ತ್ವಚೆ ಹೊಳೆಯುವಂತೆ ಮಾಡುತ್ತೆ ಈ ನ್ಯಾಚುರಲ್ ಫೋಮಿಂಗ್ ಫೇಸ್ ವಾಶ್
ಹಲವಾರು ಕಾರಣದಿಂದ ಮುಖದ ಮೇಲೆ ಧೂಳು, ಆಯ್ಲಿ ಮೊದಲಾದ ಕಣಗಳು ಬಂದು ಸೇರಿಕೊಳ್ಳುತ್ತೆ. ಇದನ್ನು ನಿವಾರಣೆ ಮಾಡದೇ ಇದ್ದರೆ ಮುಖದ ಮೇಲೆ ಕಲೆ, ಮೊಡವೆ ಇನ್ನಿತರ ಸಮಸ್ಯೆಗಳು (Skin Problem) ಉಂಟಾಗುತ್ತೆ. ಅದಕ್ಕಾಗಿಯೇ ಫೇಸ್ ವಾಶ್ ಬಳಸಬೇಕು, ಆದರೆ ಹೊರಗಡೆ ಸಿಗುವ ಫೇಸ್ ವಾಶ್ ಕೆಮಿಕಲ್ ಇರೋದ್ರಿಂದ ಅದು ಮುಖದ ಮೇಲೆ ಅಡ್ಡ ಪರಿಣಾಮ ಬೀರಬಹುದು. ಅದಕ್ಕಾಗಿಯೇ ಮನೆಯಲ್ಲಿಯೇ ನೀವು ಫೇಸ್ ವಾಶ್ ತಯಾರಿಸಬಹುದು. ಹೇಗೆ?
ಚರ್ಮವನ್ನು ಸ್ವಚ್ಛಗೊಳಿಸಲು, ಮಾರುಕಟ್ಟೆಯಲ್ಲಿ ಅನೇಕ ರೀತಿಯ ಫೇಸ್ ವಾಶ್ (Face Wash) ಲಭ್ಯವಿವೆ. ಆದರೆ ನೀವು ಚರ್ಮವನ್ನು ಕೆಮಿಕಲ್ ಫ್ರೀ ಆಗಿ ಸ್ವಚ್ಛಗೊಳಿಸಲು ಬಯಸಿದರೆ, ಆ ರೀತಿಯಲ್ಲಿ ಮನೆಯಲ್ಲಿ ಫೋಮಿಂಗ್ ಫೇಸ್ ವಾಶ್ ತಯಾರಿಸಿ. ಅಲೋವೆರಾ ಜೆಲ್, ಜೇನುತುಪ್ಪ (Honey Bee) ಮತ್ತು ಅಡುಗೆ ಸೋಡಾದಿಂದ ಮಾಡಿದ ಈ ಫೇಸ್ ವಾಶ್ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತೆ. ಅದನ್ನು ಹೇಗೆ ತಯಾರಿಸುವುದು ನೋಡೋಣ…
ಅಲೋವೆರಾ ಮತ್ತು ಜೇನುತುಪ್ಪದಿಂದ ಮಾಡಿದ ಈ ಹೋಮ್ ಮೇಡ್ ಫೋಮಿಂಗ್ ಫೇಸ್ ವಾಶ್ (homemade face wash) ಚರ್ಮವನ್ನು ಹೊರಗಿನಿಂದ ಮಾತ್ರವಲ್ಲದೆ ಒಳಗಿನಿಂದ ಸಹ ಸ್ವಚ್ಛಗೊಳಿಸುತ್ತದೆ. ಅದನ್ನ ಹೇಗೆ ಮಾಡೋದು ಅನ್ನೋದನ್ನು ತಿಳಿಯಲು ಮುಂದೆ ಓದಿ…
ಬೇಕಾಗುವ ಸಾಮಾಗ್ರಿಗಳು:
• 2 ಟೀಚಮಚ ಅಲೋವೆರಾ ಜೆಲ್
• 1 ಟೇಬಲ್ ಸ್ಪೂನ್ ಜೇನುತುಪ್ಪ
• 1 ಟೀ ಸ್ಪೂನ್ ಬೇಕಿಂಗ್ ಸೋಡಾ
• 2 ಟೇಬಲ್ ಸ್ಪೂನ್ ತುರಿದ ಸೋಪು
• ಅರ್ಧ ಕಪ್ ಬಿಸಿ ಬಿಸಿ ನೀರು
ಇವಿಷ್ಟು ಇದ್ದರೆ ಸಾಕು ಮನೆಯಲ್ಲಿಯೇ ಸುಲಭವಾಗಿ ಫೇಸ್ ವಾಶ್ ತಯಾರಿಸಬಹುದು.
ಫೇಸ್ ವಾಶ್ ತಯಾರಿಸೋದು ಹೇಗೆ ಅನ್ನೋದನ್ನು ನೋಡಿ :
• ಮೊದಲಿಗೆ ಒಂದು ಬೌಲ್ ನಲ್ಲಿ 1 ಟೀಸ್ಪೂನ್ ಬೇಕಿಂಗ್ ಸೋಡಾವನ್ನು (baking soda) ತೆಗೆದುಕೊಂಡು ಅದಕ್ಕೆ 2 ಟೀಸ್ಪೂನ್ ನೀರನ್ನು ಸೇರಿಸಿ ಪಕ್ಕಕ್ಕೆ ಇರಿಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ.
• ಈಗ ಸಾಬೂನನ್ನು ಗ್ರೇಟರ್ ಸಹಾಯದಿಂದ ತುರಿದುಕೊಳ್ಳಿ.
• ಈಗ, ಒಂದು ಬೌಲ್ ನಲ್ಲಿ 2 ಟೇಬಲ್ ಸ್ಪೂನ್ ತುರಿದ ಸಾಬೂನನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಅರ್ಧ ಕಪ್ ಬಿಸಿ ಕುದಿಸಿದ ನೀರನ್ನು ಸೇರಿಸಿ. ತುರಿದ ಸಾಬೂನು ಸಂಪೂರ್ಣವಾಗಿ ಕರಗುವವರೆಗೆ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ.
• ಈ ಸೋಪಿನ ದ್ರಾವಣಕ್ಕೆ 2 ಟೇಬಲ್ ಸ್ಪೂನ್ ಅಲೋವೆರಾ ಜೆಲ್ (aloe vera gel), 1 ಟೇಬಲ್ ಸ್ಪೂನ್ ಜೇನುತುಪ್ಪ ಮತ್ತು ಅಡುಗೆ ಸೋಡಾವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ.
• ಈಗ ಅದನ್ನು ಖಾಲಿ 200 ಮಿಲೀ ಬಾಟಲಿಯಲ್ಲಿ ತುಂಬಿಸಿ.
• ಈಗ ಮನೆಯಲ್ಲಿ ತಯಾರಿಸಿದ ಫೋಮಿಂಗ್ ಫೇಸ್ ವಾಶ್ (foaming face wash) ಬಳಸಲು ಸಿದ್ಧವಾಗಿದೆ.
• ಈಗ, ನಿಮ್ಮ ಮುಖವನ್ನು ನೀರಿನಿಂದ ಒದ್ದೆ ಮಾಡಿ ಮತ್ತು ಫೇಸ್ ವಾಶ್ ನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೆ 3 ನಿಮಿಷಗಳ ಕಾಲ ನಿಧಾನವಾಗಿ ಉಜ್ಜಿಕೊಳ್ಳಿ ಮತ್ತು ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ.
• ಅಲೋವೆರಾ ಜೆಲ್ ಚರ್ಮಕ್ಕೆ ಅಗತ್ಯವಾದ ತೇವಾಂಶ ಮತ್ತು ತಂಪನ್ನು ಒದಗಿಸುತ್ತದೆ. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಟ್ಯಾನಿಂಗ್ (tanning) ನಿವಾರಣೆ ಮಾಡುತ್ತೆ. ಇದು ಸನ್ ಬರ್ನ್ ನಿಂದ ಪರಿಹಾರವನ್ನು ಸಹ ಒದಗಿಸುತ್ತದೆ.
• ಅದೇ ಸಮಯದಲ್ಲಿ, ಅಡುಗೆ ಸೋಡಾವು ನಿಮ್ಮ ಚರ್ಮವನ್ನು ಸ್ವಚ್ಛ ಮತ್ತು ಕಲೆ ರಹಿತವಾಗಿಸಲು ಸಹಾಯ ಮಾಡುತ್ತದೆ. ಆದುದರಿಂದ ಕೆಮಿಕಲ್ ಯುಕ್ತ ಫೇಸ್ ವಾಶ್ ಬದಲು ಮನೆಯಲ್ಲಿಯೇ ನೀವು ನ್ಯಾಚುರಲ್ ಫೋಮಿಂಗ್ ಫೇಸ್ ವಾಶ್ ಬಳಕೆ ಮಾಡಬಹುದು.