MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Technology
  • ವಾಟ್ಸಪ್ ಬಳಕೆದಾರರಿಗೆ ಸಿಹಿಸುದ್ದಿ: ಇನ್ಮುಂದೆ WhatsApp ನಲ್ಲೇ ಕರೆಂಟ್, ಗ್ಯಾಸ್, ನೀರಿನ ಬಿಲ್ ಪೇ ಮಾಡಿ!

ವಾಟ್ಸಪ್ ಬಳಕೆದಾರರಿಗೆ ಸಿಹಿಸುದ್ದಿ: ಇನ್ಮುಂದೆ WhatsApp ನಲ್ಲೇ ಕರೆಂಟ್, ಗ್ಯಾಸ್, ನೀರಿನ ಬಿಲ್ ಪೇ ಮಾಡಿ!

ವಾಟ್ಸಪ್ ಬಳಕೆದಾರರಿಗೆ ಸಿಹಿಸುದ್ದಿ ಬಂದಿದೆ. ಇನ್ಮುಂದೆ WhatsApp ನಲ್ಲೇ ಕರೆಂಟ್, ಗ್ಯಾಸ್, ನೀರಿನ ಬಿಲ್ ಪೇ ಮಾಡಬಹುದು. ಬಿಲ್ ಪೇ ಮಾಡಲು ಯಾವುದೇ ಆಫೀಸ್‌ಗೆ ಅಲೆದಾಡಬೇಕಿಲ್ಲ, ನೀವಿದ್ದಲ್ಲೇ ವಾಟ್ಸಪ್ ಮೂಲಕವೇ ಪೇ ಮಾಡಬಹುದುದಾಗಿದೆ. ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

1 Min read
Author : Ravi Janekal
Published : Sep 03 2026, 02:42 PM IST
Share this Photo Gallery
  • FB
  • TW
  • Linkdin
  • Whatsapp
14
WhatsApp Bill Pay: ವಾಟ್ಸಪ್ ಬಳಕೆದಾರರಿಗೆ ಗುಡ್‌ನ್ಯೂಸ್
Image Credit : Asianet News

WhatsApp Bill Pay: ವಾಟ್ಸಪ್ ಬಳಕೆದಾರರಿಗೆ ಗುಡ್‌ನ್ಯೂಸ್

ಭಾರತದ ಕೋಟ್ಯಂತರ ವಾಟ್ಸಾಪ್ ಬಳಕೆದಾರರಿಗೆ ಒಂದು ಸಿಹಿ ಸುದ್ದಿಯೊಂದು ಬಂದಿದೆ. ಇನ್ನು ಮುಂದೆ ನಿಮ್ಮ ಮನೆಗೆ ಬರುವ ವಿದ್ಯುತ್, ಗ್ಯಾಸ್ ಮತ್ತು ನೀರಿನ ಬಿಲ್‌ಗಳನ್ನು ಪಾವತಿಸಲು ಬೇರೆ ಯಾವುದೇ ಆಫೀಸ್‌ಗೆ, ಆಪ್‌ಗೆ ಹೋಗಬೇಕಾಗಿಲ್ಲ. ಮೆಟಾ ಮಾಲೀಕತ್ವದ ವಾಟ್ಸಾಪ್, ತನ್ನ ಪ್ಲಾಟ್‌ಫಾರ್ಮ್‌ನಲ್ಲೇ ನೇರವಾಗಿ ಈ ಬಿಲ್‌ಗಳನ್ನು ಪಾವತಿಸುವ ಹೊಸ ಫೀಚರ್ ಅನ್ನು ಪರಿಚಯಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ವಾಟ್ಸಪ್‌ನಿಂದಲೇ ಗ್ಯಾಸ್, ನೀರಿನ ಬಿಲ್ ಪಾವತಿ
Image Credit : our own

ವಾಟ್ಸಪ್‌ನಿಂದಲೇ ಗ್ಯಾಸ್, ನೀರಿನ ಬಿಲ್ ಪಾವತಿ

ಈ ಹೊಸ ಸೌಲಭ್ಯವು ವಾಟ್ಸಾಪ್ ಪೇಮೆಂಟ್ಸ್ (WhatsApp Pay) ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ. ಇದರಿಂದಾಗಿ ಬಳಕೆದಾರರು ಚಾಟ್ ಮಾಡುವಷ್ಟೇ ಸುಲಭವಾಗಿ ತಮ್ಮ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಬಹುದಾಗಿದೆ. ಇದು ಬಳಕೆದಾರರಿಗೆ ಮತ್ತೊಂದು ಅನುಕೂಲಕರ ಆಯ್ಕೆಯಾಗಿರುವುದಂತೂ ನಿಜ.

