Weight Loss Tips: ಅನ್ನವನ್ನು ತೆಂಗಿನೆಣ್ಣೆ ಸೇರಿಸಿ ಬೇಯಿಸಿ, ತೂಕ ಹೆಚ್ಚಾಗೋ ಭಯವಿಲ್ಲ

ದಿನ ಹೋಗ್ತಾ ಇರೋ ಹಾಗೇ ದಪ್ಪಗಾಗ್ತಾ ಹೋಗ್ತಿದ್ದೀರಾ ? ಸಣ್ಣಗಾಗ್ಬೇಕು ಅಂತ ಅನ್ನ ತಿನ್ನೋದನ್ನು ಬಿಟ್ಬಿಟ್ಟಿದ್ದೀರಾ ? ಚಿತ್ರಾನ್ನ, ಪುಳಿಯೋಗರೆ, ಪಲಾವ್ (Pulav) ಇಷ್ಟ ಆದ್ರೂ ಯಾವ್ದೂ ತಿನ್ನೋಕಾಗ್ತಿಲ್ವ. ಚಿಂತೆ ಬಿಡಿ. ಈ ಟ್ರಿಕ್ ಯೂಸ್ ಮಾಡಿ ಬೇಯಿಸಿದ ಅನ್ನ (Rice) ತಿಂದ್ರೆ ದಪ್ಪ ಆಗೋ ಚಿಂತೆಯಿಲ್ಲ.

Adding Coconut Oil When Cooking Rice Can Cut Down Calories

ಅಧಿಕ ತೂಕ (Weight) ಇವತ್ತಿನ ದಿನಗಳಲ್ಲಿ ಸಾರ್ವತ್ರಿಕ ಸಮಸ್ಯೆ. ತೂಕ ಇಳಿಸ್ಕೊಂಡು ಸಣ್ಣಗಾಗ್ಬೇಕು ಅನ್ನೋದು ಹಲವರ ಡ್ರೀಮ್.  ಎಲ್ಲರೂ ತೂಕ ಇಳಿಸಿಕೊಳ್ಳಲು ಹಲವು ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಇಂದಿನ ದಿನದಲ್ಲಿ ತೂಕವನ್ನು ಕಳೆದುಕೊಳ್ಳುವುದು ಬಹುತೇಕ ಗೀಳಿನಂತಿದೆ. ಅದಕ್ಕಾಗಿ ಜಿಮ್ (Gym), ಯೋಗ, ಧ್ಯಾನ, ಡಯೆಟ್ ಅಂತ ಹಲವು ರೀತಿಯಲ್ಲಿ ಪ್ರಯತ್ನ ಮಾಡ್ತಾರೆ. 

ತೂಕ ನಷ್ಟಕ್ಕೆ ಬಂದಾಗ  ಪ್ರತಿಯೊಬ್ಬರೂ ಮಾತನಾಡುವ ಸಾಮಾನ್ಯ ಅಂಶವೆಂದರೆ ಕಾರ್ಬೋಹೈಡ್ರೇಟ್‌ಗಳನ್ನು ಬಿಟ್ಟುಬಿಡುವ ಮೂಲಕ ಕ್ಯಾಲೋರಿ (Calorie) ನಿಯಂತ್ರಣ ಮಾಡುವುದು. ಹೀಗಾಗಿಯೇ ಜನರು ತೂಕ ಹೆಚ್ಚಾಗದಿರಲು ಕೆಲವೊಂದು ಆಹಾರಗಳನ್ನು ತಿನ್ನುವುದು ಬಿಟ್ಟುಬಿಡುತ್ತಾರೆ, ತಿನ್ನುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಆಹಾರತಜ್ಞರ ಪ್ರಕಾರ ತೂಕ ಇಳಿಸಿಕೊಳ್ಳಲು ಇದು ಆರೋಗ್ಯಕರ ಅಭ್ಯಾಸವಲ್ಲ. 

