Asianet Suvarna News Asianet Suvarna News

ಮಗುವಿನ ಬೆಳವಣಿಗೆಗೆ ಬೇಕು ಡಾರ್ಕ್ ಚಾಕೊಲೇಟ್!

ಚಾಕೊಲೇಟ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಲಿ. ಅಂಗಡಿಗಳಿಗೆ ಹೋದರಂತು ವೆರೈಟಿ ವೆರೈಟಿ ಚಾಕೊಲೇಟ್, ಎಲ್ಲವೂ ಟೇಸ್ಟ್ ಮಾಡಬೇಕೆಂದು ಅನಿಸುವುದು ನಿಜ. ಅಷ್ಟಕ್ಕೂ ಚಾಕೊಲೇಟ್ ತಿನ್ನುವುದಕ್ಕೆ ವಯಸ್ಸು ಯಾವ ಲೆಕ್ಕಕ್ಕೂ ಬರುವುದಿಲ್ಲ. ಎಲ್ಲಾ ವರ್ಗದ ಜನರಿಗೂ ಇಷ್ಟ ಪಡುತ್ತಾರೆ. ಹೀಗಿರುವಾ ಮಕ್ಕಳು ಚಾಕೊಲೇಟ್ ಕಂಡರೆ ಬಿಡ್ತಾರಾ ನೀವೆ ಹೇಳಿ. ಮಕ್ಕಳಿಗೆ ಚಾಕೊಲೇಟ್ ಕೊಡುವುದರಿಂದಲೂ ಆರೋಗ್ಯಕ್ಕೆ ಹಲವು ಲಾಭವಿದೆ. ಅದರಲ್ಲೂ ಡಾರ್ಕ್ ಚಾಕೊಲೇಟ್ ಬಹಳ ಒಳ್ಳೆಯದಂತೆ ಈ ಬಗ್ಗೆ ಇಲ್ಲಿದೆ ಮಾಹಿತಿ.

Benefits of eating Dark Chocolate for growing Kids
Author
First Published Sep 10, 2022, 12:14 PM IST

ಮಕ್ಕಳನ್ನು ಹೆಚ್ಚು ಪ್ರಚೋದಿಸುವ ಆಹಾರವೆಂದರೆ ಚಾಕೊಲೇಟ್. ಅವರು ಹಠ ಮಾಡುತ್ತಿರುವಾಗ, ಹೇಳಿದ್ದು ಕೇಳದಿರುವಾಗ ಚಾಕೊಲೇಟ್ ಕೊಡ್ತೀನಿ ಎಂದರೆ ಸಾಕು ನೀರಿನಂತೆ ತಣ್ಣಗಾಗುತ್ತಾರೆ. ಮಕ್ಕಳಿಗೆ ಒಂದು ಚಾಕೊಲೇಟ್ ಕೊಟ್ಟರೆ ಸಾಕುಗುವುದಿಲ್ಲ ಅವರು ಯಾವಾಗಲು ಹೆಚ್ಚೇ ಬಯಸುತ್ತಾರೆ. ಇದೇ ಕಾರಣಕ್ಕೆ ಪೋಷಕರು ಚಾಕೊಲೇಟ್ ಕೊಡಲು ಭಯ ಪಡುತ್ತಾರೆ. ಅಲ್ಲದೆ ಆರೋಗ್ಯಕ್ಕೆ ಚಾಕೊಲೇಟ್ ಒಳ್ಳೆಯದಲ್ಲ ಎಂದು ಹಿಂಜರಿಯುತ್ತಾರೆ. ಚಾಕೊಲೇಟ್ ತಮ್ಮ ಮಗುವಿನ ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಪೋಷಕರು ಯಾವಾಗಲೂ ಅನುಮಾನಿಸುತ್ತಾರೆ. ಆದರೆ ಚಾಕೊಲೇಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು ಈ ನಂಬಿಕೆಯನ್ನು ದೂರ ಮಾಡುವಂತಹದ್ದು. ವಾಸ್ತವವಾಗಿ ಡಾರ್ಕ್ ಚಾಕೊಲೇಟ್ ಅನ್ನು ಆರೋಗ್ಯಕರ ವಿಧದ ಚಾಕೊಲೇಟ್ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವುಗಳು ನೈಸರ್ಗಿಕವಾಗಿರುತ್ತವೆ ಹಾಗೂ ಇದರಲ್ಲಿ ಯಾವುದೇ ಸಕ್ಕರೆಯನ್ನು ಹೊಂದಿರುವುದಿಲ್ಲ. 

ಮಕ್ಕಳಿಗೆ ಡಾರ್ಕ್ ಚಾಕೊಲೇಟ್ ಪ್ರಯೋಜನಗಳು
1.ಮಗುವಿನ ಮಾನಸಿಕ ಆರೋಗ್ಯ ನೋಡಿಕೊಳ್ಳುತ್ತದೆ 

ಪ್ರತಿಯೊಬ್ಬ ಪೋಷಕರು ತಮ್ಮ ಮಗು ಸಂತೋಷವಾಗಿರಬೇಕೆAದು ಬಯಸುತ್ತಾರೆ. ಮಗುವಿಗೆ ಚಾಕೊಲೇಟ್ ಇಷ್ಟವಿದ್ದಲ್ಲಿ ಅದನ್ನು ಅದುಮಿಡಬೇಡಿ. ಬದಲಾಗಿ ಉತ್ತಮವಾದ ಡಾಕ್ ಚಾಕಲೊಲೇಟ್ ಅನ್ನು ನೀಡಿ. ಆಗ ಮಗು ಸಂತೋಷವಾಗುವುದಲ್ಲದೆ, ಚಾಕೊಲೇಟ್‌ನಲ್ಲಿರುವ ವಸ್ತುಗಳಾದ ಡೋಪಮೈನ್, ಸಿರೊಟೋನಿನ್ ಮತ್ತು ಎಂಡಾರ್ಫಿನ್‌ಗಳಾದ ಸಂತೋಷದ ಹಾರ್ಮೋನ್‌ಗಳನ್ನು ಸಕ್ರಿಯಗೊಳಿಸಿ ಮನಸ್ಥಿತಿಯನ್ನು ಹೆಚ್ಚಿಸಬಹುದು. ಇದರಿಂದ ಒತ್ತಡ ಕಡಿಮೆಯಾಗಿ ಮಕ್ಕಳು ವಿಶ್ರಾಂತಿ ಪಡೆಯುತ್ತಾರೆ. ಚಾಕೊಲೇಟ್‌ಗಳು ಮಗುವಿನ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಪಾಲಕರು ನಂಬುತ್ತಾರೆ. ಉದಾಹರಣೆಗೆ ಹೊಟ್ಟೆಯ ಸಮಸ್ಯೆ, ಹಲ್ಲುಗಳು ಕೊಳೆಯುವುದು ಇತ್ಯಾದಿ. ಆದರೆ ಇದು ಮಾನಸಿಕ ಆರೋಗ್ಯವನ್ನು ಅದ್ಭುತಗೊಳಿಸುತ್ತದೆ ಎಂಬುದನ್ನು ಸಹ ತಿಳಿಯಬೇಕು.

ಮೂಡ್ ಆಫ್ ಆಗಿದ್ಯಾ? ಹಾಗಿದ್ರೆ ಇವುಗಳನ್ನ ತಿಂದು ಹ್ಯಾಪಿಯಾಗಿರಿ

2.ದೇಹದ ಕಾರ್ಯನಿರ್ವಹಣೆ ಸುಧಾರಿಸುತ್ತದೆ 
ಡಾರ್ಕ್ ಚಾಕೊಲೇಟ್ ದೈಹಿಕ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಇದರಲ್ಲಿ ಪೋಷಕಾಂಶ ಮತ್ತು ಖನಿಜಾಂಶಗಳು ಹೇರಳವಾಗಿರುತ್ತದೆ. ಇದು ರಕ್ತನಾಳಗಳನ್ನು ರಕ್ಷಿಸುವ ಆಂಟಿ-ಆಕ್ಸಿಡೆAಟ್‌ಗಳನ್ನು ಹೊಂದಿದೆ. ಅದಕ್ಕಾಗಿಯೇ ಡಾರ್ಕ್ ಚಾಕೊಲೇಟ್ ಹೃದಯವನ್ನು ರಕ್ಷಿಸುತ್ತದೆ ಎಂದು ಜನಪ್ರಿಯವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಡಾರ್ಕ್ ಚಾಕೊಲೇಟ್‌ಗಳಲ್ಲಿ ಇರುವ ಕಬ್ಬಿಣ, ಸತು, ಪೊಟ್ಯಾಸಿಯಮ್‌ಗಳು ದೇಹದ ಚಯಾಪಚಯ ಪ್ರಕ್ರಿಯೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಫ್ರೀ ರಾಡಿಕಲ್ಸ್ಗಳನ್ನು ನೋಡಿಕೊಳ್ಳುತ್ತದೆ. ಜೊತೆಗೆ ದೇಹದ ಆಂತರಿಕ ಹಾನಿಯನ್ನು ತಡೆಯುತ್ತದೆ.

ಡಾರ್ಕ್ ಚಾಕಲೇಟ್ ಎಂಬ ಮ್ಯಾಜಿಕಲ್ ಪವರ್ ಇರುವ ಸಿಹಿ ಔಷಧ

3. ಚರ್ಮದ ಸ್ಥಿತಿ ಮರುಸ್ಥಾಪನೆ
ಡಾರ್ಕ್ ಚಾಕೊಲೇಟ್‌ನಲ್ಲಿ ಆಂಟಿಆಕ್ಸಿಡೆAಟ್ ಹೇರಳವಾಗಿದ್ದು, ಚರ್ಮಕ್ಕೆ ಒಳ್ಳೆಯದು. ಇದುಸನ್ ಬರ್ನ ಆಗದಂತೆ ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸುವ ಫ್ಲೇವನಾಯ್ಡಗಳನ್ನು ಸಹ ಒಳಗೊಂಡಿದೆ. ಡಾರ್ಕ್ ಚಾಕೊಲೇಟ್ ಸೇವನೆಯಿಂದ ಚರ್ಮದಲ್ಲಿನ ತೇವಾಂಶ ಕಾಯ್ದುಕೊಳ್ಳುವುದರ ಜೊತೆಗೆ ಚರ್ಮದ ವಿನ್ಯಾಸವನ್ನು ಸುಧಾರಿಸುತ್ತದೆ. ಹಾಗಾಗಿ ಮಗುವಿಗೆ ಚರ್ಮಕ್ಕೆ ಸಂಬAಧಿಸಿದ ಯಾವುದೇ ಸಮಸ್ಯೆಗಳಿದ್ದರೆ, ಡಾರ್ಕ್ ಚಾಕೊಲೇಟ್ ಅನ್ನು ಆಹಾರದಲ್ಲಿ ಸೇರಿಸಬಹುದು.

4.ಮಾನಸಿಕ ಪ್ರಕ್ರಿಯೆ ಹೆಚ್ಚಿಸುತ್ತದೆ
ಮಕ್ಕಳು ಪ್ರತಿದಿನ ಬಹಳಷ್ಟು ಕಲಿಕೆಯ ಪ್ರಕ್ರಿಯೆಗಳಲ್ಲಿ ತೊಡಗುತ್ತಾರೆ. ಅವರು ಗಮನಹರಿಸಬೇಕು ಮತ್ತು ಬಹಳಷ್ಟು ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು. ಡಾರ್ಕ್ ಚಾಕೊಲೇಟ್ ಮಕ್ಕಳಿಗೆ ನೀಡುವುದರಿಂದ ಅವರ ಈ ಕೆಲಸಕ್ಕೆ ಸಹಾಯ ಮಾಡುತ್ತದೆ. ಇದು ಫ್ಲೇವನಾಯ್ಡ್ಗಳನ್ನು ಒಳಗೊಂಡಿರುವುದರಿAದ, ಮೆದುಳಿನ ಹಿಪೊಕ್ಯಾಂಪಸ್ ಪ್ರದೇಶವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಈ ಭಾಗವು ಮೆಮೊರಿ ಪ್ರಕ್ರಿಯೆಯಲ್ಲಿ ತೊಡಗಿದೆ. ಇದು ಗಣಿತದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹ ಸಹಾಯ ಮಾಡುತ್ತದೆ. ಹಾಗಾಗಿ ಇದು ಮಕ್ಕಳ ಏಕಾಗ್ರತೆ ಮತ್ತು ಸ್ಮರಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕಪ್ಪೆಂದು ಹೀಗಳೆಯಬೇಡಿ, ಕಪ್ಪಲ್ಲಿದೆ ತ್ವಚೆ ಸುಂದರವಾಗಿಸುವ ಪವರ್

5. ಶಕ್ತಿಯ ಉಗ್ರಾಣ 
ಮಕ್ಕಳು ಯಾವಾಗಲೂ ಸಕ್ರಿಯ ಮತ್ತು ತಮಾಷೆಯಾಗಿರುತ್ತಾರೆ. ದಿನವಿಡೀ ಅವರಿಗೆ ಸಾಕಷ್ಟು ಶಕ್ತಿಯ ಅಗತ್ಯವಿರುತ್ತದೆ. ಓದುವುದು, ಚಿತ್ರ ಬಿಡಿಸುವುದು, ಬರೆಯುವುದು, ಆಟವಾಡುವುದು, ಮುಂತಾದ ಕಲಿಕೆಯಲ್ಲಿ ತೊಡಗುತ್ತಾರೆ. ಡಾರ್ಕ್ ಚಾಕೊಲೇಟ್ ಒಂದು ಎನರ್ಜಿ ಬೂಸ್ಟರ್ ಎಂದೂ ಕರೆಯಲಾಗುತ್ತದೆ.  ಚಾಕೊಲೇಟ್ ಬಾರ್‌ನ ಒಂದು ಚಿಕ್ಕ ಬೈಟ್ ಅವರಿಗೆ ಪುನಶ್ಚೇತನವನ್ನು ನೀಡುತ್ತದೆ. 

Follow Us:
Download App:
  • android
  • ios