MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • Winter Tips: ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆಯೇ? ಈ ರೀತಿ ದೂರ ಮಾಡಿ

Winter Tips: ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆಯೇ? ಈ ರೀತಿ ದೂರ ಮಾಡಿ

ಮಳೆಗಾಲ ಸಂಪೂರ್ಣವಾಗಿ ಮರೆಯಾಗಿದೆ, ಇದೀಗ ಚಳಿಗಾಲ ಆರಂಭವಾಗುತ್ತಿದೆ. ಈ ಚಳಿಯೊಂದಿಗೆ ಬರುವಂತಹ  ಶೀತ ಗಾಳಿ ನಮ್ಮ ಚರ್ಮವನ್ನು ಡ್ರೈ ಆಗುವಂತೆ ಮಾಡುತ್ತೆ. ಇದರಿಂದ ಖಂಡಿತವಾಗಿಯೂ ಇರಿಟೇಟ್ ಆಗಿಯೇ ಆಗುತ್ತೆ. ಚಳಿಗಾಲದಲ್ಲಿ ಚರ್ಮದ ಆರೈಕೆ ಮಾಡೋದು ಒಂದು ಸವಾಲಿನ ಕೆಲಸ ಅನ್ನೋದಂತೂ ನಿಜ., ಆದರೆ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ,  ಒಣ ಚರ್ಮದ ಸಮಸ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಪರಿಹರಿಸಬಹುದು.

3 Min read
Author : Suvarna News
Published : Oct 31 2022, 05:13 PM IST
Share this Photo Gallery
  • FB
  • TW
  • Linkdin
  • Whatsapp
112

ಚಳಿಗಾಲದಲ್ಲಿ (Winter) ಚರ್ಮದ ಸಮಸ್ಯೆ ನಿವಾರಿಸಲು ನೀವೂ ಏನೇನೋ ಟ್ರೈ ಮಾಡುತ್ತಿರಬಹುದು ಅಲ್ವಾ? ಮಾಯಿಶ್ಚರೈಸರ್ಗಳು ಮತ್ತು ಇತರ ಕ್ರೀಮ್ - ಆಯಿಲ್ ಗಳನ್ನು ಸಹ ಬಳಸುತ್ತೀರಿ, ಇದು ನಿಮಗೆ ಅಲ್ಪ ಕಾಲದ ಬದಲಾವಣೆ ತರಬಹುದು. ಆದರೆ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡೋದು ಮತ್ತು ಕೆಲವು ವಿಷಯಗಳನ್ನು ಸೇರಿಸೋದು ದೀರ್ಘಾವಧಿ ಪ್ರಯೋಜನ ನೀಡುತ್ತೆ. ಇದು ನಿಮ್ಮ ಚರ್ಮದ ಶುಷ್ಕತೆಯನ್ನು ಒಳಗಿನಿಂದ ತೆಗೆದುಹಾಕಲು ಸಹಾಯ ಮಾಡುತ್ತೆ, ಆದರೆ ಕ್ರೀಮ್  ಅಥವಾ ಇತರ ಯಾವುದೇ ಮಾಯಿಶ್ಚರೈಸರ್ ಮೇಲಿನಿಂದ ಮಾತ್ರ ಕೆಲಸ ಮಾಡುತ್ತೆ. ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆಯನ್ನು ಎದುರಿಸಲು ನಿಮಗೆ ಸಹಾಯ ಮಾಡುವ ಅನೇಕ ಆಹಾರಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
212

ಚಳಿಗಾಲದಲ್ಲಿ ಶುಷ್ಕತೆಯನ್ನು ತಪ್ಪಿಸುವುದು ಹೇಗೆ:
ನೀರು ಕುಡಿಯಿರಿ(Drink water) -
ಇದು ತುಂಬಾ ಸುಲಭ ಟಿಪ್, ಆದರೆ ಚಳಿಗಾಲದಲ್ಲಿ ನಾವು ನೀರಿನ ಸೇವನೆ ಕಡಿಮೆ ಮಾಡುತ್ತೇವೆ, ಇದರಿಂದಾಗಿ ಒಣ ಚರ್ಮ ಸಮಸ್ಯೆ ಎದುರಿಸಬೇಕಾಗುತ್ತೆ.  ದಿನಚರಿ ಮತ್ತು ಆಹಾರದಲ್ಲಿ ಸಣ್ಣ ಸುಧಾರಣೆ ಮಾಡಿ,  ಸಾಕಷ್ಟು ನೀರು ಸೇವಿಸಿದರೆ, ಒಣ ಚರ್ಮದ ಸಮಸ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ನಿವಾರಿಸಬಹುದು

