IRCTCಯಿಂದ ಮುಂಗಾರು ಆಫರ್: ಬೆಂಗಳೂರು-ಮೈಸೂರಿಗೆ ವಿಶೇಷ ಟ್ರಿಪ್
Bengaluru Mysuru Travel IRCTC Package: ಐಆರ್‌ಸಿಟಿಸಿ ಬೆಂಗಳೂರು ಮತ್ತು ಮೈಸೂರಿಗೆ 2 ರಾತ್ರಿ 3 ದಿನಗಳ ಪ್ರವಾಸ ಪ್ಯಾಕೇಜ್ ನೀಡುತ್ತಿದೆ. ಈ ಪ್ಯಾಕೇಜ್‌ನಲ್ಲಿ ಎಸಿ ಕಾರು, ಹೋಟೆಲ್ ವಸತಿ, ಊಟ ಮತ್ತು ಪ್ರಯಾಣ ವಿಮೆ ಸೇರಿವೆ. ಹಾಗಾಗಿ ಪ್ರಯಾಣಿಕರು ಈ ವಿಶೇಷ ಟೂರ್ ಪ್ಯಾಕೇಜ್‌ನ್ನು ಆನಂದಿಸಬಹುದು.

ಐಆರ್‌ಸಿಟಿಸಿ ಬೆಂಗಳೂರು ಮೈಸೂರು ಪ್ರವಾಸ
ಆಗಸ್ಟ್‌ನಲ್ಲಿ ಲಾಂಗ್ ವೀಕೆಂಡ್‌ಗೆ ಪ್ಲಾನ್ ಮಾಡಿದ್ರೆ ಈ ಸುದ್ದಿ ನಿಮಗೆ ವಿಶೇಷವಾಗಲಿದೆ. ಐಆರ್‌ಸಿಟಿಸಿ ಕಡಿಮೆ ಬೆಲೆಯಲ್ಲಿ ಬೆಂಗಳೂರು ಮೈಸೂರು ಪ್ರವಾಸದ ಆಫರ್ ನೀಡುತ್ತಿದೆ. 2 ರಾತ್ರಿ 3 ದಿನದ ಪ್ಯಾಕೇಜ್‌ನಲ್ಲಿ ಎರಡೂ ನಗರಗಳ ಸೌಂದರ್ಯ, ಸಂಸ್ಕೃತಿ ಮತ್ತು ವಾಸ್ತುಶಿಲ್ಪವನ್ನು ಆನಂದಿಸಬಹುದು. ಈ ಪ್ಯಾಕೇಜ್ ಬೆಲೆ ಎಷ್ಟು ಗೊತ್ತಾ?
ಬೆಂಗಳೂರು ಪ್ರವಾಸ
"ಭಾರತದ ಸಿಲಿಕಾನ್ ವ್ಯಾಲಿ" ಎಂದು ಕರೆಯಲ್ಪಡುವ ಬೆಂಗಳೂರು, 900 ಮೀಟರ್ ಎತ್ತರದಲ್ಲಿದೆ. ಬೆಂಗಳೂರು ನಗರ ಹಲವು ಐತಿಹಾಸಿಕ ಸ್ಥಳಗಳು, ಹಸಿರು ಉದ್ಯಾನವನಗಳನ್ನು ಒಳಗೊಂಡಿದೆ. ಮೈಸೂರಿನಲ್ಲಿ ಅರಮನೆ, ಪ್ರಾಣಿ ಸಂಗ್ರಾಹಲಯ, ಉದ್ಯಾನವನಗಳನ್ನು ಹೊಂದಿದೆ.
ಮೈಸೂರು ಪ್ರವಾಸ
ಐಆರ್‌ಸಿಟಿಸಿ ಪ್ರವಾಸ ಪ್ಯಾಕೇಜ್
ಈ ಐಆರ್‌ಸಿಟಿಸಿ ಪ್ಯಾಕೇಜ್‌ನಲ್ಲಿ ಎಸಿ ಸೆಡಾನ್ ಕ್ಯಾಬ್ ಸಾರಿಗೆ, ಕಂಫರ್ಟ್ ಕ್ಲಾಸ್ ಹೋಟೆಲ್‌ಗಳಲ್ಲಿ ವಸತಿ, ಬೆಳಗಿನ ಉಪಾಹಾರ ಮತ್ತು ರಾತ್ರಿಯ ಊಟದ ವ್ಯವಸ್ಥೆಗಳು ಮತ್ತು ಪ್ರಯಾಣ ವಿಮೆ ಸೇರಿವೆ.
ಈ ಪ್ಯಾಕೇಜ್ ನಿಮಗೆ ತೊಂದರೆಗಳಿಲ್ಲದ ಅನುಭವವನ್ನ ನೀಡುತ್ತದೆ. ಇದರಿಂದ ನೀವು ನಿಮ್ಮ ರಜೆಯನ್ನು ವಿಶ್ರಾಂತಿ ಮತ್ತು ಆನಂದದಿಂದ ಕಳೆಯಬಹುದು. ಪ್ರಯಾಣಿಕರು ತಮ್ಮ ಬಜೆಟ್ ಮತ್ತು ಗುಂಪಿನ ಗಾತ್ರಕ್ಕೆ ಅನುಗುಣವಾಗಿ ವಿವಿಧ ಹಂಚಿಕೆ ಆಯ್ಕೆಗಳಿಂದ ಆಯ್ಕೆ ಮಾಡಬಹುದು.
ಬೆಂಗಳೂರು ಪ್ರವಾಸ
ಬೆಲೆ ವಿವರಗಳು:
ಸಿಂಗಲ್ ಶೇರಿಂಗ್ - ರೂ.25,480, ಡಬಲ್ ಶೇರಿಂಗ್ - ರೂ.13,370, ಟ್ರಿಪಲ್ ಶೇರಿಂಗ್ - ರೂ.9,830, ಬೆಡ್‌ನೊಂದಿಗೆ ಮಗು - ರೂ.4,700, ಮತ್ತು ಬೆಡ್ ಇಲ್ಲದ ಮಗು - ರೂ.3,210. ಕಡಿಮೆ ವೆಚ್ಚದಲ್ಲಿ ಲಭ್ಯವಿರುವ ಈ ಪ್ರವಾಸವು ಕರ್ನಾಟಕದ ಅತ್ಯುತ್ತಮ ತಾಣಗಳನ್ನು ಕಡಿಮೆ ಅವಧಿಯಲ್ಲಿ ಅನ್ವೇಷಿಸಲು ಉತ್ತಮ ಅವಕಾಶವಾಗಿದೆ.
ನೀವು ಪ್ರಕೃತಿ ಪ್ರೇಮಿಯಾಗಿರಲಿ ಅಥವಾ ಇತಿಹಾಸ ಪ್ರೇಮಿಯಾಗಿರಲಿ, ಈ ಪ್ರವಾಸವು ಈ ಮಳೆಗಾಲದಲ್ಲಿ ಮರೆಯಲಾಗದ ಪ್ರಯಾಣವನ್ನು ಭರವಸೆ ನೀಡುತ್ತದೆ.