MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Commercial LPG Cylinder Price
Bengaluru-Hassan Toll Price Hike
Toxic Box Office Collections
Bengaluru Karantha Layout BDA Plots
Kabini Reservoir
IPL Impact Player Rule
Education Loan Prepayment
Bank of Baroda Recruitment
Karnataka Housing Board
Congress MLA Ashok Rai
Cauvery Water Dispute
BEL Recruitment 2026
September New Financial Rules
  • Home
  • Life
  • Relationship
  • Lakshmi Nivasa Serial ನಟಿ ರೂಪಿಕಾ ಮದುವೆ, ರಿಸೆಪ್ಷನ್​ ಕ್ಯೂಟ್​ ಫೋಟೋಸ್​ ವೈರಲ್​

Lakshmi Nivasa Serial ನಟಿ ರೂಪಿಕಾ ಮದುವೆ, ರಿಸೆಪ್ಷನ್​ ಕ್ಯೂಟ್​ ಫೋಟೋಸ್​ ವೈರಲ್​

ಲಕ್ಷ್ಮೀ ನಿವಾಸ ಧಾರಾವಾಹಿಯ ಸಿಂಚನಾ ಪಾತ್ರಧಾರಿ ರೂಪಿಕಾ, ಕೆನಡಾ ನಿವಾಸಿ ಅಂಕಿತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ಕಾರಣಕ್ಕೆ ಧಾರಾವಾಹಿಯಿಂದ ಹೊರಬಂದಿದ್ದ ಅವರ ವಿವಾಹ ಸಮಾರಂಭಕ್ಕೆ ಕಿರುತೆರೆ ತಾರ ಬಳಗವೇ ಸಾಕ್ಷಿಯಾಗಿತ್ತು.

2 Min read
Author : Suchethana D
Published : Sep 01 2026, 01:01 PM IST
Share this Photo Gallery
  • FB
  • TW
  • Linkdin
  • Whatsapp
17
ಲಕ್ಷ್ಮೀ ನಿವಾಸ ಸಿಂಚನಾ ಮದುವೆ
Image Credit : digital_cinenews and Social Media

ಲಕ್ಷ್ಮೀ ನಿವಾಸ ಸಿಂಚನಾ ಮದುವೆ

ಲಕ್ಷ್ಮೀ ನಿವಾಸ (Lakshmi Nivasa Serial) ಧಾರಾವಾಹಿಯಲ್ಲಿ ಸಿಂಚನಾ ಪಾತ್ರ ಮಾಡುತ್ತಿದ್ದ ರೂಪಿಕಾ ಅವರು ನಿಜ ಜೀವನದಲ್ಲಿ ನಿನ್ನೆ ಮದುವೆಯಾಗಿದ್ದಾರೆ. ಇದೇ ಕಾರಣಕ್ಕೆ ಅವರು ಸೀರಿಯಲ್​ನಿಂದ ಹೊರಕ್ಕೆ ಬಂದಿದ್ದರು. ಇದೀಗ ಅವರ ಮದುವೆ ಮತ್ತು ರಿಸೆಪ್ಷನ್​ನ ವಿವಿಧ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಪತಿ ಯಾರು?
Image Credit : digital_cinenews and Social Media

ಪತಿ ಯಾರು?

ಕಳೆದ 5 ವರ್ಷಗಳಿಂದ ಕೆನಡಾದಲ್ಲೇ ನೆಲೆಸಿರುವ ಅಂಕಿತ್​ ಎನ್ನುವವರ ಜೊತೆ ರೂಪಿಕಾ ಅವರದ್ದು ಅರೇಂಜ್ಡ್​​ ಮ್ಯಾರೇಜ್​. ಪತಿ ಅಂಕಿತ್​ ಕೆನಡಾದಲ್ಲಿ ಇನ್ವೆಸ್ಟ್‌ ಕೋ ಅಂತ ಫೈನಾನ್ಸ್‌ ಕಂಪನಿಯಲ್ಲಿ, ಟ್ಯಾಕ್ಸ್‌ ಸ್ಪೆಷಲಿಸ್ಟ್‌ ಆಗಿ ವರ್ಕ್‌ ಆಗಿದ್ದಾರೆ. ಮದುವೆಯ ನಂತರ ಕೆನಡಾಗೆ ಹೋಗಿ ಸೆಟಲ್​ ಆಗುವ ಪ್ಲ್ಯಾನ್​ ಕೂಡ ಇರುವ ಹಿನ್ನೆಲೆಯಲ್ಲಿ, ಅವರು ಧಾರಾವಾಹಿಯನ್ನು ತೊರೆದಿದ್ದಾರೆ.

