- Home
- News
- State
- ಕರ್ನಾಟಕ ಜಲಾಶಯಗಳ ನೀರಿನ ಮಟ್ಟ: ಕಾವೇರಿ ಕೊಳ್ಳದಲ್ಲಿ ಆತಂಕ; ಆಲಮಟ್ಟಿ ಭರ್ತಿ, ಕೆಆರ್‌ಎಸ್ ಖಾಲಿ ಖಾಲಿ!
ಕರ್ನಾಟಕ ಜಲಾಶಯಗಳ ನೀರಿನ ಮಟ್ಟ: ಕಾವೇರಿ ಕೊಳ್ಳದಲ್ಲಿ ಆತಂಕ; ಆಲಮಟ್ಟಿ ಭರ್ತಿ, ಕೆಆರ್‌ಎಸ್ ಖಾಲಿ ಖಾಲಿ!
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಜಲಾಶಯಗಳ ನೀರಿನ ಮಟ್ಟದಲ್ಲಿ ಭಾರಿ ವ್ಯತ್ಯಾಸ ಉಂಟಾಗಿದೆ. ಉತ್ತರ ಕರ್ನಾಟಕದ ಕೃಷ್ಣಾ ಕೊಳ್ಳದ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದರೆ, ದಕ್ಷಿಣ ಕರ್ನಾಟಕದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಶೇ. 56ಕ್ಕೆ ಕುಸಿದು ಆತಂಕ ಸೃಷ್ಟಿಸಿದೆ.

ಬೆಂಗಳೂರು (ಸೆ.14): ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಜಲಾಶಯಗಳ ನೀರಿನ ಸಂಗ್ರಹದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಜಲಸಂಪನ್ಮೂಲ ಇಲಾಖೆಯು ಬಿಡುಗಡೆ ಮಾಡಿರುವ ಇತ್ತೀಚಿನ ಅಧಿಕೃತ ವರದಿಯ ಪ್ರಕಾರ, ಉತ್ತರ ಕರ್ನಾಟಕದ ಕೃಷ್ಣಾ ಕೊಳ್ಳದ ಜಲಾಶಯಗಳು ಉತ್ತಮ ನೀರಿನ ಸಂಗ್ರಹ ಹೊಂದಿದ್ದರೆ, ದಕ್ಷಿಣ ಕರ್ನಾಟಕದ ಜೀವನಾಡಿಯಾಗಿರುವ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ.
ಕಾವೇರಿ ಕೊಳ್ಳದ ಜಲಾಶಯಗಳು: ಶೇ. 56ಕ್ಕೆ ಕುಸಿದ ನೀರಿನ ಮಟ್ಟ!
ಕಳೆದ ವರ್ಷಕ್ಕೆ ಹೋಲಿಸಿದರೆ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಅರ್ಧದಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಪ್ರಮುಖವಾಗಿ ಕೆಆರ್‌ಎಸ್, ಹೇಮಾವತಿ ಹಾಗೂ ಕಬಿನಿ ಜಲಾಶಯಗಳಲ್ಲಿ ಕೇವಲ ಶೇ. 56ರಷ್ಟು ಮಾತ್ರ ನೀರಿದೆ.
ಕೆಆರ್‌ಎಸ್ (KRS): ಒಟ್ಟು 49.45 ಟಿಎಂಸಿ ಸಾಮರ್ಥ್ಯದ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಪ್ರಸ್ತುತ ಕೇವಲ 27.63 ಟಿಎಂಸಿ (56%) ನೀರು ಮಾತ್ರ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 47.76 ಟಿಎಂಸಿ (96%) ನೀರಿತ್ತು. ಒಳಹರಿವು 5,143 ಕ್ಯೂಸೆಕ್ ಇದೆ.
ಕಬಿನಿ (Kabini): 19.52 ಟಿಎಂಸಿ ಸಾಮರ್ಥ್ಯದ ಕಬಿನಿಯಲ್ಲಿ ಕೇವಲ 10.95 ಟಿಎಂಸಿ (56%) ನೀರಿದೆ (ಕಳೆದ ವರ್ಷ 18.12 ಟಿಎಂಸಿ ಇತ್ತು).
