Asianet Suvarna News Asianet Suvarna News

Bathroom Hacks : ಚಿಕ್ಕ ಬಾತ್ ರೂಂ ಚೊಕ್ಕವಾಗಿಡಲು ಸರಳ ಸೂತ್ರ!

ಅಯ್ಯೋ ನಮ್ಮ ಮನೆ ಬಾತ್ ರೂಮ್ ತುಂಬಾ ಸಣ್ಣದು. ಯಾವ ವಸ್ತುಗಳನ್ನೂ ಸರಿಯಾಗಿ ಇಡೋಕೆ ಆಗಲ್ಲ. ಒಂದು ಮುಟ್ಟಿದ್ರೆ ಇನ್ನೊಂದು ಬೀಳುತ್ತೆ ಅಂತಾ ಬೇಸರಪಟ್ಟುಕೊಳ್ಬೇಡಿ. ಇಂದು ನಾವು ಹೇಳುವ ಐಡಿಯಾವನ್ನು ಕಾರ್ಯರೂಪಕ್ಕೆ ತಂದು ಖುಷಿಯಾಗಿರಿ.
 

Bathroom Hacks That Will Make Your Life Easier lifestyle
Author
Bangalore, First Published Jan 5, 2022, 12:35 AM IST

ಬಾತ್ ರೂಮ್ (Bathroom )ಅಂದ್ರೆ ಸ್ನಾನಗೃಹ, ಮನೆಯ ಪ್ರಮುಖ ಸ್ಥಳಗಳಲ್ಲಿ ಒಂದು. ಮೈ ಕೊಳೆ ತೊಳೆಯುವ ಜಾಗವಾದ್ರೂ ಅನೇಕರು ಇಲ್ಲಿ ತುಂಬಾ ಸಮಯ ಕಳೆಯುತ್ತಾರೆ. ಗಂಟೆಗಟ್ಟಲೆ ಸ್ನಾನ (Bath )ಮಾಡುವವರಿದ್ದಾರೆ. ನೋವಾದಾಗ ಶವರ್ (Shower) ಕೆಳಗೆ ನಿಂತು ಜೋರಾಗಿ ಅಳು(Cry)ವವರಿದ್ದಾರೆ. ಬಾತ್ ರೂಮಿನಲ್ಲಿಯೇ ಅನೇಕರು ಹಾಡು ಕಲಿತಿದ್ದಾರೆ. ಸ್ನಾನ ಗೃಹ ಕೇವಲ ಸ್ನಾನ ಮಾಡುವ ಸ್ಥಳವಲ್ಲ ಎನ್ನುವವರು ಅನೇಕ ಮಂದಿ. ಇನ್ನು ಕೆಲವರಿಗೆ ಬಾತ್ ರೂಮ್ ಸ್ವಚ್ಛವಾಗಿರಬೇಕು. ದಿನಕ್ಕೊಮ್ಮೆ ಬಾತ್ ರೂಮ್ ಕ್ಲೀನ್ ಮಾಡುವವರಿದ್ದಾರೆ. ಮತ್ತೆ ಕೆಲವರು ವಾರಕ್ಕೊಮ್ಮೆ ಬಾತ್ ರೂಮ್ ಸ್ವಚ್ಛ ಮಾಡುವುದು ಅನುಮಾನ. ವಾಸ್ತುಶಾಸ್ತ್ರ ನಂಬುವವರು ಬಾತ್ ರೂಮ್ ಹಾಗಿರಬೇಕು,ಹೀಗಿರಬೇಕೆಂದು ವಾಸ್ತು ಪ್ರಕಾರ ನಿರ್ಮಾಣ ಮಾಡಿರುತ್ತಾರೆ. ಈ ಎಲ್ಲದರ ಮಧ್ಯೆಯೇ ಬಾತ್ ರೂಮ್ ಚಿಕ್ಕದಾಯ್ತು ಎಂಬ ರಾಗವೂ ಆಗಾಗ ಕೇಳಿ ಬರ್ತಿರುತ್ತದೆ.

ಅಲ್ಲಾ ಸ್ವಾಮಿ,ಸಿಲಿಕಾನ್ ಸಿಟಿಯಂತ ಜಾಗದಲ್ಲಿ ಸಣ್ಣ ಮನೆ ಸಿಗೋದೆ ಕಷ್ಟ. ಹಾಗಿರುವಾಗ ದೊಡ್ಡ ಬಾತ್ ರೂಮ್ ಎಲ್ಲಿಂದ ಬರಲು ಸಾಧ್ಯವಿಲ್ಲ. ಬಾತ್ ರೂಮಿನಲ್ಲಿಯೇ ಶೌಚಾಲಯ ಕೂಡ ಇರೋದ್ರಿಂದ ಸ್ನಾನಗೃಹ ಸಣ್ಣದಾಗುತ್ತದೆ. ಬಾತ್ ರೂಮಿನಲ್ಲಿ ಟವೆಲ್ ಮತ್ತು ಇತರ ವಸ್ತುಗಳನ್ನು ಇಡುವುದು ಕಷ್ಟವಾಗುತ್ತದೆ. ಜಾಗವಿಲ್ಲದ ಕಾರಣ ಅನಿವಾರ್ಯವಾಗಿ ವಸ್ತುಗಳನ್ನು ಮೇಲಿಡಬೇಕು. ಇದರಿಂದ ಮಕ್ಕಳು ಬಾತ್ರೂಮ್ ಬಳಸುವಲ್ಲಿ ಸಮಸ್ಯೆ ಎದುರಿಸುತ್ತಾರೆ. ಏಕೆಂದರೆ ಅವರ ಕೈಗೆ ಬ್ರಷ್, ಸೋಪ್ ಸಿಗುವುದಿಲ್ಲ. ಬಾತ್ ರೂಮ್ ಚಿಕ್ಕದಾಗಿದ್ದರೂ ಅಲ್ಲಿಯೇ ವಸ್ತುಗಳನ್ನು ನೀವು ಸ್ಮಾರ್ಟ್ ಆಗಿ ಇಡಬಹುದು.  

ಉಪಯೋಗಕ್ಕೆ ಬರುತ್ತೆ ಬಾತ್ ರೂಮ್ ಬಾಗಿಲು : ಬಾತ್‌ರೂಮ್‌ನಲ್ಲಿ ವ್ಯಾನಿಟಿ ಇದ್ದರೆ ಅದರ ರ್ಯಾಕ್ ನಲ್ಲಿ ವಸ್ತುಗಳನ್ನು ಇಡಬಹುದು. ಆದ್ರೆ ಇದು ಇಲ್ಲ ಅಥವಾ ಸಾಲಲ್ಲ ಎನ್ನುವವರು  ಹೆಚ್ಚುವರಿ ರ್ಯಾಕನ್ನು ಬಾಗಿಲಿಗೆ ಅಳವಡಿಸಬಹುದು. ಬಾಗಿಲಿನ ಬಗ್ಗೆ ಯಾರೂ ಹೆಚ್ಚಿನ ಗಮನ ನೀಡುವುದಿಲ್ಲ. ಆದ್ರೆ ಬಾಗಿಲು ನಿಮ್ಮ ಬಾತ್ ರೂಮ್ ವಸ್ತುಗಳನ್ನು ಇಡಲು ನೆರವಾಗುತ್ತದೆ. ಬಾತ್ ರೂಮ್ ಬಾಗಿಲಿಗೆ ಸಣ್ಣ ಸಣ್ಣ ರ್ಯಾಕ್ ಮಾಡಿ ಅದರಲ್ಲಿ ಶಾಂಪೂ,ಸ್ಕ್ರಬ್ಬರ್ ಸೇರಿದಂತೆ ಸಣ್ಣ ವಸ್ತುಗಳನ್ನು ಇಡಬಹುದು. ಸ್ವಲ್ಪ ಕೆಳಗೆ ರ್ಯಾಕ್ ಮಾಡಿದ್ರೆ ಮಕ್ಕಳ ಕೈಗೂ ಅದು ಸುಲಭವಾಗಿ ಸಿಗುತ್ತದೆ.

ಸ್ಟೆಪ್ ಸ್ಟೂಲ್‌ : ಮನೆಯಲ್ಲಿ ಮಕ್ಕಳಿದ್ದರೆ ಬಾತ್ ರೂಮಿನಲ್ಲಿ ಸ್ಟೆಪ್ ಸ್ಟೂಲ್ ಅತ್ಯಗತ್ಯ. ಸಾಮಾನ್ಯವಾಗಿ ಸಿಂಕ್ ಮೇಲ್ಭಾಗದಲ್ಲಿ ಇರುವ ಬ್ರಷ್,ಟವೆಲ್,ಪೇಸ್ಟ್ ಮಕ್ಕಳಿಗೆ ಸಿಗುವುದಿಲ್ಲ. ಪ್ರತಿ ಬಾರಿ ಮಕ್ಕಳ ಬಾತ್ ರೂಮಿಗೆ ಹೋದಾಗಲು ಪಾಲಕರು ನೆರವಿಗೆ ಬರಬೇಕಾಗುತ್ತದೆ. ಅದೇ ಬಾತ್ ರೂಮಿನಲ್ಲಿ ಸ್ಟೆಪ್ ಸ್ಟೂಲ್ ಇದ್ದರೆ ಮಕ್ಕಳು ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳುತ್ತಾರೆ. ನಿಧಾನವಾಗಿ ಮಕ್ಕಳು ಇದರ ಬಳಕೆಯನ್ನೂ ಕಲಿಯುತ್ತಾರೆ.  

Working Women and Pregnancy: ಪರಿಸ್ಥಿತಿ ಸಂಭಾಳಿಸೋದು ಹೇಗೆ?

ಮ್ಯಾಗ್ನೆಟಿಕ್ ಸ್ಟಿಕ್ಕರ್‌ : ಬಾತ್ರೂಮಿನಲ್ಲಿ ಕೆಲವು ಸಣ್ಣ ವಸ್ತುಗಳನ್ನು ಇಡಲು ಮ್ಯಾಗ್ನೆಟಿಕ್ ಸ್ಟಿಕ್ಕರ್ಗಳನ್ನು ಬಳಸುವುದು ಒಳ್ಳೆಯದು. ಅದರ ಸಹಾಯದಿಂದ ಪ್ಲಕ್ಕರ್ ಮತ್ತು ನೇಲ್ ಕಟರ್ ಗಳನ್ನು ಇದಕ್ಕೆ ನೇತು ಹಾಕಬಹುದು. ಸ್ಕ್ರಬ್ಬರ್ ಗಳನ್ನು ಕೂಡ ಇದಕ್ಕೆ ನೇತು ಹಾಕಬಹುದು. ಸ್ನಾನ ಮಾಡುವ ಸಂದರ್ಭದಲ್ಲಿ ಇದನ್ನು ಹುಡುಕಾಡುವ ಹಾಗೂ ನಂತ್ರ ಇಡುವ ಸಮಯ ಉಳಿಯುತ್ತದೆ. ಎಲ್ಲರ ಕಣ್ಣಿಗೂ ಸುಲಭವಾಗಿ ಕಾಣುವುದರಿಂದ ಹೆಚ್ಚಿನ ಸಮಸ್ಯೆಯಾಗುವುದಿಲ್ಲ.  

ಸುಂದರ ಬುಟ್ಟಿ : ಬಾತ್ ರೂಮ್ ನಲ್ಲಿ ಜಾಗವಿರಬೇಕು,ಎಲ್ಲ ವಸ್ತುಗಳು ಫಿಟ್ ಆಗ್ಬೇಕು,ನೋಡಲು ಸುಂದರವಾಗಿ ಕಾಣ್ಬೇಕು ಎಂಬುದು ಮಹಿಳೆಯರ ಆಸೆ. ಅಂಥವರು ಬುಟ್ಟಿ ಅಥವಾ ಬಕೆಟ್ ಬಳಸಬಹುದು. ಸುಂದರ,ವರ್ಣರಂಜಿತ ಬುಟ್ಟಿಯಲ್ಲಿ ನೀವು ಟವೆಲ್ ಸೇರಿದಂತೆ ಅಗತ್ಯ ವಸ್ತುಗಳನ್ನು ಹಾಕಿಡಬಹುದು.  

 

Follow Us:
Download App:
  • android
  • ios