ಥೈಲ್ಯಾಂಡ್ ರಾಜನ 4ನೇ ಮದುವೆ: ರಾಣಿಯಾದ ಅಂಗರಕ್ಷಕಿ!
ಅಂಗರಕ್ಷಕಿಯನ್ನೇ ವರಿಸಿದ ಥೈಲ್ಯಾಂಡ್ ಮಹಾರಾಜ| ಅಂಗರಕ್ಷಕಿಯನ್ನು ವರಿಸಿ ರಾಣಿ ಪಟ್ಟ ನೀಡಿದ ಮಹಾ ವಜಿರಲೊಂಗ್ಕಾರ್ನ್| ಅಂಗರಕ್ಷಕಿ ಸುಥಿದಾ ಅವರನ್ನು ವರಿಸಿದ 66 ವರ್ಷದ ಮಹಾ ವಜಿರಲೊಂಗ್ಕಾರ್ನ್| ಸುಥಿದಾಗೆ ಪವಿತ್ರ ನೀರು ಸಿಂಪಡಿಸಿ ರಾಣಿಯಾಗಿ ಸ್ವೀಕರಿಸಿದ ಮಹಾ ವಜಿರಲೊಂಗ್ಕಾರ್ನ್|
ಬ್ಯಾಂಕಾಕ್(ಮೇ.02): ಥೈಲ್ಯಾಂಡ್ ರಾಜ 66 ವರ್ಷದ ಮಹಾ ವಜಿರಲೊಂಗ್ಕಾರ್ನ್ ತಮ್ಮ ಅಂಗರಕ್ಷಕಿಯನ್ನು ಮದುವೆಯಾಗಿದ್ದಾರೆ. ಈ ಮೂಲಕ ಅಂಗರಕ್ಷಕಿಯಾಗಿದ್ದ ಸುಥಿದಾ ಇದೀಗ ಥೈಲ್ಯಾಂಡ್‌ನ ರಾಣಿಯಾಗಿದ್ದಾರೆ.
66 ವರ್ಷದ ಮಹಾ ವಜಿರಲೊಂಗ್ಕಾರ್ನ್ ಈಗಾಗಲೇ ಮೂರು ಮದುವೆಯಾಗಿದ್ದು, ಅವರೆಲ್ಲರಿಗೂ ವಿಚ್ಛೇದನೆ ನೀಡಿದ್ದಾರೆ. ಇದೀಗ ತಮ್ಮ ಅಂಗರಕ್ಷಕಿ ಸುಥಿದಾ ಅವರನ್ನು ವರಿಸಿರುವ ಮಹಾ ವಜಿರಲೊಂಗ್ಕಾರ್ನ್, ಸುಥಿದಾಗೆ ಪವಿತ್ರ ನೀರನ್ನು ಸಿಂಪಡಿಸುವ ಮೂಲಕ ರಾಣಿಯಾಗಿ ಸ್ವೀಕರಿಸಿದರು.
2014ರಲ್ಲಿ ಮಹಾ ವಜಿರಲೊಂಗ್ಕಾರ್ನ್ ತಮ್ಮ ಅಂಗರಕ್ಷಕಿಯಾಗಿ ಸುಥಿದಾ ಅವರನ್ನು ನೇಮಕ ಮಾಡಿಕೊಂಡಿದ್ದರು. ಇದೀಗ ತಮ್ಮ ಅಂಗರಕ್ಷಕಿಯನ್ನೇ ವರಿಸಿ ಆಕೆಗೆ ರಾಣಿ ಪಟ್ಟ ನೀಡಿದ್ದಾರೆ.