ಹೇಮಾವತಿ (Hemavathi): 37.10 ಟಿಎಂಸಿ ಪೈಕಿ ಪ್ರಸ್ತುತ 20.97 ಟಿಎಂಸಿ (56%) ನೀರಿದೆ.
ಹಾರಂಗಿ (Harangi): 8.50 ಟಿಎಂಸಿ ಸಾಮರ್ಥ್ಯದ ಹಾರಂಗಿಯಲ್ಲಿ 6.83 ಟಿಎಂಸಿ (80%) ನೀರು ಸಂಗ್ರಹವಾಗಿದೆ.
ಬಳಿಗುಂಡ್ಲುವಿನಲ್ಲಿ ನೀರಿನ ಹರಿವು ಭಾರಿ ಕುಸಿತ:
ಕಾವೇರಿ ನ್ಯಾಯಮಂಡಳಿಯ ಸಾಮಾನ್ಯ ವರ್ಷದ ಲೆಕ್ಕಾಚಾರದ ಪ್ರಕಾರ ಸೆಪ್ಟೆಂಬರ್ ಅಂತ್ಯದ ವೇಳೆಗೆ ತಮಿಳುನಾಡಿಗೆ ಬಿಳಿಗುಂಡ್ಲು ಮೂಲಕ 123.14 ಟಿಎಂಸಿ ನೀರು ಹರಿಯಬೇಕಿತ್ತು. ಆದರೆ ಜೂನ್ 1ರಿಂದ ಸೆಪ್ಟೆಂಬರ್ 12ರವರೆಗೆ ಕೇವಲ 35.972 ಟಿಎಂಸಿ ನೀರು ಮಾತ್ರ ಹರಿದಿದೆ.
ಕೃಷ್ಣಾ ಕೊಳ್ಳದ ಜಲಾಶಯಗಳು:
ಆಲಮಟ್ಟಿ, ಘಟಪ್ರಭಾ ಬಹುತೇಕ ಭರ್ತಿಯಾಗಿವೆ. ಈ ಮೂಲಕ ಉತ್ತರ ಕರ್ನಾಟಕ ಭಾಗದ ಜಲಾಶಯಗಳ ಸ್ಥಿತಿ ಉತ್ತಮವಾಗಿದ್ದು, ರೈತರಲ್ಲಿ ಸಮಾಧಾನ ತಂದಿದೆ.
ಆಲಮಟ್ಟಿ (Almatti): 123.08 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಜಲಾಶಯದಲ್ಲಿ ಬರೋಬ್ಬರಿ 122.83 ಟಿಎಂಸಿ (99%) ನೀರಿನ ಸಂಗ್ರಹವಿದ್ದು, ಬಹುತೇಕ ಭರ್ತಿಯಾಗಿದೆ.
ಘಟಪ್ರಭಾ/ಹಿಡಕಲ್ (Ghataprabha): 51.00 ಟಿಎಂಸಿ ಸಾಮರ್ಥ್ಯದ ಪೈಕಿ 50.72 ಟಿಎಂಸಿ (99%) ನೀರು ತುಂಬಿದೆ.
ಭದ್ರಾ (Bhadra): 71.54 ಟಿಎಂಸಿ ಸಾಮರ್ಥ್ಯದ ಭದ್ರಾದಲ್ಲಿ 62.39 ಟಿಎಂಸಿ (87%) ನೀರಿದೆ.
ತುಂಗಭದ್ರಾ (Tungabhadra): 105.79 ಟಿಎಂಸಿ ಪೈಕಿ 86.88 ಟಿಎಂಸಿ (82%) ನೀರಿದೆ.
ನಾರಾಯಣಪುರ (Narayanapura): 33.31 ಟಿಎಂಸಿ ಪೈಕಿ 29.28 ಟಿಎಂಸಿ (88%) ನೀರು ಸಂಗ್ರಹವಾಗಿದೆ.
ವಾಣಿವಿಲಾಸ ಸಾಗರ (Vanivilas Sagar): 30.42 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 21.19 ಟಿಎಂಸಿ (70%) ನೀರಿದೆ.
ಮಲಪ್ರಭಾ (Malaprabha): 37.73 ಟಿಎಂಸಿ ಪೈಕಿ 21.72 ಟಿಎಂಸಿ (57%) ನೀರಿನ ಸಂಗ್ರಹವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

