ತೂಕ ಕರಗಿಸಲು ನೆಲ್ಲಿಕಾಯಿ ರಸ!

ಮೈ ತೂಕ ಇಳಿಸಲು ಹೆಂಗಳೆಯರು ಪಡೋ ಪಾಡು ಅಷ್ಟಿಷ್ಟಲ್ಲ. ಆದರೆ, ಮನಸ್ಸನ್ನು ಶಾಂತಿವಾಗಿಟ್ಟುಕೊಂಡು, ಕೆಲವು ಮನೆ ಮದ್ದುಗಳಿಂದಲೇ ದೇಹದ ತೂಕವನ್ನು ಇಳಿಸಿಕೊಳ್ಳಬಹುದು.  ನೆಲ್ಲಿಯೂ ಇದಕ್ಕೊಂದು ಸಿಂಪಲ್ ಮದ್ದು. ಬಳಸೋದು ಹೇಗೆ?

Benefits of drinking amla water daily

ಹುಳ್ ಹುಳಿಯಾಗಿದ್ದರೂ ಬಾಯಲ್ಲಿ ನೀರು ಬರಿಸಿಕೊಂಡು, ನೆಲ್ಲಿಕಾಯಿ ತಿನ್ನುತ್ತಾರೆ ಮಂದಿ. ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಉಪ್ಪಿನೊಂದಿಗೆ ನೆಲ್ಲಿಕಾಯಿ ತಿನ್ನುವುದೇ ಒಂದು ಸಂಭ್ರಮ. ನೆಲ್ಲಿ ತಿಂದು ನೀರು ಕುಡಿದ ನಂತರ, ಸಿಹಿ ಸಿಹಿ ರುಚಿ ಅನುಭವಿಸುವುದೂ ಒಂದು ವಿಶೇಷ ಅನುಭವ.

ಬಹಳಷ್ಟು ಔಷಧೀಯ ಗುಣಗಳಿರುವ ನೆಲ್ಲಿಗೆ ಪೌರಾಣಿಕ ಹಿನ್ನೆಲೆಯೂ ಇದೆ. ತುಳಸಿಯೊಂದಿಗೆ ಪೂಜಿಸುವ ನೆಲ್ಲಿಗೆ ಭಾರತೀಯರು ವಿಶೇಷವಾದ ಮಹತ್ವ ನೀಡುತ್ತಾರೆ. ಬೇಕಾಬಿಟ್ಟಿ ತಿನ್ನೋ ಬದಲು ಹಿತವಾಗಿ ನೆಲ್ಲಿಯನ್ನು ಬಳಸಿದರೆ ಹಲವು ಆರೋಗ್ಯಕಾರಿ ಉಪಯೋಗಗಳಿವೆ. 

ನೆಲ್ಲಿಯಲ್ಲಿ ಕಿತ್ತಲೆ ಹಣ್ಣಿಗಿಂತ 8 ಪಟ್ಟು ಹೆಚ್ಚು ವಿಟಮಿನ್ ಸಿ ಇದ್ದು, ದಾಳಿಂಬೆಗಿಂತ 17 ಪಟ್ಟು ಆ್ಯಂಟಿ ಆಕ್ಸಿಡೆಂಟ್ ಹೊಂದಿರುತ್ತದೆ.  

ನೆಲ್ಲಿಕಾಯಿ ಪುಡಿ ಮಾಡುವುದು ಹೇಗೆ?

ನೆಲ್ಲಿ ಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಂಡು, ಕೆಲ ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಬೇಕು. ಒಣಗಿದ ನೆಲ್ಲಿಯನ್ನು ಸುಲಭವಾಗಿ ಪುಡಿ ಮಾಡಬಹುದು. ಈ ಪುಡಿಯನ್ನು ಮನೆಯಲ್ಲೇ ಮಾಡಬಹುದಾಗಿದ್ದು, ನೈಸರ್ಗಿಕವಾಗಿರುತ್ತದೆ. ದಿನಕ್ಕೊಂದು ಚಮಚ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದರೆ, ತೂಕ ಕಡಿಮೆಯಾಗುತ್ತದೆ. 

  • ನೆಲ್ಲಿಯಲ್ಲಿ ಆ್ಯಂಟಿವೈಟಲ್ ಅಂಶವಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಶುಂಠಿ ಹಾಗೂ ಜೇನಿನೊಂದಿಗೆ ಸೇವಿಸಿದರೆ ಗಂಟಲು ಕೆರೆತ ಮತ್ತು ಜ್ವರಕ್ಕೂ ಉತ್ತಮ ಮದ್ದಾಗಬಲ್ಲದು. 
  • ನೆಲ್ಲಿಕಾಯಿಯಲ್ಲಿ ಕ್ರೊಮಿಯಂ ಅಂಶವಿದ್ದು, ಮದುಮೇಹವನ್ನೂ ನಿಯಂತ್ರಿಸಬಲ್ಲದು. 
  • ಕರುಳು ಶುದ್ಧೀಕರಿಸಬಲ್ಲ ನೆಲ್ಲಿಯನ್ನು ಗ್ಯಾಸ್ಟ್ರಿಕ್‌ನಿಂದ ಬಳಲುತ್ತಿರುವವರು ಸೇವಿಸಬೇಕು. ಇದರಿಂದ ಮಲಬದ್ಧತೆ ಹಾಗೂ ಹೊಟ್ಟೆ ಉರಿ ಕಡಿಮೆ ಆಗುತ್ತದೆ.
  • ಸೌಂದರ್ಯವರ್ಧಕವೂ ಹೌದು ನೆಲ್ಲಿ. ಇದರಿಂದ ಮೊಡವೆ ಹಾಗೂ ಚರ್ಮ ತುರಿಕೆ ಕಡಿಮೆ ಮಾಡಿ ಮುಖದ ಕಾಂತಿ ಹೆಚ್ಚಿಸುತ್ತದೆ.
  • ನೆಲ್ಲಿಯನ್ನು ಪುಡಿಯ ರೀತಿಯಲ್ಲಿ ಸೇವಿಸಲು ಕಷ್ಟವಾದರೆ, ಚಟ್ನಿ ರೀತಿಯಲ್ಲಿಯೋ, ಉಪ್ಪಿನಕಾಯಿಯಂತೆ ಅಥವಾ ಜ್ಯೂಸ್ ರೂಪದಲ್ಲಿಯೂ ಸೇವಿಸಬಹುದು.

ದಿನಕ್ಕೆಷ್ಟು ತಿನ್ನಬೇಕು?

ದಿನಕ್ಕೊಂದು ಕಾಯಿ ತಿಂದರೆ ಓಕೆ. ಇಲ್ಲವಾದರೆ 10-20 ಎಂಎಲ್ ಜ್ಯೂಸ್ ಸೇವಿಸಿದರೂ ನಡೆಯುತ್ತೆ. ಅತಿಯಾಗಿ ಸೇವಿಸಿದರೆ ದುಷ್ಪರಿಣಾಮ ಬೀರೋ ಸಾಧ್ಯತೆ ಇದೆ. 

Latest Videos
Follow Us:
Download App:
  • android
  • ios