ಇನ್ನೇನು ದ್ರಾಕ್ಷಿ ಸೀಸನ್, ಸರಿಯಾಗಿ ತೊಳೆದು ಬಳಸೋದ ಮರೀಬೇಡಿ

ಹಣ್ಣನ್ನು ತೊಳೆದು ತಿನ್ಬೇಕು. ಬರೀ ನೀರಿನಲ್ಲಿ ಹಣ್ಣನ್ನು ಕ್ಲೀನ್ ಮಾಡಿದ್ರೆ ಹಣ್ಣಿನಲ್ಲಿರುವ ಕೀಟನಾಶಕ ಹೋಗೋದಿಲ್ಲ. ಅದ್ರಲ್ಲೂ ದ್ರಾಕ್ಷಿ ಹಣ್ಣನ್ನು ಸ್ವಚ್ಛಗೊಳಿಸೋದು ಸುಲಭವಲ್ಲ. ಹಣ್ಣನ್ನು ಹೇಗೆ ಕ್ಲೀನ್ ಮಾಡ್ಬೇಕು ಅಂತಾ ನಾವು ಹೇಳ್ತೇವೆ. 
 

How To Clean Grapes

ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅದನ್ನು ತೊಳೆಯದೆ ತಿಂದ್ರೆ ಅಷ್ಟೇ ಹಾನಿಕಾರಕ. ಸೇಬು ಹಣ್ಣು ಸೇರಿದಂತೆ ಪ್ರತಿಯೊಂದು ಹಣ್ಣನ್ನು ಸ್ವಚ್ಛಗೊಳಿಸಿ ಸೇವನೆ ಮಾಡಬೇಕು. ಆದ್ರೆ ಎಲ್ಲ ಹಣ್ಣುಗಳನ್ನು ಕ್ಲೀನ್ ಮಾಡೋದು ಸುಲಭವಲ್ಲ. ತೊಳೆದು ಕ್ಲೀನ್ ಮಾಡಲು ಕಷ್ಟದಲ್ಲಿ ಕಷ್ಟವಾದ ಹಣ್ಣು ಅಂದ್ರೆ ಅದು ದ್ರಾಕ್ಷಿ ಹಣ್ಣು. ದ್ರಾಕ್ಷಿ ಹಣ್ಣುಗಳು ತುಂಬಾ ಚಿಕ್ಕದಾಗಿರುತ್ತವೆ. ತೊಳೆದಾಗ ಗೊಂಚಲುಗಳಿಂದ ಹಣ್ಣು ಬೇರ್ಪಡುತ್ತದೆ. 

ದ್ರಾಕ್ಷಿ (Grapes) ಗೆ ಹೆಚ್ಚು ಕೀಟನಾಶಕಗಳನ್ನು ಹಾಕಲಾಗುತ್ತದೆ. ಹಾಗಾಗಿ ಅದನ್ನು ಸ್ವಚ್ಛಗೊಳಿಸದೆ ತಿನ್ನಲು ಸಾಧ್ಯವಿಲ್ಲ. ಈ ಹಣ್ಣಿ (Fruit) ಗೆ ಹಾಕುವ ಕೀಟನಾಶಕಗಳು ಮೆದುಳಿ (Brain) ಗೆ ಮತ್ತು ನರಗಳಿಗೆ ತುಂಬಾ ಹಾನಿಯಾಗುತ್ತದೆ. ಕೀಟನಾಶಕವಿಲ್ಲದಂತೆ ದ್ರಾಕ್ಷಿಯನ್ನು ಸ್ವಚ್ಛಗೊಳಿಸಿ ತಿನ್ನೋದು ಹೇಗೆ ಎಂಬುದನ್ನು ನಾವು ಹೇಳ್ತೇವೆ. 

ದ್ರಾಕ್ಷಿಯನ್ನು ಹೀಗೆ ಸ್ವಚ್ಛಗೊಳಿಸಿ :
ಸ್ವಚ್ಛ ನೀರ (Water) ನ್ನು ಬಳಸಿ :
ಮೊದಲು ನೀವು ದ್ರಾಕ್ಷಿಯನ್ನು ಗೊಂಚಲಿನಿಂದ ಬೇರ್ಪಟಿಸಬೇಕು. ಕೆಟ್ಟ, ಕೊಳೆತ ದ್ರಾಕ್ಷಿಯನ್ನು ತೆಗೆಯಬೇಕು. ನಂತ್ರ ಒಂದು ಪಾತ್ರೆಗೆ ದ್ರಾಕ್ಷಿಯನ್ನು ಹಾಕಿ ನೀರು ತುಂಬಿಸಿ. ನಂತ್ರ ಕೈನಿಂದ ನಿಧಾನವಾಗಿ ಅದನ್ನು ಸ್ವಚ್ಛಗೊಳಿಸಿ. ಆ ನಂತ್ರ ಜಾಲರಿ ಪಾತ್ರೆಯಲ್ಲಿ ದ್ರಾಕ್ಷಿಯನ್ನು ಹಾಕಿ, ಅದ್ರ ಮೇಲೆ ನೀರನ್ನು ಹಾಕಿ. ಆಗ ದ್ರಾಕ್ಷಿಯಲ್ಲಿರುವ ಕೊಳಕು ಹೋಗುತ್ತದೆ.

ದ್ರಾಕ್ಷಿ ಕ್ಲೀನ್ ಮಾಡಲು ವಿನೆಗರ್ (Vinegar) ಬೆಸ್ಟ್ : ವಿನೆಗರನ್ನು ಅನೇಕ ವಸ್ತುಗಳನ್ನು ಕ್ಲೀನ್ ಮಾಡಲು ಬಳಸಲಾಗುತ್ತದೆ. ಕಲೆಯನ್ನು ತೆಗೆಯಲು ನೆರವಾಗುವ ವಿನೆಗರ್ ದ್ರಾಕ್ಷಿ ಕ್ಲೀನ್ ಮಾಡಲು ಸಹಾಯಕಾರಿಯಾಗಿದೆ. ವಿನೆಗರ್ ಮೂಲಕ ದ್ರಾಕ್ಷಿ ಕ್ಲೀನ್ ಮಾಡಲು ನೀವು ಒಂದು ಬೌಲ್ ತೆಗೆದುಕೊಳ್ಳಿ. ಆ ಪಾತ್ರೆಗೆ ನೀರನ್ನು ಹಾಕಿ. ಈ ನೀರಿಗೆ ಮುಕ್ಕಾಲು ಕಪ್  ವಿನೆಗರ್ ಸೇರಿಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣದಲ್ಲಿ ದ್ರಾಕ್ಷಿಯನ್ನು ಹಾಕಿ 10-15 ನಿಮಿಷಗಳ ಕಾಲ ಹಾಗೆ ಬಿಡಿ. 10 ನಿಮಿಷಗಳ ನಂತರ ದ್ರಾಕ್ಷಿಯನ್ನು ಜಾಲರಿಯ ಪಾತ್ರೆಯಲ್ಲಿ ಹಾಕಿ,ಶುದ್ಧ ನೀರಿನಿಂದ ತೊಳೆಯಿರಿ. ವಿನೆಗರ್ ದ್ರಾಕ್ಷಿಯಲ್ಲಿರುವ ಬ್ಯಾಕ್ಟೀರಿಯಾವನ್ನು ನಾಶ ಮಾಡುತ್ತದೆ.

