Dream Cheating : ಕೆಲವೊಮ್ಮೆ ನಾವು ವರ್ಷಗಳಲ್ಲಿ ಯೋಚಿಸದೇ ಇರುವ ವಿಷಯಗಳನ್ನು ನಮ್ಮ ಕನಸಿನಲ್ಲಿ ನೋಡುತ್ತೇವೆ. ಯಾರಿಗೂ ಕನಸುಗಳ ಮೇಲೆ ನಿಯಂತ್ರಣವಿರುವುದಿಲ್ಲ. ಹಾಗಂತ ಕನಸಿನಲ್ಲಿ ಯಾವುದೋ ಹುಡುಗಿ ಜೊತೆ ಇದ್ದ ಮಾತ್ರಕ್ಕೆ ಅದು, ಪತ್ನಿಗೆ ಮಾಡುವ ಮೋಸ ಆಗುತ್ತಾ?
ಪತಿಯ ಕನಸಿನಲ್ಲಿ ಬಂದ ಮತ್ತೊಬ್ಬ ಮಹಿಳೆ.. ಪತ್ನಿ ಹೇಳಿದ್ದೇನು?
ನಿಮ್ಮ ಸಂಗಾತಿ ನಿಮ್ಮ ಕನಸಿನ ಬಗ್ಗೆ ಎಂದಾದರೂ ನಿಮ್ಮ ಮೇಲೆ ಕೋಪಗೊಂಡಿದ್ದಾರೆಯೇ? ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ಒಬ್ಬ ಮಹಿಳೆ ಅಳುತ್ತಿರುವುದನ್ನು ಕಾಣಬಹುದು. ಆಕೆಯ ಪತಿ ತನ್ನ ಕನಸಿನಲ್ಲಿ ಆಕಸ್ಮಿಕವಾಗಿ ಸ್ಕೂಲ್ ಫ್ರೆಂಡನ್ನು ನೋಡಿದ್ದರಂತೆ, ಆ ಕನಸನ್ನು ಪತ್ನಿಗೆ ಹೇಳಿದ ಕಾರಣ ಆಕೆ ಅಳುತ್ತಿದ್ದಾಳೆ ಎಂದು ಹೇಳುತ್ತಾ, ಗಂಡ ವಿಡಿಯೋ ಮಾಡಿ, ಶೇರ್ ಮಾಡಿದ್ದಾರೆ. ಗಂಡನಿಗೆ ಅದು ಕೇವಲ ಕನಸು ಮಾತ್ರ ಆಗಿದ್ದು, ಆದರೆ ಹೆಂಡತಿ ಮಾತ್ರ ಈ ಕನಸಿನ ಬಗ್ಗೆ ಭಾವುಕರಾಗಿದ್ದರು.
ತನ್ನ ಪತಿ "ಡ್ರೀಮ್ ಚೀಟಿಂಗ್" ಮಾಡಿದ್ದಾನೆ. ಒಬ್ಬ ವ್ಯಕ್ತಿಯು ಅವರು ಹೆಚ್ಚು ಯೋಚಿಸುವ ಜನರು ಮತ್ತು ವಿಷಯಗಳ ಬಗ್ಗೆ ಕನಸು ಕಾಣುತ್ತಾನೆ ಎಂದು ಪತ್ನಿ ದೂರಿದ್ದಾಳೆ. ಇನ್ನೊಬ್ಬ ಮಹಿಳೆಯ ಬಗ್ಗೆ ಕನಸು ಕಾಣುವುದು ದೊಡ್ಡ ವಿಷಯವಲ್ಲ, ಆದರೆ ಕನಸಿನಲ್ಲಿ, ಆಕೆಯಿಂದ ದೂರ ಹೋಗಬಹುದಿತ್ತು, ಆದರೆ ಹಾಗೇ ಮಾಡಲಿಲ್ಲ. ಹಾಗಾಗಿ ಗಂಡ ನನಗೆ ಮೋಸ ಮಾಡಿದ್ದಾನೆ ಎಂದು ಹೇಳುಕೊಂಡು ಮಹಿಳೆ ಅತ್ತಿದ್ದಾರೆ. ಹಾಗಿದ್ರೆ ಒಬ್ಬ ಪುರುಷ ತನ್ನ ಕನಸನ್ನು ತನ್ನ ಸಂಗಾತಿ ಜೊತೆ ಹಂಚಿಕೊಳ್ಳುವುದೇ ತಪ್ಪ? ಅಥವಾ ಹಂಚಿಕೊಳ್ಳಬಾರದೇ ಎಂಬ ಬಗ್ಗೆ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಭುಗಿಲೆದ್ದಿದೆ.
