MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Open 2026
Today's Horoscope in Kannada
Bengaluru Rains
Cricketer Rohit Sharma
BDA Building Redevelopment
Koppal Farmers
Karnataka KPS Schools
Vande Mataram Row
Banashankari Bus Terminal
Mangaluru Airport Land Donation
  • Home
  • Life
  • ಬಾತ್‌ರೂಮ್ ಬ್ಯಾಡ್ ಸ್ಮೆಲ್‌ಗೆ ಸಿಂಪಲ್ ಸೊಲ್ಯೂಷನ್: ಮನೆಯಲ್ಲಿನ ಈ ಪದಾರ್ಥ ಮಾಡುತ್ತೆ ಪವಾಡ!!

ಬಾತ್‌ರೂಮ್ ಬ್ಯಾಡ್ ಸ್ಮೆಲ್‌ಗೆ ಸಿಂಪಲ್ ಸೊಲ್ಯೂಷನ್: ಮನೆಯಲ್ಲಿನ ಈ ಪದಾರ್ಥ ಮಾಡುತ್ತೆ ಪವಾಡ!!

How to get rid of bathroom smell with a simple baking soda trick: ಮನೆಗೆ ಬಂದ ಅತಿಥಿಗಳು ಮೂಗು ಮುಚ್ಚಿ ಬಾತ್‌ರೂಂಗೆ ಹೋಗುವಂತಾದ್ರೆ ಅದೆಷ್ಟು ಮುಜುಗರ ಆಗುತ್ತೆ ಅಲ್ವ? ನಿಮ್ಮ ಮನೆ ಬಾತ್ ರೂಮ್‌ನಲ್ಲೂ ಕೆಟ್ಟ ವಾಸನೆ ಬರುತ್ತಿದ್ರೆ ಇಲ್ಲಿದೆ ಸಿಂಪಲ್ ಪರಿಹಾರ ಓದಿ.

3 Min read
Author : Ravi Janekal
Published : Sep 16 2026, 01:19 PM IST
Share this Photo Gallery
  • FB
  • TW
  • Linkdin
  • Whatsapp
15
ಬಾತ್ ರೂಮ್‌ನಿಂದ ಕೆಟ್ಟ ವಾಸನೆಯೇ? ಇಲ್ಲಿದೆ ಸುಲಭ ಪರಿಹಾರ
Image Credit : Gemini

ಬಾತ್ ರೂಮ್‌ನಿಂದ ಕೆಟ್ಟ ವಾಸನೆಯೇ? ಇಲ್ಲಿದೆ ಸುಲಭ ಪರಿಹಾರ

ಅತಿಥಿಗಳು ನಿಮ್ಮ ಮನೆಗೆ ಬಂದಾಗ ಮನೆ ಎಷ್ಟು ದೊಡ್ಡದಿದೆ, ಚಿಕ್ಕದಿದೆ ಮುಖ್ಯ ಆಗಲ್ಲ. ಮನೆಯೊಳಗಿನ ಬಾತ್ ರೂಮ್ ಎಷ್ಟು ನೀಟ್ ಆಗಿದೆ, ಸ್ವಚ್ಛವಾಗಿದೆ ಅನ್ನೋದು ನೋಡ್ತಾರೆ. ನಿಮ್ಮ ಮನೆ ಬಾತ್‌ ರೂಮ್‌ನಲ್ಲಿ ಕೆಟ್ಟ ವಾಸನೆ ಬರುತ್ತಿದ್ದರೆ ಅತಿಥಿಗಳು ಮನೆಗೆ ಬರಲು ಹಿಂದೇಟು ಹಾಕ್ತಾರೆ. ಹಾಗಾಗಿ ಮನೆಯ ಬಾತ್ ರೂಂ ಕೆಟ್ಟ ವಾಸನೆ ಬರದಂತೆ ಕ್ಲೀನ್ ಇಟ್ಟುಕೊಳ್ಳೋದು ಮುಖ್ಯ. ನಿಮ್ಮ ಮನೆ ಬಾತ್ ರೂಮ್ ಸಮಸ್ಯೆ ಇದೇ ಆಗಿದ್ದರೆ ನೀವು ಸರಿಯಾದ ಲೇಖನವ್ನೇ ಓದುತ್ತೀದ್ದೀಿ. ಬಾತ್ ರೂಂ ವಾಸನೆ ಬರಲು ಕಾರಣವೇನು? ಅದನ್ನ ಹೇಗೆ ತೊಡೆದುಹಾಬಹುದು ಅನ್ನೋದು ಈ ಲೇಖನದಲ್ಲಿ ತಿಳಿಸಿದ್ದೇವೆ ಮುಂದೆ ಓದಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬಾತ್ ರೂಮ್ ದುರ್ವಾಸನೆ ತಡೆಯಲು ಇದೊಂದು ಪದಾರ್ಥ ಸಾಕು
Image Credit : Asianet News

