ಸೋರೆಕಾಯಿ ಸಿಪ್ಪೆಯಿಂದ ಟೇಸ್ಟಿ ಟೇಸ್ಟಿ, ಕುರುಂಕುರುಂ ರೆಸಿಪಿ ಹೀಗೆ ಮಾಡಿ ನೋಡಿ
ಸಾಮಾನ್ಯವಾಗಿ ಕಸಕ್ಕೆ ಎಸೆಯುವ ಸೋರೆಕಾಯಿ ಸಿಪ್ಪೆಯನ್ನು ಬಳಸಿ ರುಚಿಯಾದ ಕುರುಂ ಕುರುಂ ಸ್ನ್ಯಾಕ್ಸ್ ಮಾಡಬಹುದು. ಸಿಪ್ಪೆಗೆ ಅಕ್ಕಿ ಹಿಟ್ಟು, ಕಡಲೆ ಹಿಟ್ಟು ಮತ್ತು ಮಸಾಲೆಗಳನ್ನು ಬೆರೆಸಿ ಎಣ್ಣೆಯಲ್ಲಿ ಕರಿದರೆ ಈ ರೆಸಿಪಿ ಸಿದ್ಧವಾಗುತ್ತದೆ.

ಕರುಂ ಕುರುಂ ರೆಸಿಪಿ
ಸಾಮಾನ್ಯವಾಗಿ ಎಲ್ಲಾ ತರಕಾರಿಗಳ ಸಿಪ್ಪೆಗಳಲ್ಲಿಯೂ ಪೋಷಕಾಂಶ ಇದ್ದೇ ಇರುತ್ತದೆ. ಕೆಲವೊಂದು ಸಿಪ್ಪೆಗಳಿಂದ ಟೇಸ್ಟಿ ರೆಸಿಪಿಗಳನ್ನೂ ಮಾಡಬಹುದು. ಆದರೆ ಅವುಗಳನ್ನು ಎಸೆಯುವುದೇ ಹೆಚ್ಚು. ಇದೀಗ ಕಸದ ಬುಟ್ಟಿಗೆ ಹಾಕುವ ಸೋರೆಕಾಯಿಯ ಸಿಪ್ಪೆಯಿಂದ ಟೇಸ್ಟಿ ಕುರುಂ ಕುರುಂ ರೆಸಿಪಿ ಹೇಗೆ ಮಾಡಬಹುದು ಎಂದು ಇಲ್ಲಿ ವಿವರಿಸಲಾಗಿದೆ.
ನೀರು ಹೋಗುವಂತೆ ಹರಡಿ
ಮೊದಲಿಗೆ ಸಿಪ್ಪೆಯಿಂದ ಚೆನ್ನಾಗಿ ತೊಳೆದು ಬಟ್ಟೆಯಲ್ಲಿ ನೀರು ಹೋಗುವಂತೆ ಹರಡಿ ಒಣಗಿಸಬೇಕು.
ಕಡಲೇ ಹಿಟ್ಟು, ಎಳ್ಳು
ಇದಕ್ಕೆ ಅಕ್ಕಿ ಹಿಟ್ಟು ಮತ್ತು ಸ್ವಲ್ಪ ಕಡಲೆ ಹಿಟ್ಟನ್ನು ಸೇರಿಸಬೇಕು. ಅದಕ್ಕೆ ಸ್ವಲ್ಪ ಕೆಂಪು ಮೆಣಸಿನ ಪುಡಿ, ಬಿಳಿಯ ಎಳ್ಳನ್ನು ಸೇರಿಸಬೇಕು.
ನೀರನ್ನು ಮಿಕ್ಸ್ ಮಾಡಬೇಡಿ
ಇದಕ್ಕೆ ಉಪ್ಪನ್ನು ಹಾಕಿ ಮಿಕ್ಸ್ ಮಾಡಬೇಕು. ಇದಕ್ಕೆ ನೀರನ್ನು ಸೇರಿಸಬಾರದು. ಸಿಪ್ಪೆಯಲ್ಲಿ ಇರುವ ನೀರಿನ ಅಂಶದಿಂದಲೇ ಎಲ್ಲವೂ ಚೆನ್ನಾಗಿ ಮಿಕ್ಸ್ ಆಗುತ್ತದೆ.
ಬಿಸಿಯಾದ ಎಣ್ಣೆಗೆ ಹಾಕಿ
ಬಳಿಕ ಬಿಸಿಯಾದ ಎಣ್ಣೆಗೆ ಇದನ್ನು ಹಾಕಬೇಕು. ನಂತರ ಕ್ರಿಸ್ಪಿಯಾಗುವವರೆಗೆ ಹಾಗೂ ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಬೇಕು.
ಸಿಪ್ಪೆಯ ರೆಸಿಪಿ ರೆಡಿ
ಇದನ್ನು ತೆಗೆದು ಸ್ವಲ್ಪ ಪೆರಿಪೆರಿ ಮಸಾಲಾ ಮತ್ತು ಚಾಟ್ ಮಸಾಲಾ ಹಾಕಬೇಕು. ಇಷ್ಟು ಮಾಡಿದರೆ ಕರುಂ ಕುರುಂ ಸಿಪ್ಪೆಯ ರೆಸಿಪಿ ರೆಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

