Explained: ನೀರು ಎಕ್ಸ್ ಪೈರ್ ಆಗತ್ತಾ?
ಟ್ರಾವೆಲ್ ಮಾಡೋವಾಗ ಬಾಯಾರಿಕೆ ಮತ್ತು ದಣಿದಿದೆ ಎಂದು ನೀರಿನ ಬಾಟಲಿ ತೆಗೆದುಕೊಂಡಿರುತ್ತೀರಿ. ಆದರೆ ಬಾಟಲ್ ನಲ್ಲಿ ಎಕ್ಸ್ ಪೈರಿ ಡೇಟ್ ದಾಟಿದೆ ಎಂದು ನೋಡಿದರೆ ಏನು ಮಾಡ್ತೀರಾ? ಎಲ್ಲಾ ಬಾಟಲ್ ಪ್ಯಾಕ್ ಲೇಬಲ್ ನಲ್ಲಿ ಎಕ್ಸ್ ಪೈರಿ ಡೇಟ್ ಇರೋದನ್ನು ನೀವು ಕಾಣಬಹುದು. ನೀರು ಕೆಟ್ಟು ಹೋಗುತ್ತೆ ಎಂಬ ಕಾರಣಕ್ಕೆ ಈ ಎಕ್ಸ್ ಪೈರಿ ಡೇಟ್ ನೀಡಲಾಗೋದಿಲ್ಲ. ಇದಕ್ಕೆ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯೇ ಕಾರಣ.
ನೀರು, ಅದರ ಶುದ್ಧ ರೂಪದಲ್ಲಿ, ಅದು ನೈಸರ್ಗಿಕವಾಗಿ ಸಿಗುವ ಸಂಯುಕ್ತವಾಗಿರೋದ್ರಿಂದ ಅದು ಕೆಡುವುದಿಲ್ಲ. ಆದರೆ, ಅದರ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಕಾಂಟ್ಯಾಮಿನಾಶನ್ ಎಂಬ ಅಂಶವು ಆರೋಗ್ಯಕ್ಕೆ ಹಾನಿಕಾರಕವಾಗುವ ಸಾಧ್ಯತೆ ಇದೆ.
ಎಕ್ಸ್ ಪೈರಿ ಡೇಟ್ ಮುಗಿದ ಪ್ಲಾಸ್ಟಿಕ್ ಬಾಟಲಿಗಳಿಂದ (Plastc bottle) ಕುಡಿಯುವುದು ಎಂದಿಗೂ ಒಳ್ಳೆಯದಲ್ಲ ಏಕೆಂದರೆ ಪ್ಲಾಸ್ಟಿಕ್ ತುಂಬಾ ಸಮಯದ ನಂತರ ನೀರಿನಲ್ಲಿ ಹಾನಿಕಾರಕ ರಾಸಾಯನಿಕ ಬಿಡುಗಡೆ ಮಾಡಬಹುದು ಅಥವಾ ಟೆಂಪರೇಚರ್ ಹೆಚ್ಚಳದಿಂದಾಗಿ, ಆಂಟಿಮೋನಿ ಮತ್ತು ಬಿಸ್ಫೆನಾಲ್ ಎ (ಬಿಪಿಎ) ನಂತಹ ಹಾನಿಕಾರಕ ರಾಸಾಯನಿಕಗಳು ನೀರನ್ನು ಕಲುಷಿತಗೊಳಿಸುವ ಸಾಧ್ಯತೆ ಇದೆ.
ಎಕ್ಸ್ ಪೈರಿ ಡೇಟ್ (Expiry date)ನಂತರ ಬಾಟಲ್ ನೀರಿಗೆ ಏನಾಗುತ್ತದೆ?
ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ (ಎಚ್ಎಸ್ಪಿಎಚ್) ಸ್ಟಡಿ ಪ್ರಕಾರ, ಸಂಶೋಧಕರು ಜನಪ್ರಿಯವಾದ ಪಾಲಿಕಾರ್ಬೊನೇಟ್ ಬಾಟಲಿ, ಗಟ್ಟಿ-ಪ್ಲಾಸ್ಟಿಕ್ ಡ್ರಿಂಕಿಂಗ್ ಬಾಟಲಿ ಮತ್ತು ಬೇಬಿ ಬಾಟಲಿಗಳಲ್ಲಿ ಒಂದು ವಾರದವರೆಗೆ ನೀರು ಕುಡಿದ ಜನರು ತಮ್ಮ ಯೂರಿನ್ ಮಾದರಿಗಳಲ್ಲಿ ರಾಸಾಯನಿಕ ಬಿಸ್ಫೆನಾಲ್ ಎ (ಬಿಪಿಎ) ನಲ್ಲಿ ಮೂರನೇ ಎರಡರಷ್ಟು ಹೆಚ್ಚಳ ತೋರಿಸಿದ್ದಾರೆ ಎಂದು ಕಂಡುಕೊಂಡಿದ್ದಾರೆ.
ಸಂಶೋಧನೆಯ ಪ್ರಕಾರ, ಸಂಸ್ಕರಿಸಿದ ನಲ್ಲಿ ನೀರು ಸರಿಯಾದ ರೀತಿಯಲ್ಲಿ ಸಂಗ್ರಹಿಸಿದರೆ ಆರು ತಿಂಗಳವರೆಗೆ ಕುಡಿಯಲು ಸುರಕ್ಷಿತವಾಗಿರುತ್ತೆ, ಆದರೆ ಬೇರೆ ನೀರು 1 ರಿಂದ 2 ವರ್ಷಗಳವರೆಗೆ ಸುರಕ್ಷಿತವಾಗಿದೆ. ಇದರಿಮ್ದ ಯಾವುದೇ ಸಮಸ್ಯೆ ಉಂಟಾಗೋದಿಲ್ಲ.
ನಲ್ಲಿ ನೀರು ಗಾಳಿಯಲ್ಲಿರುವ ಕಾರ್ಬನ್ ಡೈಆಕ್ಸೈಡ್ ನೊಂದಿಗೆ (Carbon-di-oxide) ಬೆರೆತರೆ ಅದು ವಿಚಿತ್ರ ರುಚಿ ಹೊಂದಲು ಪ್ರಾರಂಭಿಸಬಹುದು. ಅಲ್ಲದೆ, ಕಾರ್ಬೊನೇಟೆಡ್ ನಲ್ಲಿ ನೀರು ಸ್ವಲ್ಪ ಸಮಯದ ನಂತರ ಚಪ್ಪಟೆಯಾಗುತ್ತೆ, ಏಕೆಂದರೆ ನೀರಿನಲ್ಲಿರುವ ಗ್ಯಾಸ್ ಆವಿಯಾಗಲು ಪ್ರಾರಂಭಿಸುತ್ತೆ. ಆದಾಗ್ಯೂ, ನಲ್ಲಿ ನೀರು ಮತ್ತು ಕಾರ್ಬೊನೇಟೆಡ್ ನೀರು ಎರಡನ್ನೂ ಸರಿಯಾಗಿ ಸಂಗ್ರಹಿಸಿದರೆ ವಿಚಿತ್ರ ರುಚಿಯ ಹೊರತಾಗಿಯೂ ಆರು ತಿಂಗಳವರೆಗೆ ಕುಡಿಯಲು ಸುರಕ್ಷಿತವೆಂದು ಪರಿಗಣಿಸಲಾಗುತ್ತೆ.
ನೀರು ಸಂಗ್ರಹಿಸೋದು(Storage) ಹೇಗೆ?
ನೀರು ಸ್ಟೋರ್ ಮಾಡೋದು ಅದನ್ನು ದೀರ್ಘಕಾಲದವರೆಗೆ ಉಳಿಸುವ ಪ್ರಮುಖ ಭಾಗವಾಗಿದೆ. ಸಂಗ್ರಹಿಸಬೇಕಾದ ಪ್ರಮಾಣ ಮತ್ತು ತಂಪಾದ ಮತ್ತು ಡ್ರೈ ಪ್ಲೇಸ್ ಗುರುತಿಸೋದು ಮುಖ್ಯವಾಗಿದೆ. ಕಾಪರ್ ಮತ್ತು ಸ್ಟೀಲ್ ಪಾತ್ರೆಗಳು ದೀರ್ಘಕಾಲ ನೀರು ಸಂಗ್ರಹಿಸಲು ಸೂಕ್ತವಾಗಿದೆ. ಇನ್ನು ನೀವು ಯಾವಾಗಲೂ ಬಿಪಿಎ ಮುಕ್ತ ಪ್ಲಾಸ್ಟಿಕ್ ಕಂಟೇನರ್ ಅಥವಾ ಗಾಜಿನ ಬಾಟಲಿ ಆಯ್ಕೆ ಮಾಡಬಹುದು.
ಕಂಟೇನರ್ ನೀರಿನಿಂದ ತುಂಬಿಸುವಾಗ, ಪೈಪ್ (Pipe)ಬಳಸೋದನ್ನು ನಿಲ್ಲಿಸಬೇಕು ಮತ್ತು ಅದನ್ನು ನೇರವಾಗಿ ನಲ್ಲಿಯಿಂದ ತುಂಬಬೇಕು. ಈ ರೀತಿ ಮಾಡಿದ್ರೆ ನೀರು ತುಂಬಾ ಕಾಲದವರೆಗೆ ಇದನ್ನು ಬಳಕೆ ಮಾಡಲು ಸಹಾಯ ಮಾಡುತ್ತೆ.
