ಚಾಣಕ್ಯ ನೀತಿ ಪ್ರಕಾರ ಹುಡುಗಿಯರು ಇಷ್ಟಪಡೋದು ಇಂಥ ಹುಡುಗರನ್ನೇ! ನಿಮ್ಮಲ್ಲಿವೆಯಾ ಈ ಗುಣ?
ಚಾಣಕ್ಯ ನೀತಿಯ ಪ್ರಕಾರ ಹುಡುಗಿಯರು ಕೇವಲ ಸೌಂದರ್ಯಕ್ಕೆ ಮಾರುಹೋಗುವುದಿಲ್ಲ. ಹುಡುಗಿಯರು ಹುಡುಗರಲ್ಲಿ ಕೆಲವು ವಿಶೇಷ ಗುಣಗಳನ್ನು ಹುಡುಕುತ್ತಾರೆ. ಆ ವಿಶೇಷ ಗುಣಗಳು ಏನು ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಚಾಣಕ್ಯ ನೀತಿಯ ರಿಲೇಶನ್‌ಶಿಪ್ ಟಿಪ್ಸ್
ಹುಡುಗರು ಹುಡುಗಿಯರ ಮನಸ್ಸು ಗೆಲ್ಲಲು ಏನೇನೋ ಸರ್ಕಸ್ ಮಾಡುತ್ತಾರೆ. ಆದರೆ ಹುಡುಗಿಯರು ಕೇವಲ ಸೌಂದರ್ಯಕ್ಕೆ ಮಾತ್ರ ಮಣೆ ಹಾಕುವುದಿಲ್ಲ. ಚಾಣಕ್ಯ ನೀತಿಯ ಪ್ರಕಾರ ಹುಡುಗಿಯರು ಹುಡುಗರಲ್ಲಿ ಕೆಲವು ವಿಶೇಷ ಗುಣಗಳನ್ನು ಹುಡುಕುತ್ತಾರೆ. ಹುಡುಗಿಯರನ್ನು ಆಕರ್ಷಿಸುವ ಆ ಗುಣಗಳು ಯಾವುವು ಮತ್ತು ಅವರು ಎಂಥ ಹುಡುಗರನ್ನು ಇಷ್ಟಪಡುತ್ತಾರೆ ಅಂತ ಇಲ್ಲಿ ನೋಡೋಣ.
ಗೌರವಿಸುವ ಹುಡುಗರು, ಸ್ವಾಭಿಮಾನಕ್ಕೆ ಆದ್ಯತೆ
ಆಚಾರ್ಯ ಚಾಣಕ್ಯರ ಪ್ರಕಾರ, ಹುಡುಗಿಯರು ಕೇವಲ ಹುಡುಗರ ರೂಪ ನೋಡಿ ಆಕರ್ಷಿತರಾಗುವುದಿಲ್ಲ. ತಮಗೆ ಗೌರವ ಕೊಡುವ ಮತ್ತು ತಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಹುಡುಗರನ್ನು ಅವರು ಹೆಚ್ಚು ಇಷ್ಟಪಡುತ್ತಾರೆ. ಪ್ರಾಮಾಣಿಕವಾಗಿರುವುದು ಮತ್ತು ನಂಬಿಕೆಯಿಂದ ನಡೆದುಕೊಳ್ಳುವುದು ಅವರಿಗೆ ಬಹಳ ಮುಖ್ಯ.
ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರದೆ, ಇತರರ ಮುಂದೆ ತಮ್ಮನ್ನು ಗೌರವಿಸುವ ಹುಡುಗರೆಂದರೆ ಹುಡುಗಿಯರಿಗೆ ಪಂಚಪ್ರಾಣ. ಇಂಥ ಗುಣಗಳಿರುವ ಹುಡುಗರ ಜೊತೆ ಜೀವನಪೂರ್ತಿ ನೆಮ್ಮದಿಯಾಗಿರಬಹುದು ಎಂದು ಅವರು ನಂಬುತ್ತಾರೆ. ಅದಕ್ಕಾಗಿಯೇ ಇಂಥ ಹುಡುಗರು ಯಾವುದೇ ಪ್ರಯತ್ನವಿಲ್ಲದೆ ಹುಡುಗಿಯರ ಗಮನ ಸೆಳೆಯುತ್ತಾರೆ.
