ಯುಟಿಐ ಲಕ್ಷಣಗಳಿವು…. ಇಗ್ನೋರ್ ಮಾಡದೆ ಔಷಧಿ ಸೇವಿಸಿ
ಯುಟಿಐ( Urinary Tract infection) ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಡುತ್ತದೆ. ಯುಟಿಐ ಸಮಸ್ಯೆ ಮೂತ್ರ ನಾಳದ ಯಾವುದೇ ಭಾಗದಲ್ಲಿ ಉಂಟಾಗಬಹುದು. ಇದು ನಿಮ್ಮ ಕಿಡ್ನಿ, ಮೂತ್ರಕೋಶ, ಮೂತ್ರನಾಳ ಮತ್ತು ಯುರಿನರಿ ಟ್ರಾಕ್ಟ್ ಒಳಗೊಂಡಿದೆ. ಇದು ಸಾಮಾನ್ಯವಾಗಿ ಮಹಿಳೆಯರನ್ನು ಕಾಡುವ ಸಮಸ್ಯೆಯಾಗಿದೆ.
ನೀವು ಮಹಿಳೆಯಾಗಿದ್ದರೆ, ನೀವು ಮೂತ್ರನಾಳದ ಸೋಂಕಿಗೆ (Urine infection)ಒಳಗಾಗುವ ಸಾಧ್ಯತೆ ಹೆಚ್ಚು. ಇದು ದೇಹದಲ್ಲಿ ಸಾಮಾನ್ಯವಾಗಿ ಸಂಭವಿಸುವ ಎರಡನೇ ಸೋಂಕಾಗಿದೆ. ಪ್ರತಿ 10 ಪುರುಷರಲ್ಲಿ ಒಬ್ಬರಿಗೆ ಹೋಲಿಸಿದರೆ ಪ್ರತಿ 2 ರಲ್ಲಿ 1 ಮಹಿಳೆ ಕನಿಷ್ಠ ಒಂದು ಬಾರಿಯಾದರೂ ಈ ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಇದೆ.
ಕಡಿಮೆ ನೀರು(Water) ಕುಡಿಯೋದು, ಹುಳಿ, ಮಸಾಲೆಯುಕ್ತ, ಸಕ್ಕರೆಯುಕ್ತ ಆಹಾರ ತಿನ್ನೋದು ಮತ್ತು ಕೆಫೀನ್, ಕಾರ್ಬೊನೇಟೆಡ್ ಪಾನೀಯ, ಕಾಫಿ, ಚಾಕೊಲೇಟ್ ಇತ್ಯಾದಿ ಅತಿಯಾಗಿ ಸೇವಿಸೋದು ಯುಟಿಐಗೆ ಕಾರಣವಾಗಬಹುದು. ಆಯುರ್ವೇದದ ಪ್ರಕಾರ, ಪಿತ್ತರಸವನ್ನು ಹೆಚ್ಚಿಸುವ ಯಾವುದೇ ಆಹಾರಗಳು ಯುಟಿಐಗೆ ಕಾರಣವಾಗಬಹುದು. ಅದಕ್ಕಾಗಿಯೇ ನೀವು ಸಾಧ್ಯವಾದಷ್ಟು ಇದನ್ನು ಅವಾಯ್ಡ್ ಮಾಡಬೇಕು.
ಯುಟಿಐನ ಗಂಭೀರ ಲಕ್ಷಣಗಳು ಹೀಗಿವೆ
ಮೂತ್ರಕೋಶದ ಸೋಂಕಿನ ಸಂದರ್ಭದಲ್ಲಿ, ನೀವು ಪದೇ ಪದೇ ಮೂತ್ರವಿಸರ್ಜನೆ (Urination) ಮಾಡುವ ಅಗತ್ಯವನ್ನು ಅನುಭವಿಸಬಹುದು ಅಥವಾ ಮೂತ್ರವಿಸರ್ಜನೆ ಮಾಡುವಾಗ ನೋವನ್ನು ಅನುಭವಿಸಬಹುದು. ಅಥವಾ ಇನ್ನಿತರ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.
ಕೆಳಹೊಟ್ಟೆಯಲ್ಲಿ ನೋವು ಮತ್ತು ಮೂತ್ರದಲ್ಲಿ ನೊರೆ ಕೂಡ ಇದರ ಲಕ್ಷಣಗಳಲ್ಲಿ ಒಂದು. ಕಿಡ್ನಿ ಇನ್ಫೆಕ್ಷನ್ ನಿಂದ ಜ್ವರ(Fever), ಶೀತ, ವಾಕರಿಕೆ ಮತ್ತು ವಾಂತಿ ಕೂಡ ಉಂಟಾಗುವ ಸಾಧ್ಯತೆ ಇದೆ. ಮೂತ್ರನಾಳದಲ್ಲಿನ ಈ ಸೋಂಕು ಮೂತ್ರವಿಸರ್ಜನೆ ಮಾಡುವಾಗ ಡಿಸ್ಚಾರ್ಜ್ ಮತ್ತು ಕಿರಿಕಿರಿಗೆ ಕಾರಣವಾಗಬಹುದು.
ಇಲ್ಲಿದೆ ನೋಡಿ ಕೆಲವು ಮನೆಮದ್ದುಗಳು
ಅಕ್ಕಿಯ ನೀರು(Rice water) ಸೇವಿಸುವುದರಿಂದ ಮೂತ್ರವಿಸರ್ಜನೆಯಲ್ಲಿ ಕಿರಿಕಿರಿ ಕಡಿಮೆ ಮಾಡುತ್ತೆ .
ಯುಟಿಐನಲ್ಲಿ ವಿಸರ್ಜನೆ, ಬೆನ್ನುನೋವು, ತುರಿಕೆ ಮತ್ತು ಹೊಟ್ಟೆ ನೋವನ್ನು ನಿವಾರಿಸಲು ಅಕ್ಕಿ ನೀರು ಬೆಸ್ಟ್ ಎಂದು ಆಯುರ್ವೇದ ವೈದ್ಯರು ಸೂಚಿಸುತ್ತಾರೆ.
ನೀವು ಅಕ್ಕಿ(Rice) ನೀರನ್ನು ಹಗಲಿನಲ್ಲಿ ಯಾವಾಗ ಬೇಕಾದರೂ ಸೇವಿಸಬಹುದು. ಅಕ್ಕಿ ನೀರನ್ನು ಕೇವಲ 6-8 ಗಂಟೆಗಳ ಕಾಲ ಮಾತ್ರ ಸಂಗ್ರಹಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಹಾಗಾಗಿ ಪ್ರತಿದಿನ ತಾಜಾ ಅಕ್ಕಿ ನೀರನ್ನು ತಯಾರಿಸೋದು ಉತ್ತಮ ಆಯ್ಕೆ.
ತಯಾರಿಸುವ ವಿಧಾನ- ಒಂದು ಹಿಡಿ ಅಕ್ಕಿಯನ್ನು ಒಮ್ಮೆ ತೊಳೆದು ಮಣ್ಣಿನ ಮಡಕೆ/ಸ್ಟೈನ್ ಲೆಸ್ ಸ್ಟೀಲ್(Stainless steel) ಪಾತ್ರೆಯಲ್ಲಿ 2-6 ಗಂಟೆಗಳ ಕಾಲ ಮುಚ್ಚಿಡಿ. ನಂತರ ಅಕ್ಕಿಯನ್ನು 2-3 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಈಗ ನೀವು ಅದನ್ನು ಕುಡಿಯಬಹುದು.