ಬಾತ್ ರೂಮ್ ದುರ್ವಾಸನೆ ತಡೆಯಲು ಇದೊಂದು ಪದಾರ್ಥ ಸಾಕು

ಎಷ್ಟೇ ಸಲ ಬಾತ್ ರೂಂ ಕ್ಲೀನ್ ಮಾಡಿದ್ರೂ ಕೆಲವೊಮ್ಮೆ ಕೆಟ್ಟ ವಾಸನೆ ಬರುತ್ತಲೇ ಇರುತ್ತದೆ. ಈ ಸಮಸ್ಯೆಗೆ ಕಾರಣವೇನು? ಪರಿಹಾರ ಏನು ಎಂಬುದೇ ಬಹುತೇಕರಿಗೆ ತಿಳಿದಿರುವುದಿಲ್ಲ. ದುರ್ವಾಸನೆ ಕಾರಣ ತಿಳಿದರೆ ಪರಿಹಾರ ಸುಲಭ. ಇಂತಹ ವಾಸನೆಯನ್ನು ಕಡಿಮೆ ಮಾಡಲು ದುಬಾರಿ ಪ್ರಾಡಕ್ಟ್ ಮೊರೆ ಹೋಗಬೇಕಿಲ್ಲ. ಸಾಮಾನ್ಯವಾಿ ಎಲ್ಲರ ಮನೆಯಲ್ಲೇ ಬಳಸುವ ಒಂದು ಪದಾರ್ಥವನ್ನು ಬಳಸಿಕೊಂಡು ಸುಲಭವಾಗಿ ದುರ್ವಾಸನೆ ಕಡಿಮೆ ಮಾಡಬಹುದು.

ಬೇಕಿಂಗ್‌ ಸೋಡಾ

ಬೇಕಿಂಗ್ ಸೋಡ ಎಲ್ಲರ ಮನೆಯಲ್ಲೂ ಸಿಗುವ ಪದಾರ್ಥ. ಇದು ದುಬಾರಿಯೇನೂ ಅಲ್ಲ. ಈ ಪದಾರ್ಥವನ್ನ ಸಾಮಾನ್ಯವಾಗಿ ಮನೆಯ ಸ್ವಚ್ಛತೆಗೆಂದೇ ಬಳಸಲಾಗುತ್ತೆ. ಬೇಕಿಂಗ್ ಸೋಡಾವನ್ನು ಬಾತ್‌ರೂಮ್‌ನ ದುರ್ವಾಸನೆ ನಿಯಂತ್ರಿಸಲು ಕೂಡ ಬಳಸಬಹುದು. ಮೊದಲಿಗೆ ಬಾತ್‌ರೂಮ್‌ನಲ್ಲಿ ತೇವಾಂಶ ಹೆಚ್ಚಿರುವ, ಒದ್ದೆಯಾದ ಜಾಗಗಳು, ಮೂಲೆಯಲ್ಲಿ ಕುಳಿತ ಕೊಳೆಯಿಂದಲೇ ವಾಸನೆ ಬರುವುದು. ಅದರಲ್ಲೂ ಬಾತ್ ರೂಮ್‌ ಒಳಗೆ ಸಾಕಷ್ಟು ಗಾಳಿ ಬೆಳಕು ಇರಿದ್ದರೆ ಕೆಟ್ಟ ವಾಸನೆ ಇನ್ನಷ್ಟು ಹೆಚ್ಚಿರುತ್ತೆ. ಹೀಗಾಗಿ ಬಾತ್‌ರೂಮ್ ದಿನನಿತ್ಯ ಅಲ್ಲದಿದ್ರೂ ಆಗಾಗ ಸ್ವಚ್ಛಗೊಳಿಸುವುದು ಒಳ್ಳೆಯ ಅಭ್ಯಾಸ. ಸಾಧ್ಯವಾದಷ್ಟು ಬಾತ್‌ ರೂಮ್ ಡ್ರೈ ಆಗಿರುವಂತೆ ನೋಡಿಕೊಳ್ಳಬೇಕು. ದುರ್ವಾಸನೆ ಹೆಚ್ಚಾಗದಂತೆ ತಡೆಯಲು ಇದು ಮೊದಲ ಹೆಜ್ಜೆ.

