ನಿಮ್ಗೆ ಗೊತ್ತಾ ಸ್ಯಾಂಡ್ ವಿಚ್ ಮೇಲಿನ ಮಯೋನೈಸ್ ಚರ್ಮ, ಕೂದಲಿಗೂ ಬೆಸ್ಟ್ !
ನೀವು ಬರ್ಗರ್ ಅಥವಾ ಸ್ಯಾಂಡ್ ವಿಚ್ ಗಳನ್ನು ತಿನ್ನಲು ಇಷ್ಟಪಡುವವರಾದ್ರೆ, ಮಯೋನೈಸ್ ನ ಟೇಸ್ಟ್ ಗೊತ್ತಿರ್ಲೆಗ್ ಬೇಕು ಅಲ್ವಾ. ಆದರೆ ಕೊಬ್ಬು ಭರಿತ ಮಯೋನೈಸ್ ಫಿಟ್ನೆಸ್ ಫ್ರೀಕ್ ಜನರ ಮೊದಲ ಆಯ್ಕೆಯಾಗದಿರಬಹುದು. ಆದರೆ ಚರ್ಮ ಮತ್ತು ಕೂದಲಿನ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ, ನೀವು ಮಯೋನೈಸ್ ಬಗ್ಗೆ ತಿಳಿಯಲೇ ಬೇಕು. ಹೌದು, ತಿನ್ನಲು ಮಾತ್ರ ಅಲ್ಲ, ಸೌಂದರ್ಯ ಹೆಚ್ಚಿಸಲು ಸಹ ನೀವು ಮಯೋನೀಸ್ ನ್ನು ಈ ರೀತಿ ಬಳಕೆ ಮಾಡಬಹುದು.

ಈ ಬಿಳಿ ಬಣ್ಣ ರುಚಿಕರವಾದ ಪೇಸ್ಟ್ ತಿಂಡಿಯ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತೆ. ಮಯೋನೈಸ್ (Mayonnaise) ಮೊಟ್ಟೆಯ ಹಳದಿ ಭಾಗ ಅಥವಾ ಕೆಲವು ವಿಧದ ಹಳದಿ ಲೋಳೆ, ಎಣ್ಣೆ ಮತ್ತು ಸಕ್ಕರೆಯನ್ನು ವಿಸ್ಕ್ ಮಾಡುವ ಮೂಲಕ ತಯಾರಿಸಲಾಗುತ್ತೆ. ಇದು ಮೊಟ್ಟೆಮತ್ತು ಆರೋಗ್ಯಕರ ಕೊಬ್ಬುಗಳನ್ನು ಸಹ ಹೊಂದಿದೆ, ಇದು ಚರ್ಮ ಮತ್ತು ಕೂದಲಿಗೆ ಆರೋಗ್ಯಕರ ಬೆಳವಣಿಗೆಗೆ ಸಹಕಾರಿ. ನೀವು, ಮಯೋನೈಸ್ ತಿನ್ನಿ ಅಥವಾ ತಿನ್ನದೇ ಇರಿ, ಆದರೆ ಅದನ್ನು ಹಚ್ಚೋದನ್ನು ಮಾತ್ರ ಕಡಿಮೆ ಮಾಡಬೇಡಿ.
ಶುಷ್ಕ ಚರ್ಮಕ್ಕಾಗಿ(Dry skin)
ಮಯೋನೈಸ್ ಶುಷ್ಕ ಚರ್ಮವನ್ನು ಹೊಂದಿರುವವರಿಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಕೊಬ್ಬಿನಂಶವು ತುಂಬಾ ಹೆಚ್ಚಿದ್ದು, ಇದು ಚರ್ಮವನ್ನು ಮಾಯಿಶ್ಚರೈಸ್ ಮಾಡುತ್ತೆ. ಒಣ ಚರ್ಮವನ್ನು ತೊಡೆದುಹಾಕಲು, ಮುಖದ ಮೇಲೆ ಸಾದಾ ಮಯೋನೈಸ್ ಹಚ್ಚಿ ಸ್ವಲ್ಪ ಸಮಯದವರೆಗೆ ಮಸಾಜ್ ಮಾಡಿ, ಸ್ವಲ್ಪ ಹೊತ್ತು ಹಾಗೆ ಬಿಡಿ.
ಕೊನೆಗೆ ಮೃದುವಾದ ಫೇಸ್ ವಾಶ್ ನಿಂದ(Face wash) ಚರ್ಮವನ್ನು ಸ್ವಚ್ಛಗೊಳಿಸೋದನ್ನ ಮರೀಬೇಡಿ. ಇದರಿಂದ ಉಳಿದ ಫ್ಯಾಟ್ ಪೋರ್ಸ್ಗಳಲ್ಲಿ ಬ್ಲಾಕ್ ಆಗೋದನ್ನು ತಪ್ಪಿಸಬಹುದು. ನೀವು ವಾರಕ್ಕೆ ಎರಡು-ಮೂರು ಬಾರಿ ವಿಟಮಿನ್-ಇ-ಸಮೃದ್ಧ ಮಯೋನೈಸ್ ಹಚ್ಚಿದರೆ, ಖಂಡಿತವಾಗಿಯೂ ಚರ್ಮದಲ್ಲಿ ವ್ಯತ್ಯಾಸ ಕಾಣುವಿರಿ.