ಧಾನ್ಯ(Coriander seeds) ದೇಹವನ್ನು ತಂಪಾಗಿರಿಸುತ್ತೆ
ಧಾನ್ಯವನ್ನು ಆಯುರ್ವೇದದಲ್ಲಿ ಅತ್ಯಂತ ತಂಪು ಎಂದು ಹೇಳಲಾಗುತ್ತೆ. ಇದರ ಸೇವನೆ ದೇಹದಲ್ಲಿ ಪಿತ್ತರಸದ ಸಮಸ್ಯೆ ನಿವಾರಿಸುತ್ತೆ. ಪಿತ್ತರಸ್ಸ ಯುಟಿಐ ಹೊಂದಲು ಇದು ಮುಖ್ಯ ಕಾರಣ. ಆದುದರಿಂದ ಧಾನ್ಯಗಳನ್ನು ಸೇವಿಸುವುದು ಉತ್ತಮ.
ತಯಾರಿಸುವ ವಿಧಾನ - ಜಜ್ಜಿದ ಕೊತ್ತಂಬರಿ ಬೀಜ ನೀರಿನಲ್ಲಿ ನೆನೆಸಿಟ್ಟು ರಾತ್ರಿಯಿಡೀ ಅಥವಾ 8 ಗಂಟೆಗಳ ಕಾಲ ಇರಿಸಿ. ಮರುದಿನ ಬೆಳಿಗ್ಗೆ, ಅದನ್ನು ಫಿಲ್ಟರ್(Filter) ಮಾಡಿ ಮತ್ತು ಅದಕ್ಕೆ ಸ್ವಲ್ಪ ಪ್ರಮಾಣದ ಕಲ್ಲು ಸಕ್ಕರೆ ಸೇರಿಸಿ ಮತ್ತು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ನೆಲ್ಲಿಕಾಯಿ ರಸವು(gooseberry juice) ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ
ನೆಲ್ಲಿಕಾಯಿ ರಸ ನಿಯಮಿತವಾಗಿ ಸೇವಿಸೋದು ಆರೋಗ್ಯಕ್ಕೆ ಒಳ್ಳೆಯದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿರೋದರಿಂದ, ಇದು ರೋಗನಿರೋಧಕ ಶಕ್ತಿ ಸುಧಾರಿಸುವ ಕೆಲಸ ಸಹ ಮಾಡುತ್ತೆ. ಪ್ರತಿದಿನ ನೆಲ್ಲಿಕಾಯಿ ಸೇವಿಸೋದು ಅಥವಾ ಜ್ಯೂಸ್ ಕುಡಿಯಿರಿ.
ಈ ಪಾನೀಯಗಳು ಸಹ ಯುಟಿಐಗೆ ಪರಿಹಾರ ಒದಗಿಸುತ್ತೆ
ಪುದೀನಾ(Mint) ನೀರು, ಸೋಂಪು ನೀರು, ಎಳನೀರು, ರಾತ್ರಿಯಿಡೀ ನೆನೆಸಿದ ಒಣದ್ರಾಕ್ಷಿ, ತರಕಾರಿ ಬೀಜಗಳು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ದೇಹವನ್ನು ಕೂಲ್ ಆಗಿರಿಸುತ್ತೆ. ಯುಟಿಐ ಸಮಯದಲ್ಲಿ ಎಲ್ಲಾ ರೋಗಿಗಳು ಹೆಚ್ಚು ಅನುಭವಿಸುವ ಮೂತ್ರವಿಸರ್ಜನೆ ಮಾಡುವಾಗಿನ ಕಿರಿಕಿರಿ ಕಡಿಮೆ ಮಾಡಲು ಇದು ಸಹಾಯ ಮಾಡುತ್ತೆ .
ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಸಡಿಲವಾದ ಹತ್ತಿಯ(Cotton) ಒಳ ಉಡುಪುಗಳು ಮತ್ತು ಬಟ್ಟೆಗಳನ್ನು ಧರಿಸಿ.
ಯುಟಿಐ ತಪ್ಪಿಸಲು ಸೆಕ್ಸ್ ನಂತರ ಮೂತ್ರವಿಸರ್ಜನೆ ಮಾಡೋದು ಯಾವಾಗಲೂ ಆರೋಗ್ಯಕರ ಅಭ್ಯಾಸ. ಅಲ್ಲದೆ, ಸಾಕಷ್ಟು ನೀರು ಸೇವಿಸಿ.