Related Articles

Related image1
ಬಾತ್‌ರೂಮ್ ಮೀರರ್ ಮುಖ ಕಾಣದಷ್ಟು ಕೊಳೆಯಾಗಿದೆಯಾ? ಕೇವಲ 1 ನಿಮಿಷದಲ್ಲಿ ಹೊಸದರಂತೆ ಪಳಪಳ ಹೊಳೆಯಲು ಈ ಟ್ರಿಕ್ ಸಾಕು!
Related image2
Bathroom Hacks : ಚಿಕ್ಕ ಬಾತ್ ರೂಂ ಚೊಕ್ಕವಾಗಿಡಲು ಸರಳ ಸೂತ್ರ!
35
ಬೇಕಿಂಗ್ ಸೋಡಾದಿಂದ ದುರ್ವಾಸನೆ ಕಡಿಮೆ ಆಗುತ್ತದೆಯೇ?
Image Credit : Asianet News

ಬೇಕಿಂಗ್ ಸೋಡಾದಿಂದ ದುರ್ವಾಸನೆ ಕಡಿಮೆ ಆಗುತ್ತದೆಯೇ?

ಹೌದು. ಮನೆಯಲ್ಲಿನ ಕೆಟ್ಟ ವಾಸನೆಯನ್ನ ಕಡಿಮೆ ಮಾಡಲು ಬೇಕಿಂಗ್ ಸೋಡಾ ಸಾಮಾನ್ಯವಾಗಿ ಬಳಸಲಾಗುತ್ತದೆ. ಇದೇ ಪದಾರ್ಥನ್ನ ಬಳಸಿಕೊಂಡು ಬಾತ್ ರೂಂ ಕೆಟ್ಟ ವಾಸನೆಯನ್ನ ತಡೆಯಲು ಬಳಸಬಹುದು. ಇದು ವಾಸನೆಯನ್ನು ಹೀರಿಕೊಳ್ಳುವ ಗುಣ ಹೊಂದಿರುವುದರಿಂದ ಬಾತ್‌ರೂಮ್‌ನ ದುರ್ವಾಸನೆ ಕಡಿಮೆ ಮಾಡಲು ಇದೇ ಬೆಸ್ಟ್.

ಮೊದಲಿಗೆ ಒಂದು ಡಬ್ಬಿ ತೆಗೆದುಕೊಳ್ಳಿ ಅಥವಾ ಪಾತ್ರೆ. ಅದರಲ್ಲಿ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ ಬಾತ್‌ರೂಂ ನಲ್ಲಿ ಇಡಬಹುದು. ಆದರೆ ಇದು ನೀರಿಗೆ ತಾಗದಂತೆ ನೋಡಿಕೊಳ್ಳಬಬೇಕು. ಇದರೊಂದಿಗೆ ಮಕ್ಕಳು, ಸಾಕು ಪ್ರಾಣಿಗಳಿಂದ ಸುಲಭವಾಗಿ ಸಿಗದ ಜಾಗದಲ್ಲಿರಿಸಬೇಕು. ಬೇಕಿಂಗ್ ಸೋಡಾ ತೇವವಾದರೆ ಅದನ್ನು ಬದಲಾಯಿಸಬೇಕು. ಇದು ಆಗಾಗ ಬದಲಾಯಿಸುತ್ತಲೇ ಇರಬೇಕು ದಿನನಿತ್ಯವಲ್ಲ. ಬೇಕಿಂಗ್ ಸೋಡಾ ತೇವಾಂಶವಾದಾಗ ಮಾತ್ರ.

