ದೀರ್ಘಕಾಲ Mayonnaise ರುಚಿ ಹಾಳಾಗ್ಬಾರದೆಂದ್ರೆ ಹೀಗ್ ಮಾಡಿ

ಪಿಜ್ಜಾ, ಬರ್ಗರ್ ಗೆ ಮೇಯನೇಸ್ ಬೇಕೇಬೇಕು. ಮಕ್ಕಳಿಗೆ ಅತ್ಯಂತ ಪ್ರಿಯವಾದ ತಿಂಡಿಯಲ್ಲಿ ಇದೂ ಒಂದು. ಕೆಲ ಮಕ್ಕಳು ಹಾಗೆಯೇ ಮೇಯನೇಸ್ ತಿನ್ನುತ್ತಾರೆ. ಆದ್ರೆ ಈ ಮೇಯನೇಸ್ ಕೆಲವೊಮ್ಮೆ ಸ್ಮೆಲ್ ಆಗುತ್ತೆ. ಅದಕ್ಕೆ ನಾವು ಸಂಗ್ರಹಿಸುವ ವಿಧಾನವೇ ಕಾರಣ.
 

Kitchen Tips Of Store Mayonnaise

ಅಡುಗೆಗೆ ಅವಶ್ಯಕ ಅಂತ ಕೆಲ ವಸ್ತುಗಳನ್ನು ನಾವು ಮನೆಗೆ ತಂದಿರ್ತೇವೆ. ಆದ್ರೆ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡೋದಿಲ್ಲ. ಉಳಿದಿದ್ದನ್ನು ಹಾಗೆ ಫ್ರಿಜ್ ನಲ್ಲಿ ಇಡ್ತೇವೆ. ಫ್ರಿಜ್ ನಲ್ಲಿರುವ ಆಹಾರಕ್ಕೂ ಅವಧಿಯಿದೆ. ತಿಂಗಳುಗಟ್ಟಲೆ ಫ್ರಿಜ್ ನಲ್ಲಿ ಆಹಾರವನ್ನು ಇಟ್ಟು ನಂತ್ರ ಸೇವನೆ ಮಾಡೋದು ಒಳ್ಳೆಯದಲ್ಲ. ಹಾಗೆಯೇ ಫ್ರಿಜ್ ನಲ್ಲಿಟ್ಟ ಎಲ್ಲ ಆಹಾರದ ರುಚಿ ಹಾಗೇ ಇರುತ್ತೆ ಎನ್ನಲು ಸಾಧ್ಯವಿಲ್ಲ. ಕೆಲ ಆಹಾರದ ರುಚಿ ಬೇಗ ಹಾಳಾಗುತ್ತದೆ. ಅಡುಗೆ ಮನೆಯಲ್ಲಿ ಬಳಸುವ ಪ್ರಮುಖ ಪದಾರ್ಥಗಳಲ್ಲಿ ಮೇಯನೇಸ್ ಕೂಡ ಒಂದು.  ಪಿಜ್ಜಾ, ಸ್ಯಾಂಡ್ ವಿಚ್, ಬರ್ಗರ್, ಪಾಸ್ತಾ ಮುಂತಾದ ಆಹಾರದ ರುಚಿಯನ್ನು ಮೇಯನೇಸ್ ಹೆಚ್ಚಿಸುತ್ತದೆ. ಆದ್ರೆ ಪ್ರತಿ ದಿನ ಪಿಜ್ಜಾ, ಬರ್ಗರ್ ಮಾಡೋದಿಲ್ಲ. ಹಾಗಾಗಿ ಉಳಿದ ಮೇಯನೇಸ್ ಅನ್ನು ಬಹುತೇಕರು ಫ್ರಿಜ್‌ನಲ್ಲಿ ಸಂಗ್ರಹಿಸುತ್ತಾರೆ. ಮೇಯನೇಸ್ ಅನ್ನು ದೀರ್ಘಕಾಲದವರೆಗೆ ಫ್ರಿಜ್ ನಲ್ಲಿ ಇಡುವುದರಿಂದ ಅದರ ರುಚಿ  ಕೆಡುತ್ತದೆ.