ಡ್ರೀಮ್ ಚೀಟಿಂಗ್ ಎಂದರೇನು?
ಡ್ರೀಮ್ ಚೀಟಿಂಗ್ ಎಂದರೆ ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಸಂಗಾತಿಯಲ್ಲದ ಬೇರೆಯವರೊಂದಿಗೆ ರೊಮ್ಯಾಂಟಿಕ್ ಸಂಬಂಧದಲ್ಲಿರುವುದನ್ನು ಅಥವಾ ತನ್ನ ಸಂಗಾತಿಯಲ್ಲದ ಬೇರೆಯವರೊಂದಿಗೆ ಜೊತೆಯಾಗಿ ಇರುವುದೇ ಡ್ರೀಮ್ ಚೀಟಿಂಗ್.
ಕನಸಿನಲ್ಲಿ ಕಂಡದ್ದೆಲ್ಲಾ ನಿಜವೇ?
ನಿದ್ರೆಯ ಸಮಯದಲ್ಲಿ, ನಮ್ಮ ಮೆದುಳು ವರ್ಷಗಳ ಹಿಂದಿನ ನೆನಪುಗಳು, ಭಾವನೆಗಳು ಮತ್ತು ಇತರ ಹಲವಾರು ಮಾಹಿತಿಯನ್ನು ನೆನಪಿಸುತ್ತದೆ. ಕನಸುಗಳು ನಾವು ಬಹಳ ಸಮಯದಿಂದ ಯೋಚಿಸದ ಜನರನ್ನು ಸಹ ಒಳಗೊಂಡಿರಬಹುದು. ಆದ್ದರಿಂದ, ಹಳೆಯ ಫ್ರೆಂಡ್ ಬಗ್ಗೆ ಕನಸು ಕಾಣುವುದರಿಂದ ಒಬ್ಬ ವ್ಯಕ್ತಿಯು ಅವರ ಬಗ್ಗೆ ರೊಮ್ಯಾಂಟಿಕ್ ಆಗಿ ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ.
ಮಹಿಳೆಯ ಭಾವನೆಗಳು ತಪ್ಪೇ?
ಕನಸು ನಿಜವಾದ ಘಟನೆ ಅಲ್ಲ, ಅದು ಬರೀ ಕನಸು ಅಷ್ಟೇ, ಆದರೆ ಅದು ಹುಟ್ಟಿಸಿದ ಭಾವನೆಗಳು ನಿಜ ಆಗಿರಬಹುದು. ಒಬ್ಬ ವ್ಯಕ್ತಿಯು ತನ್ನ ಸಂಗಾತಿಯ ಕನಸಿನ ಬಗ್ಗೆ ಅಸೂಯೆ, ಭಯ ಅಥವಾ ಅಸುರಕ್ಷಿತ ಭಾವನೆಯನ್ನು ಹೊಂದಿದ್ದರೆ, ಅದನ್ನು ನಿರ್ಲಕ್ಷಿಸುವ ಬದಲು, ಅದರ ಬಗ್ಗೆ ಶಾಂತವಾಗಿ ಚರ್ಚಿಸಬಹುದು. ಆದರೂ ಮಹಿಳೆಯರು ತಮ್ಮ ಸಂಗಾತಿಯ ಉದ್ದೇಶಗಳನ್ನು ಅನುಮಾನಿಸುವುದು ಅಥವಾ ಕೇವಲ ಕನಸಿನ ಆಧಾರದ ಮೇಲೆ ಅದನ್ನು ದಾಂಪತ್ಯ ದ್ರೋಹದ ಎಂದು ಪರಿಗಣಿಸುವುದು ಸರಿಯಲ್ಲ. ಸಂಬಂಧದಲ್ಲಿ ಈಗಾಗಲೇ ಅಭದ್ರತೆಗೆ ಕಾರಣವಾಗುವ ಏನಾದರೂ ಇದ್ದರೆ, ನಿಜವಾದ ಸಮಸ್ಯೆಯನ್ನು ಚರ್ಚಿಸುವುದು ಹೆಚ್ಚು ಮುಖ್ಯ.