Weight Loss Tips: ಸಣ್ಣಗಾಗ್ಬೇಕಾ ? ಗೋಧಿ ಹಿಟ್ಟಿನ ಚಪಾತಿ ಬಿಟ್ಬಿಡಿ, ಇದನ್ನು ಟ್ರೈ ಮಾಡಿ

ತೂಕ ಹೆಚ್ಚಾಗುತ್ತೆ ಅನ್ನೋ ಕಾರಣಕ್ಕೆ ಅನ್ನವನ್ನು ತಿನ್ನದೇ ಇರುವವರು ಇದ್ದಾರೆ. ಯಾಕೆಂದರೆ ಅಕ್ಕಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೊರಿ ಇದೆ ಎಂಬ ಕಾರಣವಾಗಿದೆ. ಅನ್ನ (Rice)ವನ್ನು ತಿನ್ನಬಾರದು ಎಂಬ ಕಾರಣದಿಂದ ಅನ್ನದಿಂದ ತಯಾರಿಸೋ ಇತರ ಯಾವುದೇ ಆಹಾರ (Food)ಗಳನ್ನು ತಿನ್ನಲು ಸಾಧ್ಯವಾಗುವುದಿಲ್ಲ. ಆದ್ರೆ ತೂಕ ಕಡಿಮೆಯಾಗೋಕೆ ನೀವು ಅನ್ನ ತಿನ್ನೋದನ್ನೆಲ್ಲಾ ಬಿಟ್ಟು ಕಷ್ಟಪಡಬೇಕಾಗಿಲ್ಲ. ಅನ್ನ ತಿಂದರೂ ತೂಕ ಹೆಚ್ಚಳವಾಗದಂತೆ ನೋಡಿಕೊಳ್ಳಬಹುದು. ಅದ್ಹೇಗೆ ನಿಮಗೆ ಗೊತ್ತಾ ?
ಅಕ್ಕಿ ಬೇಯಿಸುವಾಗ ಕೆಲವೊಂದು ಪದಾರ್ಥವನ್ನು ಸೇರಿಸುವುದರಿಂದ ಅಕ್ಕಿ ಕ್ಯಾಲೊರಿಗಳನ್ನು 50 ಪ್ರತಿಶತದಷ್ಟು ಕಡಿಮೆ ಮಾಡಬಹುದು. ಅದು ಹೇಗೆಂದು ತಿಳಿಯೋಣ..

ಅಕ್ಕಿಯ ಕ್ಯಾಲೊರಿ ಕಡಿಮೆ ಆಗುವಂತೆ ಬೇಯಿಸುವುದು ಹೇಗೆ ?
ಅಮೇರಿಕನ್ ಕೆಮಿಕಲ್ ಸೊಸೈಟಿಯಲ್ಲಿ ಪ್ರಸ್ತುತಪಡಿಸಿದ 2015ರ ಸಂಶೋಧನೆಯ ಪ್ರಕಾರ, ಅಕ್ಕಿಯಲ್ಲಿನ ಕ್ಯಾಲೊರಿಗಳನ್ನು ಕಡಿಮೆ ಮಾಡುವ ಉತ್ತಮ ಮಾರ್ಗವನ್ನು ಸೂಚಿಸಲಾಗಿದೆ. ಇದರ ಪ್ರಕಾರ, ಕುದಿಯುವ ನೀರಿಗೆ ಒಂದು ಟೀ ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ. ನಂತರ ಅದರಲ್ಲಿ ಅಕ್ಕಿಯನ್ನು ಸುಮಾರು 25-30 ನಿಮಿಷಗಳ ಕಾಲ ಬೇಯಿಸಿ. ಬಳಿಕ 12 ಗಂಟೆಗಳ ಕಾಲ ಇದನ್ನು ಶೈತ್ಯೀಕರಣಗೊಳಿಸಿ.