Related Articles

Related image1
ದಿಢೀರ್‌ ಶಾಕ್‌ ಕೊಟ್ಟ WhatsApp; ನಿಮ್ಮ ಅಕೌಂಟ್‌ ಬ್ಲಾಕ್‌ ಆಗಿದ್ಯಾ? ಈಗಲೇ ಚೆಕ್‌ ಮಾಡಿ..!
Related image2
Indian Oilನಿಂದ 5-10 ಕೆಜಿ ಸಿಲಿಂಡರ್‌ ವಿತರಣೆ; ಬುಕ್ಕಿಂಗ್ ವಾಟ್ಸಪ್ ನಂಬರ್ ಇಲ್ಲಿದೆ
34
ಹಂತ ಹಂತವಾಗಿ ಎಲ್ಲರಿಗೂ ಲಭ್ಯ
Image Credit : our own

ಹಂತ ಹಂತವಾಗಿ ಎಲ್ಲರಿಗೂ ಲಭ್ಯ

ಈ ಹೊಸ ಬಿಲ್ ಪಾವತಿ ಸೌಲಭ್ಯವನ್ನು ಸದ್ಯಕ್ಕೆ ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ ಎಂದು ವಾಟ್ಸಾಪ್ ತಿಳಿಸಿದೆ. ಅಂದರೆ, ಸದ್ಯಕ್ಕೆ ಕೆಲವೇ ಬಳಕೆದಾರರಿಗೆ ಈ ಆಯ್ಕೆ ಕಾಣಿಸಿಕೊಳ್ಳಬಹುದು. ಆದರೆ, ಮುಂದಿನ ಕೆಲವೇ ವಾರಗಳಲ್ಲಿ ಭಾರತದಲ್ಲಿರುವ ಎಲ್ಲಾ ಆಂಡ್ರಾಯ್ಡ್ (Android) ಮತ್ತು ಐಓಎಸ್ (iOS) ಬಳಕೆದಾರರಿಗೆ ಈ ಫೀಚರ್ ಲಭ್ಯವಾಗಲಿದೆ.

44
ಮೆಟಾ ಕಂಪನಿ ಹೇಳಿದ್ದೇನು?
Image Credit : FreePik

ಮೆಟಾ ಕಂಪನಿ ಹೇಳಿದ್ದೇನು?

ಕಂಪನಿಯ ಪ್ರಕಾರ, ಈ ಸೌಲಭ್ಯವನ್ನು ಕ್ರಮೇಣವಾಗಿ ವಿಸ್ತರಿಸಲಾಗುತ್ತಿದ್ದು, ಅತಿ ಶೀಘ್ರದಲ್ಲೇ ಪ್ರತಿಯೊಬ್ಬ ವಾಟ್ಸಾಪ್ ಬಳಕೆದಾರನೂ ಇದರ ಪ್ರಯೋಜನ ಪಡೆಯಲಿದ್ದಾನೆ. ಈ ಮೂಲಕ ಡಿಜಿಟಲ್ ಪಾವತಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ವಾಟ್ಸಾಪ್ ಮುಂದಾಗಿದೆ. ಬಳಕೆದಾರರು ತಮ್ಮ ವಾಟ್ಸಾಪ್ ಆ್ಯಪ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುವ ಮೂಲಕ ಈ ಹೊಸ ಫೀಚರ್ ಬಂದಿದೆಯೇ ಎಂದು ಪರೀಕ್ಷಿಸಬಹುದು.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ತಂತ್ರಜ್ಞಾನ
ವಾಟ್ಸಾಪ್
ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್)

Latest Videos
Recommended Stories
Recommended image1
ಕೇವಲ 1000 ರೂಗೆ ನಿಮ್ಮ ಹಳೇ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್‌ಗೆ ಹೈ ಪರ್ಫಾಮೆನ್ಸ್ ಟಚ್, ಆ್ಯಕ್ಟಿವೇಟ್ ಹೇಗೆ?
Recommended image2
ಒಂದೇ ರೀಚಾರ್ಜ್, 4 ಸಿಮ್‌ಗಳಿಗೆ ಉಚಿತ ಕರೆ, 5G ಡೇಟಾ! ಏರ್‌ಟೆಲ್‌ನ ಈ ಫ್ಯಾಮಿಲಿ ಪ್ಲಾನ್ ಬಗ್ಗೆ ತಿಳ್ಕೊಳ್ಳಿ!
Recommended image3
ಬೈಕ್, ಕಾರು, ರೈಲು, ವಿಮಾನಗಳಿಗೆ ಹೆಡ್‌ಲೈಟ್ ಇರುವಂತೆ ಹಡಗುಗಳಿಗೆ ಇರಲ್ಲ ಯಾಕೆ?
Related Stories
Recommended image1
ದಿಢೀರ್‌ ಶಾಕ್‌ ಕೊಟ್ಟ WhatsApp; ನಿಮ್ಮ ಅಕೌಂಟ್‌ ಬ್ಲಾಕ್‌ ಆಗಿದ್ಯಾ? ಈಗಲೇ ಚೆಕ್‌ ಮಾಡಿ..!
Recommended image2
Indian Oilನಿಂದ 5-10 ಕೆಜಿ ಸಿಲಿಂಡರ್‌ ವಿತರಣೆ; ಬುಕ್ಕಿಂಗ್ ವಾಟ್ಸಪ್ ನಂಬರ್ ಇಲ್ಲಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved