Travel Tips : ಬೇಸಿಗೆ ಪ್ರಯಾಣದ ವೇಳೆ ಹೆಚ್ಚಾಗುವ ಮೋಷನ್ ಸಿಕ್ನೆಸ್ ಗೆ ಇಲ್ಲಿದೆ ಮದ್ದು

ಪ್ರಯಾಣ ಸುಖಕರವಾಗಿರಬೇಕು. ಆದ್ರೆ ಪ್ರಯಾಣಕ್ಕೆ ಹೊರಟ ತಕ್ಷಣ ಅನೇಕರು ವಾಕರಿಕೆ,ವಾಂತಿ,ತಲೆ ನೋವು ಸೇರಿದಂತೆ ಅನೇಕ ಸಮಸ್ಯೆಯನ್ನು ಎದುರಿಸುತ್ತಾರೆ. ಇದ್ರಿಂದ ಮುಕ್ತಿ ಸಿಗ್ಬೇಕೆಂದ್ರೆ ಇಲ್ಲಿರುವ ಟಿಪ್ಸ್ ಫಾಲೋ ಮಾಡಿ.
 

How To Avoid Motion Sickness While Travelling

ಊರೂರು ಸುತ್ತಬೇಕು, ಹೊಸ ಹೊಸ ಸ್ಥಳ (Place) ಗಳನ್ನು ನೋಡ್ಬೇಕೆಂದು ಅನೇಕರು ಆಸೆಯಿಟ್ಟುಕೊಂಡಿರ್ತಾರೆ. ಆದ್ರೆ ಪ್ರಯಾಣ (Travel) ಬೆಳೆಸಬೇಕೆಂದ್ರೆ ಕೆಲವರಿಗೆ ಮೋಷನ್ ಸಿಕ್ನೆಸ್ (Motion Sickness) ಸಮಸ್ಯೆ ಕಾಡುತ್ತದೆ. ಲಾಂಗ್ ಡ್ರೈವ್ ಹೋಗುವಾಗ ಅಥವಾ ಸಣ್ಣಪುಟ್ಟ ಪ್ರಯಾಣ ಬೆಳೆಸುವಾಗ ಮೋಷನ್ ಸಿಕ್ನೆಸ್ ಸಮಸ್ಯೆ ಕಾಡುತ್ತದೆ. ಫ್ಲೈಟ್ ಮತ್ತು ರೈಲಿನಲ್ಲಿ ಪ್ರಯಾಣಿಸುವಾಗ ಅನೇಕ ಜನರಿಗೆ ಮೋಷನ್ ಸಿಕ್ನೆಸ್ ಕಾಡುತ್ತದೆ. ಬೇಸಿಗೆಯಲ್ಲಿ ಈ ಸಮಸ್ಯೆ ಹೆಚ್ಚಾಗುತ್ತದೆ. ಮೋಷನ್ ಸಿಕ್ನೆಸ್ ಕಡಿಮೆ ಮಾಡಿಕೊಳ್ಳಬಹುದು. ಅದಕ್ಕೆ ಕೆಲ ಉಪಾಯಗಳನ್ನು ಅನುಸರಿಸಬೇಕು. ಇಂದು ಮೋಷನ್ ಸಿಕ್ನೆಸ್ ಅಂದ್ರೇನು ಹಾಗೂ ಅದರಿಂದ ಹೇಗೆ ಹೊರ ಬರೋದು ಎಂಬುದನ್ನು ನಾವಿಂದು ಹೇಳ್ತೇವೆ. 

ಮೋಷನ್ ಸಿಕ್ನೆಸ್ ಅಂದ್ರೇನು? : 
ಪ್ರಯಾಣದ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಹೆದರಿಕೆ, ಚಡಪಡಿಕೆ, ವಾಕರಿಕೆ, ತಲೆತಿರುಗುವಿಕೆ, ತಲೆನೋವು, ಬೆವರು, ವಾಂತಿ ಮುಂತಾದ ಸಮಸ್ಯೆ ಕಾಣಿಸಿಕೊಳ್ಳುತ್ತದ. ಇದನ್ನು ಮೋಷನ್ ಸಿಕ್ನೆಸ್ ಎಂದು ಹೇಳಲಾಗುತ್ತದೆ.  ಬೇಸಿಗೆಯಲ್ಲಿ  ಹೆಚ್ಚಾಗುವ ತಾಪಮಾನದಿಂದಾಗಿ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಬೇಸಿಗೆಯ ಸಮಯದಲ್ಲಿ ಅಜಾಗರೂಕತೆಯು ಪ್ರಯಾಣದ ಸಮಯದಲ್ಲಿ ತೊಂದರೆಯನ್ನುಂಟು ಮಾಡುತ್ತದೆ. ಮೋಷನ್ ಸಿಕ್ನೆಸ್ ತಪ್ಪಿಸಲು ಕೆಲ ಮನೆಮದ್ದುಗಳ ಸಹಾಯ ಪಡೆಯಬಹುದು.  

ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುವುದು ಆರೋಗ್ಯಕರವೇ ? ತಜ್ಞರು ಏನ್ ಹೇಳ್ತಾರೆ ಕೇಳಿ

ಬೇಸಿಗೆಯಲ್ಲಿ ಮೋಷನ್ ಸಿಕ್ನೆಸ್  ತಪ್ಪಿಸುವುದು ಹೇಗೆ ? : 

ಲವಂಗ : ಯಾವುದೇ ಪ್ರಯಾಣ ಬೆಳೆಸುವ ಮೊದಲು ಲವಂಗದ ಕೆಲವು ಮೊಗ್ಗುಗಳನ್ನು ಇಟ್ಟುಕೊಳ್ಳಲು ಮರೆಯದಿರಿ. ನಿಮಗೆ ವಾಂತಿಯಾಗುತ್ತಿದೆ ಎನಿಸಿದಾಗ ಬಾಯಿಯಲ್ಲಿ ಲವಂಗವನ್ನು ಇಟ್ಟುಕೊಳ್ಳಿ. ನಿಧಾನವಾಗಿ ಅದರ ರಸವನ್ನು ಒಳಗೆ ನುಂಗುತ್ತಿದ್ದರೆ ವಾಂತಿ ಬರುವುದಿಲ್ಲ.

ನಿಂಬೆ ಹಣ್ಣು : ಬಿಸಿ ನೀರಿಗೆ ನಿಂಬೆ ಹಣ್ಣಿನ ಕೆಲ ಹನಿಯನ್ನು ಹಾಕಿ. ಆ ನೀರನ್ನು ಫ್ಲಾಸ್ಕ್ ನಲ್ಲಿ  ಹಾಕಿಕೊಳ್ಳಿ. ಪ್ರಯಾಣದ ವೇಳೆ ಆಗಾಗ ಈ ನೀರನ್ನು ಕುಡಿಯುತ್ತಿರಿ. ಇದು ವಾಂತಿಯಾಗುವುದನ್ನು ತಪ್ಪಿಸುತ್ತದೆ.

ಒಣ ಶುಂಠಿ : ಒಣ ಶುಂಠಿ ಹಾಗೂ ಕಪ್ಪು ಉಪ್ಪನ್ನು ಪ್ರವಾಸದ ವೇಳೆ ಬ್ಯಾಗ್ ನಲ್ಲಿಟ್ಟುಕೊಳ್ಳಿ. ತಲೆ ಸುತ್ತುವಿಕೆ, ವಾಕರಿಕೆ, ವಾಂತಿ ಅನುಭವವಾದ್ರೆ ಒಣ ಶುಂಠಿ ಪೀಸನ್ನು ಕಪ್ಪು ಉಪ್ಪಿನೊಂದಿಗೆ ಬಾಯಿಗೆ ಹಾಕಿದರೆ ವಾಕರಿಕೆ ಸಮಸ್ಯೆ ಕಡಿಮೆಯಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸ್ಬೇಡಿ : ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಕಾಫಿ ಕುಡಿಯಬೇಡಿ. ಇದರಿಂದಾಗಿ ಪ್ರಯಾಣದ ವೇಳೆ  ಹೊಟ್ಟೆನೋವು, ಗ್ಯಾಸ್ ಅಥವಾ ಅಸಿಡಿಟಿ ಸಮಸ್ಯೆ ಕಾಡಬಹುದು. 

