ಸೆಕ್ಸ್ ಬಳಿಕ ಮೂತ್ರವಿಸರ್ಜನೆ ಮಾಡಿದ್ರೆ ಪ್ರೆಗ್ನೆಂಟ್ ಆಗೋಲ್ವಾ?
ಲೈಂಗಿಕ ಕ್ರಿಯೆ (sexual activity) ಅಥವಾ ಸೆಕ್ಸ್ ಬಳಿಕ ಮೂತ್ರವಿಸರ್ಜನೆ ಮಾಡೋ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಾರೆ. ಅದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಅನ್ನೋದು ಯಾರಿಗೂ ತಿಳಿದಿರೋದಿಲ್ಲ. ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಅನೇಕ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಕೆಲವರು ನಂಬುತ್ತಾರೆ, ಆದರೆ ಕೆಲವರು ಇದರಿಂದ ಯಾವುದೇ ನಿರ್ದಿಷ್ಟ ಪ್ರಯೋಜನವಿಲ್ಲ ಎಂದು ನಂಬುತ್ತಾರೆ.
ಪುರುಷರಿಗಿಂತ ಮಹಿಳೆಯರು ಸೆಕ್ಸ್ ಮಾಡಿದ ಬಳಿಕ ಮೂತ್ರ ಮಾಡುವ (Peeing)ಅಭ್ಯಾಸ ಹೆಚ್ಚು ರೂಢಿ ಮಾಡಿಕೊಂಡಿದ್ದಾರೆ. ಲೈಂಗಿಕ ಸಂಪರ್ಕದ ನಂತರ ಮೂತ್ರವಿಸರ್ಜನೆ ಮಾಡೋದ್ರಿಂದ ಗರ್ಭಧಾರಣೆ ಆಗೋದಿಲ್ಲ ಎಂದು ಭಾರತೀಯ ಮಹಿಳೆಯರೂ ಇನ್ನೂ ನಂಬುತ್ತಾರೆ. ಬಹಳಷ್ಟು ಮಹಿಳೆಯರು ಇದನ್ನು ಗರ್ಭನಿರೋಧಕದ ಬದಲಿ ಪರಿಹಾರವಾಗಿ ಅಭ್ಯಾಸ ಮಾಡುತ್ತಾರೆ. ಆದರೆ ಇದೆಲ್ಲಾ ನಿಜಾನ? ಸ್ತ್ರೀ ರೋಗ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ನೋಡೋಣ…
ಲೈಂಗಿಕ ಸಂಭೋಗದ ನಂತರ ಮೂತ್ರವಿಸರ್ಜನೆ ಮಾಡುವುದು ಸರಿಯೇ?
ಲೈಂಗಿಕ ಕ್ರಿಯೆಯ (Sexual Intercourse) ನಂತರ ಮೂತ್ರ ವಿಸರ್ಜನೆ ಮಾಡೋದ್ರಲ್ಲಿ ಯಾವುದೇ ಸಮಸ್ಯೆಯಿಲ್ಲ. ನೀವು ಬಯಸಿದರೆ ಅದನ್ನು ಮಾಡಬಹುದು, ಮಾಡದಿದ್ದರೂ ಪರವಾಗಿಲ್ಲ ಎನ್ನುತ್ತಾರೆ ತಜ್ಞರು. ಪುರುಷರು ಈ ಕ್ರಿಯೆಯಿಂದ ಹೆಚ್ಚಿನ ಪ್ರಯೋಜನ ಪಡೆಯುವುದಿಲ್ಲ, ಆದರೆ ಇದು ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಪ್ರಯೋಜನಕಾರಿ.
ಲೈಂಗಿಕ ಚಟುವಟಿಕೆಯ (sexual activity) ಸಮಯದಲ್ಲಿ, ಬ್ಯಾಕ್ಟೀರಿಯಾ ಮೂತ್ರನಾಳದ ಮೂಲಕ ಮೂತ್ರಕೋಶವನ್ನು ತಲುಪುತ್ತದೆ, ನಂತರ ಅವು ಯುಟಿಐಗೆ ಕಾರಣವಾಗುತ್ತವೆ. ಮೂತ್ರವಿಸರ್ಜನೆ ಮೂತ್ರನಾಳವನ್ನು ಶುದ್ಧೀಕರಿಸುತ್ತದೆ, ಇದು ಯುಟಿಐ ಅಪಾಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ.
ತಜ್ಞರ ಪ್ರಕಾರ, ಲೈಂಗಿಕ ಕ್ರಿಯೆಯ ನಂತರ ಮೂತ್ರವಿಸರ್ಜನೆ ಮಾಡುವುದರಿಂದ ಗರ್ಭಧಾರಣೆ (pregnancy) ತಡೆಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಪುರುಷರ ಶಿಶ್ನದಿಂದ 4-5 ಮಿಲಿ ವೀರ್ಯವು ಒಂದು ಸ್ಖಲನದಲ್ಲಿ ಹೊರಬರುತ್ತೆ. ಈ ವೀರ್ಯಗಳಲ್ಲಿ ಕೆಲವು ತನ್ನಷ್ಟಕ್ಕೆ ತಾನೇ ಹೊರಬರುತ್ತವೆ ಮತ್ತು ಕೆಲವು ಒಳಗೆ ಉಳಿಯುತ್ತವೆ. ಇಲ್ಲಿ ಸೆಮನ್ ಮತ್ತು ವೀರ್ಯಾಣುಗಳ ನಡುವಿನ ವ್ಯತ್ಯಾಸ ಅರ್ಥಮಾಡಿಕೊಳ್ಳಬೇಕು.