Related Articles

Related image1
Amruthadhaare: ಶಕುಂತಲಾಗೂ ತಿಳಿದೋಯ್ತು ರಹಸ್ಯ! ದೇವರ ಹೂವಿನ ಅಪಶಕುನ ನಿಜ ಆಗೋಯ್ತು
Related image2
Bigg Bossಗೆ ಅವಕಾಶ ಸಿಗದಿದ್ರೂ ಸಿಕ್ಕಿತು 5 ಲಕ್ಷ ಬಹುಮಾನದ ಜೊತೆ ಭರ್ಜರಿ ಜಾಬ್ ಆಫರ್​- ಕುಮಾರಿಗೆ ಒಲಿದ ಅದೃಷ್ಟ​
37
ತಾರಾ ಬಳಗದಿಂದ ಶುಭಾಶಯ
Image Credit : digital_cinenews and Social Media

ತಾರಾ ಬಳಗದಿಂದ ಶುಭಾಶಯ

ಅವರ ಮದುವೆಗೆ ವಿವಿಧ ನಟ-ನಟಿಯರು ಬಂದು ಶುಭ ಹಾರೈಸಿದ್ದಾರೆ. ಅವರಲ್ಲಿ ಹೆಚ್ಚಿನವರು ಸೀರಿಯಲ್​ ತಾರೆಯರು. ಇವರ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಮದುವೆಯ ದಿನ ಪತಿಯ ಜೊತೆ ಡಾನ್ಸ್​ ಮಾಡುತ್ತಾ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ ರೂಪಿಕಾ. ಬಳಿಕವೂ ರಿಸೆಪ್ಷನ್​ನಲ್ಲಿ ಡಾನ್ಸ್​ ಮಾಡುವ ಮೂಲಕ ಎಲ್ಲರನ್ನೂ ನಕ್ಕು ನಗಿಸಿದರು.

47
ನಟಿಯ ಕಣ್ಣೀರು
Image Credit : digital_cinenews and Social Media

ನಟಿಯ ಕಣ್ಣೀರು

ಮದುವೆ ಸಂದರ್ಭದಲ್ಲಿ ತವರು ಮನೆ ಬಿಟ್ಟು ಹೊರಡುವಾಗ ಬಹುತೇಕ ಹೆಣ್ಣುಮಕ್ಕಳು ಕಣ್ಣೀರಾಗುವುದು ಇದೆ. ಅದೇ ರೀತಿ ರೂಪಿಕಾ ಕೂಡ ಕಣ್ಣೀರು ಹರಿಸಿದ್ದರು. ಇದರಿಂದ ಅವರ ಅಣ್ಣನೂ ಅತ್ತಿದ್ದು, ಒಂದು ಹಂತದಲ್ಲಿ ಮಂಟಪದಲ್ಲಿ ಇದ್ದ ಎಲ್ಲರ ಕಣ್ಣುಗಳೂ ತೇವಗೊಂಡಿದ್ದವು.

57
ರೂಪಿಕಾ ಕುರಿತು
Image Credit : digital_cinenews and Social Media

ರೂಪಿಕಾ ಕುರಿತು

ಇನ್ನು ನಟಿ ರೂಪಿಕಾ ಕುರಿತು ಹೇಳುವುದಾದರೆ, ಕನ್ನಡದಲ್ಲಿ ಬಾಲ ನಟಿಯಾಗಿ ನಟನೆ ಆರಂಭಿಸಿದ ರೂಪಿಕಾ ಬಳಿಕ ಚೆಲುವಿನ ಚಿಲಿಪಿಲಿ, ಕಾಲ್ಗೆಜ್ಜೆ, ರುದ್ರಾಕ್ಷಿಪುರ, ಮಜ್ಜಿಗೆ ಹುಳಿ ಸಿನಿಮಾದಲ್ಲಿ ನಟಿಸಿದ್ದರು. ಕೆಲ ವರ್ಷಗಳ ಹಿಂದೆ ದೊರೆ ಸಾನಿ ಎನ್ನುವ ಸೀರಿಯಲ್ ನಲ್ಲಿ ನಾಯಕಿಯಾಗಿ ಸಹ ರೂಪಿಕಾ ನಟಿಸಿದ್ದರು.