ಹೊಳಪನ್ನು(Shine) ಹೆಚ್ಚಿಸಲು
ಚರ್ಮದ ಹೊಳಪನ್ನು ಕಾಪಾಡಿಕೊಳ್ಳಲು ಅಥವಾ ಹೆಚ್ಚಿಸಲು ಮಯೋನೈಸ್ ಬಳಸಬಹುದು. ಒಂದು ಬೌಲ್ ಗೆ ಎರಡು ಟೀಚಮಚ ಮಯೋನೈಸ್ ಸೇರಿಸಿ ಮತ್ತು ಅದಕ್ಕೆ ಅರ್ಧ ಟೀಸ್ಪೂನ್ ಜೇನುತುಪ್ಪ ಮತ್ತು ಆಲಿವ್ ಎಣ್ಣೆ ಸೇರಿಸಿ. ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ನಂತರ ಅದನ್ನು ಮುಖಕ್ಕೆ ಹಚ್ಚಿ. ಇದನ್ನು ಕನಿಷ್ಠ 20 ನಿಮಿಷಗಳ ಕಾಲ ಇರಿಸಿ, ನಂತರ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಸನ್ ಬರ್ನ್(Sun burn) ನಿವಾರಿಸಿ
ನೀವು ಇಷ್ಟಪಟ್ಟರೂ ಸಹ ಸೂರ್ಯನ ತೀಷ್ಣ ಬೆಳಕಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹಾಗಾಗಿ, ಟ್ಯಾನಿಂಗ್ ಮತ್ತು ಸನ್ ಬರ್ನ್ ಸಮಸ್ಯೆ ಎದುರಿಸಬೇಕಾಗುತ್ತೆ. ಆಗ ಮಯೋನೈಸ್ ನಿಮಗೆ ಸಹಾಯ ಮಾಡುತ್ತೆ. ಟ್ಯಾನ್ ಆದ ಚರ್ಮದ ಮೇಲೆ ತಣ್ಣನೆಯ ಮಯೋನೈಸ್ ಹಚ್ಚಿ. ಇದರಿಂದ ಆ ಭಾಗ ಮೃದುವಾಗಿ, ಸ್ಕಿನ್ ಹೈಡ್ರೇಟ್ ಮಾಡುತ್ತೆ. ಇದು ಸನ್ ಬರ್ನ್ ಆದ ಚರ್ಮವು ಬೇಗನೆ ಗುಣವಾಗಲು ಸಹಾಯ ಮಾಡುತ್ತೆ.
ಕೂದಲಿಗೆ(Hair) ಮಯೋನೈಸ್
ಮಯೋನೈಸ್ ಕೂದಲಿಗೆ ಅದ್ಭುತ ಮಾಸ್ಕ್. ವಿಶೇಷವಾಗಿ ಕೂದಲು ಶುಷ್ಕವಾಗಿ ಕಂಡರೆ, ಈ ಕೆನೆಭರಿತ ಮಯೋನೈಸ್ ಅದರ ಕಳೆದುಹೋದ ಶೈನ್ ಮರಳಿಸುತ್ತೆ. ಕಂಡೀಷನರ್, ಕೊಬ್ಬರಿ ಅಥವಾ ಬಾದಾಮಿ ಎಣ್ಣೆ, ಯಾವುದೋ ಒಂದು ನಿಮಗೆ ಸರಿಹೊಂದುವಂತಹ ಎಣ್ಣೆಯನ್ನು ಮಯೋನೈಸ್ ನಲ್ಲಿ ಸೇರಿಸಿ ಮತ್ತು ಈ ಮೂರನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ಈ ಪೇಸ್ಟ್ ನ್ನು ಕೂದಲಿಗೆ ಸರಿಯಾಗಿ ಹಚ್ಚಿ ಮತ್ತು ಅದರ ಮೇಲೆ ಶವರ್ ಕ್ಯಾಪ್ ಧರಿಸಿ. ಅರ್ಧ ಗಂಟೆಯ ನಂತರ ಕೂದಲನ್ನು ತೊಳೆಯಿರಿ. ಈ ಹೇರ್ ಮಾಸ್ಕ್ ಕೂದಲಿಗೆ ಸಾಫ್ಟ್ ಲುಕ್(Soft look) ನೀಡುತ್ತೆ ಮತ್ತು ಅದರ ಶೈನ್ ಹೆಚ್ಚಿಸುತ್ತೆ. ಇದರಿಂದ ರೇಷ್ಮೆಯಂತಹ ಸುಂದರ ಕೂದಲು ಬೆಳೆಯಲು ಸಾಧ್ಯವಾಗುತ್ತೆ. ಬೇಕಾದ್ರೆ ಟ್ರೈ ಮಾಡಿ ನೋಡಿ.
ಕೂದಲಿನಲ್ಲಿ ತಲೆಹೊಟ್ಟು(Dandruff) ಸಮಸ್ಯೆ ಇದ್ದರೆ ಮಯೋನೈಸ್ ಬಳಸಬಹುದು. ಮಯೋನೈಸ್ ಗೆ ಕೆಲವು ಹನಿ ನಿಂಬೆ ರಸ ಸೇರಿಸಿ, ಇದರಿಂದ ಕೂದಲನ್ನು ಮಸಾಜ್ ಮಾಡಿ. ಅರ್ಧಗಂಟೆ ಕಾಲ ಇರಿಸಿ ಬಳಿಕ ತಿಳಿ ಬಿಸಿ ನೀರಿನಲ್ಲಿ ನೆನೆಸಿದ ಟವೆಲ್ ಕೂದಲಿನ ಮೇಲೆ ಇರಿಸಿ ಕೂದಲನ್ನು ಸ್ಟೀಮ್ ಮಾಡಿ. ಇದರ ನಂತರ, ತಲೆಯನ್ನು ಶಾಂಪೂವಿನಿಂದ ತೊಳೆಯಿರಿ. ಈ ವಿಧಾನ ತಲೆಹೊಟ್ಟನ್ನು ನಿವಾರಿಸುತ್ತೆ! ಟ್ರೈ ಮಾಡಿ ನೋಡಿ..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.