Travel Tips : ಹಿಂದಿ ಬಂದ್ರೆ ಸಾಕು, ಈ ದೇಶವನ್ನು ಆರಾಮ್ ಸುತ್ಬಹುದು
ವಿದೇಶಕ್ಕೆ ಹೋಗುವಾಗ ಭಾಷೆ ಕೂಡ ಮಹತ್ವ ಪಡೆಯುತ್ತದೆ. ಅಲ್ಲಿನ ಭಾಷೆ ಬರೋದಿಲ್ಲ ಎನ್ನುವ ಕಾರಣಕ್ಕೆ ಅನೇಕರು ಪ್ರವಾಸ ಕೈ ಬಿಡ್ತಾರೆ. ಇನ್ನು ಕೆಲವರಿಗೆ ಇಂಗ್ಲೀಷ್ ಸರಿಯಾಗಿ ಬರೋದಿಲ್ಲ. ಹಾಗಾಗಿ ವಿದೇಶದ ಸಹವಾಸ ಬೇಡ ಎಂದುಕೊಳ್ತಾರೆ. ಆದ್ರೆ ಇಂಗ್ಲೀಷ್ ಬರ್ತಿಲ್ಲ, ಹಿಂದೆ ಗೊತ್ತಿದೆ ಎಂದಾದ್ರೆ ನೀವು ಕೆಲ ದೇಶಕ್ಕೆ ಹೋಗ್ಬಹುದು.
ದಸರಾ, ದೀಪಾವಳಿ ನಂತ್ರ ಕ್ರಿಸ್ ಮಸ್ ಹೀಗೆ ಒಂದಾದ್ಮೇಲೆ ಒಂದರಂತೆ ರಜೆ ಬರ್ತಿದೆ. ಈಗಾಗಲೇ ರಜೆಯಲ್ಲಿ ಎಲ್ಲಿಗೆ ಹೋಗ್ಬೇಕು ಎಂಬ ಪ್ಲಾನ್ ಸಿದ್ಧವಾಗ್ತಿದೆ. ಪ್ರವಾಸಕ್ಕೆ ಹೋಗಲು ಇಷ್ಟಪಡುವ ಜನರಿಗೆ ವಿದೇಶ ನೋಡುವ ಆಸೆ ಇದ್ದೇ ಇರುತ್ತೆ. ಭಾರತದಲ್ಲಿ ಯಾವ ಮೂಲೆಯಲ್ಲಿ ಬಿಟ್ರೂ ಬರ್ತೇನೆ ಎನ್ನುವ ಜನರು ವಿದೇಶ ಎಂದಾಗ ಸ್ವಲ್ಪ ಮೇಲೆ ಕೆಳಗೆ ನೋಡ್ತಾರೆ. ವಿದೇಶಕ್ಕೆ ಪ್ರವಾಸಕ್ಕೆ ಹೋಗಲು ಅನೇಕ ಅಡೆತಡೆಗಳಿರುತ್ತವೆ. ಪಾಸ್ಪೋರ್ಟ್, ವೀಸಾ ಸೇರಿದಂತೆ ಅನೇಕ ವ್ಯವಸ್ಥೆ ಮಾಡಿಕೊಳ್ಳಬೇಕು. ಇದೆಲ್ಲದರ ಮಧ್ಯೆ ಭಾಷೆ ಇಲ್ಲಿ ಮುಖ್ಯ ಪಾತ್ರವಹಿಸುತ್ತದೆ. ವೀಸಾ, ಪಾಸ್ಪೋರ್ಟ್ ಪಡೆಯುವ ಜನರಿಗೆ ಅಲ್ಲಿನ ಭಾಷೆಯೇ ದೊಡ್ಡ ಸಮಸ್ಯೆಯಾಗುತ್ತದೆ. ಹೊಟೇಲ್ ರೂಮ್, ಬಸ್ ಟಿಕೆಟ್, ಅಲ್ಲಿನ ಪ್ರವಾಸಿ ತಾಣದ ಬಗ್ಗೆ ಮಾಹಿತಿ ಸೇರಿದಂತೆ ಆಹಾರ ಬುಕ್ ಮಾಡುವವರೆಗೆ ಎಲ್ಲವನ್ನೂ ಸಂಭಾಳಿಸಬೇಕು. ಅಲ್ಪಸ್ವಲ್ಪ ಇಂಗ್ಲೀಷ್ ಬರೋರಿಗೆ ಸಮಸ್ಯೆಯಿಲ್ಲ. ಆದ್ರೆ ಇಂಗ್ಲೀಷ್ ಸ್ವಲ್ಪವೂ ಬರೋದಿಲ್ಲ, ಹಿಂದಿ ಹಾಗೋ ಹೀಗೋ ಅರ್ಥವಾಗುತ್ತೆ, ಮಾತನಾಡ್ತೇನೆ ಎನ್ನುವವರು ವಿದೇಶಕ್ಕೆ ಹೋಗಲು ಧೈರ್ಯ ಮಾಡ್ಬಹುದು. ಯಾಕೆಂದ್ರೆ ಕೆಲ ದೇಶಗಳಲ್ಲಿ ನೀವು ಇಂಗ್ಲೀಷ್ ಮಾತನಾಡ್ಬೇಕಾಗಿಲ್ಲ. ಹಿಂದಿಯಲ್ಲೇ ಮಾತನಾಡಿ, ವ್ಯವಹಾರ ಕುದುರಿಸಬಹುದು. ಇಂದು, ಹಿಂದಿ ಪ್ರತಚಲಿತವಿರುವ ದೇಶಗಳು ಯಾವವು ಎಂಬುದನ್ನು ಹೇಳ್ತೇವೆ.
ಹಿಂದಿ (Hindi) ಪ್ರಚಲಿತದಲ್ಲಿರುವ ದೇಶಗಳು :
ಫಿಜಿ (Fiji) : ಫಿಜಿ ಒಂದು ಸಣ್ಣ ದೇಶವಾಗಿದೆ. ಈಶಾನ್ಯ ಭಾರತದಿಂದ ಬಂದ ಜನರು ಫಿಜಿಯಲ್ಲಿ ನೆಲೆ ನಿಂತಿದ್ದಾರೆ. ಹಾಗಾಗಿ ಫಿಜಿಗೆ ಪ್ರವಾಸಕ್ಕೆ ಹೋದ್ರೆ ನೀವು ಇಂಗ್ಲೀಷ್ (English) ಮಾತನಾಡಲು ಕಷ್ಟಪಡಬೇಕಾಗಿಲ್ಲ. ಫಿಜಿ ಜನರು ಭೋಜ್ಪುರಿ, ಮಾಗಾಹಿ ಮತ್ತು ಹಿಂದಿ ಮಾತನಾಡುತ್ತಾರೆ. ಅಲ್ಲಿ ಹಿಂದಿ ಭಾಷೆ ಟ್ರೆಂಡ್ ನಲ್ಲಿದೆ. ಫಿಜಿ ನಾಲ್ಕು ಅಧಿಕೃತ ಭಾಷೆಗಳನ್ನು ಹೊಂದಿದೆ. ಅವುಗಳಲ್ಲಿ ಹಿಂದಿ ಕೂಡ ಒಂದು.
TRAVEL TIPS : ಜೋಗ ಜೊತೆ ಎಷ್ಟು ಅದ್ಭುತ ಜಲಪಾತಗಳಿವೆ ಭಾರತದಲ್ಲಿ ಗೊತ್ತಾ?
ಪಾಕಿಸ್ತಾನ (Pakistan) : ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನ. ವಿಭಜನೆಯ ಮೊದಲು ಭಾರತ ಮತ್ತು ಪಾಕಿಸ್ತಾನ ಒಂದೇ ದೇಶವಾಗಿತ್ತು ಎಂಬುದು ನಿಮಗೆಲ್ಲ ತಿಳಿದಿರುವ ಸಂಗತಿ. ಹಾಗಾಗಿ ಪಾಕಿಸ್ತಾನದಲ್ಲಿ ಹಿಂದಿ ಮಾತನಾಡುವ ಮತ್ತು ಅರ್ಥಮಾಡಿಕೊಳ್ಳುವ ಜನರು ಸಾಕಷ್ಟು ಮಂದಿ ಇದ್ದಾರೆ. ಪಾಕಿಸ್ತಾನದ ಅಧಿಕೃತ ಭಾಷೆ ಇಂಗ್ಲಿಷ್ ಮತ್ತು ಉರ್ದು (Urdu). ಆದ್ರೆ ಇಲ್ಲಿ ಪಂಜಾಬಿ, ಹಿಂದಿ, ಪಾಸ್ಟೊ ಮತ್ತು ಬಲೂಚಿ ಮಾತನಾಡುವವರ ಸಂಖ್ಯೆ ಹೆಚ್ಚಿದೆ. ನೀವು ಪಾಕಿಸ್ತಾನಕ್ಕೆ ಪ್ರವಾಸಕ್ಕೆ ಹೋದ್ರೆ ಹಿಂದಿ ಮಾತನಾಡಿ, ಕೆಲಸ ಮುಗಿಸಬಹುದು.
