ಕೇವಲ 24 ಸಾವಿರಕ್ಕೆ ಕೇರಳ ಪ್ರವಾಸ, ಇದು ಐಆರ್‌ಸಿಟಿಸಿ ಆಫರ್!
ಎಲ್ಲಿ ನೋಡಿದರಲ್ಲಿ ಹಸಿರು, ತೆಂಗಿನ ಮರಗಳು, ಸಮುದ್ರದ ನೀರು....ದೇವರ ನಾಡು ಎಂದೇ ಪ್ರಖ್ಯಾತದವಾದ ಕೇರಳ ಸೌಂದರ್ಯ ಸವಿಯುವ ಮಜಾನೇ ಬೇರೆ. ಇಂಥ ಬ್ಯುಟಿಫುಲ್ ರಾಜ್ಯಕ್ಕೆ ಭೇಟಿ ನೀಡಲು, ಐಆರ್‌ಟಿಸಿ ಸುವರ್ಣ ಅವಕಾಶವೊಂದನ್ನು ಕಲ್ಪಿಸುತ್ತಿದೆ.
ಹೊಸದಿಲ್ಲಿ: ದೇವರ ನಾಡು ಕೇರಳ ನೋಡೋ ಕನಸು ಯಾರಿಗಿಲ್ಲ ಹೇಳಿ? ಹಸಿರಿನ ನಡುವೆ ಸಮುದ್ರದ ಸೌಂದರ್ಯವನ್ನು ಸವಿಯೋ ಸುಖವೇ ಬೇರೆ. ಇಂಥ ಪ್ರವಾಸದ ಕನಸನ್ನು ಕಡಿಮೆ ದರದಲ್ಲಿ ನನಸು ಮಾಡುತ್ತಿದೆ ಭಾರತೀಯ ರೈಲ್ವೆ.
ಭಾರತೀಯ ರೈಲ್ವೆ ದಿಲ್ಲಿಯಿಂದ ಕೇರಳಕ್ಕೆ ಪ್ರವಾಸವನ್ನು ಆಯೋಜಿಸಿದ್ದು, ಕಡಿಮೆ ದರದಲ್ಲಿ ಕೇರಳವನ್ನು ನೋಡಬಹುದಾಗಿದೆ. ಐದು ಹಗಲು, ಆರು ರಾತ್ರಿಗಳ ಈ ಪ್ರವಾಸ ಸೆಪ್ಟೆಂಬರ್ 18ರಿಂದ 21ರವರೆಗೆ ಹಮ್ಮಿಕೊಂಡಿದ್ದು, ಒಬ್ಬರಿಗೆ 23,700 ರೂ. ವೆಚ್ಚ ತಗುಲಿದೆ.
ಸೆ.18ರ ಬೆಳಗ್ಗೆ 7ಕ್ಕೆ ಎಲ್ಲರಿಗೂ ಕೈ ಗೆಟಕುವ ಸ್ಪೈಸ್ ಜೆಟ್‌ನಲ್ಲಿ ಪ್ರಯಾಣ ಆರಂಭವಾಗಲಿದ್ದು, ಕೊಚಿನ್‌ಗೆ 10.35ಕ್ಕೆ ತಲುಪಲಿದೆ. ಸೆ.21ರ ಬೆಳಗ್ಗೆ 11ಕ್ಕೆ ಕೊಚಿನ್‌ನಿಂದ ಹೊರಡುವ ರೈಲು ಬೆಳಗ್ಗೆ 11.5ಕ್ಕೆ ದಿಲ್ಲಿಯನ್ನು ತಲುಪಲಿದೆ.
ಕೇರಳದ ಟೀ ಮ್ಯೂಸಿಯಂ ಮತ್ತು ಎಸ್ಟೇಟ್‌ಗಳು, ಮೆಟ್ಟುಪೆಟ್ಟಿ ಡ್ಯಾಂ, ಎಕೋ ಪಾಯಿಂಟ್, ಡಚ್ ಪ್ಯಾಲೇಸ್ ಸೇರಿ ಮರೈನ್ ಡ್ರೈವ್ ಹಾಗೂ ಬೋಟ್ ರೈಡಿಂಗ್ ಈ ಟ್ರಿಪ್‌ನಲ್ಲಿ ಸೇರಿಸಲಾಗಿದೆ, ಎಂದು ಐಆರ್‌ಸಿಟಿಸಿ ವೆಬ್‌ಸೈಟ್ ಪ್ರಕಟಣೆ ಹೇಳಿದೆ.