ಚಿನ್ನ, ಬೆಳ್ಳಿ, ಲೆದರ್, ಕೇಸರಿ ರಿಯಲ್ಲಾ, ಫೇಕಾ? ಮನೆಯಲ್ಲಿಯೇ ತಿಳಿದುಕೊಳ್ಳುವ ಸುಲಭದ ವಿಧಾನ ಇಲ್ಲಿದೆ
ಇಂದಿನ ನಕಲಿ ಜಗತ್ತಿನಲ್ಲಿ ಅಸಲಿ ವಸ್ತುಗಳನ್ನು ಗುರುತಿಸುವುದು ಕಷ್ಟ. ಈ ಲೇಖನದಲ್ಲಿ, ಚಿನ್ನ, ಬೆಳ್ಳಿ, ಕೇಸರಿ, ಪನೀರ್ ಮತ್ತು ಚರ್ಮದಂತಹ ವಸ್ತುಗಳ ಶುದ್ಧತೆಯನ್ನು ಮನೆಯಲ್ಲಿಯೇ ಸುಲಭವಾಗಿ ಪರೀಕ್ಷಿಸುವ ಸರಳ ವಿಧಾನಗಳನ್ನು ವಿವರಿಸಲಾಗಿದೆ.

ಫೇಕ್ ಹಾವಳಿ
ಈಗ ಎಲ್ಲೆಲ್ಲೂ ನಕಲಿಯ ಹಾವಳಿ. ಅದರಲ್ಲಿಯೂ ಬಹುಬೆಲೆ ಬಾಳುವ ಚಿನ್ನ, ಬೆಳ್ಳಿಯಷ್ಟೇ ಅಲ್ಲ, ಇದರಷ್ಟೇ ಬೆಲೆ ಬಾಳುವ ಅಸಲಿ ಕೇಸರಿ ಸಿಗುವುದು ಕೂಡ ಅಷ್ಟೇ ಕಷ್ಟವಾಗಿದೆ. ಏಕೆಂದರೆ, ಬೆಲೆ ಹೆಚ್ಚಾದಂತೆ ಅದರ ನಕಲಿ ಮಾರಾಟ ಹೆಚ್ಚಾಗುತ್ತಲೇ ಇದೆ. ಈ ನಕಲಿ ಅಸಲಿಗಿಂತಲೂ ಸುಂದರವಾಗಿ ಕಾಣುವ ಹಿನ್ನೆಲೆಯಲ್ಲಿ, ನಕಲಿಯೋ, ಅಸಲಿಯೋ ತಿಳಿಯದೇ ಪರದಾಡುವ ಸ್ಥಿತಿಯೂ ಇರುತ್ತದೆ. ಹಾಗಿದ್ದರೆ, ಅಸಲಿ, ನಕಲಿಗಳನ್ನು ಸುಲಭದಲ್ಲಿ ಪತ್ತೆ ಮಾಡುವ ವಿಧಾನವನ್ನು ಇಲ್ಲಿ ಹೇಳಲಾಗಿದೆ.
ಬೆಳ್ಳಿ ಶುದ್ಧತೆಗೆ ಐಸ್ ಟಿಪ್ಸ್
ಬೆಳ್ಳಿಯ ಮೇಲೆ ಒಂದು ಐಸ್ ಪೀಸ್ ಇಟ್ಟುನೋಡಿ. ಅದು ಕೂಡಲೇ ಕರಗಿ ಹೋದರೆ, ಬೆಳ್ಳಿ ಶುದ್ಧವಾಗಿದೆ ಎಂದರ್ಥ.
ಚಿನ್ನದ ಅಸಲಿಯತ್ತು ನೋಡುವುದು ಹೇಗೆ?
ಚಿನ್ನದ ಸಮೀಪ ಒಂದು ಮ್ಯಾಗ್ನೆಟ್ ತೆಗೆದುಕೊಂಡು ಹೋಗಿ. ಅದು ಸ್ವಲ್ಪವೂ ಆಕರ್ಷಿತವಾಗಲಿಲ್ಲ ಎಂದರೆ, ಅದು ಶುದ್ಧವಾದ ಚಿನ್ನ, ಇಲ್ಲದೇ ಹೋದರೆ ಅದರಲ್ಲಿ ಏನೋ ಬೇರೆ ಲೋಹ ಮಿಕ್ಸ್ ಆಗಿದೆ ಎಂದರ್ಥ.
ಕೇಸರಿಯ ಬಣ್ಣ ನೋಡುವುದು ಹೇಗೆ?
ಕೇಸರಿಯು ಅಸಲಿಯೋ ನಕಲಿಯೋ ನೋಡಲು, ಉಗುರು ಬೆಚ್ಚಗಿನ ನೀರಿನಲ್ಲಿ ಅದರ ಎಸಳು ಹಾಕಿ. ಬಣ್ಣ ಬಿಡುತ್ತಾ ತಿಳಿ ಹಳದಿ ಕಲರ್ ಬಂದರೆ ಅದು ಅಸಲಿ. ಇಲ್ಲದಿದ್ದರೆ ನಕಲಿ
ಪನೀರ್ ಕರಾಮತ್ತು!
ಪನೀರ್ ನಕಲಿಯೋ, ಅಸಲಿಯೋ ನೋಡಲು ಅದರ ಮೇಲೆ ಉಪ್ಪು ನೀರನ್ನು ಹಾಕಿ. ಅದರ ಬಣ್ಣ ಹಾಗೆಯೇ ಇದ್ದರೆ ಅಸಲಿ, ನೀಲಿ ಅಥವಾ ಕಪ್ಪಾದರೆ ಅದು ನಕಲಿ
ಚರ್ಮದ ವಸ್ತುವಿನ ಅಸಲಿಯತ್ತು
ಲೆದರ್ ಬ್ಯಾಗ್, ಶೂಸ್, ಪರ್ಸ್ ಏನೇ ತೆಗೆದುಕೊಂಡರೂ, ಅದು ಅಸಲಿಯೋ, ನಕಲಿಯೋ ನೋಡಬಹುದು. ಅದರ ಮೇಲೆ ನಾಲ್ಕೈದು ಹನಿ ನೀರು ಹಾಕಿ. ಶೀಘ್ರದಲ್ಲಿ ನೀರನ್ನು ಅದು ಹೀರಿಕೊಂಡರೆ, ಅದು ಅಸಲಿ; ಇಲ್ಲದಿದ್ದರೆ ನಕಲಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