ಬಾಂಗ್ಲಾದೇಶ (Bangladesh) : ಇದು ಕೂಡ ನಮ್ಮ ನೆರೆಯ ರಾಷ್ಟ್ರ. ಬಾಂಗ್ಲಾ ಕೂಡ ಒಂದು ಕಾಲದಲ್ಲಿ ಭಾರತದ ಒಂದು ಭಾಗವಾಗಿತ್ತು. ಬಾಂಗ್ಲಾದೇಶದಲ್ಲಿ ಭಾರತೀಯ ಭಾಷೆಯನ್ನು ಮಾತನಾಡುವ ಅನೇಕರಿದ್ದಾರೆ. ಕೆಲವರಿಗೆ ಭಾಷೆ ಮಾತನಾಡಲು ಬರದೆ ಹೋದ್ರೂ ಅರ್ಥವಾಗುತ್ತದೆ. ಬಾಂಗ್ಲಾದೇಶದ ಅಧಿಕೃತ ಭಾಷೆ ಬಾಂಗ್ಲಾ. ಬಾಂಗ್ಲಾ ಭಾಷೆ ಬರೋದಿಲ್ಲ ಎಂಬ ಕಾರಣಕ್ಕೆ ನೀವು ಬಾಂಗ್ಲಾ ಟ್ರಿಪ್ಸ್ ಮಿಸ್ ಮಾಡಿಕೊಳ್ಳಬೇಕಾಗಿಲ್ಲ. ಬಾಂಗ್ಲಾ ದೇಶದಲ್ಲಿ ನೀವು ಹಿಂದೆ ಅಥವಾ ಇಂಗ್ಲೀಷ್ ಮಾತನಾಡಬಹುದು.
Travel Tips: ವಿಮಾನ ಪ್ರಯಾಣ ಆರಾಮದಾಯಕವಾಗಿಸಲು ಸಿಂಪಲ್ ಟ್ರಿಕ್ಸ್
ನೇಪಾಳ (Nepal) : ಭಾರತದ ನೆರೆಯ ರಾಷ್ಟ್ರ ನೇಪಾಳ. ನೇಪಾಳದಲ್ಲಿ ಕೂಡ ಹಿಂದಿ ಭಾಷೆಯನ್ನು ಮಾತನಾಡುವ ಅನೇಕ ಜನರನ್ನು ನೋಡ್ಬಹುದು. ನೇಪಾಳದ ಅಧಿಕೃತ ಭಾಷೆ ನೇಪಾಳಿ. ಆದರೆ ಮೈಥಿಲಿ, ಭೋಜ್ಪುರಿ ಮತ್ತು ಹಿಂದಿ ಮಾತನಾಡುವ ಅನೇಕ ಜನರು ನೇಪಾಳದಲ್ಲಿ ನೆಲೆಸಿದ್ದಾರೆ. ನಿಮಗೆ ಹಿಂದಿ ಮಾತನಾಡಲು ಬಂದ್ರೆ ನೀವು ಆರಾಮವಾಗಿ ನೇಪಾಳ ಪ್ರವಾಸ ಮುಗಿಸಿ ಬರಬಹುದು. ಯಾಕೆಂದ್ರೆ ಅಲ್ಲಿ ನಿಮ್ಮ ಹಿಂದಿ ಅರ್ಥ ಮಾಡಿಕೊಳ್ಳುವ ಸಾಕಷ್ಟು ಮಂದಿ ಸಿಗ್ತಾರೆ.