ನಿಮ್ಮ ಆಭರಣಗಳನ್ನ ದೀರ್ಘಕಾಲ ಹೊಳೆಯುವಂತೆ ಇಡೋದು ಹೇಗೆ?
ನಿಮಗೂ ಬೆಲೆಬಾಳುವ ಆಭರಣ (jewellery) ಖರೀದಿಸಲು ಮತ್ತು ಧರಿಸಲು ಇಷ್ಟಪಡ್ತೀರಾ? ಧರಿಸಿದ್ರೆ ಮಾತ್ರ ಸಾಕಾಗಲ್ಲ, ಅದನ್ನು ಚೆನ್ನಾಗಿ ಇಡೋದು ಸಹ ಮುಖ್ಯ. ಇಲ್ಲಿ ಕೆಲವೊಂದು ಟಿಪ್ಸ್ ನೀಡಲಾಗಿದೆ. ಇವು ನಿಮ್ಮ ಆಭರಣಗಳನ್ನು ದೀರ್ಘಕಾಲದವರೆಗೆ ಸೇಫ್ ಆಗಿ, ಜೊತೆಗೆ ಹೊಳೆಯುವಂತೆ ಮಾಡುತ್ತೆ… ಅದಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್.
ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್ ಜ್ಯುವೆಲ್ಲರಿ (artificial tips) ಧರಿಸೋ ಕ್ರೇಜ್ ಹೆಚ್ಚಾಗಿದೆ. ಈ ಜ್ಯುವೆಲ್ಲರಿಗಳು ನಿಮ್ಮ ಅಂದವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ, ನಿಮಗೆ ಸ್ಟೈಲಿಶ್ ಲುಕ್ ನೀಡುತ್ತೆ. ನೀವು ಮಾರ್ಕೆಟಿನಿಂದ ನಿಮಗಿಷ್ಟವಾದ ಆರ್ಟಿಫಿಶಿಯಲ್ ಜ್ಯುವೆಲ್ಲರಿ ಖರೀದಿಸಬಹುದು. ಆದರೆ ಅದನ್ನು ಸರಿಯಾಗಿ ನೋಡಿಕೊಳ್ಳದೇ ಇದ್ದರೆ, ಅವು ಬೇಗನೆ ಕಪ್ಪಾಗುತ್ತೆ ಅಲ್ವಾ?
ಅನೇಕ ಬಾರಿ ಆಭರಣಗಳ ಹೊಳಪು (shining) ಸಮಯ ಕಳೆದಂತೆ ಮಸುಕಾಗುತ್ತಾ ಹೋಗುತ್ತದೆ. ಹೀಗೆ ಆಗಬಾರದು ಎಂದಾದರೆ, ನಿಮ್ಮ ಆಭರಣ ಯಾವಾಗಲೂ ಹೊಸದರಂತೆ ಕಾಣಬೇಕೆಂದು ನೀವು ಬಯಸಿದ್ರೆ ನೀ ಈ ಕೆಳಗಿನ ಟಿಪ್ಸ್ ಟ್ರೈ ಮಾಡಬಹುದು.
ಕೃತಕ ಆಭರಣಗಳನ್ನು ಸುರಕ್ಷಿತವಾಗಿರೋದು ಹೇಗೆ?
ಅನೇಕ ರೀತಿಯ ಆಭರಣಗಳಿವೆ. ನಿಮ್ಮ ಬಳಿಯೂ ಬೇರೆ ಬೇರೆ ರೀತಿಯ ಆಭರಣ ಇರಬಹುದು. ಎಲ್ಲಾ ಆಭರಣಗಳನ್ನು ಬೇರೆ ಬೇರೆಯಾಗಿರಿಸಿ. ಬೆಳ್ಳಿಯ ಆಭರಣಗಳನ್ನು ಒಟ್ಟಿಗೆ ಇರಿಸಿ. ಇತರ ಆರ್ಟಿಫಿಶಿಯಲ್ ಆಭರಣಗಳನ್ನು ಒಟ್ಟಿಗೆ ಇರಿಸಿ.
ಒಂದೇ ರೀತಿಯ ಆಭರಣಗಳನ್ನು ಒಟ್ಟಿಗೆ ಇರಿಸಿ. ಇದರಿಂದ ಆಭರಣ ದೀರ್ಘಕಾಲ ಚೆನ್ನಾಗಿರುತ್ತೆ. ಆಭರಣಗಳನ್ನು ತೆಗೆದಿಡುವ ಮೊದಲು ಅದನ್ನು ಕ್ಲೀನ್ ಮಾಡಿ, ಚೆನ್ನಾಗಿ ಒರೆಸಿ ಮತ್ತು ಅದನ್ನು ಬಟ್ಟೆಯಲ್ಲಿ ಕಟ್ಟಿ ಇಡಿ.
ಅನೇಕ ಬಾರಿ, ಆಭರಣಗಳ ಮೇಲೆ ನೀರು ಅಥವಾ ಇನ್ನೇನೋ ಹಾಕುತ್ತೀರಿ, ಅಥವಾ ಬೆವರಿನ ಕಲೆ ಉಳಿಯುತ್ತದೆ, ಈ ರೀತಿ ಇದ್ದರೆ, ಕೊಳಕು ಆಭರಣಗಳಿಗೆ ಅಂಟಿಕೊಳ್ಳುತ್ತದೆ ಮತ್ತು ಆಭರಣಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಆದ್ದರಿಂದ ಆಭರಣಗಳನ್ನು (jewelry) ಯಾವಾಗಲೂ ಸ್ವಚ್ಛವಾಗಿ ಮತ್ತು ಶುಷ್ಕವಾಗಿರಿಸಿಕೊಳ್ಳಿ.
ಆಭರಣಗಳನ್ನು ಸ್ವಚ್ಛಗೊಳಿಸಲು, 2 ಟೀಸ್ಪೂನ್ ಡಿಶ್ ವಾಷರ್ ಅನ್ನು 1 ಬೌಲಿನಲ್ಲಿ ತೆಗೆದುಕೊಳ್ಳಿ ಮತ್ತು ಅದಕ್ಕೆ ಉಗುರು ಬೆಚ್ಚಗಿನ ನೀರನ್ನು ಸೇರಿಸಿ ಸೊಲ್ಯೂಶನ್ ತಯಾರಿಸಿ. ಈ ದ್ರಾವಣದಲ್ಲಿ ಆಭರಣಗಳನ್ನು ಹಾಕಿ ನಂತರ ಮೃದುವಾದ ಬಟ್ಟೆಯಿಂದ ಚೆನ್ನಾಗಿ ಸ್ವಚ್ಛಗೊಳಿಸಿ.
ಭಾರವಾದ ಒಡವೆ (heavy jewelry) ಮತ್ತು ತೆಳುವಾದ ಆಭರಣಗಳನ್ನು ಪ್ರತ್ಯೇಕವಾಗಿಡಿ. ತೆಳುವಾದ ಆಭರಣಗಳನ್ನು ಪಾಲಿಥಿನ್ ನಲ್ಲಿ ಹಾಕಿ. ಭಾರವಾದ ಮತ್ತು ದಪ್ಪವಾದ ಆಭರಣಗಳನ್ನು ಒಂದು ಪೆಟ್ಟಿಗೆಯಲ್ಲಿ ಇರಿಸಿ.
ನೇರ ಸೂರ್ಯನ ಬೆಳಕು ಇಲ್ಲದ ಸ್ಥಳದಲ್ಲಿ ಆಭರಣಗಳನ್ನು ಇರಿಸಿ. ಯಾಕೆಂದರೆ ಸೂರ್ಯನ ಬೆಳಕಿನಿಂದಾಗಿ ಆಭರಣಗಳು ಹಾಳಾಗುವ ಸಾಧ್ಯತೆ ಹೆಚ್ಚಿದೆ. ಒಂದು ಚೀಲದಲ್ಲಿ ಆಭರಣಗಳನ್ನು ಚೆನ್ನಾಗಿ ಕಟ್ಟಿ ಇಡಿ, ಅದಕ್ಕೆ ಗಾಳಿ ಮತ್ತು ಬಿಸಿ ತಾಕದಂತೆ ನೋಡಿ, ಇಲ್ಲವಾದರೆ ಅವು ಹಾಳಾಗುವ ಸಾಧ್ಯತೆ ಹೆಚ್ಚಿದೆ.