IRCTC Tour Package: ಬಾಬಾ ಸಾಹೇಬ್‌ ಅಂಬೇಡ್ಕರ್‌ ಯಾತ್ರೆ ಪ್ರಕಟಿಸಿದ ಐಆರ್‌ಸಿಟಿಸಿ, 9 ದಿನದ ಪ್ಯಾಕೇಜ್‌ ಬುಕ್‌ ಮಾಡೋದು ಹೇಗೆ?

ಐಆರ್‌ಸಿಟಿಸಿ 'ಬಾಬಾ ಸಾಹೇಬ್ ಅಂಬೇಡ್ಕರ್ ಯಾತ್ರಾ' ಎಂಬ 9 ದಿನಗಳ ವಿಶೇಷ ಪ್ರವಾಸ ಪ್ಯಾಕೇಜ್‌ಅನ್ನು ಕೇವಲ ₹17,425 ರಿಂದ ಆರಂಭಿಸಿದೆ. ಈ ಪ್ರವಾಸವು ಅಂಬೇಡ್ಕರ್‌ ಅವರ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳು ಮತ್ತು ಬೌದ್ಧ ಕ್ಷೇತ್ರಗಳನ್ನು ಒಳಗೊಂಡಿದೆ.

Baba Saheb Ambedkar Yatra IRCTC Tour Package Bharat Gaurav Tourist train Details san

IRCTC Tour Package: ಭಾರತರತ್ನ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಬಗ್ಗೆ ದೇಶದ ಜನರಿಗೆ ವಿಶೇಷ ಪ್ರೀತಿ ಇದೆ.ಅವರ ಜೀವನಕ್ಕೆ ಸಂಬಂಧಪಟ್ಟ ಹಲವು ಸ್ಥಳಗಳನ್ನು ಭಾರತ ಸರ್ಕಾರ ಕೂಡ ಮುತುವರ್ಜಿಯಿಂದ ಸಂರಕ್ಷಣೆ ಮಾಡಿದೆ. ಇಂಥ ಸ್ಥಳಗಳಿಗೆ ಹೋಗಿ ಅಂಬೇಡ್ಕರ್‌ ಅವರ ಬದುಕು, ಸಾಧನೆಯನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಐಆರ್‌ಸಿಟಿಸಿ ಸೃಷ್ಟಿಸಿದೆ.ಕೇವಲ 17425 ರೂಪಾಯಿಯಲ್ಲಿ IRCTC ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ಮತ್ತು ಬೌದ್ಧ ಪರಂಪರೆಯ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳನ್ನು ಒಳಗೊಂಡಿರುವ ಭಾರತ್ ಗೌರವ್ ಟೂರಿಸ್ಟ್ ರೈಲಿನಲ್ಲಿ "ಬಾಬಾ ಸಾಹೇಬ್ ಅಂಬೇಡ್ಕರ್ ಯಾತ್ರಾ" ವಿಶೇಷ ಪ್ರವಾಸವನ್ನು ಪರಿಚಯಿಸಿದೆ. 9 ದಿನಗಳ ಸಮಗ್ರ ಪ್ರವಾಸದಲ್ಲಿ ಅಂಬೇಡ್ಕರ್‌ಅವರ ಜೀವನಗಾಥೆಗಳು ಹಾಗೂ ಅವರು ಬದುಕಿ ಬಾಳಿದ ನೆಲದ ಬಗ್ಗೆ ಸಂಪೂರ್ಣ ವಿವರ ಪಡೆಯಬಹುದಾಗಿದೆ.

ಪ್ಯಾಕೇಜ್‌ ಡೀಟೇಲ್‌ಗಳು: ಐಆರ್‌ಸಿಟಿಸಿ ಈ ಪ್ಯಾಕೇಜ್‌ಗೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ಯಾತ್ರಾ ಎನ್ನುವ ಹೆಸರನ್ನಿಟ್ಟಿದೆ. ಕೇಂದ್ರ ಸರ್ಕಾರದ ದೇಖೋ ಅಪ್ನಾ ದೇಶ್ (ನೋಡಿ ನನ್ನ ದೇಶ) ಅಭಿಯಾನದ ಅಡಿಯಲ್ಲಿ ಈ ಪ್ಯಾಕೇಜ್‌ಅನ್ನು ಆರಂಭಿಸಲಾಗಿದೆ. 8 ರಾತ್ರಿ, 9 ಹಗಲಿನ ಪ್ರಯಾಣ ಇದಾಗಿದ್ದು, ಪುಣೆಯಿಂದ ಆರಂಭವಾಗಿ ಪುಣೆಯಲ್ಲಿಯೇ ಅಂತ್ಯಗೊಳ್ಳಲಿದೆ. ಈ ವೇಳೆ ಮುಂಬೈನ ದಾದಾರ್‌ನಲ್ಲಿರುವ ಚೈತ್ಯ ಭೂಮಿ, ಮೋವ್‌ನಲ್ಲಿರುವ ಜನ್ಮಭೂಮಿ, ದೆಹಲಿಯಲ್ಲಿರುವ ಮಹಾಪರಿನಿರ್ವಾಣ ಭೂಮಿ, ನಾಗ್ಪುರದ ದೀಕ್ಷಾ ಭೂಮಿಯ ಪರಿಚಯ ನೀಡಲಿದೆ. ಅದರೊಂದಿಗೆ ಬುದ್ಧರ ಪವಿತ್ರ ಕ್ಷೇತ್ರಗಳಾದ ಬೋಧಗಯಾ, ನಳಂದಾ, ರಾಜ್‌ಗಿರ್‌, ವಾರಣಾಸಿ ಹಾಗೂ ಸಾರಾನಾಥ ಭೇಟಿಯನ್ನೂ ಒಳಗೊಂಡಿದೆ.