ನಿಮಗೆ ತಿಳಿದಿರುವಂತೆ ಮೇಯನೇಸ್‌ (Mayonnaise ) ನಲ್ಲಿ ಎರಡು ವಿಧಗಳಿವೆ. ಒಂದು ಮೊಟ್ಟೆ (Egg) ಹಾಕಿರುವ ಮೇಯನೇಸ್ ಇನ್ನೊಂದು ಮೊಟ್ಟೆ ಹಾಕದ ಮೇಯನೇಸ್. ಈ ಎರಡೂ ರೀತಿಯ ಮೇಯನೇಸ್ ಅನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಅದರಿಂದ ವಾಸನೆ ಬರುವುದು ಸಾಮಾನ್ಯ. ಮೇಯನೇಸ್ ಸಂಗ್ರಹಿಸುವಾಗ ಕೆಲವೊಂದು ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲವೆಂದ್ರೆ ಮೇಯನೇಸ್ ಬೇಗ ಹಾಳಾಗುತ್ತದೆ. ಇಂದು ನಾವು ಮೇಯನೇಸ್ ಸಂಗ್ರಹಿಸೋದು ಹೇಗೆ ಎಂಬುದನ್ನು ಹೇಳ್ತೇವೆ.

ಹಾಳಾಗದಂತೆ ಮೇಯನೇಸ್ ಹೀಗೆ ಸಂಗ್ರಹಿಸಿ :

ತಾಪಮಾನ (Temperature ) ದ ಬಗ್ಗೆ ಗಮನವಿರಲಿ : ಮೇಯನೇಸ್ ಸಂಗ್ರಹಿಸುವ ವೇಳೆ ನೀವು ತಾಪಮಾನದ ಬಗ್ಗೆ ಗಮನ ಹರಿಸಬೇಕು. ಅತಿಯಾದ ಬಿಸಿ ಅಥವಾ ಅತಿಯಾದ ತಂಪಾದ ವಾತಾವರಣದಲ್ಲಿ ಮೇಯನೇಸ್ ಇದ್ದರೆ ಬೇಗ ಹಾಳಾಗುತ್ತದೆ. ಹಾಗಾಗಿ ಮೇಯನೇಸ್ ಇಡಲು 55 ಡಿಗ್ರಿ ತಾಪಮಾನ ಬೆಸ್ಟ್ ಎನ್ನುತ್ತಾರೆ ತಜ್ಞರು. ಇನ್ಮುಂದೆ ಮೇಯನೇಸ್ ಸಂಗ್ರಹಿಸುವ ಮುನ್ನ ಆ ಜಾಗದ ತಾಪಮಾನ 55 ಡಿಗ್ರಿ ಇದ್ಯಾ ಎಂದು ಪರೀಕ್ಷಿಸಿಕೊಳ್ಳಿ.

ಏರ್ ಟೈಟ್ (Air Tight) ಡಬ್ಬದಲ್ಲಿ ಮೇಯನೇಸ್ ಇಡಿ : ದೊಡ್ಡ ಪ್ರಮಾಣದಲ್ಲಿ ನೀವು ಮೇಯನೇಸ್ ಖರೀದಿ ಮಾಡಿದ್ದರೆ ಅದನ್ನು ಅನೇಕ ದಿನಗಳ ಕಾಲ ಸುರಕ್ಷಿತವಾಗಿ ಇಡಬೇಕಾಗುತ್ತದೆ. ಆ ಸಂದರ್ಭದಲ್ಲಿ ನೀವು ಏರ್ ಟೈಟ್ ಡಬ್ಬವನ್ನು ಆಯ್ಕೆ ಮಾಡಿಕೊಳ್ಳಬೇಕು. ಮೇಯನೇಸ್ ಅನ್ನು ಏರ್ ಟೈಟ್ ಡಬ್ಬದಲ್ಲಿ ಹಾಕಿಟ್ಟರೆ ಅದು ಬೇಗ ಹಾಳಾಗುವುದಿಲ್ಲ. ಗಾಳಿ ಅದನ್ನು ಸೇರದ ಕಾರಣ ತುಂಬಾ ದಿನ ಮೇಯನೇಸ್ ತಾಜಾ ಆಗಿರುತ್ತದೆ.

Home Remedies: ಪದೇ ಪದೇ ಕಾಡೋ ವಾಕರಿಕೆಗೆ ಇಲ್ಲಿವೆ ಸಿಂಪಲ್ ಮದ್ದು, ಏನ್ಮಾಡಬಹುದು?

ಖರೀದಿ ವೇಳೆ ಗಮನ : ಮೇಯನೇಸ್ ಖರೀದಿ ಮಾಡ್ತಿದ್ದೀರಿ ಎಂದಾದ್ರೆ ಖರೀದಿಗೆ ಮುನ್ನ ಕೆಲ ವಿಷ್ಯಗಳನ್ನು ನೀವು ಗಮನಿಸಬೇಕು. ಮುಖ್ಯವಾಗಿ ದಿನಾಂಕ ಯಾವಾಗ ಮುಗಿಯಲಿದೆ ಎಂಬುದನ್ನು ಪರೀಕ್ಷಿಸಿ. ಕೆಲವೇ ದಿನಗಳಲ್ಲಿ ಅವಧಿ ಮುಕ್ತಾಯದ ದಿನಾಂಕವಿದ್ದರೆ ಅದನ್ನು ಖರೀದಿಸಲು ಹೋಗ್ಬೇಡಿ. ಹಾಗೆಯೇ ಈಗ ಮಾರುಕಟ್ಟೆಗೆ ಸಣ್ಣ ಡಬ್ಬದಿಂದ ಹಿಡಿದಿ ದೊಡ್ಡ ಡಬ್ಬದವರೆಗೆ ಅನೇಕ ವಿಧದಲ್ಲಿ ಮೇಯನೇಸ್ ಲಭ್ಯವಿದೆ. ನಿಮ್ಮ ಅಗತ್ಯತೆ ನೋಡಿ ನೀವು ಮೇಯನೇಸ್ ಖರೀದಿ ಮಾಡಿದ್ರೆ ಒಳ್ಳೆಯದು. ಆಗ ಹೆಚ್ಚಿನ ಪ್ರಮಾಣದ ಮೇಯನೇಸ್ ಸಂಗ್ರಹಿಸುವ ಸಮಸ್ಯೆ ಬರುವುದಿಲ್ಲ.

Kitchen Hack: ಸೇಬು ಮೇಲಿನ ವ್ಯಾಕ್ಸ್ ತೆಗೆಯೋದು ಸುಲಭ

ಮೇಯನೇಸ್ ಆರೋಗ್ಯಕ್ಕೆ (Health) ಒಳ್ಳೆಯದು. ಇದ್ರಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಮೇಯನೇಸ್ ನಲ್ಲಿ ವಿಟಮಿನ್-ಇ, ವಿಟಮಿನ್-ಕೆ ಸಮೃದ್ಧವಾಗಿದೆ. ಇದು ಕೊಬ್ಬಿನಿಂದ ಕೂಡಿದೆ ಎಂದು ಅನೇಕರು ಭಾವಿಸಿದ್ದಾರೆ. ಆದ್ರೆ ಒಂದು ಕಪ್ ಮೇಯನೇಸ್ ನಲ್ಲಿ 1440 ಕ್ಯಾಲೋರಿ ನಿಮಗೆ ಸಿಗಲಿದೆ. ಹಾಗೆಯೇ ಒಂದು ಕಪ್ ಮೇಯನೇಸ್ ನಲ್ಲಿ 160 ಗ್ರಾಂ ಕೊಬ್ಬು ಮತ್ತು 24 ಗ್ರಾಂ ಅಪರ್ಯಾಪ್ತ ಕೊಬ್ಬು ಸಿಗಲಿದೆ.  
 

Latest Videos
Follow Us:
Download App:
  • android
  • ios