Food Tips: ಊಟ ಬಿಟ್ರೆ ಸಣ್ಣಗಾಗ್ತೀವಿ ಅನ್ನೋದು ಸುಳ್ಳು. ಹಾಗೆ ಮಾಡ್ಬೇಡಿ

ಪಿಷ್ಟ ಮತ್ತು ತೂಕ ನಷ್ಟ
ಸಂಶೋಧನೆಯ ಪ್ರಕಾರ, ಅಕ್ಕಿಯನ್ನು ರಾತ್ರಿ ನೆನೆಸುವುದರಿಂದ ನಿರೋಧಕ ಪಿಷ್ಟ ಉತ್ಪತ್ತಿಯಾಗುತ್ತದೆ. ಇದು ಕ್ಯಾಲೊರಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ನಷ್ಟಕ್ಕೆ ಕಾರಣವಾಗುತ್ತದೆ.ಅನ್ನವನ್ನು ಸೇವಿಸಿದಾಗ, ಅದು ದೇಹದಲ್ಲಿ ಗ್ಲೈಕೋಜೆನ್ ಆಗಿ ಪರಿವರ್ತನೆಗೊಳ್ಳುತ್ತದೆ. ಸ್ನಾಯುಗಳಿಗೆ ವ್ಯಾಯಾಮ (Exercise)ದ ನಂತರದ ಚೇತರಿಸಿಕೊಳ್ಳಲು ಶಕ್ತಿಯನ್ನು ನೀಡುತ್ತದೆ. ನೀವು ಯಾವುದೇ ಕಠಿಣ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿದ್ದರೆ, ಈ ಗ್ಲೈಕೋಜೆನ್ ಗ್ಲೂಕೋಸ್ ಆಗುತ್ತದೆ ಮತ್ತು ಕೊಬ್ಬಿನಂತೆ ದೇಹದಲ್ಲಿ ಸಂಗ್ರಹವಾಗುತ್ತದೆ.

ಅಧ್ಯಯನ ಏನು ಹೇಳುತ್ತದೆ ?
ಸಂಶೋಧನೆಯ ಪ್ರಕಾರ ಅನ್ನವನ್ನು ತೆಂಗಿನೆಣ್ಣೆ ಸೇರಿಸಿ ಬೇಯಿಸುವ ಟ್ರಿಕ್ ಕ್ಯಾಲೊರಿಗಳನ್ನು ಶೇಕಡಾ 60ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರೈಸ್ ರೆಸಿಸ್ಟೆಂಟ್ ಸ್ಟಾರ್ಚ್ ಸಾಂದ್ರತೆಯನ್ನು ಹೆಚ್ಚಿಸುವುದು ಸಮಸ್ಯೆಯನ್ನು ಸಮೀಪಿಸಲು ಒಂದು ಹೊಸ ಮಾರ್ಗವಾಗಿದೆ ಎಂದು ಸಂಶೋಧಕರು ನಂಬಿದ್ದಾರೆ. ಉತ್ತಮವಾದ ಭತ್ತದ ತಳಿಯನ್ನು ಸಂಸ್ಕರಿಸಿದರೆ, ಅದು ಸುಮಾರು 50-60 ಪ್ರತಿಶತದಷ್ಟು ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. 

ಇದಲ್ಲದೆ, ಸಾಮಾನ್ಯವಾಗಿ ಬೇಯಿಸಿದ ಅನ್ನವನ್ನು ತಿನ್ನಲು ಬಯಸುವುದಾದರೆ ಊಟ ಮಾಡಿದ ಬಳಿಕ ಕೆಲವು ಆರೋಗ್ಯಕರ ಪಾನೀಯಗಳನ್ನು ಕುಡಿಯುವುದನ್ನು ರೂಢಿ ಮಾಡಿಕೊಳ್ಳಿ. ಅನ್ನ ಸೇವಿಸಿದ ನಂತರ ಜೀರಿಗೆ ನೀರು, ಗ್ರೀನ್ ಟೀ, ದಾಲ್ಚಿನ್ನಿ ನೀರು, ಬೆಳ್ಳುಳ್ಳಿ ಹಾಕಿದ ನೀರನ್ನು ಕುಡಿಯುವುದರಿಂದ ತೂಕ ಇಳಿಸಿಕೊಂಡು ಸಣ್ಣಗಾಗ್ಬೋದು. ಆದರೆ ಯಾವುದೇ ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು ಯಾವಾಗಲೂ ತರಬೇತಿ ಪಡೆದ ವೈದ್ಯಕೀಯ ವೈದ್ಯರು ಅಥವಾ ಪೌಷ್ಟಿಕತಜ್ಞರನ್ನು ಸಂಪರ್ಕಿಸಬೇಕು.

Latest Videos
Follow Us:
Download App:
  • android
  • ios