67
ಭರತನಾಟ್ಯ ಕಲಾವಿದೆ
Image Credit : digital_cinenews and Social Media

ಭರತನಾಟ್ಯ ಕಲಾವಿದೆ

ನಟಿ ರೂಪಿಕಾ ಭರತನಾಟ್ಯ ಕಲಾವಿದೆ. ಇದಾಗಲೇ ಹಲವಾರು ಪ್ರಶಸ್ತಿಗಳು ಬಂದಿವೆ. ಅವರು ಸದ್ಯ ಬೆಂಗಳೂರಿನಲ್ಲಿ ತಮ್ಮದೇ ಆದ ಡ್ಯಾನ್ಸ್ ಸ್ಟುಡಿಯೋವನ್ನೂ ನಡೆಸುತ್ತಿದ್ದಾರೆ. ಮದುವೆಯಾದಮೇಲೆ ಕೆನಡಾದಲ್ಲಿಯೂ ಇದನ್ನು ಮುಂದುವರೆಸುವ ಯೋಚನೆ ಇರುವುದಾಗಿ ನಟಿ ಹೇಳಿದ್ದಾರೆ.

77
ನಾಟಕ ರಂಗದಲ್ಲಿಯೂ ಸಕ್ರಿಯ
Image Credit : digital_cinenews and Social Media

ನಾಟಕ ರಂಗದಲ್ಲಿಯೂ ಸಕ್ರಿಯ

ಸಿನಿಮಾ ಮತ್ತು ಕಿರುತೆರೆ ಮಾತ್ರವಲ್ಲದೆ ರೂಪಿಕಾ ನಾಟಕ ರಂಗದಲ್ಲಿಯೂ ಸಕ್ರಿಯರಾಗಿದ್ದಾರೆ. ಬೆನಕ, ಸೂರ್ಯ ಹಾಗೂ ಪ್ರಭಾತ್ ನಾಟಕ ತಂಡಗಳೊಂದಿಗೆ ಕೆಲಸ ಮಾಡಿರುವ ಅವರು, ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಲಕ್ಷ್ಮೀ ನಿವಾಸ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
"ಮಗು ಹೊಟ್ಟೆಯಲ್ಲಿದ್ದಾಗಲೇ ಕೈಕೊಟ್ಟಿದ್ದ!" - ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್‌ನ ಅಸಲಿ ಮುಖವಾಡ ಕಳಚಿದ ಮಾಜಿ ಹೆಂಡತಿ!
Recommended image2
65 ಸಾವಿರ ಸಂಬಳ ಬಂದ್ರೂ ನಿವೃತ್ತ ತಂದೆಗೆ ಹಣ ನೀಡಲು ಯುವತಿ ನಿರಾಕರಣೆ ! ಕಾರಣ ಇದು
Recommended image3
ಇದ್ದಕ್ಕಿದ್ದಂತೆ ಯಶ್‌ಗೆ ಪತ್ರ ಬರೆದ ಸುಮಲತಾ ಅಂಬರೀಷ್.. 'ಟಾಕ್ಸಿಕ್' ಬಗ್ಗೆ ಹೀಗ್ಯಾಕೆ ಅಂದ್ರು?
Related Stories
Recommended image1
Amruthadhaare: ಶಕುಂತಲಾಗೂ ತಿಳಿದೋಯ್ತು ರಹಸ್ಯ! ದೇವರ ಹೂವಿನ ಅಪಶಕುನ ನಿಜ ಆಗೋಯ್ತು
Recommended image2
Bigg Bossಗೆ ಅವಕಾಶ ಸಿಗದಿದ್ರೂ ಸಿಕ್ಕಿತು 5 ಲಕ್ಷ ಬಹುಮಾನದ ಜೊತೆ ಭರ್ಜರಿ ಜಾಬ್ ಆಫರ್​- ಕುಮಾರಿಗೆ ಒಲಿದ ಅದೃಷ್ಟ​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved