MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Mirror cleaning Tips: ನಿಮ್ಮ ಮನೆಯ ಬಾತ್‌ರೂಮ್ ಕನ್ನಡಿ ಕೊಳೆಯಾಗಿದೆಯೇ? ಒಂದೇ ನಿಮಿಷ, ಪಳಪಳ ಹೊಳೆಯಲು ಇಷ್ಟು ಮಾಡಿ ಸಾಕು!

Mirror cleaning Tips: ನಿಮ್ಮ ಮನೆಯ ಬಾತ್‌ರೂಮ್ ಕನ್ನಡಿ ಕೊಳೆಯಾಗಿದೆಯೇ? ಒಂದೇ ನಿಮಿಷ, ಪಳಪಳ ಹೊಳೆಯಲು ಇಷ್ಟು ಮಾಡಿ ಸಾಕು!

How to Clean a Mirror Easily at Home ನಿಮ್ಮ ಮನೆಯಲ್ಲಿ ಕನ್ನಡಿಗಳು ಕೊಳೆಯಾಗಿವೆ ಎಷ್ಟು ತೊಳೆದರೆ ಕಲೆಗಳು ಹೋಗುತ್ತಿಲ್ಲವೇ? ಇಲ್ಲಿದೆ ಸುಲಭ ವಿಧಾನ. ಒಂದೇ ನಿಮಿಷ ಸಾಕು ನಿಮ್ಮ ಮನೆಯ ಬಾತ್ ರೂಂ ಪಳಪಳ ಹೊಳೆಯುತ್ತದೆ.

2 Min read
Author : Ravi Janekal
Published : Jul 29 2026, 11:14 AM IST
Share this Photo Gallery
  • FB
  • TW
  • Linkdin
  • Whatsapp
17
ಕನ್ನಡಿಯ ಮೇಲಿನ ಕಲೆ ತೆಗೆಯುವುದೊಂದು ಕಲೆ!
Image Credit : Asianet News

ಕನ್ನಡಿಯ ಮೇಲಿನ ಕಲೆ ತೆಗೆಯುವುದೊಂದು ಕಲೆ!

ಮನೆ ಸುಂದರವಾಗಿ ಮನೆಯೊಳಗಿನ ಕನ್ನಡಿ ಮೇಲೆ ಕಲೆಗಳಿಂದ ಕೊಳೆಯಾಗಿದ್ದರೆ ಏನು ಚೆಂದ? ಬಾತ್ ರೂಂ ಕನ್ನಡಿಗಳ ಮೇಲೆ ನೊರೆ, ಬೆರಳಚ್ಚುಗಳಿಂದ ಇಡೀ ಕನ್ನಡಿಯೇ ಹಾಳಾಗಿರುತ್ತೆ, ಏನೇ ಮಾಡಿದ್ರೂ ಪಳಪಳ ಹೊಳೆಯುವಂತೆ ಮಾಡಲಾಗುವುದಿಲ್ಲ. ಕನ್ನಡಿಯ ಕೆಳಹಂಚಿನಲ್ಲಿ ಕಲೆಗಳು ಗಟ್ಟಿಯಾಗಿ ಹಾಗೆಯೇ ಇರುತ್ತೆ. ಬಟ್ಟೆಯಿಂದ ನೀವು ಎಷ್ಟೇ ಉಜ್ಜಿದರೂ ಮೊದಲಿನಂತೆ ಹೊಸ ಕನ್ನಡಿಯಂತೆ ಹೊಳೆಯುವುದಿಲ್ಲ. ಸ್ವಚ್ಛಗೊಂಡರು ಕನ್ನಡಿಯಲ್ಲಿ ಮುಖ ಬ್ಲರ್ ಕಾಣುತ್ತದೆ. ಹಾಗಾದರೆ ಕನ್ನಡಿ ಮೊದಲಿನಂತಾಗಲು ಏನು ಮಾಡಬೇಕು? ಇಲ್ಲಿ ತಿಳಿಯೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಕನ್ನಡಿ ಕ್ಲೀನ್ ಮಾಡಲು ಉತ್ತಮ ಬಟ್ಟೆ ಯಾವುದು?
Image Credit : Asianet News

ಕನ್ನಡಿ ಕ್ಲೀನ್ ಮಾಡಲು ಉತ್ತಮ ಬಟ್ಟೆ ಯಾವುದು?

ಮಿರರ್ ಕ್ಲೀನ್ ಮಾಡುವಾಗ ಸರಿಯಾದ ಬಟ್ಟೆ ಆರಿಸುವುದು ತುಂಬಾ ಮುಖ್ಯ. ಕೆಲವರು ಕನ್ನಡಿ ಒರೆಸಲು ಹಾಳಾದ ಬಟ್ಟೆ, ಪೇಪರ್ ಬಳಸುತ್ತಾರೆ. ಇದರಿಂದ ಕನ್ನಡಿ ಕ್ಲೀನ್ ಆದಂತೆ ಕಂಡರೂ ಕೆಲ ನಿಮಿಷಗಳಲ್ಲಿ ಮೊದಲಿನ ಸ್ಥಿತಿಗೆ ಬರುತ್ತದೆ. ಕನ್ನಡಿಯಲ್ಲಿ ಮುಖ ಬ್ಲರ್ ಕಾಣುತ್ತದೆ. ಹೀಗಾಗಿ ಕನ್ನಡಿ ಕ್ಲೀನ್ ಮಾಡುವಾಗ ಮೈಕ್ರೋಫೈಬರ್ ಬಟ್ಟೆ ಉತ್ತಮ. ಈ ಬಟ್ಟೆಯಲ್ಲಿ ಕನ್ನಡಿ ಒರೆಸಿದಾಗ ಇದು ಕನ್ನಡಿ ಮೇಲಿನ ದೂಳು, ತೇವಾಂಶವನ್ನ ಹೀರಿಕೊಳ್ಳುತ್ತದೆ. ಮನೆಯಲ್ಲಿ ಮೈಕ್ರೋಫೈಬರ್ ಬಟ್ಟೆ ಇಲ್ಲದಿದ್ರೆ ಸ್ವಚ್ಛವಾದ ಹತ್ತಿ ಬಟ್ಟೆಯನ್ನು ಬಳಸಬಹುದು. ಆದರೆ ಯಾವುದೇ ಕಾರಣಕ್ಕೂ ಟಿಷ್ಯೂ ಪೇಪರ್ ಬಳಸಬೇಡಿ.ಕನ್ನಡ ಸ್ವಚ್ಛಗೊಳಿಸಲು ಒಂದು ಬಟ್ಟೆ, ಬಳಿಕ ಅದನ್ನ ಡ್ರೈ ಮಾಡಲು ಇನ್ನೊಂದು ಬಟ್ಟೆ ಎರಡು ಬಟ್ಟೆಗಳನ್ನ ಬಳಸಿ.

Related Articles

Related image1
ಲಿಫ್ಟ್‌ಗಳಲ್ಲಿ ಕನ್ನಡಿ ಯಾಕಿರುತ್ತೆ ಗೊತ್ತಾ? ಇದರ ಹಿಂದಿರುವ ಅಸಲಿ ರಹಸ್ಯ ಇಲ್ಲಿದೆ
Related image2
Vastu Shastra: ರಾತ್ರಿ ಮಲಗೋ ಮುನ್ನ ಕನ್ನಡಿ ನೋಡ್ತೀರಾ? ಈಗ್ಲೇ ಅಭ್ಯಾಸ ಬಿಟ್ಬಿಡಿ
37
ಅತಿಯಾದ ಕ್ಲೀನಿಂಗ್ ಒಳ್ಳೆಯದಲ್ಲ
Image Credit : Asianet News

ಅತಿಯಾದ ಕ್ಲೀನಿಂಗ್ ಒಳ್ಳೆಯದಲ್ಲ

ಕನ್ನಡಿಯನ್ನ ಪದೇಪದೆ ಕ್ಲೀನರ್ ಬಳಸಿ ಸ್ವಚ್ಚಗೊಳಿಸುವುದು ಬೇಡ. ಹೆಚ್ಚು ಕ್ಲೀನಿಂಗ್ ಲಿಕ್ವಿಡ್ ಹಚ್ಚುವುದರಿಂದ ಕನ್ನಡಿ ಒಣಗಿದ ನಂತರ ಅದರ ಮೇಲೆ ಲಿಕ್ವಿಡ್ ಕಲೆಗಳು ಮೂಡುತ್ತವೆ. ಅದರ ಬದಲು ಕ್ಲೀನರ್ ಸ್ಪ್ರೇ ಉತ್ತಮ. ಕನ್ನಡಿಗೆ ನೇರವಾಗಿ ಸಿಂಪಡಿಸುವ ಬದಲು ಬಟ್ಟೆ ಹಾಕಿಕೊಂಡು ಕ್ಲೀನ್ ಮಾಡಬಹುದು.

47
ವಿನೆಗರ್, ನೀರಿನಿಂದ ಕ್ಲೀನರ್ ಮಾಡಿ
Image Credit : Asianet News

ವಿನೆಗರ್, ನೀರಿನಿಂದ ಕ್ಲೀನರ್ ಮಾಡಿ

ಕನ್ನಡಿಯನ್ನು ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆ ಲಿಕ್ವಿಡ್ ಬದಲು ಮನೆಯಲ್ಲಿಯೇ ಸರಳವಾದ ಶುಚಿಗೊಳಿಸುವ ದ್ರಾವಣ ತಯಾರಿಸಬಹುದು. ಸ್ವಲ್ಪ ಪ್ರಮಾಣದ ಬಿಳಿ ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ. ವಿನೆಗರ್ ಕನ್ನಡಿಗಳಿಂದ ಗ್ರೀಸ್ ಮತ್ತು ಬೆರಳಚ್ಚುಗಳನ್ನು ತೆಗೆದುಹಾಕಲು ಉತ್ತಮ. ತಯಾರಿಸಿದ ಲಿಕ್ವಿಡ್ ಅನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿಟ್ಟುಕೊಂಡರೆ ಬೇಕಾದಾಗ ಕನ್ನಡಿಯ ಮೇಲೆ ಲೈಟಾಗಿ ಸ್ಪ್ರೇ ಮಾಡಿ ತಕ್ಷಣ ಅದನ್ನು ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿದರೆ ಸಾಕು..

57
ವೃತ್ತಾಕಾರವಾಗಿ ಕನ್ನಡಿ ಮೇಲೆ ಉಜ್ಜಬೇಡಿ!
Image Credit : Asianet News

ವೃತ್ತಾಕಾರವಾಗಿ ಕನ್ನಡಿ ಮೇಲೆ ಉಜ್ಜಬೇಡಿ!

ಬಹಳಷ್ಟು ಜನರು ಮಾಡುವ ತಪ್ಪು ಎಂದರೆ ಕನ್ನಡಿ ಕ್ಲೀನ್ ಮಾಡುವಾಗ ಒದ್ದೆ ಬಟ್ಟೆಯಿಂದ ವೃತ್ತಾಕಾರವಾಗಿ ಉಜ್ಜುತ್ತಿರುತ್ತಾರೆ. ಇದು ಸರಿಯಾದ ವಿಧಾನ ಅಲ್ಲ. ಇದರಿಂದ ಕೆಳಗಿನ ಕೊಲೆ ಮೇಲೆ ಹಚ್ಚಿದಂತೆ ಆಗಬಹುದು. ಒರೆಸಿದ ಮೇಲೆ ಕನ್ನಡಿಯ ಮೇಲೆ ವೃತ್ತಾಕಾರದ ಕಲೆಗಳು ಉಳಿಯುತ್ತವೆ. ಹೀಗಾಗಿ ವೃತ್ತಾಕಾರವಾಗಿ ಮೀರರ್ ಸ್ವಚ್ಛಗೊಳಿಸುವ ಬದಲು S ಆಕಾರದಲ್ಲಿ ಸ್ವಚ್ಛಗೊಳಿಸಿ. ಇದು ಸಂಪೂರ್ಣ ಕನ್ನಡಿಯನ್ನ ಸ್ವಚ್ಛಗೊಳಿಸಲು ಸುಲಭ. ಇದಾದ ಬಳಿಕ ಇನ್ನೊಂದು ಡ್ರೈ ಮೈಕ್ರೋಫೈಬರ್ ಬಟ್ಟೆಯಿಂದ ಒದ್ದೆಯಾದ ಕನ್ನಡಿಯನ್ನ ಅದೇ ರೀತಿ ಎಸ್ ಆಕಾರದಲ್ಲಿ ಒರೆಸಬೇಕು ಇದರಿಂದದ ಕನ್ನಡ ಈಗ್ತಾತೆ ತಂದೆ ಹೊಸ ಕನ್ನಡಿಯಂತೆ ಹೊಳೆಯುತ್ತದೆ

67
ಕನ್ನಡಿ ಕ್ಲೀನ್ ಮಾಡುವಾಗ ಈ ಭಾಗ ಮರೆಯಲೇಬೇಡಿ
Image Credit : Asianet News

ಕನ್ನಡಿ ಕ್ಲೀನ್ ಮಾಡುವಾಗ ಈ ಭಾಗ ಮರೆಯಲೇಬೇಡಿ

ಕನ್ನಡಿಯನ್ನು ಸ್ವಚ್ಛಗೊಳಿಸುವಾಗ ವಿನೆಗರ್ ಅಥವಾ ನೀರು ಕೆಳಕ್ಕೆ ಇಳಿದು ಅಂಚುಗಳಲ್ಲಿ ಸಂಗ್ರಹವಾಗುತ್ತದೆ. ಹೀಗಾಗಿ ಕೊನೆಯದಾಗಿ ಕನ್ನಡಿಯ ಹಂಚುಗಳನ್ನ ಕ್ಲೀನ್ ಮಾಡುವುದನ್ನ ಮರೆಯಬಾರದು. ಈ ಲಿಕ್ವಿಡ್ ಹಾಗೆ ಬಿಟ್ಟರೆ ನಂತರ ಕನ್ನಡಿಯ ಕೆಳಗೆ ಇಳಿದು ಹೊಸ ಸಮಸ್ಯೆ ಸೃಷ್ಟಿಸಬಹುದು. ಹೀಗಾಗಿ ಸಂಪೂರ್ಣ ಕನ್ನಡಿಯನ್ನು ಸ್ವಚ್ಛಗೊಳಿಸಿದ ಬಳಿಕ ಕನ್ನಡಿಯ ಅಂಚುಗಳು ಮೂಲೆಗಳನ್ನು ಒಣ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಲು ಮರೆಯದಿರಿ.

77
ಬಾತ್ ರೂಂ ಕನ್ನಡಿ ಸ್ಚಚ್ಛಗೊಳಿಸುವಾಗ ಈ ತಪ್ಪು ಮಾಡಬೇಡಿ!
Image Credit : Asianet News

ಬಾತ್ ರೂಂ ಕನ್ನಡಿ ಸ್ಚಚ್ಛಗೊಳಿಸುವಾಗ ಈ ತಪ್ಪು ಮಾಡಬೇಡಿ!

ಬಾತ್ ರೂಮ್ ಯಾವಾಗಲು ಹಸಿಯಾಗಿಯೇ ಇರುತ್ತೆ. ಹೀಗಾಗಿ ಕನ್ನಡಿಗಳು ಬೇಗನೆ ಕೊಳೆಯಾಗಲು ಕಾರಣವಾಗಬಹುದು. ಆದ್ದರಿಂದ ಪ್ರತಿದಿನ ಅಲ್ಲದಿದ್ದರೂ ವಾರಕ್ಕೊಮ್ಮೆಯಾದರೂ ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಮುಖ್ಯ. ಸ್ನಾನದ ನಂತರ ಬಾಗಿಲು ಮುಚ್ಚದೆ ಕೆಲಕಾಲ ಬಾತ್ ರೂಂ ಒಳಗೆ ಗಾಳಿಯಾಡುವಂತೆ ನೋಡಿಕೊಳ್ಳುವುದು ಸಹ ಮುಖ್ಯವಾಗಿದೆ ಇದರಿಂದಾಗಿ ಹೆಚ್ಚುವರಿ ತೇವಾಂಶ ಹೊರಬರುತ್ತದೆ. ಕನ್ನಡಿಯನ್ನು ಪದೇ ಪದೇ ಮುಟ್ಟುವುದನ್ನು ತಪ್ಪಿಸಿ ಏಕೆಂದರೆ ನಿಮ್ಮ ಬೆರಳುಗಳಚ್ಚು ಕನ್ನಡಿ ಮೇಲೆ ಬಿದ್ದು ಅದು ಪದೇಪದೆ ಮುಟ್ಟಿದಾಗ ಮಸುಕಾಗಿ ಕಾಣುವಂತೆ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಜೀವನಶೈಲಿ
ಸುದ್ದಿ
Latest Videos
Recommended Stories
Recommended image1
Shocking: ವಿಜಯಲಕ್ಷ್ಮೀ ಮಾಡಿದ್ದ ಪೋಸ್ಟ್ ರಿಪೀಟ್ ಮಾಡಿದ್ದೇಕೆ ಧನ್ವೀರ್ ಗೌಡ, 'ಬೇರೆ ಏನೋ ಇದೆ ಇಲ್ಲಿ..' ಅಂತಿರೋ ನೆಟ್ಟಿಗರು!
Recommended image2
ಅವಿವಾಹಿತ ಜೋಡಿಗಳು OYO ರೂಮ್‌ ಬುಕ್‌ ಮಾಡೋದು ಕಾನೂನುಬದ್ಧವೇ? ನಿಮ್ಮ ಹಕ್ಕುಗಳ ಬಗ್ಗೆ ಮಾಹಿತಿ
Recommended image3
6 ತಿಂಗಳು, 1 ಅಥವಾ ಎರಡು ವರ್ಷ…. ಎಲ್ಲಿಯರೆಗೂ ಮಕ್ಕಳಿಗೆ Breastfeeding ಮಾಡಬೇಕು?
Related Stories
Recommended image1
ಲಿಫ್ಟ್‌ಗಳಲ್ಲಿ ಕನ್ನಡಿ ಯಾಕಿರುತ್ತೆ ಗೊತ್ತಾ? ಇದರ ಹಿಂದಿರುವ ಅಸಲಿ ರಹಸ್ಯ ಇಲ್ಲಿದೆ
Recommended image2
Vastu Shastra: ರಾತ್ರಿ ಮಲಗೋ ಮುನ್ನ ಕನ್ನಡಿ ನೋಡ್ತೀರಾ? ಈಗ್ಲೇ ಅಭ್ಯಾಸ ಬಿಟ್ಬಿಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved