Monsoon Hair Care: ತಲೆಯಲ್ಲಿ ತುರಿಕೆನಾ? ಕೂದಲ ಆರೋಗ್ಯಕ್ಕೆ ಹೀಗ್ಮಾಡಿ
ಕೂದಲನ್ನು ಒಣಗಿಸಿ ಇಟ್ಟುಕೊಳ್ಳುವುದು ಮಳೆಗಾಲದಲ್ಲಿ ಸವಾಲು. ಎಲ್ಲಾದರೂ ನಾಲ್ಕು ಹನಿ ಮಳೆ ನೀರು ತಾಗಿದರೂ ಬ್ಯಾಕ್ಟೀರಿಯಾ, ಫಂಗಸ್ ಹಾಗೂ ಇತರೆ ಪರೋಪಜೀವಿಗಳು ತಲೆಬುಡದಲ್ಲಿ ಬೆಳೆಯಬಲ್ಲವು. ಇದರಿಂದ ಕೂದಲು ಉದುರುವುದು ಹೆಚ್ಚಾಗುತ್ತದೆ. ಹೀಗಾಗಿ, ಕೂದಲ ರಕ್ಷಣೆಗೆ ಆದ್ಯತೆ ನೀಡುವುದು ಮುಖ್ಯ.
ಮಳೆಗಾಲ ಹಿತವೆನಿಸಿದರೂ ಚಿಕ್ಕಪುಟ್ಟ ಕಿರಿಕಿರಿಗಳನ್ನು ಒಡ್ಡುತ್ತಲೇ ಇರುತ್ತದೆ. ಮಳೆಯ ಸಮಯದಲ್ಲಿ ಶೀತದ ಜತೆಗೆ, ದೇಹದಲ್ಲಿ ನೋವು, ಚರ್ಮದ ಸಮಸ್ಯೆಗಳು ಹೆಚ್ಚುತ್ತವೆ. ಹಾಗೆಯೇ ಕೂದಲು ಉದುರುವ ಸಮಸ್ಯೆ ಮೊದಲೇ ಇದ್ದರೆ ಈ ಸಮಯದಲ್ಲಿ ಅದು ಇನ್ನಷ್ಟು ಅಧಿಕವಾಗುತ್ತದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕೂದಲು ಕಳಾಹೀನವಾಗುತ್ತದೆ. ಒರಟಾಗಿದ್ದು, ನೀಟಾಗಿ ಇಟ್ಟುಕೊಳ್ಳಲು ಕಷ್ಟವಾಗುತ್ತದೆ. ಹೊಟ್ಟು ಹೆಚ್ಚಾಗುವುದು ಸಹ ಈ ಕಾಲದ ಸಾಮಾನ್ಯ ಸಮಸ್ಯೆ. ಹಾಗೆಯೇ, ತಲೆಗೂದಲಿನ ಬುಡ ಜಿಡ್ಡಾಗುವ ಮೂಲಕ ತುರಿಕೆ ಕಂಡುಬರುತ್ತದೆ. ಇಷ್ಟು ದಿನ ಸರಿಯಾಗಿದ್ದ ಕೂದಲು ಈಗ ಏಕಾಏಕಿ ಹಾಳಾದಂತೆ ಭಾಸವಾಗಲು ಆರಂಭವಾಗುತ್ತದೆ. ಕೂದಲಿನ ಬಗ್ಗೆ ಕಾಳಜಿ ವಹಿಸಲು ಸಮಯವಿಲ್ಲವೇನೋ ಎನ್ನುವಂತೆ ಕಾಣಿಸುತ್ತದೆ. ತಲೆಗೂದಲಿನ ಬುಡದಲ್ಲಿರುವ ಮೇದೋಗ್ರಂಥಿಗಳು ತೈಲದ ಅಂಶವನ್ನು ಉತ್ಪಾದಿಸುತ್ತವೆ. ಮಳೆಗಾಲದ ತೇವಾಂಶದಲ್ಲೂ ಇವು ಅಧಿಕವಾಗಿ ಉತ್ಪಾದನೆಯಾಗುತ್ತವೆ. ಸಮಯಕ್ಕೆ ಸರಿಯಾಗಿ ತಲೆಯನ್ನು ಸ್ವಚ್ಛಗೊಳಿಸಿಕೊಳ್ಳದೆ ಇದ್ದರೆ ಈ ಜಿಡ್ಡಿನ ಅಂಶದಿಂದಾಗಿ ಕೂದಲಿನ ಬುಡದಲ್ಲಿ ಬ್ಯಾಕ್ಟೀರಿಯಾ ಬೆಳೆಯಬಲ್ಲದು. ಮೇದೋಗ್ರಂಥಿಗಳು ಉತ್ಪಾದಿಸುವ ಸೆಬಮ್ ಸ್ರಾವದಿಂದ ಕೂದಲಿನ ಬುಡದಲ್ಲಿ ಸುಲಭವಾಗಿ ಬ್ಯಾಕ್ಟೀರಿಯಾ ಉತ್ಪಾದನೆ ಆಗುತ್ತವೆ. ಹೀಗಾಗಿ, ತಲೆಹೊಟ್ಟು ಸೇರಿದಂತೆ ಹಲವು ಸಮಸ್ಯೆಗಳು ಉಲ್ಬಣವಾಗಬಹುದು. ಕೂದಲಿನ ಆರೋಗ್ಯವನ್ನು ಎಲ್ಲ ಕಾಲದಲ್ಲೂ ಕಾಪಾಡಿಕೊಳ್ಳಬೇಕು. ಹಾಗೆಯೇ ಮಳೆಗಾಲದಲ್ಲೂ ಇದು ಅತ್ಯವಶ್ಯ. ಇಲ್ಲವಾದಲ್ಲಿ ಸಮಸ್ಯೆ ಸಾಮಾನ್ಯ.
· ಕೂದಲು ಉದುರುವ (Hairfall) ಸಮಸ್ಯೆ
ಮಳೆಗಾಲದಲ್ಲಿ (Monsoon) ಕೂದಲು ಉದುರುವುದು ಹೆಚ್ಚು. ತೇವಾಂಶದ (Humidity) ಕಾರಣದಿಂದ ತಲೆಗೂದಲ (Scalp) ಬುಡಕ್ಕೆ ಬ್ಯಾಕ್ಟೀರಿಯಾ (Bacteria) ಕಾಟ ಹೆಚ್ಚು. ಹೀಗಾಗಿ, ಕೂದಲು ಉದುರುವ ಸಮಸ್ಯೆ ಮಳೆಗಾಲದಲ್ಲಿ ಶೇಕಡ 30ರಷ್ಟು ಹೆಚ್ಚಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಅಲ್ಲದೆ, ಕೂದಲು ತುಂಡಾಗುವುದು ಸಹ ಕಂಡುಬರುತ್ತದೆ. ಮಾಲಿನ್ಯ, ಧೂಳಿನಿಂದಲೂ ಕೂದಲು ಉದುರುವ ತೊಂದರೆ ತೀವ್ರವಾಗುತ್ತದೆ.
ರಿವರ್ಸ್ ಹೇರ್ ವಾಷಿಂಗ್ ಎಂದರೇನು?
· ತಲೆಹೊಟ್ಟು (Dandruff)
ತಲೆಹೊಟ್ಟಿಗೆ ಸಾಮಾನ್ಯವಾಗಿ ಮಲಸ್ಸೆಝಿಯಾ ಎನ್ನುವ ಫಂಗಸ್ (Fungus) ಕಾರಣ. ಇದು ನಮ್ಮ ಕೂದಲಿನ ಬುಡದಲ್ಲಿರುತ್ತದೆ. ಅಧಿಕ ತೇವಾಂಶದ ಕಾರಣ ಮಳೆಗಾಲದಲ್ಲಿ ಇವು ತಮ್ಮ ಸಂಖ್ಯೆ ವೃದ್ಧಿಸಿಕೊಳ್ಳುತ್ತವೆ. ಮೃತ ಚರ್ಮದ (Dead Skin) ಒಂದು ಪದರವೇ ನಿರ್ಮಾಣವಾಗಿಬಿಡುತ್ತದೆ. ಹೀಗಾಗಿ, ತಲೆಯಲ್ಲಿ ತುರಿಕೆ ಉಂಟಾಗುತ್ತದೆ. ಬೆವರಿನಿಂದ ಹೀಗಾಗುತ್ತಿರಬಹುದು ಎಂದು ನಾವು ಭಾವಿಸುತ್ತೇವೆ. ಆದರೆ, ಇದಕ್ಕೆ ತಲೆಹೊಟ್ಟು ಮತ್ತು ಈ ಫಂಗಸ್ ಮುಖ್ಯ ಕಾರಣ.
· ಪರೋಪಜೀವಿಗಳು!
ಮಳೆಗಾಲದಲ್ಲಿ ಕಿರಿಕಿರಿಯ ವಿಚಾರವೆಂದರೆ, ನಮ್ಮ ತಲೆ ಪರೋಪಜೀವಿಗಳ ತಾಣವಾಗಿ ಪರಿಣಮಿಸುತ್ತದೆ. ಇವು ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂಥವು. ಹೀಗಾಗಿ, ಮತ್ತೊಬ್ಬರ ಬಾಚಣಿಕೆ (Comb) ಬಳಕೆ ಮಾಡಬಾರದು. ತಾಪಮಾನದಲ್ಲಿ ಉಂಟಾಗುವ ಏರಿಳಿತದಿಂದಾಗಿ ಕಣ್ಣಿಗೆ ಕಾಣದ ಪರೋಪಜೀವಿಗಳು ನಮ್ಮ ತಲೆಯಲ್ಲಿ ನೆಲೆಯಾಗುತ್ತವೆ.
· ಕೂದಲ ಬುಡದಲ್ಲಿ ಸೋಂಕು (Infection)
ಮಳೆಯಿಂದ ಕೆಲವೊಮ್ಮೆ ಕೂದಲು ಒದ್ದೆಯಾಗುತ್ತದೆ. ಆಸಿಡಿಕ್ (Acidic) ಮಳೆಯಿದ್ದಾಗ ತಲೆಗೂದಲ ಬುಡದಲ್ಲಿರುವ ತೈಲವೂ ಸೇರಿಕೊಂಡು ಜಿಡ್ಡು (Oily) ಸೃಷ್ಟಿಯಾಗುತ್ತದೆ. ಹೀಗಾಗಿ, ಹೊಟ್ಟಿಗೆ ಕಾರಣವಾಗುವ ಫಂಗಸ್ ಮಾತ್ರವಲ್ಲದೆ, ಇತರೆ ಫಂಗಸ್ ಹಾಗೂ ಬ್ಯಾಕ್ಟೀರಿಯಾಗಳು ವೃದ್ಧಿಯಾಗುತ್ತವೆ. ಕೀವು (Pus) ತುಂಬಿದ ಪುಟ್ಟ ಪುಟ್ಟ ಗುಳ್ಳೆಗಳು ಉಂಟಾಗಬಹುದು. ಇದರಿಂದಾಗಿ ತುರಿಕೆ (Itchiness) ಕಂಡುಬರುತ್ತದೆ.
ಮಲಗುವಾಗ ಕೂದಲು ಬಿಚ್ಚಿ ಮಲಗಬೇಕೋ, ಹರಡಿ ಮಲಗಬೇಕೋ?
ಕೂದಲ ರಕ್ಷಣೆಗೆ ಟಿಪ್ಸ್ (Tips)
· ಕೂದಲ ಸ್ವಚ್ಛತೆ (Clean) ಕಾಪಾಡಿಕೊಳ್ಳಿ. ಮಳೆಯಲ್ಲಿ ನೆನೆಯಬೇಡಿ. ಕೂದಲನ್ನು ಒದ್ದೆಯಾಗಿಟ್ಟುಕೊಳ್ಳಬೇಡಿ. ಒಂದೊಮ್ಮೆ ಒದ್ದೆಯಾದರೆ ಬಿಸಿನೀರಿನಿಂದ ಸಾಧ್ಯವಾದಷ್ಟು ಬೇಗ ಸ್ನಾನ ಮಾಡಿ. ಉತ್ತಮ ಗುಣಮಟ್ಟದ ಶ್ಯಾಂಪೂ (Shampoo) ಬಳಕೆ ಮಾಡಿ.
· ಜಿಡ್ಡಿನಂಶ ಹೆಚ್ಚಿರುವವರು ಸೌಮ್ಯ ಕಂಡಿಷನರ್ (Conditioner) ಹೊಂದಿರುವ ಶ್ಯಾಂಪೂ ಬಳಸಿ. ಈಗಾಗಲೇ ಹೊಟ್ಟಿನ ಸಮಸ್ಯೆ ಇದ್ದರೆ ಆಂಟಿಫಂಗಲ್ ಶ್ಯಾಂಪೂ ಬಳಸಿ.