ಅರಿಶಿನ ಮತ್ತು ಉಪ್ಪು ನೀರಿನಲ್ಲಿ (Salt Water) ಕ್ಲೀನ್ ಆಗುತ್ತೆ ದ್ರಾಕ್ಷಿ : ದ್ರಾಕ್ಷಿಯನ್ನು ಸ್ವಚ್ಛಗೊಳಿಸಲು ಮೂರನೇ ಮಾರ್ಗವೆಂದರೆ ಅರಿಶಿನ ಮತ್ತು ಉಪ್ಪಿನ ಬಳಕೆ. ಒಂದು ಪಾತ್ರೆಗೆ ನೀರನ್ನು ಹಾಕಿ ಅರ್ಧ ಚಮಚ ಉಪ್ಪು ಮತ್ತು ಅರ್ಧ ಚಮಚ ಅರಿಶಿನ ಸೇರಿಸಿ ಮಿಕ್ಸ್ ಮಾಡಿ. ನಂತರ ಅದರಲ್ಲಿ ದ್ರಾಕ್ಷಿಯನ್ನು ಹಾಕಿ ಚೆನ್ನಾಗಿ ತೊಳೆಯಿರಿ. ಅರಿಶಿನ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹಿಂದಿದೆ. ದ್ರಾಕ್ಷಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಅರಿಶಿನ ಕೊಲ್ಲುತ್ತದೆ. ಅರಿಶಿನದ ಜೊತೆ ಉಪ್ಪು ಬೆರೆಸು ಕಾರಣ ಕೀಟನಾಶಕ ದ್ರಾಕ್ಷಿಯಿಂದ ಬೇರ್ಪಡುತ್ತದೆ. 

ಕಚ್ಚಾ ಡ್ರೈ ಫ್ರೂಟ್ಸ್ ತಿನ್ನೋ ಅಭ್ಯಾಸವಿದ್ಯಾ, ಹುರಿದು ತಿಂದ್ರೆ ಇನ್ನೂ ಒಳ್ಳೇದು

ಉಪ್ಪಿನ ನೀರಿನಲ್ಲಿದೆ ದ್ರಾಕ್ಷಿ ಸ್ವಚ್ಛಗೊಳಿಸುವ ಶಕ್ತಿ : ಇದು ದ್ರಾಕ್ಷಿ ಕ್ಲೀನ್ ಮಾಡಲು ಅತ್ಯಂತ ಸುಲಭ ವಿಧಾನ ಎನ್ನಬಹದು. ಯಾಕೆಂದ್ರೆ ಎಲ್ಲರ ಮನೆಯಲ್ಲೂ ಉಪ್ಪು ಇದ್ದೇ ಇರುತ್ತದೆ. ನೀವು ವಿನೆಗರ್ ಬದಲಿಗೆ ಉಪ್ಪನ್ನು ಬಳಸಿ.  ಒಂದು ಪಾತ್ರೆಗೆ ನೀರನ್ನು ಹಾಕಿ. ಅದಕ್ಕೆ ಉಪ್ಪು ಸೇರಿಸಿ. ಈ ಪಾತ್ರೆಗೆ ದ್ರಾಕ್ಷಿಯನ್ನು ಹಾಕಿ. ದ್ರಾಕ್ಷಿಯನ್ನು 10 ರಿಂದ 15 ನಿಮಿಷಗಳ ಕಾಲ ಈ ಉಪ್ಪು ನೀರಿನಲ್ಲಿ ಬಿಡಿ. ನಂತರ ದ್ರಾಕ್ಷಿಯನ್ನು ಶುದ್ಧ ನೀರಿನಲ್ಲಿ ತೊಳೆಯಿರಿ. 

ಇವಿಷ್ಟೇ ತಿಂದ್ರೆ ಸಾಕು, ಶುಗರ್ ಲೆವೆಲ್ ಬಗ್ಗೆ ತಲೆಕೆಡಿಸ್ಕೊಳ್‌ಬೇಕಾಗಿಲ್ಲ

ದ್ರಾಕ್ಷಿ ಹಣ್ಣಿನ ಅತಿಯಾದ ಸೇವನೆಯಿಂದ ಕಫದ ಸಮಸ್ಯೆ ಕಾಡುತ್ತದೆ. ಇದು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಕ್ಕಳಿಗೆ ಇಷ್ಟವಾಗುವ ದ್ರಾಕ್ಷಿ ಅವರ ಆರೋಗ್ಯ ಹಾಳು ಮಾಡಬಾರದು ಅಂದ್ರೆ ನೀವು ಉಪ್ಪು ನೀರಿನಲ್ಲಿ ನೆನೆಸಿಟ್ಟು ಬಳಸಿದ್ರೆ ಒಳ್ಳೆಯದು. 

Latest Videos
Follow Us:
Download App:
  • android
  • ios