ವೀರ್ಯವು (Sperm) ಯೋನಿಯ ಗೋಡೆಗೆ ಅಂಟಿಕೊಳ್ಳುತ್ತದೆ, ಆದ್ದರಿಂದ ಮೂತ್ರವಿಸರ್ಜನೆ ಮಾಡುವಾಗ, ವೀರ್ಯದ ಕೆಲವು ಭಾಗವು ಹೊರಬರಬಹುದು, ಆದರೆ ಎಲ್ಲಾ ವೀರ್ಯಾಣುವನ್ನು ಹೊರತೆಗೆಯಲು ಸಾಧ್ಯವಿಲ್ಲ. ಆದ್ದರಿಂದ ಲೈಂಗಿಕ ಕ್ರಿಯೆಯ ನಂತರ ಮೂತ್ರವಿಸರ್ಜನೆ ಮಾಡುವುದು ಗರ್ಭಧಾರಣೆ ತಡೆಯೋ ವಿಧಾನ ಅಲ್ಲ.
ಲೈಂಗಿಕ ಕ್ರಿಯೆಯ ನಂತರ ಮೂತ್ರವಿಸರ್ಜನೆ ಎಸ್ಟಿಡಿ ತಡೆಯಲು ಸಾಧ್ಯವೇ?
ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಸೆಕ್ಸ್ ನಿಂದ ಉಂಟಾಗುವ ರೋಗಗಳನ್ನು ತಡೆಯಲು ಸಾಧ್ಯವಿಲ್ಲ. STD ಮುಖ್ಯವಾಗಿ ವೈರಸ್‌ಗಳಿಂದ ಹರಡುತ್ತವೆ ಮತ್ತು ಮೂತ್ರವಿಸರ್ಜನೆ ವರ್ಗಾವಣೆಗೊಂಡ ವೈರಸ್ನಿಂದ ಹೊರಬರಲು ಸಾಧ್ಯವಿಲ್ಲ, ಆದ್ದರಿಂದ ಅಸುರಕ್ಷಿತ ಲೈಂಗಿಕತೆಯ ನಂತರ ಮೂತ್ರವಿಸರ್ಜನೆ ಮಾಡೋದ್ರಿಂದ ಎಸ್ ಟಿಡಿ ಉಂಟಾಗುವ ಅಪಾಯ ಕಡಿಮೆ ಮಾಡುತ್ತದೆ ಎಂದು ಭಾವಿಸೋದು ಸರಿಯಲ್ಲ. ಕಾಂಡೋಮ್ (Condom) ಎಸ್ ಟಿಡಿ ಸಮಸ್ಯೆ ತಡೆಗಟ್ಟಲು ಅತ್ಯುತ್ತಮ ಮಾರ್ಗವಾಗಿದೆ.
ಲೈಂಗಿಕ ಕ್ರಿಯೆಯ ನಂತರ ಮೂತ್ರವಿಸರ್ಜನೆ ಮಾಡಬೇಕೆ ಅಥವಾ ಬೇಡವೇ?
ಲೈಂಗಿಕ ಕ್ರಿಯೆಯ ನಂತರ ಮಹಿಳೆಯರು ಮೂತ್ರವಿಸರ್ಜನೆ (urinate) ಮಾಡುವುದು ದೇಹವನ್ನು ಆರೋಗ್ಯಕರವಾಗಿರಿಸುತ್ತೆ. ನೀವು ಹೈಜಿನ್ (hygine) ಆಗಿರಬಹುದು.
ಸೆಕ್ಸ್ ಬಳಿಕ ವಜೈನಾ ಸ್ವಚ್ಛಗೊಳಿಸುವುದು ಉತ್ತಮ ಅಭ್ಯಾಸವಾಗಿರಬಹುದು. ಆದರೆ ಹಾಗೆ ಮಾಡದಿದ್ದರೆ ಯಾವುದೇ ಹಾನಿ ಉಂಟಾಗೋದಿಲ್ಲ. ಹೌದು, ಯುಟಿಐ ಹೊಂದಿರುವ ಮಹಿಳೆಯರಿಗೆ, ಈ ಅಭ್ಯಾಸ ಉತ್ತಮವಾಗಿದೆ. ಆದರೆ ಇದು ಪುರುಷರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನ ನಿಡಲ್ಲ. ಆದ್ದರಿಂದ ಸೆಕ್ಸ್ ಬಳಿಕ ಮೂತ್ರವಿಸರ್ಜನೆ ಮಾಡೋದು, ಬಿಡೋದು ಅವರವರ ನಂಬಿಕೆಗೆ ಬಿಟ್ಟದ್ದು.