312

ನಟ್ಸ್ (Nuts):
ವಾಲ್ನಟ್, ಗೋಡಂಬಿ, ಪಿಸ್ತಾ, ಹ್ಯಾಜೆಲ್ನಟ್ಗಳು ಮತ್ತು ಬಾದಾಮಿಗಳಂತಹ ಎಲ್ಲಾ ನಟ್ಸ್ ಚಳಿಗಾಲದಲ್ಲಿ ಸೇವಿಸಬೇಕು, ಯಾಕಂದ್ರೆ ಅವುಗಳಲ್ಲಿ ಒಮೆಗಾ 3, ಒಮೆಗಾ 6 ನಂತಹ ಅಗತ್ಯ ಕೊಬ್ಬಿನಾಮ್ಲಗಳಿವೆ. ಅವು ಚರ್ಮವನ್ನು ಮಾಯಶ್ಚರೈಸ್ ಆಗಿರುವಂತೆ ಮಾಡುತ್ತೆ. ಚಳಿಗಾಲದಲ್ಲಿ ಇವುಗಳ ಸೇವನೆ ತುಂಬಾ ಪ್ರಯೋಜನಕಾರಿ.

412

ಸೌತೆಕಾಯಿ (Cucumber):
ಸೌತೆಕಾಯಿ ಶುಷ್ಕ ಚರ್ಮವನ್ನು ಗುಣಪಡಿಸಲು ಸಹಾಯ ಮಾಡುತ್ತೆ. ಇತರ ಎಲ್ಲಾ ತರಕಾರಿಗಳಿಗೆ ಹೋಲಿಸಿದರೆ ಇದು ಅತ್ಯಧಿಕ ನೀರಿನ ಮಟ್ಟವನ್ನು ಹೊಂದಿದೆ. ಇದರೊಂದಿಗೆ, ಇದು ವಿಟಮಿನ್ ಎ, ವಿಟಮಿನ್ ಸಿ ಹೊಂದಿದೆ, ಇದು ಚರ್ಮಕ್ಕೆ ಇನ್ನೂ ಉತ್ತಮ. ಚಳಿಗಾಲದಲ್ಲಿ, ಅದರ ಬಳಕೆಯನ್ನು ಹೆಚ್ಚಿಸೋದು ಉತ್ತಮ.

512

ಹಸಿರು ಸೊಪ್ಪು ತರಕಾರಿಗಳು (Green vegetables) ಮತ್ತು ಸೀಸನಲ್ ಹಣ್ಣುಗಳು:
ಪಾಲಕ್, ಬ್ರೊಕೋಲಿ, ಎಲೆಕೋಸುಗಳಂತಹ ಗಾಢ ಹಸಿರು ಎಲೆ ತರಕಾರಿಗಳು ಬಹಳ ಮುಖ್ಯ ಏಕೆಂದರೆ ಅವು ಅನೇಕ ಆಂಟಿ ಆಕ್ಸಿಡೆಂಟ್ ಹೊಂದಿರುತ್ತವೆ. ಚಳಿಗಾಲದಲ್ಲಿ ಸೀಸನಲ್ ಹಣ್ಣುಗಳನ್ನು ಸೇವಿಸುವ ಮೂಲಕ, ನೀವು ಆರೋಗ್ಯಕರವಾಗಿರುತ್ತೀರಿ ಮತ್ತು ಚರ್ಮದ ಶುಷ್ಕತೆಯನ್ನು ತೊಡೆದುಹಾಕಬಹುದು.

612

ಕಲ್ಲಂಗಡಿ ಹಣ್ಣು (Watermelon):
ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಿದ್ದು (ಶೇಕಡಾ 90 ಕ್ಕಿಂತ ಹೆಚ್ಚು) ಮತ್ತು ಲೈಕೋಪೀನ್, ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ನಂತಹ ಖನಿಜ ಮತ್ತು ಫೈಟೊಕೆಮಿಕಲ್ ಗಳನ್ನು ಒಳಗೊಂಡಿದೆ - ಇವೆಲ್ಲವೂ ಚರ್ಮದ ಆರೋಗ್ಯವನ್ನು ಬೆಂಬಲಿಸುತ್ತವೆ. ಟೊಮೆಟೊ, ಸ್ಟ್ರಾಬೆರಿ ಅಥವಾ ಪೇರಳೆ ಹಣ್ಣುಗಳಿಗೆ ಹೋಲಿಸಿದರೆ, ಕಲ್ಲಂಗಡಿ ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.  ಕಲ್ಲಂಗಡಿ ಹಣ್ಣನ್ನು ವರ್ಷಪೂರ್ತಿ ತಿಂಡಿಯಾಗಿ ಆನಂದಿಸಬಹುದು ಅಥವಾ ರುಚಿಕರವಾದ, ತಾಜಾ ಸ್ಮೂಥಿಗಾಗಿ ಇತರ ಪದಾರ್ಥಗಳೊಂದಿಗೆ ಮಿಕ್ಸ್ ಮಾಡಬಹುದು.

712

ಕಿತ್ತಳೆ (Orange):
ಕಿತ್ತಳೆ ಹಣ್ಣು ಸಿಹಿ ಅಥವಾ ಹುಳಿಯಂತಹ ವಿವಿಧ ರುಚಿಗಳಲ್ಲಿ ಬರುತ್ತವೆ. ಕಿತ್ತಳೆ ಹಣ್ಣು ಯಾವಾಗಲೂ ನಿಮ್ಮ ಫ್ರುಟ್ ಬೌಲ್ ನಲ್ಲಿರಲು ಯೋಗ್ಯವಾದ ಹಣ್ಣು.. ಕಲ್ಲಂಗಡಿ ಹಣ್ಣಿನಂತೆ, ಇವುಗಳಲ್ಲಿ ಸಾಕಷ್ಟು ನೀರು (80-89 ಪ್ರತಿಶತ) ಮತ್ತು ವಿಟಮಿನ್ ಸಿ ಇರುತ್ತದೆ. ಇವು ಚರ್ಮಕ್ಕೆ ಉತ್ತಮವಾಗಿದೆ.

812

ಹಣ್ಣು ಮತ್ತು ತರಕಾರಿ ಸಲಾಡ್ಗಳು (Salad):
ಮುಖ್ಯ ಕೋರ್ಸ್ ಗೆ ಮೊದಲು ಸಲಾಡ್ ತಿನ್ನುವ ಹೊಸ ಅಭ್ಯಾಸ ಸ್ಟಾರ್ಟ್ ಮಾಡಿ. ನೀವು ಹಣ್ಣಿನ ಸಲಾಡ್, ತರಕಾರಿ ಸಲಾಡ್ ಅಥವಾ ಎರಡರ ಕಾಂಬಿನೇಶನ್  ಪ್ರಯತ್ನಿಸಬಹುದು. ನಿಮ್ಮ ಹಸಿವನ್ನು ಸುಧಾರಿಸುವುದರ ಜೊತೆಗೆ, ತಾಜಾ ಹಣ್ಣು ಮತ್ತು ತರಕಾರಿಗಳನ್ನು ಹೊಂದಿರುವ ಸಲಾಡ್ ಗಳು ದೇಹದಲ್ಲಿ ನೀರಿನ ಅಂಶ ಹೆಚ್ಚಿಸಲು ಸಹಾಯ ಮಾಡುತ್ತೆ. ಆದುದರಿಂದ ಚಳಿಗಾಲದಲ್ಲಿ ಇವುಗಳನ್ನು ಸೇವಿಸೋದು ಉತ್ತಮ. 

912

ತೆಂಗಿನೆಣ್ಣೆ (Coconut oil):  
ಇದು ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತದೆ, ಉರಿಯೂತವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ ಮತ್ತು ತೇವಾಂಶವನ್ನು ಉಳಿಸಿ, ಚರ್ಮಕ್ಕೆ ರಕ್ಷಣಾತ್ಮಕ ಪದರವನ್ನು ನೀಡುತ್ತೆ ಆದುದರಿಂದ ನಿಮ್ಮ ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ತೆಂಗಿನ ಎಣ್ಣೆ ಸೇರಿಸಿ, ಅಥವಾ ಇವುಗಳನ್ನು ದೇಹಕ್ಕೆ ಹಚ್ಚಿಕೊಳ್ಳುವುದು ಸಹ ದೇಹದಲ್ಲಿ ಮಾಯಿಸ್ಚರೈಸ್ ಉಳಿಸಿಕೊಳ್ಳಲು ಸಹಾಯ ಮಾಡುತ್ತೆ..

1012

ಡಾರ್ಕ್ ಚಾಕೊಲೇಟ್ (Dark chocolate):
ಡಾರ್ಕ್ ಚಾಕೊಲೇಟ್ ವಿಭಿನ್ನ ರುಚಿಯನ್ನು ಹೊಂದಿದೆ ಮತ್ತು ಅದರ ರುಚಿಯೂ ಎಲ್ಲರಿಗೂ ಇಷ್ಟವಾಗುತ್ತೆ. ಇದು ಕೊಬ್ಬಿನ ಉತ್ತಮ ಸಂಗ್ರಹವನ್ನು ಹೊಂದಿದೆ, ಮತ್ತು ಇದು ಫೈಬರ್, ಕಬ್ಬಿಣದ ಅಂಶ, ಮೆಗ್ನೀಸಿಯಮ್, ತಾಮ್ರ ಮತ್ತು ಮ್ಯಾಂಗನೀಸ್ ನ ಅದ್ಭುತ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ತಿನ್ನೋದ್ರಿಂದಾ ದೇಹದಲ್ಲಿ ಮಾಯಿಶ್ಚರೈಸರ್ ಉಳಿಯುವಂತೆ ಮಾಡುತ್ತೆ.

1112

ಆವಕಾಡೊ (Avacado):
ಆವಕಾಡೊ ಇತ್ತೀಚಿನ ದಿನಗಳಲ್ಲಿ ಇದು ಅನೇಕ ಜನರ ಮೊದಲ ಆಯ್ಕೆಯಾಗಿದೆ, ಇದು ತೂಕ ಕಳೆದುಕೊಳ್ಳಲು ತುಂಬಾ ಸಹಾಯ ಮಾಡುತ್ತದೆ, ಅಷ್ಟೇ ಅಲ್ಲ  ಇದು ಕಾರ್ಬೋಹೈಡ್ರೇಟ್ಗಳು, ಕೊಬ್ಬಿನಾಮ್ಲಗಳು ಮತ್ತು ಪೊಟ್ಯಾಸಿಯಮ್ನ ಗುಣಲಕ್ಷಣಗಳನ್ನು ಹೊಂದಿದ್ದು, ಚರ್ಮದ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತೆ.

1212

ಹಾಲು (Milk):
ಚಳಿಗಾಲದಲ್ಲಿ ಆರೋಗ್ಯವನ್ನು ಸುಧಾರಿಸಲು ಹಾಲನ್ನು ಬಳಸಬೇಕು. ಇದು ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲದೆ, ಇದರಲ್ಲಿ ಕಂಡುಬರುವ ಪ್ರಯೋಜನಕಾರಿ ಗುಣಲಕ್ಷಣಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಚಳಿಗಾಲದಲ್ಲಿ ಉಗುರುಬೆಚ್ಚಗಿನ ಹಾಲನ್ನು ಸೇವಿಸುವುದರಿಂದ ಆರೋಗ್ಯ ಮತ್ತು ಚರ್ಮಕ್ಕೆ ಪ್ರಯೋಜನಕಾರಿ..

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಮದ್ಯ ಕುಡಿಯುವ ಅಭ್ಯಾಸವಿದೆಯಾ? ಎಷ್ಟು ವರ್ಷಗಳಲ್ಲಿ ಲಿವರ್ ಹಾಳಾಗುತ್ತೆ ಗೊತ್ತಾ?
Recommended image2
Virat Kohli: ದಿನಕ್ಕೆ 3 ಬಾರಿ ಒಂದೇ ಊಟ, ಬೇಯಿಸಿದ ಆಹಾರ, ಕಸರತ್ತು! ಫಿಟ್ನೆಸ್‌ಗಾಗಿ ಇಷ್ಟೆಲ್ಲಾ ಮಾಡ್ತಾರಾ ಕೊಹ್ಲಿ ?
Recommended image3
ಪಟಾಕಿಯಿಂದ ಸುಟ್ಟಾಗ ಈ ತಪ್ಪು ಮಾಡಬೇಡಿ; ಚರ್ಮದ ಮೇಲೆ ಶಾಶ್ವತ ಕಲೆ ಉಳಿಯುತ್ತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved