Strikers Women beat Melbourne Renegades Women by 5 wickets
Schedule ›
27th T20 • WBBLT20
Result
BH-WBH-W
225/3
ST-WST-W
226/4
Sydney Thunder Women beat Brisbane Heat Women by 6 wickets
Schedule ›
26th T20 • WBBLT20
Result
HH-WHH-W
120
PS-WPS-W
148
Perth Scorchers Women beat Hobart Hurricanes Women by 28 runs
Schedule ›
1st TEST • NZ vs IND 2026
Result
NZNZ
368 & 239/5
INDIND
720/9
Match drawn
Schedule ›
3rd ODI • AUS vs ENG 2026
Result
AUSAUS
231
ENGENG
328
ENG beat AUS by 97 runs
Schedule ›
2nd TEST • PAK vs SL 2026
Result
PAKPAK
325 & 90/2
SLSL
98 & 316
PAK won by 8 wickets
Schedule ›
Latest Videos
Recommended Stories
Recommended image1
ಅಯ್ಯಪ್ಪ ಭಕ್ತರಿಗೆ KSRTC ಸಿಹಿಸುದ್ದಿ: ಬೆಂಗಳೂರಿನಿಂದ ಶಬರಿಮಲೆಗೆ ನೂತನ 'ಐರಾವತ ವೋಲ್ವೋ' ಬಸ್ ಸೇವೆ
Recommended image2
ಜಪಾನ್ ಅಲ್ಲ ನಮ್ಮಲ್ಲೇ ಇದೆ ಗುಲಾಬಿ ಚೆರ್ರಿ ಬ್ಲಾಸಮ್ ತಾಣ, ಈ ಚಳಿಗಾಲ ಮಿಸ್ ಮಾಡಬೇಡಿ
Recommended image3
ಊರಿಗೆ ಹೋಗಲು ತಪ್ಪಿದ ಬಸ್​ ಟಿಕೆಟ್‌ನಿಂದ ಹುಟ್ಟಿತು 800 ಕೋಟಿಯ ಉದ್ಯಮ: 25 ವರ್ಷ ಎಂಜಿನಿಯರ್​ನ RedBus ಸ್ಟೋರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved