ಕೆಲಸದಲ್ಲಿ 100% ಗಮನ, ಮಾನಸಿಕ ಶಾಂತಿಗಾಗಿ ನಿಮ್ಮ ಡೆಸ್ಕ್ ಮೇಲೆ ಈ 7 ಗಿಡಗಳನ್ನಿಡಿ
ಕೆಲವೊಮ್ಮೆ ನಮ್ಮ ವರ್ಕ್‌ಸ್ಟೇಷನ್‌ನಲ್ಲಿ ಕೆಲಸ ಮಾಡಲು ಎನರ್ಜಿ ಇರೋದಿಲ್ಲ. ಮನಸ್ಸು ಕೂಡ ಚಂಚಲವಾಗಿರುತ್ತದೆ. ಇಂತಹ ಸಮಯದಲ್ಲಿ ಗಿಡಗಳು ನಿಮಗೆ ಸಹಾಯ ಮಾಡಬಲ್ಲವು. ಕೆಲವು ಗಿಡಗಳು ಅದೃಷ್ಟವೂ ಹೌದು.
life Feb 20 2026
Author: Gowthami K Image Credits:Gemini AI
Kannada
ಅಗ್ಲೋನೆಮಾ
ಅಗ್ಲೋನೆಮಾ ಗಿಡ ಕಡಿಮೆ ಬೆಳಕಿನಲ್ಲೂ ಸುಲಭವಾಗಿ ಬೆಳೆಯುತ್ತದೆ. ಇದು ವರ್ಕ್‌ಸ್ಟೇಷನ್‌ಗೆ ಹೇಳಿ ಮಾಡಿಸಿದ ಗಿಡ. ಇದು ಗಾಳಿಯನ್ನು ಶುದ್ಧೀಕರಿಸುವುದರ ಜೊತೆಗೆ ಡೆಸ್ಕ್‌ಗೆ ಫ್ರೆಶ್ ಮತ್ತು ಸ್ಟೈಲಿಶ್ ಲುಕ್ ನೀಡುತ್ತದೆ.
Image credits: Getty
Kannada
ಝಡ್‌ಝಡ್ ಪ್ಲಾಂಟ್
ಝಡ್‌ಝಡ್ ಪ್ಲಾಂಟ್‌ಗೆ ಹೆಚ್ಚು ಆರೈಕೆಯ ಅಗತ್ಯವಿಲ್ಲ. ಕಡಿಮೆ ಬೆಳಕು ಇರುವ ಆಫೀಸ್ ಅಥವಾ ಕ್ಯಾಬಿನ್‌ಗೆ ಇದು ಬೆಸ್ಟ್ ಚಾಯ್ಸ್. ಇದರ ಹೊಳೆಯುವ ಎಲೆಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ.
Image credits: pexels
Kannada
ಬ್ರೊಮೆಲಿಯಾಡ್
ಬಣ್ಣಬಣ್ಣದ ಎಲೆಗಳನ್ನು ಹೊಂದಿರುವ ಈ ಬ್ರೊಮೆಲಿಯಾಡ್ ಗಿಡ, ನಿಮ್ಮ ಡೆಸ್ಕ್‌ಗೆ ತಕ್ಷಣವೇ ರಿಫ್ರೆಶ್ ಲುಕ್ ನೀಡುತ್ತದೆ. ಕಡಿಮೆ ನೀರಿನಲ್ಲೂ ಬೆಳೆಯುವುದರಿಂದ ವರ್ಕ್‌ಸ್ಟೇಷನ್‌ಗೆ ಇದು ತುಂಬಾ ಸೂಕ್ತ.
Image credits: yarden.com
Kannada
ಪೀಸ್ ಲಿಲ್ಲಿ
ಪೀಸ್ ಲಿಲ್ಲಿ ಗಿಡವು ಒತ್ತಡವನ್ನು ಕಡಿಮೆ ಮಾಡಲು ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನು ಆಫೀಸ್ ಡೆಸ್ಕ್ ಮೇಲೆ ಇಡುವುದರಿಂದ ಶಾಂತಿಯುತ ಮತ್ತು ಸುಂದರವಾದ ನೋಟ ಸಿಗುತ್ತದೆ.
Image credits: pinterest
Kannada
ಸ್ನೇಕ್ ಪ್ಲಾಂಟ್
ಸ್ನೇಕ್ ಪ್ಲಾಂಟ್ ರಾತ್ರಿ ವೇಳೆಯೂ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಮತ್ತು ಗಾಳಿಯನ್ನು ಶುದ್ಧೀಕರಿಸುತ್ತದೆ. ಆಫೀಸ್ ಅಥವಾ ವರ್ಕ್‌ಸ್ಟೇಷನ್‌ಗೆ ಇದು ಅತ್ಯಂತ ಜನಪ್ರಿಯ ಮತ್ತು ಕಡಿಮೆ ನಿರ್ವಹಣೆಯ ಗಿಡವಾಗಿದೆ.
Image credits: Getty
Kannada
ಡ್ರಾಸೀನಾ
ಡ್ರಾಸೀನಾದ ಉದ್ದ ಮತ್ತು ನಯವಾದ ಎಲೆಗಳು ವರ್ಕ್‌ಸ್ಟೇಷನ್‌ಗೆ ಸ್ಟೈಲಿಶ್ ಟಚ್ ನೀಡುತ್ತವೆ. ಕಡಿಮೆ ಬೆಳಕಿನಲ್ಲೂ ಸುಲಭವಾಗಿ ಬದುಕಬಲ್ಲ ಈ ಗಿಡ ಆಫೀಸ್‌ಗೆ ಉತ್ತಮ ಆಯ್ಕೆಯಾಗಿದೆ.
Image credits: Getty
Kannada
ಫಿಕಸ್ ಬೆಂಜಮಿನಾ
ಈ ಗಿಡವು ನೈಸರ್ಗಿಕ ಹಸಿರಿನ ಅನುಭವ ನೀಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ವರ್ಕ್‌ಸ್ಟೇಷನ್‌ನಲ್ಲಿ ಇಡುವುದರಿಂದ ವಾತಾವರಣವು ಪಾಸಿಟಿವ್ ಮತ್ತು ಪ್ರೊಫೆಷನಲ್ ಆಗಿ ಕಾಣುತ್ತದೆ.