ಯಾರಿಗೂ ಹೇಳಿಕೊಳ್ಳಲಾಗದ ಹೆಣ್ಣು ಮಕ್ಕಳು ನೋವಿದು!

ನಮ್ಮ ಆರೋಗ್ಯ ನಮ್ಮ ಕೈನಲ್ಲಿದೆ ಎಂಬ ಸಂಗತಿ ಹುಡುಗಿಯರಿಗೆ ತಿಳಿದಿರಬೇಕು. ಯಾವುದೇ ಸಮಸ್ಯೆ ಶುರುವಾದಾಗ್ಲೂ ಅದನ್ನು ಧೈರ್ಯವಾಗಿ ಹೇಳ್ಬೇಕು. ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ಸಮಸ್ಯೆ ಕೈಮೀರಿದಾಗ ವೈದ್ಯರಿಂದಲೂ ಪರಿಹಾರ ಸಾಧ್ಯವಿಲ್ಲ.
 

According To Gynecologist 10 Common Health Problems Of Girls

ಪುರುಷ (Male) ರಿಗೆ ಹೋಲಿಕೆ ಮಾಡಿದ್ರೆ ಮಹಿಳೆ (Woman) ಯರಿಗೆ ಕಾಯಿಲೆಗಳು ಹೆಚ್ಚು ಎನ್ನಬಹುದು. ಕೆಲ ಆರೋಗ್ಯ (Health) ಸಮಸ್ಯೆಗಳು ಮಹಿಳೆಯರಿಗೆ ಮಾತ್ರ ಸೀಮಿತವಾಗಿವೆ. ಬಹುತೇಕ ಮಹಿಳೆಯರು ತಮ್ಮ ಕಾಯಿಲೆಯನ್ನು ಎಲ್ಲರ ಮುಂದೆ ಹೇಳುವುದಿಲ್ಲ. ಅದನ್ನು ಮುಚ್ಚಿಡುವ ಪ್ರಯತ್ನ ನಡೆಸ್ತಾರೆ. 4 ರಲ್ಲಿ 3 ಮಹಿಳೆಯರು ವೈದ್ಯ (Doctor) ರ ಬಳಿ ಹೋಗುವುದಿಲ್ಲ. ಇದಕ್ಕೆ ಅವರ ನಾಚಿಕೆ ಸ್ವಭಾವವೇ ಕಾರಣ. ಹುಡುಗಿಯರ ದೇಹ ರಚನೆಯು ದೈಹಿಕ ಸಮಸ್ಯೆಗಳಿಗೆ ಹೆಚ್ಚು ಒಳಗಾಗುತ್ತದೆ. ಆದರೆ ಯಾವುದೇ ಸಮಸ್ಯೆಯನ್ನು ಮರೆಮಾಚಬಾರದು.  ಅದ್ರ ಬಗ್ಗೆ ಆಪ್ತರ ಜೊತೆ ಚರ್ಚೆ ನಡೆಸಬೇಕು. ಸೂಕ್ತವೆನಿಸುವ ಸಮಯದಲ್ಲಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು.  ಮೇ. 28ರಂದು ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ದಿನವನ್ನು (International Womens Health Day) ಆಚರಿಸಲಾಗ್ತಿದೆ. ಈ ವೇಳೆ ತಜ್ಞ ವೈದ್ಯರು ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯರಲ್ಲಿ ಕಾಡುವ ಕೆಲ ಸಮಸ್ಯೆಗಳ ಬಗ್ಗೆ ಅವರು ಏನು ಹೇಳಿದ್ದಾರೆ ಎಂಬುದನ್ನು ನಾವಿಂದು ಹೇಳ್ತೇವೆ. ಆ ಕಾಯಿಲೆ ನಿಮಗೂ ಕಾಣಿಸಿಕೊಳ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ, ಸೂಕ್ತ ಚಿಕಿತ್ಸೆ ಪಡೆಯಲು ಮರೆಯದಿರಿ. 

ಸ್ಪಾಟಿಂಗ್ ಸಮಸ್ಯೆ : ಸ್ಪಾಟಿಂಗ್ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಇದು ಅಂಡಾಶಯದ ಚೀಲಗಳು, ಜನನ ನಿಯಂತ್ರಣ ಮಾತ್ರೆಗಳನ್ನು ಬಿಡುವುದರಿಂದ ಅಥವಾ ಒತ್ತಡದ ಕಾರಣದಿಂದಾಗಿ ಕಾಣಿಸಿಕೊಳ್ಳುತ್ತದೆ. ಮುಟ್ಟಿನ ಸಮಯದಲ್ಲಿ ಆಗುವ ರಕ್ತ ಸ್ರಾವಕ್ಕಿಂತ ಇದು ಕಡಿಮೆ ಇರುತ್ತದೆ. ಆದ್ರೆ ಅದನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ. ಇದನ್ನು ತಪ್ಪಿಸಲು ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಮಸಾಜ್ ಮಾಡಿ. ಪದೇ ಪದೇ ಈ ಸಮಸ್ಯೆ ಕಾಡುತ್ತಿದ್ದರೆ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.