ನೇರವಾಗಿ ಮಾತನಾಡುವ ಹುಡುಗರು
ಇದ್ದದ್ದನ್ನು ಇದ್ದ ಹಾಗೆ ನೇರವಾಗಿ ಮಾತನಾಡುವ ಹುಡುಗರನ್ನು ಕೂಡ ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ ಎಂದು ಚಾಣಕ್ಯ ನೀತಿ ಹೇಳುತ್ತದೆ. ಎದುರಿನವರನ್ನು ಮೆಚ್ಚಿಸಲು ಸುಳ್ಳು ಹೇಳದೆ, ಮನಸ್ಸಿನಲ್ಲಿರುವುದನ್ನು ಪ್ರಾಮಾಣಿಕವಾಗಿ ಹೇಳುವ ವ್ಯಕ್ತಿತ್ವ ಹುಡುಗಿಯರಿಗೆ ಇಷ್ಟವಾಗುತ್ತದೆ.
ಭಾವನೆಗಳನ್ನು ಗೌರವಿಸುವ ಹುಡುಗರು
ನೇರ ನುಡಿಯ ಹೆಸರಿನಲ್ಲಿ ಕಠಿಣವಾಗಿ ಮಾತನಾಡದೆ, ಸೂಕ್ಷ್ಮವಾಗಿ ವಿಷಯ ಮುಟ್ಟಿಸುವ ಹುಡುಗರ ಜೊತೆ ಹುಡುಗಿಯರು ಬೇಗ ಕನೆಕ್ಟ್ ಆಗುತ್ತಾರೆ. ಇಂಥವರ ಮೇಲೆ ನಂಬಿಕೆ ಹುಟ್ಟುವುದಲ್ಲದೆ, ಜೀವನದ ಯಾವುದೇ ವಿಷಯವನ್ನಾದರೂ ಮುಕ್ತವಾಗಿ ಹಂಚಿಕೊಳ್ಳಬಹುದು ಎಂಬ ಭಾವನೆ ಅವರಲ್ಲಿ ಮೂಡುತ್ತದೆ. ಪ್ರಾಮಾಣಿಕತೆ ಮತ್ತು ಇತರರ ಭಾವನೆಗಳನ್ನು ಗೌರವಿಸುವ ಹುಡುಗರ ಬಗ್ಗೆ ಹುಡುಗಿಯರು ವಿಶೇಷ ಆಸಕ್ತಿ ತೋರುತ್ತಾರೆ ಎಂದು ಚಾಣಕ್ಯರ ಬೋಧನೆಗಳು ತಿಳಿಸುತ್ತವೆ.
ಕೋಪ ಕಂಟ್ರೋಲ್ ಮಾಡುವ ಹುಡುಗರು
ಚಾಣಕ್ಯರ ಪ್ರಕಾರ, ತಮ್ಮ ಕೋಪವನ್ನು ಕಂಟ್ರೋಲ್ ಮಾಡುವ ಹುಡುಗರನ್ನು ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ. ಅತಿಯಾಗಿ ಕೋಪಗೊಳ್ಳುವುದು ಮತ್ತು ಸಣ್ಣಪುಟ್ಟ ವಿಚಾರಗಳಿಗೂ ರೇಗಾಡುವುದು ಹುಡುಗಿಯರಿಗೆ ಇಷ್ಟವಾಗುವುದಿಲ್ಲ. ಎಷ್ಟೇ ಕಷ್ಟ ಬಂದರೂ ತಾಳ್ಮೆಯಿಂದ ಸಮಸ್ಯೆ ಬಗೆಹರಿಸುವ ಹುಡುಗರನ್ನೇ ಅವರು ಇಷ್ಟಪಡುತ್ತಾರೆ. ಹುಡುಗಿಯರ ಕಷ್ಟವನ್ನು ಕಿರಿಕಿರಿ ಮಾಡಿಕೊಳ್ಳದೆ ಕೇಳುವ ಮತ್ತು ಮನಸ್ಸಿನ ಮಾತನ್ನು ಮೊದಲೇ ಅರ್ಥಮಾಡಿಕೊಳ್ಳುವ ಹುಡುಗರತ್ತ ಹುಡುಗಿಯರು ಬೇಗ ಆಕರ್ಷಿತರಾಗುತ್ತಾರೆ ಎಂದು ಚಾಣಕ್ಯ ನೀತಿ ಹೇಳುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

