- Home
- News
- India News
- ದಸರಾ ಹಬ್ಬಕ್ಕೆ ಮೊದಲೇ ಜಿಯೋ ಗ್ರಾಹಕರಿಗೆ ಬಂಪರ್ ಗಿಫ್ಟ್: ಇಷ್ಟು ಕಡಿಮೆ ಬೆಲೆಗೆ 5G ಡೇಟಾ ಪಡೆಯೋದು ಹೇಗೆ?
ದಸರಾ ಹಬ್ಬಕ್ಕೆ ಮೊದಲೇ ಜಿಯೋ ಗ್ರಾಹಕರಿಗೆ ಬಂಪರ್ ಗಿಫ್ಟ್: ಇಷ್ಟು ಕಡಿಮೆ ಬೆಲೆಗೆ 5G ಡೇಟಾ ಪಡೆಯೋದು ಹೇಗೆ?
ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ(Reliance Jio) ತನ್ನ ಗ್ರಾಹಕರಿಗಾಗಿ ಕೇವಲ 51 ರೂ.ಗೆ ಅನ್‌ಲಿಮಿಟೆಡ್ 5G ಡೇಟಾ ನೀಡುತ್ತಿದೆ. ನೀವು ಜಿಯೋ ಬಳಕೆದಾರರಾಗಿದ್ದರೆ ಈ ಸ್ಪೆಷಲ್ ರಿಚಾರ್ಜ್ ಬಗ್ಗೆ ತಿಳಿಯಲೇಬೇಕು. ಇಲ್ಲಿದೆ ವಿವರ.

Jio: ಕೇವಲ 51 ರೂ.ಗೆ ಅನ್‌ಲಿಮಿಟೆಡ್ 5G ಡೇಟಾ!
ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ(Reliance Jio) ತನ್ನ ಗ್ರಾಹಕರಿಗಾಗಿ ಕೇವಲ 51 ರೂ.ಗೆ ಅನ್‌ಲಿಮಿಟೆಡ್ 5G ಡೇಟಾ ನೀಡುತ್ತಿದೆ. ಈ ಹೊಸ ಆಫರ್ ಎಲ್ಲರಿಗೂ ಅನ್ವಯವಾಗುವುದಿಲ್ಲ. ಆದರೆ ಪ್ರೀಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಜಿಯೋ ಗ್ರಾಹಕರು 51 ರೂ. ಪಾವತಿಸಿ ಅನ್‌ಲಿಮಿಟೆಡ್ 5G ಡೇಟಾ ಸೌಲಭ್ಯ ಪಡೆಯಬಹುದು.
ಭಾರತದಲ್ಲಿ 5G ಸೇವೆ ಬಳಸುವ ಜನರಿಗೆ ಜಿಯೋ ಪ್ರಮುಖ ಆಯ್ಕೆಯಾಗಿದೆ. ಏಕೆಂದರೆ ರಿಲಯನ್ಸ್ ಜಿಯೋ ದೇಶದಾದ್ಯಂತ 5G ನೆಟ್‌ವರ್ಕ್ ಹೊಂದಿದೆ. ಇತರೆ ಕಂಪನಿಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ 5G ಡೇಟಾ ಪಡೆಯಬಹುದಾಗಿದೆ. ಇದಲ್ಲದೆ ಕಂಪನಿಯು ಕೇವಲ 51 ರೂಪಾಯಿಗೆ ತನ್ನ ಗ್ರಾಹಕರಿಗೆ ಅನ್‌ಲಿಮಿಟೆಡ್ 5G ಡೇಟಾ ಸೌಲಭ್ಯವನ್ನು ಕೂಡ ನೀಡುತ್ತಿದೆ.
ಇದನ್ನೂ ಓದಿ:ದೀಪಾವಳಿಗೆ ಮೊದಲೇ ಮುಕೇಶ್ ಅಂಬಾನಿ ಭರ್ಜರಿ ಗಿಫ್ಟ್: ಜಿಯೋ ಗ್ರಾಹಕರು ₹4,000 ಮೌಲ್ಯದ ಉಚಿತ ಗಿಫ್ಟ್ ಪಡೆಯೋದು ಹೇಗೆ?
ನಿಮ್ಮ ಪ್ರಸ್ತುತ ಜಿಯೋ ರೀಚಾರ್ಜ್ ಪ್ಲ್ಯಾನ್‌ನಲ್ಲಿ 5G ಸೌಲಭ್ಯ ಇಲ್ಲದಿದ್ದರೆ, True Unlimited Upgrade ವಿಭಾಗದಲ್ಲಿರುವ ಪ್ಲ್ಯಾನ್‌ಗಳ ಮೂಲಕ ಅದನ್ನು ಅಪ್‌ಗ್ರೇಡ್ ಮಾಡಬಹುದು. ಈ ವಿಭಾಗದಲ್ಲಿ ಜಿಯೋ 51 ರೂ. ಪ್ಲ್ಯಾನ್ ನೀಡುತ್ತಿದೆ. ನಿಮ್ಮ ಬೇಸ್ ಪ್ಲ್ಯಾನ್‌ಗೆ 5G ಸೌಲಭ್ಯ ಸೇರಿಸಿಕೊಳ್ಳಲು ಈ 51 ರೂ. ಪ್ಲ್ಯಾನ್ ಬಳಸಬಹುದು. ಈ ರಿಚಾರ್ಜ್‌ನಿಂದ ಸಿಗುವ ಸೌಲಭ್ಯಗಳೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ರಿಲಯನ್ಸ್ ಜಿಯೋ 51 ರೂ. ಪ್ರೀಪೇಯ್ಡ್ ಪ್ಲ್ಯಾನ್‌ನಲ್ಲಿ ಏನಿದೆ?
ರಿಲಯನ್ಸ್ ಜಿಯೋ ಇತ್ತೀಚೆಗೆ 51 ರೂ. ಬೆಲೆಯ ಹೊಸ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಇದರ ಮೂಲಕ ಗ್ರಾಹಕರಿಗೆ ಅನ್‌ಲಿಮಿಟೆಡ್ 5G ಡೇಟಾ ಜೊತೆಗೆ 3GB 4G ಡೇಟಾ ಕೂಡ ಸಿಗಲಿದೆ. 3GB 4G ಡೇಟಾ ಈ ಪ್ಲ್ಯಾನ್‌ಗೆ ಹೊಸದಾಗಿ ಸೇರ್ಪಡೆಯಾಗಿದೆ. ಈ ಹಿಂದೆ ಈ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ 4G ಡೇಟಾ ನೀಡಲಾಗುತ್ತಿರಲಿಲ್ಲ. ಪ್ರತಿದಿನ 1.5GB ಡೇಟಾ ನೀಡುವ ಜಿಯೋ ರೀಚಾರ್ಜ್ ಪ್ಲ್ಯಾನ್ ಬಳಸುತ್ತಿರುವ ಗ್ರಾಹಕರಿಗೆ ಈ ಆಫರ್ ಅನ್ವಯಿಸುತ್ತದೆ. ಅಲ್ಲದೆ, ಅವರ ಬೇಸ್ ಪ್ಲ್ಯಾನ್‌ನ ವ್ಯಾಲಿಡಿಟಿ ಕನಿಷ್ಠ ಒಂದು ತಿಂಗಳು ಇರಬೇಕು. ಈ ಪ್ಲ್ಯಾನ್ ಬಳಸಲು ಗ್ರಾಹಕರ ಬಳಿ 5G ಸಪೋರ್ಟ್ ಮಾಡುವ ಮೊಬೈಲ್ ಇರಬೇಕು. ಜತೆಗೆ, ಅವರು ಜಿಯೋ 5G ನೆಟ್‌ವರ್ಕ್ ಲಭ್ಯವಿರುವ ಪ್ರದೇಶದಲ್ಲಿರಬೇಕು
ಕಂಪನಿಯ ವೆಬ್‌ಸೈಟ್ ಪ್ರಕಾರ, 51 ರೂ. ಪ್ಲ್ಯಾನ್‌ನ ವ್ಯಾಲಿಡಿಟಿ ನಿಮ್ಮ ಪ್ರಸ್ತುತ ಆಕ್ಟಿವ್ ಪ್ಲ್ಯಾನ್‌ನ ವ್ಯಾಲಿಡಿಟಿಗೆ ಸಮನಾಗಿರುತ್ತದೆ. ಆದರೆ, ಅನ್‌ಲಿಮಿಟೆಡ್ 5G ಸೌಲಭ್ಯ ಒಂದು ತಿಂಗಳವರೆಗೆ ಮಾತ್ರ ಲಭ್ಯವಿರುತ್ತದೆ. 3GB 4G ಡೇಟಾ ಮಾತ್ರ ನಿಮ್ಮ ಆಕ್ಟಿವ್ ಪ್ಲ್ಯಾನ್‌ನ ಸಂಪೂರ್ಣ ವ್ಯಾಲಿಡಿಟಿಯವರೆಗೆ ಬಳಸಬಹುದು.
ನಿಮ್ಮ ಪ್ರದೇಶದಲ್ಲಿ ಜಿಯೋ 5G ನೆಟ್‌ವರ್ಕ್ ಲಭ್ಯವಿದೆಯೇ ಎಂಬುದನ್ನು ತಿಳಿದುಕೊಳ್ಳಲು MyJio ಆ್ಯಪ್ ಮೂಲಕ ಪರಿಶೀಲಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