ಓಂ ಕಾಳು : ಓಂ ಕಾಳಿಗೆ  ಕಪ್ಪು ಉಪ್ಪನ್ನು ಮಿಶ್ರಣ ಮಾಡಿ ಅದನ್ನು ಒಂದು ಬಾಕ್ಸ್ ನಲ್ಲಿ ಹಾಕಿಟ್ಟುಕೊಳ್ಳಿ. ಮನೆಯಿಂದ ಹೊರಗೆ ಹೋಗುವ ವೇಳೆ ಅಥವಾ ವಾಹನ ಹತ್ತಿದ ಮೇಲೆ ಒಂದು ಚಿಟಿಕೆ ಓಂ ಕಾಳಿನ ಮಿಶ್ರಣವನ್ನು ಬಾಯಿಯಲ್ಲಿ ಹಾಕಿಕೊಳ್ಳಿ.  ಇದು ನಿಮಗೆ ಮೋಷನ್ ಸಿಕ್ನೆಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಬೇಸಿಗೆಯಲ್ಲಿ ಎಸಿ ಬಳಸಿದರೂ ವಿದ್ಯುತ್ ಬಿಲ್ ಕಡಿಮೆ ಮಾಡಲು ಟ್ರಿಕ್ಸ್

ನೀರು ಸೇವನೆ : ಪ್ರಯಾಣದ ವೇಳೆ ನೀರು ಕುಡಿಯುತ್ತಲೇ ಇರಿ. ಪದೇ ಪದೇ ನೀರು ಕುಡಿಯಲು ಸೆಪ್ಪೆ ಅನ್ನಿಸಿದ್ರೆ  ಪುದೀನಾವನ್ನು ನೀರಿನಲ್ಲಿ ಕುದಿಸಿ ಮತ್ತು ಫಿಲ್ಟರ್ ಮಾಡಿ. ನಂತರ ಆ ನೀರನ್ನು ಪ್ರಯಾಣದ ವೇಳೆ ಕುಡಿಯುತ್ತಿರಿ.

ಲಘು ಆಹಾರ : ಪ್ರಯಾಣದಲ್ಲಿ ತೊಂದರೆಯಾಗುತ್ತೆ ಅನ್ನಿಸಿದ್ರೆ ಹೊರಡುವ ಮೊದಲು ಲಘುವಾಗಿ ಏನಾದರೂ ತಿನ್ನಿರಿ. ಹಾಗೆ ಪ್ರಯಾಣಕ್ಕೆ ಒಂದು ದಿನ ಮೊದಲು ಯಾವುದೇ ಕಾರಣಕ್ಕೂ ಎಣ್ಣೆಯಲ್ಲಿ ಕರಿದ ಆಹಾರವನ್ನು ಹೆಚ್ಚು ಸೇವನೆ ಮಾಡ್ಬೇಡಿ. 

ಹೊಟ್ಟೆ ತುಂಬ ಊಟ ಬೇಡ: ಪ್ರಯಾಣ ಮಾಡುವಾಗ ಹೊಟ್ಟೆ ತುಂಬ ಊಟ ಮಾಡಬೇಡಿ. ಪ್ರಯಾಣದ ಸಂದರ್ಭದಲ್ಲಿ ಆದಷ್ಟು ಕಡಿಮೆ ಆಹಾರವನ್ನು ಸೇವನೆ ಮಾಡ್ಬೇಕು. ಹೊಟ್ಟೆ ತುಂಬಿದ್ದರೆ ವಾಕರಿಕೆ,ವಾಂತಿ, ತಲೆಸುತ್ತು ಕಾಡುತ್ತದೆ.

Latest Videos
Follow Us:
Download App:
  • android
  • ios