45
ದುರ್ವಾಸನೆ ಬರುವ ಜಾಗದಲ್ಲಿಡಿ
Image Credit : Asianet News

ದುರ್ವಾಸನೆ ಬರುವ ಜಾಗದಲ್ಲಿಡಿ

ದುರ್ವಾಸನೆ ಹೆಚ್ಚಾಗಿ ಬರುವ ಜಾಗಗಳನ್ನು ಸ್ವಚ್ಛಗೊಳಿಸುವಾಗಲೂ ಬೇಕಿಂಗ್ ಸೋಡಾವನ್ನು ಬಳಸಬಹುದು. ಕೊಳೆಯಾದ ಸ್ಥಳದ ಮೇಲೆ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ, ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಆ ಜಾಗವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಆದರೆ ಸೂಕ್ಷ್ಮ ವಸ್ತುಗಳು, ಕನ್ನಡಿ, ಗಾಜು ಕೊಳೆಯಾದಾಗ ಅದರ ಮೇಲೆ ಬೇಕಿಂಗ್ ಸೋಡಾ ಹಾಕಿ ಸ್ವಚ್ಛಗೊಳಿಸುವಾಗ ಹಾನಿಯಾಗುವಂತಹ ವಸ್ತುಗಳಿದ್ದಲ್ಲಿ ಬೇಕಿಂಗ್ ಸೋಡಾ ಬಳಸುವುದು ತಪ್ಪಿಸಿ.

ಡ್ರೈನ್‌ನಿಂದ ಕೆಟ್ಟ ವಾಸನೆ ನಿರ್ಲಕ್ಷ್ಯ ಬೇಡ

ಸಾಮಾನ್ಯವಾಗಿ ಬಾತ್‌ರೂಮ್‌ ಡ್ರೈನ್‌ನಿಂದ ದುರ್ವಾಸನೆ ಬರೋದು. ನಿಮ್ಮ ಮನೆಯಲ್ಲೂ ಇದೇ ಸಮಸ್ಯೆ ಇದ್ದರೆ ನಾಳೆ ತೊಳೆದರಾಯ್ತು ಎಂದೋ, ಈ ಸಮಸ್ಯೆ ಇರೋದೇ ಅಂತ ನಿರ್ಲಕ್ಷ್ಯ ಮಾಡೋದು ಬೇಡ. ಅದರಲ್ಲೂ ಇಂಥ ಬೇಕಿಂಗ್ ಸೋಡಾದಿಂದ ಸ್ವಚ್ಛವಾಗುವುದು ಇಲ್ಲ. ಆಗ ನೀವು ಮಾಡಬೇಕಾಗಿದ್ದೇನೆಂದರೆ. ಡ್ರೈನ್ ಅದರ ಸುತ್ತಲಿನ ಜಾಗವನ್ನು ಆಗಾಗ ಸ್ವಚ್ಛಗೊಳಿಸಿ. ಕಾಣುವ ಕೊಳೆ ಅಥವಾ ಕಸ ಇದ್ದರೆ ಅದನ್ನು ತೆಗೆದುಹಾಕಿ. ಸ್ವಚ್ಛಗೊಳಿಸಿದ ನಂತರವೂ ಕೆಟ್ಟ ವಾಸನೆ ಮುಂದುವರಿದರೆ ಪೈಪ್‌ಲೈನ್ ಅಥವಾ ಡ್ರೈನೇಜ್‌ನಲ್ಲಿ ಸಮಸ್ಯೆ ಇರುವ ಸಾಧ್ಯತೆ ಇರುತ್ತೆ. ಅಂತಹ ಸಂದರ್ಭದಲ್ಲಿ ಸಮಸ್ಯೆಯ ಮೂಲವನ್ನು ಪರಿಶೀಲಿಸುವುದು ಅಗತ್ಯ.

55
ಬಾತ್‌ರೂಮ್ ಒಣಗಿರಲಿ, ಗಾಳಿ ತಣ್ಣಗಿರಲಿ!
Image Credit : Asianet News

ಬಾತ್‌ರೂಮ್ ಒಣಗಿರಲಿ, ಗಾಳಿ ತಣ್ಣಗಿರಲಿ!

ಕೇವಲ ಬೇಕಿಂಗ್ ಸೋಡಾ ಹಾಕಿದ ಮಾತ್ರಕ್ಕೆ ಬಾತ್‌ ರೂಂ ದುರ್ವಾಸನೆ ಹೋಗುವುದಿಲ್ಲ. ಬಾತ್‌ರೂಮ್‌ನ ಹಸಿಯಾಗಿರದೆ ಯಾವಾಗಲೂ ಒಣಗಿರುವಂತೆ ನೋಡಿಕೊಳ್ಳುಬೇಕು. ಟಾಯ್ಲೆಟ್ ಮತ್ತು ನೆಲ ಸ್ವಚ್ಛಗೊಳಿಸಿ. ಸ್ನಾನ ಮಾಡಿದ ನಂತರ ಗಾಳಿಯಾಡಲು ಸ್ವಲ್ಪ ಹೊತ್ತು ಬಾಗಿಲು ತೆರೆಯಿರಿ. ಯಾವಾಗಲೂ ಮುಚ್ಚಿರುವುದು ಒಳ್ಳೆಯ ಅಭ್ಯಾಸವಲ್ಲ ಇದರೊಂದಿಗೆ ಬಾತರೂಂ ಕಿಟಕಿ ತೆರೆದಿರಬೇಕು. ನಿಮ್ಮ ಮನೆ ಬಾತ್ ರೂಂನಲ್ಲಿ ಎಕ್ಸಾಸ್ಟ್ ಫ್ಯಾನ್ ಬಳಸುವುದರಿಂದ ಬೇಗ ಡ್ರೈ ಆಗುತ್ತದೆ. ಕೆಟ್ಟ ವಾಸನೆಯೂ ಹೊರಹೋಗುತ್ತದೆ.

ಸರಳ ಉಪಾಯ, ಆದರೆ ಇದು ಪರಿಪೂರ್ಣವಲ್ಲ

ಬಾತ್‌ ರೂಮ್‌ನಲ್ಲಿನ ದೈನಂದಿನ ದುರ್ವಾಸನೆ ಕಡಿಮೆ ಮಾಡಲು ಬಾತ್‌ರೂಮ್ ಸ್ವಚ್ಛಗೊಿಸುವ ಭಾಗವಾಗಿ ಬೇಕಿಂಗ್ ಸೋಡಾವನ್ನು ಬಳಸಬಹುದು. ಆದರೆ ತೀರಾ ಕೆಟ್ಟ ವಾಸನೆ ಬರುತ್ತಿದ್ದರೆ ಬೇಕಿಂಗ್ ಸೋಡಾ ಒಂದೇ ಪರಿಹಾರವಾಗದು ಎಂಬುದು ನೆನಪಿಡಬೇಕು. ಇಂತಹ ವಾಸನೆ ಡ್ರೈನೇಜ್, ಪೈಪ್‌ಲೈನ್ ಸಮಸ್ಯೆ ಕಾರಣವಿರಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಮನೆ
ಜೀವನಶೈಲಿ
 

Latest Videos
Recommended Stories
Recommended image1
ಅಮೆರಿಕದಲ್ಲಿ ಮನೆ ಮುಂದೆ ವಿದ್ಯುತ್ ಕಂಬ, ವೈರ್‌ಗಳೇ ಕಾಣಿಸಲ್ಲ! ಏಕೆ ಗೊತ್ತಾ?
Recommended image2
ಕೇವಲ 5 ಗ್ರಾಂನಲ್ಲಿ ಚಿನ್ನದ ಬ್ರೇಸ್‌ಲೆಟ್; ಇಲ್ಲಿದೆ ಸೂಪರ್ ಡಿಸೈನ್ಸ್
Recommended image3
ಅಂಬಾನಿ ಕುಟುಂಬದ ಗಣಪತಿ ವಿಸರ್ಜನೆ : ದೇಶಿ ಲುಕ್ ನಲ್ಲಿ ಮಿಂಚಿದ ಟಿಫನಿ ಟ್ರಂಪ್
Related Stories
Recommended image1
ಬಾತ್‌ರೂಮ್ ಮೀರರ್ ಮುಖ ಕಾಣದಷ್ಟು ಕೊಳೆಯಾಗಿದೆಯಾ? ಕೇವಲ 1 ನಿಮಿಷದಲ್ಲಿ ಹೊಸದರಂತೆ ಪಳಪಳ ಹೊಳೆಯಲು ಈ ಟ್ರಿಕ್ ಸಾಕು!
Recommended image2
Bathroom Hacks : ಚಿಕ್ಕ ಬಾತ್ ರೂಂ ಚೊಕ್ಕವಾಗಿಡಲು ಸರಳ ಸೂತ್ರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved