ಫ್ರಿಡ್ಜ್‌ನಲ್ಲಿ ಉಳಿದ ಅರ್ಧ ತೆಂಗಿನಕಾಯಿ ಹಾಳಾಗದಂತೆ ಸರಿಯಾಗಿ ಸ್ಟೋರ್ ಮಾಡೋದು ಹೇಗೆ?
Kitchen Hacks in Kannada: ಫ್ರಿಡ್ಜ್‌ನಲ್ಲಿ ಉಳಿದ ಅರ್ಧ ತೆಂಗಿನಕಾಯಿಯನ್ನು ದೀರ್ಘಕಾಲ ಕೆಡದಂತೆ ಶೇಖರಿಸಿಡಲು ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಬೇಗ ಹಾಳಾಗುವ ವಸ್ತುಗಳನ್ನು ಫ್ರಿಡ್ಜ್ ಡೋರ್‌ನಲ್ಲಿ ಇಡಬಾರದು.

ಅರ್ಧ ತೆಂಗಿನಕಾಯಿ
ಹೆಚ್ಚುವರಿಯಾದ ಅಡುಗೆ ಸೇರಿದಂತೆ ಆಹಾರ ಸಾಮಾಗ್ರಿಗಳನ್ನು ದೀರ್ಘಕಾಲದವರೆಗೆ ಸ್ಟೋರ್ ಮಾಡಲು ಫ್ರಿಡ್ಜ್ ಬಳಕೆ ಮಾಡಲಾಗುತ್ತದೆ. ಫ್ರಿಡ್ಜ್ ಓಪನ್ ಮಾಡುತ್ತಿದ್ದಂತೆ ಡೋರ್‌ನಲ್ಲಿ ಕತ್ತರಿಸಿದಿ ಅರ್ಧ ನಿಂಬೆಹಣ್ಣು, ನಾಲ್ಕು ಕಡ್ಡಿ ಕೋತಂಬರಿ ಸೊಪ್ಪು, ಸಾಸ್ ಪಾಕೆಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಕಾಣಬಹುದು. ಅರ್ಧ ತೆಂಗಿನಕಾಯಿ ಅಥವ ಹಸಿಕೊಬ್ಬರಿ ಹೇಗೆ ಸ್ಟೋರ್ ಮಾಡಬೇಕೆಂದು ನೋಡೋಣ ಬನ್ನಿ.
ಅರ್ಧ ಉಳಿದ ತೆಂಗಿನಕಾಯಿ
ಒಂದು ತೆಂಗಿನಕಾಯಿ ಒಡೆದ್ರೆ ಎರಡು ಭಾಗಗಳಾಗುತ್ತದೆ. ಬಹುತೇಕ ಸಮಯದಲ್ಲಿ ಒಂದು ಭಾಗ ಆ ಸಮಯಕ್ಕೆ ಬಳಕೆಯಾಗುತ್ತದೆ. ಇನ್ನುಳಿದ ಭಾಗ ಹಾಗೆಯೇ ಉಳಿಯುತ್ತದೆ. ಹೆಚ್ಚುವರಿಯಾಗಿ ಉಳಿದ ತೆಂಗಿನಕಾಯಿ ಭಾಗವನ್ನು ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡುವ ಕ್ರಮವನ್ನು ಹೇಳುತ್ತಿದ್ದೇವೆ. ಈ ಕ್ರಮ ಬಳಸಿದ್ರೆ ಕೊಬ್ಬರಿ ನೀರು ಬಿಟ್ಟುಕೊಂಡು ಅಥವಾ ಬೂಸ್ಟ್ ಹಿಡಿದು ಹಾಳಾಗಲ್ಲ
ತೆಂಗಿನಕಾಯಿ ಸ್ಟೋರ್ ಮಾಡೋದು ಹೇಗೆ?
ಚಿಪ್ಪು ಸಹಿತ ತೆಂಗಿನಕಾಯಿಯನ್ನು ಸ್ಟೋರ್ ಮಾಡುತ್ತಿದ್ರೆ ಡೋರ್ ಬಳಿಯಲ್ಲಿಡಿ. ಈ ಸಂದರ್ಭದಲ್ಲಿ ಕೊಬ್ಬರಿ ಮೇಲೆ ಒಂದು ಹನಿ ಅಡುಗೆಎಣ್ಣೆ ಹಾಕಿ ಸುತ್ತಲೂ ಸವರಿಕೊಳ್ಳಿ. ಎಣ್ಣೆ ಹಚ್ಚೋದರಿಂದ ತೆಂಗಿನಕಾಯಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಚಿಪ್ಪು ಸಹಿತ ತೆಂಗಿನಕಾಯಿ ಫ್ರಿಡ್ಜ್ ಡೋರ್‌ನಲ್ಲಿಡೋದು ಉತ್ತಮ.
ಚಿಪ್ಪು ಬೇರ್ಪಡಿಸಿ
ಚಿಪ್ಪು ಬೇರ್ಪಡಿಸಿ ತೆಂಗಿನಕಾಯಿ ತೆಗೆದುಕೊಂಡು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಬೌಲ್‌ನಲ್ಲಿ ಹಾಕಿ ಸ್ಟೋರ್ ಮಾಡಬಹುದು. ಇನ್ನು ಕೆಲವರು ತೆಂಗಿನಕಾಯಿ ತುರಿದಿಟ್ಟುಕೊಂಡು ಎಲ್ಲಾ ಅಡುಗೆಯಲ್ಲಿ ಬಳಸುತ್ತಾರೆ. ಈ ರೀತಿ ತೆಂಗಿನಕಾಯಿ ತುರಿಯನ್ನು ಬೌಲ್‌ನಲ್ಲಿ ಹಾಕಿ ಸಂಗ್ರಹಿಸಿಕೊಳ್ಳಬಹುದು.
ತರಕಾರಿ ಎಲ್ಲಿಡಬೇಕು?
ಇನ್ನು ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಸೂಚಿಸಲಾಗಿರುವ ಸ್ಥಳದಲ್ಲಿಡೋದು ಉತ್ತಮ. ಮೊಟ್ಟೆ, ಜ್ಯೂಸ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಡೋರ್‌ನಲ್ಲಿಯೇ ಇಡಬಹುದು. ಡೋರ್ ಪದೇ ಪದೇ ತೆರೆಯೋದರಿಂದ ಇಲ್ಲಿಯ ವಾತಾವರಣ ಬದಲಾವಣೆಯಾಗುತ್ತಿರುತ್ತದೆ. ಹಾಗಾಗಿ ಬೇಗ ಹಾಳಾಗುವ ವಸ್ತುಗಳನ್ನು ಫ್ರಿಡ್ಜ್ ಡೋರ್‌ನಲ್ಲಿಡಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.