ಯೋನಿ ನಾಳದ ಉರಿಯೂತ : ಯೋನಿ (Vagina) ನಾಳದಲ್ಲಿ ಉರಿ ಕಾಣಿಸಿಕೊಳ್ಳುವುದು ಮಹಿಳೆಯರಿಗೆ ಸಾಮಾನ್ಯ. ಇದರಿಂದ ತುರಿಕೆ, ವಾಸನೆ, ಸ್ರಾವ ಮತ್ತು ನೋವು ಕಾಡುತ್ತದೆ. ಇದಕ್ಕೆ ಹಲವು ಕಾರಣಗಳಿದೆ. ಟ್ಯಾಂಪೂನ್ ಗಳ ಬಳಕೆ, ಸಾಬೂನುಗಳ ಬಳಕೆ ಮತ್ತು ಲೂಬ್ರಿಕಂಟ್ ಗಳು ಇದಕ್ಕೆ ಕಾರಣವಾಗಬಹುದು. ಪರಿಮಳಯುಕ್ತ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಬೇಕು. ನೈಸರ್ಗಿಕ ಸಾಬೂನಿನಿಂದ ನಿಧಾನವಾಗಿ ಯೋನಿ ತೊಳೆಯಬೇಕು. 

ಸಿಸ್ಟ್ ಸಮಸ್ಯೆ (Cyst Issue) : ಸಿಸ್ಟ್ ಗಳು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿವೆ. ಸಿಸ್ಟ್ ಸಾಮಾನ್ಯವಾಗಿ ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ. ವಲ್ವಾರ್ ಸಿಸ್ಟ್ ಗಳು ಹೊರ ಚರ್ಮದ ಮೇಲೆ ಕಾಣಿಸಿಕೊಂಡರೆ, ಯೋನಿ ಚೀಲಗಳು ಒಳಗಿನ ಯೋನಿ ಗೋಡೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಸೂಕ್ತ ಚಿಕಿತ್ಸೆಯಿದೆ. ನಾಚಿಕೆ ಹೆಸರಿನಲ್ಲಿ ಅದನ್ನು ಮುಚ್ಚಿಡುವ ಬದಲು ಸೋಂಕು ಮುಂದುವರಿಯುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಕಂಕಣ ಭಾಗ್ಯ ಬಂದಿಲ್ಲವೆಂದರೆ ಮಹಿಳೆಯರ ಟೆನ್ಷನ್ ಹೆಚ್ಚಾಗುತ್ತಾ?

ಬಿಗಿಯಾದ ಒಳ ಉಡುಪುಗಳ (Inner Wear) ಬಳಕೆಯಿಂದ ಸೋಂಕು : ಮಾರುಕಟ್ಟೆಗೆ ವೆರೈಟಿ ಒಳ ಉಡುಪುಗಳು ಬಂದಿವೆ. ಅನೇಕರು ಫ್ಯಾಷನ್ ಹೆಸರಿನಲ್ಲಿ ಬಿಗಿಯಾದ ಒಳ ಉಡುಪನ್ನು ಧರಿಸ್ತಾರೆ. ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದರಿಂದ ಘರ್ಷಣೆ ಮತ್ತು ಶಾಖ ಉತ್ಪತ್ತಿಯಾಗುತ್ತದೆ. ಇದು ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ. ಇದರಿಂದ ಸೋಂಕಿನ ಅಪಾಯ ಹೆಚ್ಚಾಗುತ್ತದೆ. 

ಶುಷ್ಕತೆಯಿಂದ ಕಾಡುವ ಸಮಸ್ಯೆ : ಜನನಾಂಗಗಳಲ್ಲಿ ಶುಷ್ಕತೆಯಿದ್ದರೆ ಅನೇಕ ಸಮಸ್ಯೆ ಕಾಡುತ್ತದೆ. ಯೋನಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.  ಹಾರ್ಮೋನ್ ಅಸಮತೋಲನ, ಮುಟ್ಟು, ಹೆರಿಗೆ ಅಥವಾ ಹಾಲುಣಿಸುವಿಕೆ ವೇಳೆ ಕಾಡುವುದಿದೆ.

ಪಿರಿಯಡ್ಸ್ ಸಮಯದಲ್ಲಿ ಸ್ವಚ್ಛತೆಗೆ ಗಮನ ಕೊಡಿ, ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ !

ಈ ಸಮಸ್ಯೆಯೂ ಹುಡುಗಿಯರನ್ನು ಕಾಡುತ್ತೆ : ರಾಸಾಯನಿಕ ಉತ್ಪನ್ನಗಳನ್ನು ಬಳಸಿದ ನಂತ್ರ ಜನನಾಂಗದಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ. ಜನನಾಂಗದಿಂದ ಬರುವ ಕೆಟ್ಟ ವಾಸನೆ ಎಸ್ ಟಿಐ ಅಥವಾ ಎಸ್ ಟಿಡಿ ಲಕ್ಷಣಗಳು, ಒಳಗಿನ ಕೂದಲಿನಿಂದ ಉಂಟಾಗುವ ಸಮಸ್ಯೆಗಳನ್ನು ಕೂಡ ಎಂದೂ ನಿರ್ಲಕ್ಷ್ಯಿಸಬಾರದು.  

Latest Videos
Follow Us:
Download App:
  • android
  • ios