ಎಷ್ಟು ದಿನಗಳ ಟ್ರಿಪ್‌: ಒಟ್ಟು ಟ್ರಿಪ್‌ 9 ದಿನ ಹಾಗೂ 8 ರಾತ್ರಿಯನ್ನು ಒಳಗೊಂಡಿದೆ. ಡಿಸೆಂಬರ್‌ 12 ರಂದು ಪ್ರಯಾಣ ಆರಂಭವಾಗಲಿದೆ. 17425 ರೂಪಾಯಿಗೆ ಈ ಪ್ರಯಾಣ ಮಾಡಬಹುದಾಗಿದೆ.

ಟ್ರಿಪ್‌ಗೆ ಆಗುವ ವೆಚ್ಚವೆಷ್ಟು: ಒಬ್ಬ ವ್ಯಕ್ತಿಗೆ ಎಕಾನಮಿ ಕ್ಲಾಸ್‌ನ ಸ್ಲೀಪರ್‌ ಟಿಕೆಟ್‌ಗೆ 17425 ರೂಪಾಯಿ ಇದೆ. 3ಎಸಿ ಸ್ಟ್ಯಾಂಡರ್ಡ್‌ ಪ್ರಯಾಣಕ್ಕೆ 25,185 ರೂಪಾಯಿ ಇದೆ. 2 ಎಸಿ ಕಂಪರ್ಟ್‌ ಪ್ರಯಾಣಕ್ಕೆ 34185 ರೂಪಾಯಿ ವೆಚ್ಚವಾಗಲಿದೆ. ಇದರಲ್ಲಿ ಟ್ರೇನ್‌, ಬಸ್‌, ಹೋಟೆಲ್‌, ಆಹಾರ, ಗೈಡ್‌/ಎಸ್ಕಾರ್ಟ್‌ ಹಾಗೂ ವಿಮೆಯನ್ನು ಒಳಗೊಂಡಿರುತ್ತದೆ. ಒಟ್ಟು 662 ಸೀಟ್‌ಗಳು ಮಾತ್ರವೇ ಭಾರತ್‌ ಗೌರವ್‌ ಟೂರಿಸ್ಟ್‌ ಟ್ರೇನ್‌ನಲ್ಲಿ ಲಭ್ಯವಿದೆ. ದೇಶೀಯ ಪ್ರವಾಸೋದ್ಯಮ ಮತ್ತು ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಉತ್ಸಾಹವನ್ನು ಉತ್ತೇಜಿಸುವ ಕ್ರಮದಲ್ಲಿ ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದ ಒಂದು ನೋಟವನ್ನು ಪ್ರಯಾಣಿಕರಿಗೆ ಒದಗಿಸುವ ಗುರಿಯನ್ನು ಈ ರೈಲು ಹೊಂದಿದೆ.

ರೈಲಿನಲ್ಲಿ ಪಟಾಕಿ ಸಾಗಿಸುವಂತಿಲ್ಲ, ಇದಕ್ಕೆ ಶಿಕ್ಷೆ ಎಷ್ಟು ಗೊತ್ತಾ?

ಹೆಚ್ಚಿನ ಮಾಹಿತಿಗೆ: ಈ ಕುರಿತಾಗಿ ಹೆಚ್ಚಿನ ಮಾಹಿತಿಗಳು ಬೇಕಿದ್ದಲ್ಲಿ 9321901845, 8287931895 ಹಾಗೂ 8287931622 ನಂಬರ್‌ಗೆ ಕರೆ ಅಥವಾ ಎಸ್‌ಎಂಎಸ್‌ ಮಾಡುವ ಮೂಲಕ ಪಡೆಯಬಹುದಾಗಿದೆ.

ಅಂಬೇಡ್ಕರ್ ಹಾಸ್ಟೆಲ್‌ಗಳಲ್ಲಿ ಬೋಗಸ್ ವಿದ್ಯಾರ್ಥಿಗಳು?: 15000 ದಾಖಲಾತಿ ಹೆಚ್ಚಳ

Latest Videos
Follow Us:
Download App:
  • android
  • ios