ಗ್ಯಾಲನ್ ಅಥವಾ ಡ್ರಮ್ ಗಳಲ್ಲಿ(Drum) ನೀರನ್ನು ಸಂಗ್ರಹಿಸಿದರೆ, ಗಾಳಿಯ ಸಂಪರ್ಕ ತಪ್ಪಿಸಲು ಎಲ್ಲಾ ಸಮಯದಲ್ಲೂ ಮುಚ್ಚಳ ಹಾಕಬೇಕು. ಮುಚ್ಚಳದೊಂದಿಗೆ ಪಾತ್ರೆ ಸ್ವಚ್ಛಗೊಳಿಸುವುದರಿಂದ ಮೈಕ್ರೋಬ್ಸ್ ಇಲ್ಲದ ಉತ್ತಮ ಗುಣಮಟ್ಟದ ಕುಡಿಯುವ ನೀರು ಪಡೆಯಬಹುದು.
ನೀರನ್ನು ಫಿಲ್ಟರ್(Filter) ಮಾಡುವ ಅತ್ಯುತ್ತಮ ವಿಧಾನ
ದೀರ್ಘಕಾಲೀನ ಶೇಖರಣೆ ಮತ್ತು ರೆಗ್ಯುಲರ್ ಬಳಕೆ ಎರಡಕ್ಕೂ, ಫಿಲ್ಟ್ರೇಶನ್ ಅತ್ಯಗತ್ಯ. ಇದನ್ನು ಸುಮಾರು ೧೫ ನಿಮಿಷಗಳ ಕಾಲ ಕುದಿಸಿ ತಣ್ಣಗಾಗಲು ಬಿಡೋದು ಸುಲಭ ಮಾರ್ಗ. ಇದರಿಂದ ನೀರು ತುಂಬಾ ಸಮಯ ಕೆಡದಂತೆ ಉಳಿಯಬಹುದು.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಆಧುನಿಕ ಕುಟುಂಬಗಳು ವಾಟರ್ ಪ್ಯೂರಿಫೈಯರ್(Water purifier) ಬಳಸುತ್ತಾರೆ. ಆದಾಗ್ಯೂ, ರಿವರ್ಸ್ ಆಸ್ಮೋಸಿಸ್ (ಆರ್ಒ) ಪ್ಯೂರಿಫೈಯರ್ಗಳ ರೆಗ್ಯುಲರ್ ಸರ್ವಿಸ್ ಮಾಡಿಸೋದು ಕಷ್ಟ. ಈ ದಿನಗಳಲ್ಲಿ ಲಿಕ್ವಿಡ್ ಬ್ಲೀಚಿಂಗ್ ವಿರಳವಾಗಿದೆ ಆದರೆ ಇದು ಹಿಂದೆ ಪಾಪ್ಯುಲರ್ ಪ್ಯೂರಿಫಿಕೇಷನ್ ವಿಧಾನವಾಗಿತ್ತು.
ನಲ್ಲಿ ನೀರು(Tap water) ಕೆಡುತ್ತಾ?
ನಾವು ಸಾಮಾನ್ಯವಾಗಿ ಬಳಸುವ ನೀರು : ಸರ್ಫೇಸ್ ವಾಟರ್ ಮತ್ತು ಗ್ರೌಂಡ್ ವಾಟರ್ . ಸರ್ಫೇಸ್ ವಾಟರ್ ನಮಗೆ ಮನೆಗೆ ಸಪ್ಲೈ ಆಗೋ ನೀರು ಮತ್ತು ಅದರಲ್ಲಿ ಹುಳ, ಸೂಕ್ಷ್ಮಾಣುಜೀವಿ ಹೊಂದಿರುತ್ತೆ. ಬೋರ್ ವೆಲ್ ನೀರು ಸ್ವಚ್ಛವಾಗಿರುತ್ತೆ, ಆದರೆ ಸರಿಯಾದ ರೀತಿಯಲ್ಲಿ ಸ್ಟೋರ್ ಮಾಡೋದು ಮುಖ್ಯ.
ನಮ್ಮ ಮನೆಗಳಲ್ಲಿ ಟ್ಯಾಪ್ ವಾಟರ್ ನಮಗೆ ಸುಲಭವಾಗಿ ಸಿಗೋ ನೀರು. ಆ ನೀರನ್ನು ಸಂಗ್ರಹಿಸಲು ಹೆಚ್ಚು ಆದ್ಯತೆ ನೀಡಬೇಕಾಗುತ್ತೆ. ಆದರೆ ನಲ್ಲಿಯ ನೀರಿನ ಶೆಲ್ಫ್ ಲೈಫ್ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಇದು ತುಂಬಾ ಸಮಯ ಬಾಳಿಕೆ ಬರುತ್ತೆ ನಿಜಾ, ಆದರೆ ನೀವು ಅದನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸೋದು ಮುಖ್ಯವಾಗಿದೆ.